Site icon Vistara News

ಉಕ್ರೇನ್ ರಾಜಧಾನಿ ಕೀವ್​ಗೆ ರಷ್ಯಾ ದಿಗ್ಬಂಧನ- Russia Ukraine War highlights

ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿದಿದೆ. ಉಕ್ರೇನ್‌ ಪ್ರತಿರೋಧ ಹೆಚ್ಚಾದ ನಡುವೆಯೂ ಅಣುಬಾಂಬ್‌ ಬಳಸುವ ಕೆಲ ಮುನ್ಸೂಚನೆಗಳನ್ನೂ ರಷ್ಯಾ ನೀಡಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವಂತೆ ಭಾರತ ಸರ್ಕಾರವು ಸಲಹೆ ನೀಡಿದೆ. ರಾಜತಾಂತ್ರಿಕ ಚರ್ಚೆಯೇ ಇದಕ್ಕೆ ಪರಿಹಾರ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಉಕ್ರೇನ್​ನಲ್ಲಿ ಸಿಲುಕಿದ್ದ 182 ಭಾರತೀಯರ ಏರ್​ಲಿಫ್ಟ್

‘ಆಪರೇಷನ್ ಗಂಗಾ’ 7ನೇ ವಿಮಾನ ಮುಂಬೈಗೆ ಆಗಮನ

ದೆಹಲಿಯಿಂದ ಬೆಂಗಳೂರಿನತ್ತ 7 ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿದ್ದ 7 ವಿದ್ಯಾರ್ಥಿಗಳು ತಾಯ್ನಾಡಿನತ್ತ ಮರಳಿದ್ದಾರೆ. ನಿನ್ನೆ ದೆಹಲಿಗೆ ಬಂದಿದ್ದ ವಿದ್ಯಾರ್ಥಿಗಳು ಬೆಂಗಳೂರಿನತ್ತ ಹೊರಟಿದ್ದು ಬೆಳಗ್ಗೆ 10.45ಕ್ಕೆ ಬೆಂಗಳೂರು ತಲುಪಲಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿದ್ದ 182 ಭಾರತೀಯರ ಏರ್‌ಲಿಫ್ಟ್ ಮಾಡಲಾಗಿದೆ. ‘ಆಪರೇಷನ್ ಗಂಗಾ’ 7ನೇ ವಿಮಾನ ಮುಂಬೈಗೆ ಆಗಮಿಸಿದೆ. ರೊಮೇನಿಯಾದ ಬುಕಾರೆಸ್ಟ್‌ನಿಂದ ಮುಂಬೈಗೆ ಆಗಮನ ಆಗಿದೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಭಾರತೀಯರಿಗೆ ಸ್ವಾಗತ ಕೋರಲಾಗಿದೆ. ಕೇಂದ್ರ ಸಚಿವ ನಾರಾಯಣ್ ರಾಣೆಯಿಂದ ಸ್ವಾಗತ ಕೋರಲಾಗಿದೆ.

ಉಕ್ರೇನ್‌ನಲ್ಲಿ ಹಿಂಸಾಚಾರ ನಿಲ್ಲಿಸಲು ಪುಟಿನ್‌ಗೆ ಮೋದಿ ಆಗ್ರಹ

ಕೈದಿಗಳಿಗೆ ಶಸ್ತ್ರ ಕೊಡುತ್ತಿರುವ ಉಕ್ರೇನ್: ರಷ್ಯಾ ವಿರೋಧ

ರಷ್ಯಾ ಸೇನೆಯ ವಿರುದ್ಧದ ಹೋರಾಟಕ್ಕೆ ತನ್ನೆಲ್ಲಾ ಸಂಪನ್ಮೂಲಗಳನ್ನು ಕ್ರೋಡೀಕರಿಸಿರುವ ಉಕ್ರೇನ್ ಇದೀಗ ಕೈದಿಗಳಿಗೂ ಶಸ್ತ್ರಾಸ್ತ್ರ ಕೊಟ್ಟು ಹೋರಾಡುವಂತೆ ಪ್ರೇರೇಪಿಸುತ್ತಿದೆ. ಉಕ್ರೇನ್​ನ ಈ ನಿರ್ಧಾರವನ್ನು ರಷ್ಯಾ ತೀವ್ರವಾಗಿ ವಿರೋಧಿಸಿದೆ. ಕೈದಿಗಳಿಗೆ ಶಸ್ತ್ರಾಸ್ತ್ರ ನೀಡಿದರೆ ದೊಡ್ಡಮಟ್ಟದಲ್ಲಿ ದರೋಡೆ, ಕೊಲೆಗಳಾಗುತ್ತವೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ಆತಂಕ ವ್ಯಕ್ತಪಡಿಸಿತು.

Exit mobile version