ಬೆಂಗಳೂರು: ಮೂರ್ನಾಲ್ಕು ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ಬಿಸಿ ವಾತಾವರಣ ಇದೀಗ ಮುಕ್ತಾಯವಾಗಿದ್ದು, ಕೊನೆಗೂ ಗೆದ್ದೆವಲ್ಲ ಎಂದು ಫಲಿತಾಂಶದ (Karnataka Election Results) ನಂತರ ಅನೇಕರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಬಾರಿಯ ವಿಧಾನಸಭೆ ಚುನಾವಣೆಗಳಲ್ಲಿ ಅನುಭವಿ ರಾಜಕಾರಣಿಗಳು ಹಾಗೂ ಮಾಜಿ ಸಚಿವರನ್ನು ಅನೇಕ ಕಡೆಗಳಲ್ಲಿ ಮತದಾರರು ಸೋಲಿಸಿದ್ದಾರೆ. ಇನ್ನು ಕೆಲವು ಹಿರಿಯ ರಾಜಕಾರಣಿಗಳು ಇನ್ನೇನು ಸೋಲಿನ ದವಡೆಗೆ ಹೋಗಿ ಹಾಗೂ ಹೀಗೂ ಗೆದ್ದು ಬಂದಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಕೇವಲ 5 ಸಾವಿರದೊಳಗಿನ ಮತದಲ್ಲಿ 42 ಶಾಸಕರು ಆಯ್ಕೆಯಾಗಿ ಬಂದಿದ್ದಾರೆ. ಮದ್ಯರಾತ್ರಿವರೆಗೂ ಜಯನಗರ ವಿಧಾನಸಭೆ ಕ್ಷೇತ್ರದ ಮತ ಎಣಿಕೆಯಲ್ಲಿ ನಡೆದ ಜಿದ್ದಾಜಿದ್ದಿನಲ್ಲಿ ಕೇವಲ 16 ಮತಗಳ ಅಂತರದಲ್ಲಿ ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಅವರನ್ನು ಬಿಜೆಪಿಯ ಸಿ.ಕೆ. ರಾಮಮೂರ್ತಿ ಸೋಲಿಸಿದ್ದಾರೆ. ಇದು ಈ ಬಾರಿ ಅತಿ ಕಡಿಮೆ ಅಂತರದಿಂದ ಗೆದ್ದ ಹಾಗೂ ಸೋತ ಕ್ಷೇತ್ರ.
ಮಾಜಿ ಸಚಿವ ಹಾಗೂ ದಿನೇಶ್ ಗುಂಡೂರಾವ್ ಗಾಂಧಿನಗರದಲ್ಲಿ ಬಿಜೆಪಿಯ ಸಪ್ತಗಿರಿ ಗೌಡ ವಿರುದ್ಧ ಕೇವಲ 105 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಸಪ್ತಗಿರಿಗೌಡ ತಂಡ ನಡೆಸಿದ ವ್ಯವಸ್ಥಿತ ಚುನಾವಣೆಗೆ ಸ್ವತಃ ದಿನೇಶ್ ಗುಂಡೂರಾವ್ ಮನಸೋತಿದ್ದು, ಫಲಿತಾಂಶದ ನಂತರ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, “ಗಾಂಧಿನಗರ ಕ್ಷೇತ್ರದ ಫಲಿತಾಂಶ ರೋಚಕ ಹೋರಾಟದ ವೇದಿಕೆಯಾಗಿತ್ತು. ಅಂತಿಮವಾಗಿ ಜಯ ನನ್ನದಾದರೂ ನನ್ನ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಸಪ್ತಗಿರಿ ಗೌಡ ಕೊನೆಯ ಕ್ಷಣದವರೆಗೂ ಗೆಲುವಿಗಾಗಿ ಹೋರಾಟ ನಡೆಸಿದರು. ಸಪ್ತಗಿರಿಗೌಡ ಚುನಾವಣೆಯಲ್ಲಿ ಸೋತರೂ ಅವರ ವ್ಯವಸ್ಥಿತ ಚುನಾವಣಾ ತಂತ್ರ ಹಾಗೂ ಗೆಲುವಿಗಾಗಿ ನಡೆಸಿದ ಹೋರಾಟವನ್ನು ಶ್ಲಾಘಿಸುತ್ತೇನೆ” ಎಂದಿದ್ದಾರೆ.
ಉಳಿದಂತೆ, ಸಚಿವರಾಗಿದ್ದ ಸಿ.ಸಿ. ಪಾಟೀಲ, ಶಿವರಾಮ ಹೆಬ್ಬಾರ್ ಹಾಗೂ ಸುನೀಲ್ ಕುಮಾರ್ ಅತಿ ಕಡಿಮೆ ಅಂತರದಲ್ಲಿ ಜಯಗಳಿಸಿದ್ದಾರೆ. ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಆರ್.ವಿ. ದೇಶಪಾಂಡೆ, ಎನ್. ಚೆಲುವರಾಯಸ್ವಾಮಿ ಸೇರಿ ಅನೇಕರು ಕಷ್ಟಪಟ್ಟು ಜಯಗಳಿಸಿದ್ದಾರೆ.
ಹೀಗೆ ಕಡಿಮೆ ಅಂತರದಲ್ಲಿ ಜಯಗಳಿಸಿದ 42 ಶಾಸಕರಲ್ಲಿ ಕಾಂಗ್ರೆಸ್‌ನ 22, ಬಿಜೆಪಿಯ 17 ಹಾಗೂ ಜೆಡಿಎಸ್‌ನ ಮೂವರು ಶಾಸಕರಿದ್ದಾರೆ. ಅವರೆಲ್ಲರ ಸಂಪೂರ್ಣ ವಿವರ ಕೆಳಕಂಡಂತಿದೆ.
ಇದನ್ನೂ ಓದಿ: Karnataka Election Results: ವಿಧಾನಸಭೆಯಲ್ಲಿ ಅಪ್ಪ ಮಕ್ಕಳ ಜೋಡಿ, ಸಹೋದರರ ಸಂಭ್ರಮ