Site icon Vistara News

Asteroid: ಗಂಟೆಗೆ 24548 ಕಿ.ಮೀ ವೇಗದಲ್ಲಿ ಬರುತ್ತಿರುವ ಕ್ಷುದ್ರ ಗ್ರಹ ಭೂಮಿಗೆ ಅಪ್ಪಳಿಸುತ್ತಾ?

Asteroid

ಅಮೆರಿಕ: ಆಗಸ್ಟ್ 29, ಮಂಗಳವಾರ ಭೂಮಿಗೆ (Earth) ತೀರಾ ಹತ್ತಿರಕ್ಕೆ ಕ್ಷುದ್ರಗ್ರಹವೊಂದು ಬರಲಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಎಚ್ಚರಿಸಿದೆ. ಕ್ಷುದ್ರಗ್ರಹ 2023 ಕ್ಯೂಕೆ5 ಎಂದು ಹೆಸರಿಸಲಾಗಿರುವ ಕ್ಷುದ್ರಗ್ರಹವೊಂದು ಭೂಮಿಗೆ ತೀರಾ ಸಮೀಪ ಬರಲಿದೆ ನಾಸಾ ಸೆಂಟರ್ ಫಾರ್ ನಿಯರ್-ಅರ್ಥ್ ಆಬ್ಜೆಕ್ಟ್ ಸ್ಟಡೀಸ್ (CNEOS) ಎಚ್ಚರಿಸಿದೆ. ಕ್ಷುದ್ರಗ್ರಹ ಕುರಿತು ಪ್ರಕಟಿಸಿದ ವಿವರಗಳ ಪ್ರಕಾರ, 2023 QK5 (asteroid 2023 QK5) ಕೇವಲ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದ್ದು, ಗಂಟೆಗೆ 24548 ಕಿಲೋಮೀಟರ್ ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ ಎಂದು ಕೇಂದ್ರ ಎಚ್ಚರಿಸಿದೆ. ಕ್ಷುದ್ರಗ್ರಹದ ವೇಗವು ಆಲ್ಮೋಸ್ಟ್ ಬಾಹ್ಯಾಕಾಶ ನೌಕೆ (space shuttle) ಚಲಿಸುವ ವೇಗಕ್ಕೆ ಸಮವಾಗಿದೆ.

ಈ ಕ್ಷುದ್ರಗ್ರಹವು ಇದು ಭೂಮಿಯ ಸಮೀಪವಿರುವ ಕ್ಷುದ್ರಗ್ರಹಗಳ ಅಪೊಲೊ ಗುಂಪಿಗೆ ಸೇರಿದೆ. ಈಗ ಭೂಮಿಗೆ ಹತ್ತಿರವಾಗುತ್ತಿರುವ ಕ್ಷುದ್ರಗ್ರಹವು ತೀರಾ ದೊಡ್ಡದಿಲ್ಲ. ಹಾಗಾಗಿ, ಭೂಮಿಗೆ ಈ ಕ್ಷುದ್ರಗ್ರಹದಿಂದ ಅಪಾಯವಿದೆ ಎಂದು ಎಚ್ಚರಿಸಲಾಗಿಲ್ಲ. ಸುಮಾರು 37 ಅಡಿ ಅಗಲ ಇರುವ ಈ ಕ್ಷುದ್ರಗ್ರಹವನ್ನು ಬಸ್‌ಗೆ ಹೋಲಿಸಬಹುದು.

ಈ ಸುದ್ದಿಯನ್ನೂ ಓದಿ: Asteroids Alert | ಮುಂದಿನ ವಾರ ಭೂಮಿಯ ಸಮೀಪ ಬರಲಿವೆ 5 ಬೃಹತ್‌ ಕ್ಷುದ್ರಗ್ರಹ, ಏನಿರಲಿದೆ ಪರಿಣಾಮ?

ನಾಸಾದ ಪ್ರಕಾರ, 492 ಅಡಿಗಳಿಗಿಂತ ದೊಡ್ಡದಾದ ಕ್ಷುದ್ರಗ್ರಹಗಳನ್ನು ಮಾತ್ರ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಅಂತಹ ಸಣ್ಣ ಕ್ಷುದ್ರಗ್ರಹಗಳು ಸಹ ಭೂಮಿಗೆ ಅಪ್ಪಳಿಸಿದರೆ ಸಾಕಷ್ಟು ಹಾನಿಯನ್ನು ಮಾಡಬಹುದು. ಇದಕ್ಕೆ ಈ ಹಿಂದಿನ ನಿದರ್ಶನಗಳಿವೆ ಎಂಬುದನ್ನು ಗಮನಿಸಬಹುದು. ಇದಕ್ಕೆ ಚೆಲ್ಯಾಬಿನ್ಸ್ಕ್ ಉಲ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇದು ಕೇವಲ 59 ಅಡಿ ಅಗಲವಿತ್ತು. ಆದರೆ 2013 ರಲ್ಲಿ ರಷ್ಯಾದ ನಗರದ ಮೇಲೆ ಸ್ಫೋಟಗೊಂಡಿದ್ದರಿಂದ 7000 ಕಟ್ಟಡಗಳನ್ನು ನಾಶಪಡಿಸಿತು ಮತ್ತು 1200 ಜನರು ಗಾಯಗೊಂಡರು ಎಂದು ನಾಸಾ ಹೇಳಿದೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version