ಬೆಂಗಳೂರು: ರಾಜಧಾನಿ ಬೆಂಗಳೂರಿಗೆ (Capital Bangalore) ಕನಕಪುರವನ್ನು ಸೇರ್ಪಡೆ ಮಾಡುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ (Deputy CM DK Shivakumar) ನೀಡಿರುವ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳು (Political calculations) ಅಡಗಿದೆ ಎನ್ನಲಾಗಿದೆ. ಅಲ್ಲದೆ, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಚಿಂತನೆಯಲ್ಲಿದ್ದಾರಾ ಎಂಬ ಅನುಮಾನವನ್ನೂ ಮೂಡಿಸಿದೆ. ಕನಕಪುರವನ್ನು ಬೆಂಗಳೂರಿಗೆ ಸೇರಿಸಿ, ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಪ್ಲ್ಯಾನ್ ಅನ್ನು ಅವರು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಕಾಂಗ್ರೆಸ್ ತನ್ನ ತಂತ್ರಗಾರಿಕೆಯನ್ನು ವಿರೋಧ ಮಾಡಿದೆ. ಇದಕ್ಕೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮರು ನಾಮಕರಣದ ಪ್ರಸ್ತಾಪದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಆಪ್ತ ವಲಯದಲ್ಲಿ ಈ ಚರ್ಚೆ ಜೋರಾಗಿದೆ. ಬಿಬಿಎಂಪಿ ಚುನಾವಣೆಯನ್ನು ಮುಂದೂಡುವುದರ ಜತೆಗೆ ಬಿಬಿಎಂಪಿ ವಿಭಜನೆ ಸಂದರ್ಭದಲ್ಲಿ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣದ ಚಿಂತನೆ ನಡೆಸಲಾಗಿದೆ.
ಇದನ್ನೂ ಓದಿ: Karnataka Weather : ಬೆಂಗಳೂರು ಸೇರಿದಂತೆ ಹಲವೆಡೆ ಇನ್ನೆರಡು ದಿನ ಉರಿ ಬಿಸಿಲು!
ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಬಿಬಿಎಂಪಿ ವಿಭಜನೆ ಮಾಡುವ ಪ್ರಸ್ತಾಪವನ್ನು ಇಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಬಿಬಿಎಂಪಿ ವಿಭಜನೆ ಕುರಿತು ನಿವೃತ್ತ ಐಎಎಸ್ ಬಿ.ಎಸ್ ಪಾಟೀಲ್ ಸಮಿತಿ ವರದಿಯನ್ನು ಸಲ್ಲಿಸಿದೆ. ಇದರಲ್ಲಿ ಬಿಬಿಎಂಪಿ ವಿಭಜನೆ ಬಗ್ಗೆ ಸಮಿತಿ ಸಹ ಶಿಫಾರಸು ಮಾಡಿದೆ.
ಒಂದು ವೇಳೆ ಸರ್ಕಾರ ಸಮಿತಿಯ ಶಿಫಾರಸನ್ನು ಒಪ್ಪಿದರೆ, ವಾರ್ಡ್ ಮರುವಿಂಗಡಣೆ ಆಗಬೇಕು. ಇದಕ್ಕಾಗಿ ಬಿಬಿಎಂಪಿ ಚುನಾವಣೆ ಸಹ ಮುಂದೂಡಿಕೆ ಆಗಲಿದೆ. ಹಾಗಾಗಿ ಬಿಬಿಎಂಪಿ ವಿಭಜನೆ ಸಂದರ್ಭದಲ್ಲಿ ರಾಮನಗರಕ್ಕೆ ಮರು ನಾಮಕರಣ ಮಾಡುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಬಿಬಿಎಂಪಿ ವಿಭಜನೆ ಬಗ್ಗೆ ವರದಿಯಲ್ಲೇನಿದೆ?
ಬಿಬಿಎಂಪಿ ವಿಭಜನೆಗೆ ಬಿ.ಎಸ್. ಪಾಟೀಲ್ ನೇತೃತ್ವದಲ್ಲಿ ಸಮಿತಿ ಈಗಾಗಲೇ ಒಂದು ಸುತ್ತಿನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಯಾಗಿದೆ. ಆ ವರದಿಗೆ ಪುನರ್‌ಜನ್ಮ ನೀಡುವುದು ಡಿ.ಕೆ. ಶಿವಕುಮಾರ್ ಪ್ಲ್ಯಾನ್ ಆಗಿದೆ. ಬಿಬಿಎಂಪಿಯನ್ನು ನಾಲ್ಕು ಅಥವಾ ಐದು ಭಾಗಗಳಾಗಿ ವಿಂಗಡಿಸುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆಗಲಿದೆಯೇ ಗ್ರೇಟರ್ ಬೆಂಗಳೂರು?
ಐದು ವಲಯಗಳಾಗಿ ವಿಂಗಡಿಸಿದರೆ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ಎಂದು ಮಾಡಲಾಗತ್ತದೆ. ಒಂದೊಂದು ವಲಯಕ್ಕೂ ಒಬ್ಬೊಬ್ಬ ಇತಿಹಾಸ ಪುರುಷರ ಹೆಸರನ್ನು ಇಡಲಾಗುತ್ತದೆ. ಒಂದು ವಲಯಕ್ಕೆ ಕೆಂಪೇಗೌಡ ವಲಯ ಎಂದು ಇಡುವ ಪ್ಲ್ಯಾನ್ ಅನ್ನು ಮಾಡಿಕೊಳ್ಳಲಾಗಿದೆ. ಹೀಗೆ ವಿಂಗಡಣೆ ಮಾಡುವ ಒಂದು ವಲಯಕ್ಕೆ ಆನೇಕಲ್ ಹಾಗೂ ಕನಕಪುರವನ್ನು ಸೇರಿಸುವ ಪ್ಲ್ಯಾ ನ್ ಅನ್ನು ಡಿ.ಕೆ. ಶಿವಕುಮಾರ್ ಅವರದ್ದು ಎನ್ನಲಾಗಿದೆ.
ಬೆಂಗಳೂರು ದಕ್ಷಿಣವಾಗಲಿದೆಯೇ ರಾಮನಗರ?
ಇನ್ನು ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಿ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವ ಚಿಂತನೆಯನ್ನು ನಡೆಸಲಾಗಿದೆ. ಐದು ವಲಯಗಳಾದರೆ ಐವರು ಮೇಯರ್, ಐವರು ಆಯುಕ್ತರನ್ನು ನೇಮಕ ಮಾಡುವ ಪ್ಲ್ಯಾನ್ ಅನ್ನೂ ಹೊಂದಲಾಗಿದೆ.
ಐದು ವಲಯಗಳಲ್ಲೂ ಕನಿಷ್ಠ 70 ಹಾಗೂ ಗರಿಷ್ಠ 100 ವಾರ್ಡ್ ಇರುವಂತೆ ನೋಡಿಕೊಳ್ಳುವುದು. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವ ಮಾಜಿ ಕಾರ್ಪೊರೇಟರ್‌ಗಳಿಗೆ ಎಲ್ಲರಿಗೂ ಅವಕಾಶ ಸಿಗಲಿದೆ ಎಂದು ಡಿ.ಕೆ. ಶಿವಕುಮಾರ್ ಅಭಯ ನೀಡುತ್ತಿದ್ದಾರೆ.
ಬಿಬಿಎಂಪಿ ಚುನಾವಣೆಯೂ ಮುಂದಕ್ಕೆ?
ಒಂದು ವೇಳೆ ಬಿಬಿಎಂಪಿ ವಿಭಜನೆ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಮುಂದಾದರೆ ಸದ್ಯಕ್ಕೆ ಬಿಬಿಎಂಪಿ ಚುನಾವಣೆ ನಡೆಯುವುದಿಲ್ಲ. ಬಿಬಿಎಂಪಿ ಚುನಾವಣೆ ಮುಂದೂಡುವ ಭಾಗವಾಗಿ ಬಿ.ಎಸ್. ಪಾಟೀಲ್ ವರದಿ ಅನುಷ್ಠಾನ ಮಾಡಲು ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Tiger Nail : ಹುಲಿ ಉಗುರು ಧರಿಸಿದ ಅರಣ್ಯಾಧಿಕಾರಿಗಳ ಸಸ್ಪೆಂಡ್; ಸಚಿವ ಈಶ್ವರ್ ಖಂಡ್ರೆ ಸೂಚನೆ
ನಾವು ಅಧಿಕಾರಕ್ಕೆ ಬಂದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಘೋಷಣೆ ಮಾಡಿದ್ದರು. ಇದೀಗ ಚುನಾವಣೆ ಮಾಡದೆ ಇದ್ದರೆ ಸರ್ಕಾರದ ವಿರುದ್ಧ ನಾಯಕರು ತಿರುಗಿ ಬೀಳುವ ಆತಂಕ ಕಾಂಗ್ರೆಸ್‌ಗಿದೆ. ಹೀಗಾಗಿ ಬಿಬಿಎಂಪಿ ವಿಭಜಿಸುವ ಮೂಲಕ ಚುನಾವಣೆ ಮುಂದೂಡುವ ಪ್ಲ್ಯಾನ್ ಕೂಡ ಡಿಕೆಶಿ ಅವರದ್ದಾಗಿದೆ ಎಂದು ಹೇಳಲಾಗುತ್ತಿದೆ.