Site icon Vistara News

Dr CN Manjunath : ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರಿಗೆ ಆಗಲೇ ಲವ್ವಾಗಿದೆ ಅಂದ್ರು ಮಂಜುನಾಥ್‌ ಡಾಕ್ಟ್ರು!

DR CN Manjunath dengue fever

ರಾಮನಗರ: ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರಲ್ಲಿ (BJP-JDS Workers) ಆಗಲೇ ಪ್ರೀತಿ ಹುಟ್ಟಿದೆ. ನಾನೊಬ್ಬ ಹೃದ್ರೋಗ ತಜ್ಞ (Heart Doctors). ನನಗೆ ಅವರು ಪ್ರೇಮಿಗಳ ರೀತಿ (They look like lovers) ಕಾಣುತ್ತಿದ್ದಾರೆ- ಹೀಗೆಂದು ಹೇಳಿದ್ದಾರೆ ಹೃದಯವಂತ ಡಾಕ್ಟರ್‌ ಎಂದೇ ಹೆಸರಾದ ಡಾ. ಸಿ.ಎನ್‌. ಮಂಜುನಾಥ್‌ (Dr CN Manjunath). ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ (Loka sabha Elections 2024).

ರಾಮನಗರದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡಿದ ಡಾ. ಮಂಜುನಾಥ್‌ ಅವರು, ಎನ್ ಡಿಎ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದೇನೆ. ನಿಮ್ಮೆಲ್ಲರ ಸಹಕಾರ, ಸಲಹೆ ಮುಖ್ಯ. ಇಲ್ಲಿನ ಜನ ಎಷ್ಟು ಪ್ರೀತಿ ಮಾಡ್ತಾರೆ ಅಂದ್ರೆ ಬಂದಾಗ ಪ್ರೀತಿಯ ಸಂಕೇತ ಗುಲಾಬಿ ಹೂ ನೀಡಿದರು ಎಂದರು.

ಬಿಜೆಪಿ ಮತ್ತು‌ ಜೆಡಿಎಸ್‌ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವುದು ನಮಗೆ ಸವಾಲೇ ಅಲ್ಲ. ಯಾಕೆಂದರೆ, ಆಗಲೇ ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಹೃದಯಗಳು ಆಗಲೇ ಬೆಸೆದುಕೊಂಡಿವೆ ಎಂದು ಹೇಳಿದರು ಡಾ. ಮಂಜುನಾಥ್‌.

ಇಲ್ಲಿ ಯಾರ ನಡುವೆಯೂ ಭಿನ್ನಾಭಿಪ್ರಾಯ ಇಲ್ಲ. ಭಿನ್ನಾಭಿಪ್ರಾಯ ಎನ್ನುವುದು ಝೀರೋ ಎಂದರು.

Dr CN Manjunath : ಗ್ರಾಮಾಂತರದಲ್ಲಿ ನಡೆಯುತ್ತಿರುವುದು ಧರ್ಮ ಯುದ್ಧ ಎಂದ ಡಾಕ್ಟರ್‌

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈಗ ನಡೆಯುತ್ತಿರುವುದು ಧರ್ಮ ಯುದ್ಧ. ಈ ಯುದ್ಧದಲ್ಲಿ ಕೊನೆಗೆ ಗೆಲ್ಲುವುದು ಸತ್ಯ ಎಂದು ಹೇಳುವ ಮೂಲಕ ಲೋಕಸಭಾ ಚುನಾವಣೆಗೆ ಹೊಸ ಟಚ್‌ ನೀಡಿದ್ದಾರೆ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್‌. ಮಂಜುನಾಥ್‌. ಈ ಯುದ್ದದಲ್ಲಿ ನಾವು ಜಯಶೀಲರಾಗಬೇಕು. ಈ ಯುದ್ದದಲ್ಲಿ ಸತ್ಯಕ್ಕೆ ಜಯ ಸಿಗಬೇಕು ಎಂದರು. ನಾವು ಈ ಚುನಾವಣೆಯಲ್ಲಿ ಒಳ್ಳೆಯ ಈಜುಗಾರರಾಗಬೇಕು. ಆಗಲೇ ಸಮುದ್ರದಲ್ಲಿ ಮುತ್ತು ಸಿಗೋದು.

ʻʻಪ್ರಧಾನಿ ನರೇಂದ್ರ ಮೋದಿ ನಿಸ್ವಾರ್ಥ ಸೇವೆ ಮೂಲಕ ಹೊಸ ಭಾರತ ಕಟ್ಟಲು ಮುಂದಾಗಿದ್ದಾರೆ.. ಆವರ ಕೆಲಸಕ್ಕೆ ನಾವು ಕೈಜೋಡಿಸಬೇಕು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ದಶಪಥ ಹೆದ್ದಾರಿ, ರಸ್ತೆ, ರೈಲ್ವೆ, ವಿಮಾನ ಸೇವೆ ಅಭಿವೃದ್ಧಿ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಕೊಡಿಸಿದರುʼʼ ಎಂದು ಹೇಳಿದರು.

Dr CN Manjunath : ಡಾ. ಮಂಜುನಾಥ್‌ ಹೇಳಿದ ಸುಳ್ಳು ಪತ್ತೆ ಯಂತ್ರದ ಕಥೆ

ಇದೇ ವೇಳೆ ಸುಳ್ಳು ಪತ್ತೆ ಯಂತ್ರದ ಕಥೆ ಹೇಳಿ ಡಿ.ಕೆ. ಶಿವಕುಮಾರ್‌ ಮತ್ತು ಡಿ.ಕೆ ಸುರೇಶ್‌ ಸೋದರರಿಗೆ ಟಾಂಗ್‌ ನೀಡಿದರು ಡಾ. ಸಿ.ಎನ್‌. ಮಂಜುನಾಥ್‌. ʻʻಇವತ್ತು ಜಗತ್ತಿನಲ್ಲಿ ಕೃತಕ ಉಪಕರಣಗಳು ಇವೆ. ವ್ಯಕ್ತಿ ಸುಳ್ಳು ಹೇಳುವುದನ್ನು ಕಂಡು ಹಿಡಿಯಲು ಒಂದು ರೋಬೋಟ್ ಮಿಷನ್ ಕಂಡು ಹಿಡಿಯಲಾಯಿತು. ಬೇರೆ ದೇಶಗಳಲ್ಲಿ ಎಷ್ಟು ಸುಳ್ಳು ಹೇಳ್ತಾರೆ ಅಂತ ತಪಾಸಣೆ ಮಾಡಿ ಯಶಸ್ವಿಯಾದರು. ಬಳಿಕ ಭಾರತಕ್ಕೆ ಆ ರೋಬೋಟ್ ತಂದ್ರು. ಆದರೆ ಭಾರತದಲ್ಲಿ ಆ ರೋಬೋಟನ್ನೇ ಕಳ್ಳತನ ಮಾಡಿಬಿಟ್ಟರು. ಆ ರೀತಿಯ ಸುಳ್ಳು, ಕಳ್ಳತನಗಳು ಹೆಚ್ಚಾಗುತ್ತಿವೆ. ಇಂಥ ಕೆಲಸಕ್ಕೆ ನಾವು ಕಡಿವಾಣ ಹಾಕಬೇಕು ಎಂದು ಹೇಳಿದರು ಡಾ. ಮಂಜುನಾಥ್‌.

ಇದನ್ನೂ ಓದಿ : Lok Sabha Election 2024: ಬಿಜೆಪಿಯಿಂದ ಇಂದು ಸಂಜೆ 2ನೇ ಪಟ್ಟಿ ಪ್ರಕಟ ಸಾಧ್ಯತೆ; 5 ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳಿವರು

DR CN Manjunath love1

ನಾನೇಕೆ ರಾಜಕೀಯಕ್ಕೆ ಬಂದೆ : ವಿವರಣೆ ನೀಡಿದ ಡಾ. ಸಿ.ಎನ್.‌ ಮಂಜುನಾಥ್‌

ದೇವೇಗೌಡರ ಕುಟುಂಬ ರಾಜಕೀಯದ ಮೂಲಕ ಡಾ. ಮಂಜುನಾಥ್‌ ಎಂಟ್ರಿ ಪಡೆದುಕೊಂಡಿದ್ದಾರೆ ಎಂಬ ಸಂಸದ ಡಿ.ಕೆ. ಸುರೇಶ್‌ ಹೇಳಿಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು. ಆದರೆ, ತಾವೇಕೆ ರಾಜಕೀಯಕ್ಕೆ ಬಂದಿರುವುದು ಎಂಬುದಕ್ಕೆ ವಿವರಣೆ ನೀಡಿದರು.

ನಾನು 40 ವರ್ಷ ಧೀರ್ಘಕಾಲ ಹೃದ್ರೋಗ ಚಿಕಿತ್ಸಾ ಕೆಲಸ ಮಾಡಿ ನಂತರ ನಾನು ರಾಜಕೀಯಕ್ಕೆ ಬಂದಿದ್ದೇನೆ. ನಾನು ಕೆಲಸದ ಮಧ್ಯೆ ರಾಜಕೀಯಕ್ಕೆ ಬಂದಿಲ್ಲ. ಪಕ್ಷಾತೀತವಾಗಿ ಬೇರೆ ಬೇರೆ ರಾಜ್ಯ ಸೇರಿದಂತೆ ನಮ್ಮ ರಾಜ್ಯದ ಹಲವಾರು ಸ್ನೇಹಿತರು ಕ್ರಾಂತಿಕಾರಿ ಬದಲಾವಣೆ ತಂದಿದ್ದೀರಿ. ಅದನ್ನು ರಾಷ್ಟ್ರ ಮಟ್ಟಕ್ಕೆ ತನ್ನಿ ಎಂದು ಸಲಹೆ ನೀಡಿದ್ದಾರೆ. ರಾಷ್ಟ್ರ ಮಟ್ಟಕ್ಕೆ ಬರಲು ವೇದಿಕೆ, ಭೂಮಿಕೆ ಬೇಕಾಗುತ್ತದೆ. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ನಾನು ರಾಜಕೀಯಕ್ಕೆ ಬಂದಿರೋದು ರಾಜಕೀಯ ಮಾಡಲು ಅಲ್ಲ‌ ಎಂದು ಅವರು ವಿವರಿಸಿದರು.

Exit mobile version