ಹೊಸ ಸುದ್ದಿ
TOP NEWS: ಈ ದಿನದ ಪ್ರಮುಖ 7 ಸುದ್ದಿಗಳು
ಶನಿವಾರ ನಡೆದ ಹಾಗೂ ನೀವು ಓದಲೇಬೇಕಾದ ಪ್ರಮುಖ ಏಳು ಸುದ್ದಿಗಳು ಇಲ್ಲಿವೆ.
1. ವರವರ ರಾವ್ ಶಾಶ್ವತ ಜಾಮೀನು ತಿರಸ್ಕಾರ: ಜೈಲು ಸ್ಥಿತಿ ಸುಧಾರಿಸಲು ಸೂಚಿಸಿದ ಬಾಂಬೆ ಹೈಕೋರ್ಟ್
“ಜೈಲಿನಲ್ಲಿ ವ್ಯವಸ್ಥೆಗಳನ್ನು ಸರಿಪಡಿಸದಿದ್ದರೆ ಎಲ್ಲ ಆರೋಪಿಗಳೂ ಇದೇ ವೈದ್ಯಕೀಯ ಆಧಾರದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
2. ನಿಮ್ಮ ಜಮೀನು ಸ್ಕೆಚ್ ನೀವೇ ಮಾಡಿಕೊಳ್ಳಿ: ಕಂದಾಯ ಇಲಾಖೆಯಿಂದ ಸ್ವಾವಲಂಬಿ ಆ್ಯಪ್
ರೈತರು ತಮ್ಮ ಜಮೀನಿನ ನಕ್ಷೆಗಳನ್ನು ತಾವೇ ತಯಾರಿಸಿಕೊಳ್ಳಬಹುದಾದ ʼಸ್ವಾವಲಂಬಿ ಆ್ಯಪ್ʼ ಅನ್ನು ಕಂದಾಯ ಇಲಾಖೆ ಪರಿಚಯಿಸಿದೆ. ಏನಿದು ಸ್ವಾವಲಂಬಿ ಆ್ಯಪ್?
3. IPL2022| ಅಂಪೈರ್ ʼನೋಬಾಲ್ʼ ನೀಡಿಲ್ಲ;ರೊಚ್ಚಿಗೆದ್ದ ರಿಷಭ್
ʼನೋಬಾಲ್ʼ ಅಲ್ಲ ಎಂದು ಅಂಪೈರ್ ನಿರ್ಧಾರ ನೀಡಿದ್ದರು. ದಿಲ್ಲಿ ತಂಡದ ಕ್ಯಾಪ್ಟನ್ ರಿಷಭ್ ಪಂತ್ ಅಸಮಾಧಾನಗೊಂಡು ಕೂಡಲೇ ಆಟಗಾರರನ್ನು ಪೆವಿಲಿಯನ್‌ಗೆ ಬರುವಂತೆ ಸನ್ನೆ ಮಾಡಿದ್ದರು.
4. Job Alert| 60 ʼಸಹಾಯಕ ನಗರ ಯೋಜಕʼ ಹುದ್ದೆಗಳಿಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನ
ʼಸಹಾಯಕ ನಗರ ಯೋಜಕರʼ ಹುದ್ದೆಗೆ ಒಟ್ಟು 60 ಸ್ಥಾನಗಳಿವೆ. ಉಳಿಕೆ ಮೂಲ ವೃಂದದಲ್ಲಿ 50 ಹಾಗೂ ಹೈದ್ರಬಾದ್ ಕರ್ನಾಟಕ ವೃಂದಕ್ಕೆ 10 ಸ್ಥಾನಗಳನ್ನು ಮೀಸಲಿಡಲಾಗಿದೆ.
5. Niti Aayog: ರಾಜೀವ್ ಕುಮಾರ್ ರಾಜೀನಾಮೆ, ಸುಮನ್ ಬೆರಿ ನೂತನ ಉಪಾಧ್ಯಕ್ಷ
ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀವ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಸುಮನ್ ಕೆ. ಬೆರಿ ನೂತನ ಅಧ್ಯಕ್ಷರಾಗಿ ನಿಯುಕ್ತರಾಗಿದ್ದಾರೆ.
6. World Book Day: ಪುಸ್ತಕಗಳಿಗೆ ರೆಕ್ಕೆ ನೀಡಿದ ಊರಿನ ಕತೆ
ಏಪ್ರಿಲ್ 23 ವಿಶ್ವ ಪುಸ್ತಕ ದಿನ. ಇದರ ನಿಮಿತ್ತ ಕೇರಳದ ಮೊದಲ ಪುಸ್ತಕ ಗ್ರಾಮವನ್ನು ಪರಿಚಯ ಮಾಡಿಕೊಳ್ಳೋಣ. ನಾವು ಈ ಊರಿನ ಯಶಸ್ಸಿನಿಂದ ಏನು ಕಲಿಯಬಹುದು?
7. ಪಾಟಿದಾರ್ ನಾಯಕನ ʼಹಾರ್ದಿಕʼ ಸ್ವಾಗತಕ್ಕೆ ಸಜ್ಜಾದ BJP? : ಮೋದಿ ನಾಡಿನಲ್ಲಿ ಚುನಾವಣಾ ವರ್ಷದ ಅಚ್ಚರಿ
ಮಾತೆತ್ತಿದರೆ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಷಾ ವಿರುದ್ಧ ಹರಿಹಾಯುತ್ತಿದ್ದ ಗುರಜಾತ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಈಗ ಬದಲಾಗಿದ್ದಾರೆ.
ಕರ್ನಾಟಕ
Meter Taxi: ರೋಡಿಗಿಳಿದ ಕ್ಯೂಟ್ ಮೀಟರ್ ಟ್ಯಾಕ್ಸಿ; ಮಿನಿಮಮ್ ಚಾರ್ಜ್ ಎಷ್ಟು?
ಓಲಾ, ಉಬರ್ ಬಳಿಕ ಇದೀಗ ಕ್ಯೂಟ್ ಟ್ಯಾಕ್ಸಿ ಸೇವೆ (Meter Taxi) ಆರಂಭವಾಗುತ್ತಿದೆ. ಆಟೋ ರಿಕ್ಷಾ ಮಾದರಿಯಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸಲು ಈಗಾಗಲೇ ಚಾಲ್ತಿಯಲ್ಲಿರುವ ಬಜಾಜ್ ಕ್ಯೂಟ್‌ಗೆ (ಕ್ವಾಡ್ರಿ ಸೈಕಲ್) ಮೀಟರ್ ದರವನ್ನು ನಿಗದಿಪಡಿಸಲಾಗಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಹೊಸ ಮೀಟರ್ ಟ್ಯಾಕ್ಸಿ ಸೇವೆ (Meter Taxi) ಆರಂಭವಾಗಿದೆ. ಬಜಾಜ್ ಕ್ಯೂಟ್ (ಕ್ವಾಡ್ರಿಸೈಕಲ್) ವಾಹನಕ್ಕೆ ಸಾರಿಗೆ ಇಲಾಖೆ ದರ ನಿಗದಿ ಮಾಡಿದ್ದು, ಮೌಲ್ಯಮಾಪನ ಇಲಾಖೆ ಸೂಚಿಸಿರುವ ಮೀಟರ್ ಅಳವಡಿಸಿ ವಾಹನಗಳಿಗೆ ಸೋಮವಾರದಿಂದ ಚಾಲನೆ ನೀಡಲಾಗುತ್ತಿದೆ.
ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ಎಂಬ ಹೊಸ ಮಾದರಿಯ ವಾಹನವು 2019ರಲ್ಲಿ ಮಾರುಕಟ್ಟೆಗೆ ಬಂದಿತಾದರೂ, ಇದಕ್ಕೆ ಸಾರಿಗೆ ಇಲಾಖೆಯಿಂದ ದರ ನಿಗದಿಪಡಿಸಿರಲಿಲ್ಲ. ಕೇವಲ ಉಬರ್ ಸಂಸ್ಥೆಗೆ ಅವಲಂಬಿತರಾಗಿ ಚಾಲಕರು ಸೇವೆ ನೀಡುತ್ತಿದ್ದರು.
ಹಾಗಾಗಿ 2020ರ ಡಿಸೆಂಬರ್‌ನಲ್ಲಿ ಚಾಲಕರ ಸಂಘಟನೆಗಳು ಈ ವಾಹನಗಳಿಗೆ ಮೀಟರ್ ದರ ನಿಗದಿಪಡಿಸಿ ಕೊಡಲು ಸಾರಿಗೆ ಇಲಾಖೆಗೆ ಮನವಿ ಮಾಡಿದ್ದವು. ಇದರಿಂದ ಈ ವಾಹನ ಚಾಲಕ ಮಾಲೀಕರು ಮೀಟರ್ ಅಳವಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಾಗಲು ದಾರಿ ಮಾಡಿಕೊಡುವಂತೆ ತಿಳಿಸಿದ್ದವು.
ಇದೀಗ ಹಲವು ಅಡೆತಡೆಗಳ ದಾಟಿ, ಸತತ ಎರಡು ವರ್ಷಗಳ ಬಳಿಕ 2023ರ ಮಾರ್ಚ್ 20ರಂದು ಸಾರಿಗೆ ಇಲಾಖೆ ದರ ನಿಗದಿ ಪಡಿಸಿಕೊಟ್ಟಿತ್ತು. ಈ ದರದ ಪ್ರತಿಯನ್ನು ಮೌಲ್ಯಮಾಪನ ಇಲಾಖೆಗೆ ಸಲ್ಲಿಸಿ ಅವರಿಂದಲೂ ಸಹ ಅನುಮತಿ ದೊರೆತಿದೆ. ಇನ್ನು ರಾಜ್ಯದಲ್ಲಿ ಓಡಾಡುವ ಬಜಾಜ್ ಸಂಸ್ಥೆಯ ಕ್ಯೂಟ್ ಮೀಟರ್ ಟ್ಯಾಕ್ಸಿಗೆ ಪ್ರತಿ ಕಿ.ಮೀ.ಗೆ 16 ರೂಪಾಯಿ ಹಾಗೂ 4 ಕಿ.ಮೀ.ವರೆಗೆ 60 ರೂಪಾಯಿ ಕನಿಷ್ಠ ದರವನ್ನು ನಿಗದಿ ಮಾಡಲಾಗಿದೆ.
ಇದನ್ನೂ ಓದಿ: SSLC Exam 2023: ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಪ್ರಕ್ರಿಯೆ ಆರಂಭ; ಮೇ 2ನೇ ವಾರದಲ್ಲಿ ಫಲಿತಾಂಶ ಪ್ರಕಟ
ಬಜಾಜ್ ಸಂಸ್ಥೆಯ ಅಧ್ಯಕ್ಷ ಮೀಟರ್ ಟ್ಯಾಕ್ಸಿಗೆ ಫ್ಲಾಗ್ ಆಫ್ ಮಾಡುವ ಮೂಲಕ ಸಾರ್ವಜನಿಕ ಸೇವೆಗೆ ಚಾಲನೆ ನೀಡಲಿದ್ದಾರೆ. ಸ್ವಾವಲಂಬಿಗಳಾಗಿ ದುಡಿಯಲು ಹೊರಟಿರುವ ಚಾಲಕರಿಗೆ ಶುಭಕೋರಲಿದ್ದಾರೆ.
ಉತ್ತರ ಕನ್ನಡ
Anand Mahindra: ಹಣ್ಣು ಮಾರುವ ಹಾಲಕ್ಕಿ ಮಹಿಳೆಯ ಪರಿಸರ ಪ್ರೇಮ; ಸ್ವಚ್ಛ ಭಾರತ್‌ನ ಹೀರೊಗಳು ಇವರೇ ಎಂದು ಕೊಂಡಾಡಿದ ಆನಂದ್ ಮಹೀಂದ್ರ
ಅಂಕೋಲಾ ಬಸ್ ನಿಲ್ದಾಣದಲ್ಲಿ ಹಾಲಕ್ಕಿ ಮಹಿಳೆಯೊಬ್ಬರ ಸ್ವಚ್ಛತಾ ಕಾರ್ಯಕ್ಕೆ ಮಹೀಂದ್ರ ಸಂಸ್ಥೆಯ ಆನಂದ್ ಮಹೀಂದ್ರ (Anand Mahindra) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರವಾರ: ಹಾಲಕ್ಕಿ ಮಹಿಳೆಯೊಬ್ಬರ ಕಾರ್ಯವೂ ಇದೀಗ ದೇಶದ ಗಮನ ಸೆಳೆಯುತ್ತಿದೆ. ಅಂಕೋಲಾ ಬಸ್ ನಿಲ್ದಾಣದಲ್ಲಿ (Ankola Bus stop) ಹಣ್ಣು ಮಾರುವ ಹಾಲಕ್ಕಿ ಮಹಿಳೆಯ ಸ್ವಚ್ಛತಾ ಕಾರ್ಯವನ್ನು (Swachh Bharat) ಮಹೀಂದ್ರಾ ಸಂಸ್ಥೆಯ ಮಾಲೀಕ ಆನಂದ್ ಮಹೀಂದ್ರಾ (Anand Mahindra) ಕೊಂಡಾಡಿದ್ದಾರೆ.
ಸದ್ದಿಲ್ಲದೆ ಸ್ವಚ್ಛ ಭಾರತದ ಪ್ರಯತ್ನವನ್ನು ಸಹಕಾರಗೊಳಿಸುವ ಇಂತಹವರೇ ಸ್ವಚ್ಛ ಭಾರತ್‌ನ ನಿಜವಾದ ಹೀರೋಗಳು ಎಂದಿದ್ದಾರೆ. ಇವರ ಕಾರ್ಯವನ್ನು ಗಮನಿಸದಿರುವುದು, ಶ್ಲಾಘಿಸದೆ ಇರುವುದು ದುರಂತ ಎಂದು ಟ್ವೀಟ್ ಮೂಲಕ ಹಾಲಕ್ಕಿ ಮಹಿಳೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ ಆನಂದ್ ಮಹೀಂದ್ರಾ
ಅಂದಹಾಗೆ, ಪಟ್ಟಣದ ಬಸ್ ನಿಲ್ದಾಣದಲ್ಲಿ ಹಾಲಕ್ಕಿ ಮಹಿಳೆಯೊಬ್ಬರು ಜೀವನೋಪಾಯಕ್ಕಾಗಿ ಪ್ರತಿನಿತ್ಯ ಎಲೆಯ ಕೊಟ್ಟೆಯಲ್ಲಿ ನೇರಳೆ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಾರೆ. ಮಹಿಳೆಯಿಂದ ನೇರಳೆ ಹಣ್ಣು ಖರೀದಿಸುವ ಪ್ರಯಾಣಿಕರು ಹಣ್ಣುಗಳನ್ನು ತಿಂದು, ಎಲೆಯನ್ನು ಬಸ್‌ನ ಕಿಟಕಿಯಿಂದ ಹೊರಗೆ ಬಿಸಾಡಿ ತೆರಳುತ್ತಾರೆ.
ಹೀಗೆ ಪ್ರಯಾಣಿಕರು ಎಸೆದ ಎಲೆಗಳನ್ನು ಹಾಲಕ್ಕಿ ಮಹಿಳೆ ಆರಿಸಿ ತಂದು ಕಸದ ಬುಟ್ಟಿಗೆ ಹಾಕುವುದನ್ನು ರೂಢಿಸಿಕೊಂಡಿದ್ದಾರೆ. ಹೀಗೆ ಮಹಿಳೆ ಎಲೆ ಹೆಕ್ಕುತ್ತಿದ್ದ ವೇಳೆ ಆದರ್ಶ ಹೆಗಡೆ ಎಂಬುವವರು ಮೊಬೈಲ್‌ನಲ್ಲಿ ವಿಡಿಯೊ ಮಾಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Elephant attack: ಯುವತಿಯನ್ನು ಕೊಂದ ಆನೆ ಹಿಡಿಯಲು ಶತಪ್ರಯತ್ನ; ಅನಸ್ತೇಷಿಯಾ ಕೊಡಲು ಹತ್ತಿರ ಹೋದ ಡಾಕ್ಟರ್ ಮೇಲೇ ಅಟ್ಯಾಕ್
ಈ ವಿಡಿಯೊ ಸಾಕಷ್ಟು ವೈರಲ್ ಆಗಿದ್ದು, ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಅಲ್ಲದೇ ಹಾಲಕ್ಕಿ ಮಹಿಳೆಯ ಕಾರ್ಯವನ್ನು ಶ್ಲಾಘಿಸಿ ಸ್ವಚ್ಛ ಭಾರತದ ನಿಜವಾದ ಹೀರೋ ಇವರೇ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಮಹಿಳೆಯನ್ನು ಸಂಪರ್ಕಿಸಿ ಮಾತನಾಡಿಸಲು ಅವಕಾಶ ಮಾಡಿಕೊಡಿ ಎಂದು ಕೂಡ ಕೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಇನ್ನಷ್ಟು ವೈರಲ್ ಆಗಿದ್ದು 3.59 ಲಕ್ಷ ವೀಕ್ಷಣೆ ಕಂಡಿದೆ.
ಕರ್ನಾಟಕ
Loco Pilot: ಇನ್ನೇನು ರೈಲು ಹೊರಡುವಾಗಲೇ ಹಳಿ ದಾಟುತ್ತಿದ್ದ ವೃದ್ಧ ಎಡವಿ ಬಿದ್ದ; ಮುಂದೇನಾಯಿತು?
ಹಳಿ ದಾಟಲು ಹೋದ ವೃದ್ಧನೊಬ್ಬ ಎಡವಿ ಬಿದ್ದಿದ್ದು, ಇದನ್ನು ಗಮನಿಸಿದ ಲೋಕೋ ಪೈಲೆಟ್ (Loco Pilot) ರೈಲು ನಿಲ್ಲಿಸಿ ಜೀವ ಉಳಿಸಿರುವ ಘಟನೆ ಆಂಧ್ರಪ್ರದೇಶದ ಕುಪ್ಪಂ ರೈಲು ನಿಲ್ದಾಣದಲ್ಲಿ ನಡೆದಿದೆ.
ಕೋಲಾರ: ಹಳಿ ದಾಟಲು ಹೋದ ವೃದ್ಧರೊಬ್ಬರು ಎಡವಿ ಬಿದ್ದಿದ್ದು, ಇದನ್ನು ಗಮನಿಸಿದ ಲೋಕೊ ಪೈಲೆಟ್ (Loco Pilot) ರೈಲು ನಿಲ್ಲಿಸಿ ಪ್ರಾಣ ಉಳಿಸಿದ್ದಾರೆ. ನೆತ್ತಿ ಮೇಲೆ ಉರಿ ಬಿಸಿಲು ಸುಡುತ್ತಿತ್ತು. ವೃದ್ಧರೊಬ್ಬರು ಬಹುಬೇಗ ಮನೆ ಸೇರುವ ದಾವಂತದಲ್ಲಿ ಇದ್ದರು. ವೃದ್ಧ ಮನೆ ಸೇರಬೇಕಾದರೆ ರೈಲು ಹಳಿ ದಾಟಿಯೇ ಹೋಗಬೇಕಿತ್ತು. ರೈಲು ಬರುವ ಹೊತ್ತಿಗೆ ಹಳಿ ದಾಟಿ ಮನೆ ಸೇರುವ ಆತುರದಲ್ಲಿದ್ದರು. ಇನ್ನೇನು ರೈಲು ಬಂತಲ್ಲ ಎಂದು ಗಾಬರಿಯಲ್ಲೇ ಹಳಿ ದಾಟಲು ಹೋಗಿ ಎಡವಿ ಬಿದ್ದಿದ್ದರು. ಆದರೆ, ಎದ್ದೇಳಲು ಆಗದೆ ಪರದಾಡುತ್ತಿದ್ದರು. ರೈಲು ಸಹ ಸಮೀಪ ಬಂದುಬಿಟ್ಟಿತ್ತು.
ಹಳಿ ಮೇಲೆ ವೃದ್ಧ ಬೀಳುವುದನ್ನು ಗಮನಿಸಿದ ಲೋಕೋ ಪೈಲೆಟ್ ಕೂಡಲೇ ರೈಲು ನಿಲ್ಲಿಸಿ ಸಮಯಪ್ರಜ್ಞೆ ಮೆರೆದ ಅಪರೂಪದ ಘಟನೆ ಆಂಧ್ರಪ್ರದೇಶದ ಕುಪ್ಪಂ ರೈಲು ನಿಲ್ದಾಣದಲ್ಲಿ ನಡೆದಿದೆ. ಚೆನ್ನೈ-ಬೆಂಗಳೂರು ನಡುವಿನ ಲಾಲ್‌ಬಾಗ್ ಲೋಕೋ ಪೈಲೆಟ್‌ನ ಸಮಯ ಪ್ರಜ್ಞೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Fire Accident: ದೇವರಾಯನದುರ್ಗ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ; ಅಗ್ನಿಜ್ವಾಲೆಗೆ ಸಿಲುಕಿ ಬಾಲಕಿ ಸಾವು, ಮತ್ತಿಬ್ಬರಿಗೆ ಗಾಯ
ಲೋಕೋ ಪೈಲೆಟ್ ರೈಲು ನಿಲ್ಲಿಸಿದ್ದು ಮಾತ್ರವಲ್ಲದೆ, ಟ್ರ್ಯಾಕ್ ಮೇಲೆ ಬಿದ್ದು ಒದ್ದಾಡುತ್ತಿದ್ದ ವೃದ್ಧನ ಸಹಾಯಕ್ಕೆ ಧಾವಿಸಿದ್ದಾರೆ. ಕಾಲು ಎಡವಿ ಹಳಿ ಮೇಲೆ ಬಿದ್ದಿದ್ದ ವೃದ್ಧನನ್ನು ಮೇಲ್ಕಕೆ ಎತ್ತಿದ್ದಾರೆ. ಬಳಿಕ ಪಕ್ಕದಲ್ಲಿ ಸುಧಾರಿಸಿಕೊಳ್ಳುವಂತೆ ಕೂರಿಸಿ ಬಳಿಕ ರೈಲು ಚಾಲನೆಗೊಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Chikkamagaluru News: 30 ಅಡಿ ಆಳದ ತೆರೆದ ಬಾವಿಗೆ ಬಿದ್ದ ಬೆಕ್ಕಿನ ಮರಿ; ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದು ರಕ್ಷಣೆ
Chikkamagaluru News: ತೆರೆದ ಬಾವಿ ಇರುವುದನ್ನು ಕಾಣದೆ ಬೆಕ್ಕಿನ ಮರಿಯೊಂದು 30 ಅಡಿ ಆಳದ ಬಾವಿಗೆ ಬಿದ್ದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಬಾವಿಯಿಂದ ಮೇಲೆ ಬರಲು ಆಗದೆ ನರಳಾಡುತ್ತಿದ್ದ ಈ ಬೆಕ್ಕನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಚಿಕ್ಕಮಗಳೂರು: ತೆರೆದ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯೊಂದನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ಎಂ.ಜಿ. ರಸ್ತೆ ಸಮೀಪದಲ್ಲಿದ್ದ ತೆರೆದ ಬಾವಿ (Chikkamagaluru News) ಇರುವುದನ್ನು ಕಾಣದ ಬೆಕ್ಕಿನ ಮರಿಯೊಂದು ಸುಮಾರು 30 ಅಡಿ ಆಳದ ಬಾವಿಗೆ ಬಿದ್ದಿತ್ತು. ಬಾವಿಯಲ್ಲಿ ನೀರು ಇದ್ದರಿಂದ ಮೇಲಿಂದ ಹೊರಗೆ ಬರಲು ಆಗದೆ ಬೆಕ್ಕಿನ ಮರಿಯು ಒಮ್ಮೆಲೆ ಚೀರಾಡುತ್ತಿತ್ತು.
ಬೆಕ್ಕಿನ ಮರಿಯ ಚೀರಾಟ ನರಳಾಟ ಗಮನಿಸಿದ ಸ್ಥಳೀಯರು ಬಂದು ನೋಡಿದಾಗ, ತೆರೆದ ಬಾವಿಗೆ ಬಿದ್ದಿರುವುದು ತಿಳಿದು ಬಂದಿದೆ. ಕೂಡಲೆ ಅಗ್ನಿ ಶಾಮಕದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಾಕ್ಕಾಮಿಸಿದ ಅಗ್ನಿಶಾಮಕ ದಳವರು ಮೂವತ್ತು ಅಡಿ ಅಳದ ತೆರೆದ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ.
ಮೊದಲಿಗೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಅಗ್ನಿಶಾಮಕ ಸಿಬ್ಬಂದಿ ಬಾವಿಗೆ ಇಳಿದಿದ್ದಾರೆ. ಬಳಿಕ ಬುಟ್ಟಿಯನ್ನು ಬಾವಿಗೆ ಬಿಟ್ಟು ಅದರ ಸಹಾಯದಿಂದ ಬೆಕ್ಕಿನ ಮರಿಯನ್ನು ಅದರೊಳಗೆ ಇಟ್ಟು, ಮೇಲಕ್ಕೆ ಸುರಕ್ಷಿತವಾಗಿ ತಂದಿದ್ದಾರೆ. ನೀರಲ್ಲಿ ಒದ್ದಾಡಿ ಸುಸ್ತಾಗಿದ್ದ ಬೆಕ್ಕಿನ ಮರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಟವೆಲ್‌ನಿಂದ ಮೈ ಒರೆಸಲಾಗಿದೆ. ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೆಕ್ಕಿನ ಮರಿಯನ್ನು ರಕ್ಷಿಸಿದ ಖುಷಿ ಸಿಬ್ಬಂದಿಯ ಮೊಗದಲ್ಲಿ ಕಾಣುತ್ತಿತ್ತು.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ದೇಶ21 hours ago
Viral Video: ಫ್ರಿಡ್ಜ್ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು
-
ಪ್ರಮುಖ ಸುದ್ದಿ16 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಟಾಪ್ 10 ನ್ಯೂಸ್23 hours ago
VISTARA TOP 10 NEWS : ನಮಗೆ ರಕ್ಷಣೆ ಇಲ್ಲವೇ ಎಂದ ಹಿಂದೂಗಳು, ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಶಾಮನೂರು ಇತರ ದಿನದ ಪ್ರಮುಖ ಸುದ್ದಿಗಳು
-
ದೇಶ22 hours ago
K Annamalai: ಲೇಡಿ ರಿಪೋರ್ಟರ್ ಜತೆ ಅಣ್ಣಾಮಲೈ ಕಿರಿಕ್! ಆಕೆ ಕೇಳಿದ ಪ್ರಶ್ನೆಗೆ ರೇಗಿದ ಬಿಜೆಪಿ ನಾಯಕ
-
ಕ್ರಿಕೆಟ್24 hours ago
ICC World Cup 2023 : ಭಾರತದ ಮಾಜಿ ಆಟಗಾರ ಅಫಘಾನಿಸ್ತಾನ ತಂಡದ ಮೆಂಟರ್
-
ದೇಶ11 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕಿರುತೆರೆ6 hours ago
BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?
-
ಕ್ರೈಂ12 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?