Site icon Vistara News

TOP NEWS: ಈ ದಿನದ ಪ್ರಮುಖ 7 ಸುದ್ದಿಗಳು

1. ವರವರ ರಾವ್‌ ಶಾಶ್ವತ ಜಾಮೀನು ತಿರಸ್ಕಾರ: ಜೈಲು ಸ್ಥಿತಿ ಸುಧಾರಿಸಲು ಸೂಚಿಸಿದ ಬಾಂಬೆ ಹೈಕೋರ್ಟ್‌

“ಜೈಲಿನಲ್ಲಿ ವ್ಯವಸ್ಥೆಗಳನ್ನು ಸರಿಪಡಿಸದಿದ್ದರೆ ಎಲ್ಲ ಆರೋಪಿಗಳೂ ಇದೇ ವೈದ್ಯಕೀಯ ಆಧಾರದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

2. ನಿಮ್ಮ ಜಮೀನು ಸ್ಕೆಚ್‌ ನೀವೇ ಮಾಡಿಕೊಳ್ಳಿ: ಕಂದಾಯ ಇಲಾಖೆಯಿಂದ ಸ್ವಾವಲಂಬಿ ಆ್ಯಪ್

ರೈತರು ತಮ್ಮ ಜಮೀನಿನ ನಕ್ಷೆಗಳನ್ನು ತಾವೇ ತಯಾರಿಸಿಕೊಳ್ಳಬಹುದಾದ ʼಸ್ವಾವಲಂಬಿ ಆ್ಯಪ್ʼ ಅನ್ನು ಕಂದಾಯ ಇಲಾಖೆ ಪರಿಚಯಿಸಿದೆ. ಏನಿದು ಸ್ವಾವಲಂಬಿ ಆ್ಯಪ್?

3. IPL2022| ಅಂಪೈರ್‌ ʼನೋಬಾಲ್‌ʼ ನೀಡಿಲ್ಲ;ರೊಚ್ಚಿಗೆದ್ದ ರಿಷಭ್

ʼನೋಬಾಲ್‌ʼ ಅಲ್ಲ ಎಂದು ಅಂಪೈರ್‌ ನಿರ್ಧಾರ ನೀಡಿದ್ದರು. ದಿಲ್ಲಿ ತಂಡದ ಕ್ಯಾಪ್ಟನ್‌ ರಿಷಭ್‌ ಪಂತ್‌ ಅಸಮಾಧಾನಗೊಂಡು ಕೂಡಲೇ ಆಟಗಾರರನ್ನು ಪೆವಿಲಿಯನ್‌ಗೆ ಬರುವಂತೆ ಸನ್ನೆ ಮಾಡಿದ್ದರು.

4. Job Alert| 60 ʼಸಹಾಯಕ ನಗರ ಯೋಜಕʼ ಹುದ್ದೆಗಳಿಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನ

ʼಸಹಾಯಕ ನಗರ ಯೋಜಕರʼ ಹುದ್ದೆಗೆ ಒಟ್ಟು 60 ಸ್ಥಾನಗಳಿವೆ. ಉಳಿಕೆ ಮೂಲ ವೃಂದದಲ್ಲಿ 50 ಹಾಗೂ ಹೈದ್ರಬಾದ್‌ ಕರ್ನಾಟಕ ವೃಂದಕ್ಕೆ 10 ಸ್ಥಾನಗಳನ್ನು ಮೀಸಲಿಡಲಾಗಿದೆ.

5. Niti Aayog: ರಾಜೀವ್‌ ಕುಮಾರ್‌ ರಾಜೀನಾಮೆ, ಸುಮನ್‌ ಬೆರಿ ನೂತನ ಉಪಾಧ್ಯಕ್ಷ

ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀವ್‌ ಕುಮಾರ್‌ ರಾಜೀನಾಮೆ ನೀಡಿದ್ದಾರೆ. ಸುಮನ್‌ ಕೆ. ಬೆರಿ ನೂತನ ಅಧ್ಯಕ್ಷರಾಗಿ ನಿಯುಕ್ತರಾಗಿದ್ದಾರೆ.

6. World Book Day: ಪುಸ್ತಕಗಳಿಗೆ ರೆಕ್ಕೆ ನೀಡಿದ ಊರಿನ ಕತೆ

ಏಪ್ರಿಲ್‌ 23 ವಿಶ್ವ ಪುಸ್ತಕ ದಿನ. ಇದರ ನಿಮಿತ್ತ ಕೇರಳದ ಮೊದಲ ಪುಸ್ತಕ ಗ್ರಾಮವನ್ನು ಪರಿಚಯ ಮಾಡಿಕೊಳ್ಳೋಣ. ನಾವು ಈ ಊರಿನ ಯಶಸ್ಸಿನಿಂದ ಏನು ಕಲಿಯಬಹುದು?

7. ಪಾಟಿದಾರ್‌ ನಾಯಕನ ʼಹಾರ್ದಿಕʼ ಸ್ವಾಗತಕ್ಕೆ ಸಜ್ಜಾದ BJP? : ಮೋದಿ ನಾಡಿನಲ್ಲಿ ಚುನಾವಣಾ ವರ್ಷದ ಅಚ್ಚರಿ

ಮಾತೆತ್ತಿದರೆ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್‌ ಷಾ ವಿರುದ್ಧ ಹರಿಹಾಯುತ್ತಿದ್ದ ಗುರಜಾತ್‌ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾರ್ದಿಕ್‌ ಪಟೇಲ್‌ ಈಗ ಬದಲಾಗಿದ್ದಾರೆ.

Exit mobile version