ಮಂಡ್ಯ/ ಚಿಕ್ಕಮಗಳೂರು: ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದ ಹನುಮ ಧ್ವಜ Hanuman Flag) ವಿವಾದ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿರುವ ಜತೆಗೇ ರಾಜಕಾರಣಿಗಳ ನಡುವೆ ತೀವ್ರ ಮತ್ತು ಅಸಭ್ಯ ಪದ (Indecent words) ಬಳಕೆಯ ವಾಗ್ವಾದಕ್ಕೂ ಕಾರಣವಾಗಿದೆ. ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿ ಸೋಮವಾರ ನಡೆದ ಬೃಹತ್ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕ ಸಿ.ಟಿ. ರವಿ (BJP Leader CT Ravi) ಅವರು ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜ ಎಂದು ಹೇಳಿದ್ದಾರೆ ಎಂದು ಮಳವಳ್ಳಿ ಶಾಸಕ ಪಿಎಂ ನರೇಂದ್ರ ಸ್ವಾಮಿ (Congress MLA PM Narendra Swamy) ಆರೋಪಿಸಿದ್ದಲ್ಲದೆ, ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ.
ಮಂಡ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರು ಸಿ.ಟಿ. ರವಿ ಅವರ ಮೇಲೆ ಕಿಡಿ ಕಾರಿದ್ದಾರೆ.
ʻʻಅಯೋಗ್ಯ ಸಿ.ಟಿ ರವಿ ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜ ಅಂದಿದ್ದಾನೆ. ಇವರು ರಾಷ್ಟ್ರ ಧ್ವಜ, ಹೆತ್ತ ತಾಯಿಗೆ ಅವಮಾನ ಮಾಡ್ತಾರೆ. ಸಿ.ಟಿ ರವಿ ವಿರುದ್ದ ನಾನು ಇವತ್ತೆ ದೂರು ನೀಡ್ತಿದ್ದೇನೆ. ಸಿಟಿ ರವಿ ತಾಲೀಬಾನ್ ಧ್ವಜ ಎಂದಿರುವ ಬಗ್ಗೆ ಸಾಕ್ಷಿ ಸಮೇತ ಹೋಗಿ ದೂರು ನೀಡ್ತೇನೆʼʼ ಎಂದು ಹೇಳಿದ ನರೇಂದ್ರ ಸ್ವಾಮಿ ಅವರು ಮಾತಿನ ಭರದಲ್ಲಿ ಸಿಟಿ ರವಿಗೆ ಗಾಂಡು ಎಂದು ಕರೆದಿದ್ದಾರೆ.
ʻʻಸಿ.ಟಿ ರವಿ ನನಗೂ ಸ್ನೇಹಿತ. ಆದರೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದನ್ನು ಸಹಿಸಲಾಗುವುದಿಲ್ಲ. ಆತ ರಾಷ್ಟ್ರಧ್ವಜದ ಕುರಿತ ಹೇಳಿಕೆ ವಾಪಸ್ ಪಡೆದುಕೊಂಡರೆ ಆತನ ವಿರುದ್ಧ ಹೇಳಿರುವ ನನ್ನ ಹೇಳಿಕೆ ವಾಪಸ್ಸು ಪಡೆಯುತ್ತೇನೆʼʼ ಎಂದು ಅವಾಚ್ಯ ಶಬ್ದದಿಂದ ಸಿಟಿ ರವಿ ಅವರನ್ನು ನಿಂದಿಸಿದ ಪಿಎಂ ನರೇಂದ್ರ ಸ್ವಾಮಿ ಹೇಳಿದರು.
ಇದನ್ನೂ ಓದಿ : Hanuman Flag : ಮಂಡ್ಯಕ್ಕೆ ಬೆಂಕಿ ಹಚ್ಚಿದರೆ ಪರಿಣಾಮ ನೆಟ್ಟಗಿರಲ್ಲ ?; HDKಗೆ ಚಲುವರಾಯ ಸ್ವಾಮಿ ವಾರ್ನಿಂಗ್
HE IS Seedless : ಗಾಂಡು ಹೇಳಿಕೆಗೆ ಸಿ.ಟಿ. ರವಿ ಪ್ರತಿಕ್ರಿಯೆ
ಚಿಕ್ಕಮಗಳೂರು: ತಮ್ಮನ್ನು ಅಯೋಗ್ಯ, ಗಾಂಡು ಎಂಬ ಪದ ಬಳಸಿ ನಿಂದಿರುವ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಅವರ ಹೇಳಿಕೆ ಬಿಜೆಪಿಯ ಹಿರಿಯ ನಾಯಕ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
Now he is seedless (ಅವರು ಈಗ ಬೀಜರಹಿತ) ಎಂದು ಸಿ.ಟಿ ರವಿ ಅವರು ನರೇಂದ್ರ ಸ್ವಾಮಿಯನ್ನು ಲೇವಡಿ ಮಾಡಿದ್ದಾರೆ. ನರೇಂದ್ರ ಸ್ವಾಮಿ ಮಂತ್ರಿಗಿರಿಗಾಗಿ ಅರ್ಜಿ ಮೇಲೆ ಅರ್ಜಿ ಹಾಕಿ, ಈಗ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಯಾರು ಅದೇ ರೀತಿ ಇರ್ತಾರೋ, ಅವರು ಮಾತ್ರ ಅಂತಹ ಪದ ಬಳಕೆ ಮಾಡುತ್ತಾರೆ. ಅವರ ಮಾತಿನ ದಾಟಿ ನೋಡಿದ್ರೆ now he is seedless. ಆ ಕಾರಣಕ್ಕೆ ಅವರ ಬಾಯಿಂದ ಅಂತಹಾ ಮಾತು ಬಂದಿದೆʼʼ ಎಂದು ಸಿ.ಟಿ. ರವಿ ಹೇಳಿದರು.
ʻʻಸೀಡ್ ಲೆಸ್ ಅಂದ್ರೆ ಗೊತ್ತಲ್ಲಾ… ಅದರಲ್ಲಿ ಬೀಜ ಇರಲ್ಲ… ಏನೂ ಹುಟ್ಟಲ್ಲ. ರಾಜಕೀಯವಾಗಿ now he is seedless. ಅದಕ್ಕೆ ಅವರು ಆ ಪದ ಬಳಸಿದ್ದಾರೆʼʼ ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.