Site icon Vistara News

Ukrainian Soldier | ಬಂಧನಕ್ಕೂ ಮುನ್ನ ಹೇಗಿದ್ದ ಉಕ್ರೇನ್‌ ಯೋಧ ಈಗ ಹೇಗಾದ? ಇದು ರಷ್ಯಾ ಕ್ರೌರ್ಯಕ್ಕೆ ಸಾಕ್ಷಿ

Ukraine

ಕೀವ್‌: ರಷ್ಯಾ ಆಕ್ರಮಣದಿಂದಾಗಿ ಇಡೀ ಉಕ್ರೇನ್‌ ಅಸ್ಥಿಪಂಜರದಂತಾಗಿದೆ. ಲಕ್ಷಾಂತರ ಜನ ವಲಸೆ ಹೋಗಿದ್ದಾರೆ, ಸಾವಿರಾರು ಮಂದಿ ಮೃತಪಟ್ಟಿದ್ದಾರೆ, ಕಟ್ಟಡಗಳು ಧರೆಗುರುಳಿವೆ, ಮೂಲ ಸೌಕರ್ಯ ಮರೀಚಿಕೆಯಾಗಿದೆ. ಹೀಗಿದ್ದರೂ ರಷ್ಯಾ ಹಿಂದಡಿ ಇಡುತ್ತಿಲ್ಲ. ಇಂತಹ ಪರಿಸ್ಥಿತಿಯ ಮಧ್ಯೆಯೇ ಉಕ್ರೇನ್‌ ಯೋಧರೊಬ್ಬರನ್ನು (Ukrainian Soldier) ರಷ್ಯಾ ಸೇನೆ ಬಿಡುಗಡೆ ಮಾಡಿದ್ದು, ಯೋಧನ ಪರಿಸ್ಥಿತಿಯು ರಷ್ಯಾ ಕ್ರೌರ್ಯಕ್ಕೆ ಕನ್ನಡಿ ಹಿಡಿದಂತಿದೆ.

ಉಕ್ರೇನ್‌ನ ಮರಿಯುಪೋಲ್‌ನಲ್ಲಿ ನಾಲ್ಕು ತಿಂಗಳ ಹಿಂದೆ ಸೈನಿಕ ಮೈಖೈಲೊ ಡೈನೋವ್‌ ಎಂಬುವರನ್ನು ರಷ್ಯಾ ಸೈನಿಕರು ಬಂಧಿಸಿದ್ದರು. ಇತ್ತೀಚೆಗೆ ಡೈನೋವ್‌ ಅವರನ್ನು ಬಿಡುಗಡೆ ಮಾಡಿದ್ದು, ಅವರ ಮೊದಲಿದ್ದ ಆರೋಗ್ಯ ಸ್ಥಿತಿ ಹಾಗೂ ಈಗಿನ ಪರಿಸ್ಥಿತಿಯು ಮನಕಲಕುವಂತಿದೆ. ಡೈನೋವ್‌ ಅವರೇ ತಮ್ಮ ಫೋಟೊಗಳನ್ನು ಹಂಚಿಕೊಂಡಿದ್ದು, ಪುಟಿನ್‌ ಸೈನಿಕರು ಎಷ್ಟರಮಟ್ಟಿಗೆ ಹಿಂಸೆ ನೀಡಿದ್ದಾರೆ ಎಂಬುದು ತಿಳಿಯುತ್ತದೆ.

ಮೈಖೈಲೊ ಡೈನೋವ್‌ ಅವರ ದೇಹ ಬಳಲಿದೆ. ಒಂದು ಕೈ ಮುರಿದಂತೆ ಕಾಣಿಸುತ್ತಿದೆ. ಹಿಂಸೆಯಿಂದ ಬೇಸತ್ತು ಮುಖವು ಬಾಡಿಹೋಗಿದೆ. ಸದ್ಯ, ಇವರು ಚೆರ್ನಿಹಿವ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಫೋಟೊಗಳನ್ನು ನೋಡಿದ ಜನ ಜಾಲತಾಣಗಳಲ್ಲಿ ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಪ್ಪಂದದಂತೆ ಒಂದು ವಾರದಲ್ಲಿ ರಷ್ಯಾ ಉಕ್ರೇನ್‌ನ ೨೧೫ ಯೋಧರನ್ನು ಬಿಡುಗಡೆ ಮಾಡಲಿದೆ. ಉಕ್ರೇನ್‌ ಸಹ ರಷ್ಯಾ ಯೋಧರನ್ನು ಬಿಡುಗಡೆ ಮಾಡಲಿದೆ. ಆದರೆ, ಉಕ್ರೇನ್‌ ಯೋಧರ ಪರಿಸ್ಥಿತಿ ಹೇಗಿರಲಿದೆ ಎಂಬ ಆತಂಕ ಮೂಡಿದೆ.

ಇದನ್ನೂ ಓದಿ | ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿಕಾರು ಅಪಘಾತ; ಡಿಕ್ಕಿ ಹೊಡೆದ ವಾಹನದ ಚಾಲಕನಿಗೆ ಗಂಭೀರ ಗಾಯ

Exit mobile version