Site icon Vistara News

NASA | ಚಂದ್ರನ ಮೇಲೂ ಹಕ್ಕು ಸಾಧಿಸಲು ಹವಣಿಸುತ್ತಿದೆ ಚೀನಾ: ನಾಸಾ ಮುಖ್ಯಸ್ಥ ಆರೋಪ

NASA @ China and Moon

ನವದೆಹಲಿ: ತನ್ನ ನೆರೆ ಹೊರೆ ರಾಷ್ಟ್ರಗಳ ಭೂಮಿಯನ್ನು ಕಬಳಿಸಲು ಸದಾ ಹೊಂಚು ಹಾಕುವ ಚೀನಾ, ಈಗ ಚಂದ್ರನ ಮೇಲೂ ಅದೇ ವಿಸ್ತರಣಾ ನೀತಿಯನ್ನು ಅನುಸರಿಸುತ್ತಿದೆ. ಚಂದ್ರನ ಮೇಲೆ ತನ್ನ ಹಕ್ಕು ಸಾಧಿಸಲು ಹೊರಟಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾಗಿರುವ ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್(NASA) ಮುಖ್ಯಸ್ಥರು ಆರೋಪಿಸಿದ್ದಾರೆ.

ಚಂದ್ರಯಾನಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾದ ಮಧ್ಯೆ ಸ್ಪರ್ಧೆ ಇದೆ. ಮುಂದಿನ ಎರಡು ವರ್ಷದಲ್ಲಿ ಈ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆಂಬುದು ತಿಳಿಯಲಿದೆ. ಇದರ ಮಧ್ಯೆಯೇ, ನಾಸಾ ಮುಖ್ಯಸ್ಥ ಬಿಲ್ ನೆಲ್ಸನ್(Bill Nelson) ಅವರು, ಒಂದೊಮ್ಮೆ ಚೀನಾ ಈ ಸ್ಪರ್ಧೆಯಲ್ಲಿ ಗೆದ್ದರೆ, ಚಂದ್ರನ ವಿಶಾಲವಾದ ಭೂಪ್ರದೇಶದ ಮಾಲೀಕತ್ವದ ಹಕ್ಕು ಸಾಧಿಸಲಿದೆ ಎಂದು ಆರೋಪಿಸಿದ್ದಾರೆ.

ಇದರಲ್ಲೇನೂ ಮುಚ್ಚುಮರೆ ಇಲ್ಲ. ನಾವೀಗ ಬಾಹ್ಯಾಕಾಶದ ಮೇಲೆ ಗೆಲುವು ಸಾಧಿಸುವ ಸ್ಪರ್ಧೆಯಲ್ಲಿದೆ. ವೈಜ್ಞಾನಿಕ ಸಂಶೋಧನೆಯ ನೆಪದಲ್ಲಿ ಅವರು ಚಂದ್ರನ ಮೇಲೆ ನಿಯಂತ್ರಣ ಸಾಧಿಸದಂತೆ ನಾವು ಪ್ರಯತ್ನಿಸಬೇಕು. ಹಾಗಿದ್ದೂ, ಇದು ನಮ್ಮ ಪ್ರದೇಶ. ನೀವು ಹೊರಡಿ ಎಂದು ಹೇಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಚೀನಾ ವಿರುದ್ಧ ಆರೋಪಿಸಿದ್ದಾರೆ ನೆಲ್ಸನ್ ಅವರು.

ಚೀನಾದ ವಿಸ್ತರಣಾ ನೀತಿಗಳ ಬಗ್ಗೆ ನಿಮಗೇನಾದರೂ ಅನುಮಾನಗಳಿದ್ದರೆ, ಸ್ಪಾರ್ಟ್ಲೀ ದ್ವೀಪಗಳನ್ನು ನೋಡಿ. ಅವರು ಏನು ಮಾಡಿದ್ದಾರೆಂದು ತಿಳಿದುಕೊಳ್ಳಿ ಎಂದು ಬಿಲ್ ನೆಲ್ಸನ್ ಹೇಳಿದ್ದಾರೆ. ಅಲ್ಲದೇ, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಿ ಸರ್ಕಾರ ಹೇಗೆ ತನ್ನ ಪ್ರಭುತ್ವವನ್ನು ಇತರ ದೇಶಗಳಿಗೆ ಸೇರಿದ ನೆಲದಲ್ಲೂ ಸಾಧಿಸುತ್ತಿದೆ ಎಂಬುದನ್ನು ಉದಾಹರಣೆ ಸಹಿತ ನೆಲ್ಸನ್ ತಿಳಿಸಿದ್ದಾರೆ.

ಇದನ್ನೂ ಓದಿ | NASA Launches SWOT | ಭೂಮಿಯ ಜಲಮೂಲಗಳ ಸಮೀಕ್ಷೆಗೆ ನಾಸಾದಿಂದ ಉಪಗ್ರಹ ಲಾಂಚ್, ಏನೆಲ್ಲ ಮಾಹಿತಿ ಸಿಗಲಿದೆ?

Exit mobile version