Site icon Vistara News

Jupiter: ಗುರುಗ್ರಹದ ಅತ್ಯದ್ಭುತ ಫೋಟೋ ಸೆರೆ ಹಿಡಿದ ಜುನೋ! ನಾಸಾ ಚಿತ್ರಕ್ಕೆ ಭಾರಿ ಮೆಚ್ಚುಗೆ

Jupiter

ವಾಷಿಂಗ್ಟನ್ ಡಿಸಿ, ಅಮೆರಿಕ: ಒಂದೆಡೆ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ಚಂದ್ರನ ದಕ್ಷಿಣ ಧ್ರುವನ್ನು ತಲುಪಿ ವಿಶಿಷ್ಟ ಸಾಧನೆ ಮಾಡಿದರೆ(Chandrayaan 3), ಮತ್ತೊಂದೆಡೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾಗಿರುವ ನಾಸಾ (NASA) ಗುರು ಗ್ರಹದ (Jupiter) ಅದ್ಭುತ ಚಿತ್ರಗಳನ್ನು ಬಿಡುಗಡೆ ಮಾಡಿ, ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದೆ(Stunning Close-Up Images). ಅಮೂರ್ತ ಜಲವರ್ಣ ವರ್ಣಚಿತ್ರಗಳನ್ನು ಹೋಲುವ ಗುರುಗ್ರಹದ ನಂಬಲಾಗದ ಚಿತ್ರಗಳು ನಾಸಾದಿಂದ ಅದರ ಜುನೋ ಮಿಷನ್ (Juno Mission) ಪಡೆಯಲಾಗಿದೆ. ಜುನೋ ಮೂಲಕ ಸೆರೆ ಹಿಡಿಯಲಾದ ಗುರುಗ್ರಹದ ಫೋಟೋಗಳನ್ನು ನಾಸಾ ಇನ್‌ಸ್ಟಾಗ್ರಾಮ್‌ ವೇದಿಕೆಯಲ್ಲಿ ಹಂಚಿಕೊಂಡಿದೆ. ಗುರುಗ್ರಹದ ಸುತ್ತ ಪ್ರಬಲವಾದ ಬಿರುಗಾಳಿಗಳನ್ನು ಈ ಚಿತ್ರದಲ್ಲಿ ಗುರುತಿಸಬಹುದಾಗಿದೆ. ಬಾಹ್ಯಾಕಾಶ ನೌಕೆಯು ಈ ಚಿತ್ರವನ್ನು ಗ್ರಹದ ಮೋಡದ ಮೇಲ್ಭಾಗದಿಂದ 14,600 ಮೈಲುಗಳು (23,500 ಕಿಮೀ) ತೆಗೆದಿದೆ.

2019ರ ಜುಲೈ ತಿಂಗಳಲ್ಲಿ ಜುನೋ ಉಪಗ್ರಹವು ಗುರುಗ್ರಹದ ಸುತ್ತ 24ನೇ ಹಾರಾಟವನ್ನು ಪೂರ್ಣಗೊಳಸಿದಾಗ ಈ ಚಿತ್ರಗಳನ್ನು ಸೆರೆ ಹಿಡಿದಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾಗಿರುವ ನ್ಯಾಷನಲ್ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತವು (NASA) ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಪೋಸ್ಟ್ ಮಾಡಿ ವಿವರಿಸಿದೆ.

ನಾಸಾ ಷೇರ್ ಮಾಡಿದ ಗುರು ಗ್ರಹದ ಫೋಟೋಗಳು

ನಮ್ಮ ಜುನೋ ಬಾಹ್ಯಾಕಾಶ ನೌಕೆಯು ಗುರುಗ್ರಹದ ಉತ್ತರ ಗೋಳಾರ್ಧದಲ್ಲಿ ಬಿರುಗಾಳಿಗಳನ್ನು ಸೆರೆ ಹಿಡಿದಿದೆ. 2019ರಲ್ಲಿ ಗುರುಗ್ರಹದ 24ನೇ ಸುತ್ತು ಪೂರೈಸಿತು. ಬಾಹ್ಯಾಕಾಶ ನೌಕೆಯು ಈ ಚಿತ್ರವನ್ನು ಗ್ರಹದ ಮೋಡದ ಮೇಲ್ಭಾಗದಿಂದ 14,600 ಮೈಲಿಗಳು (23,500 ಕಿಮೀ) ತೆಗೆದುಕೊಂಡಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

2016ರಲ್ಲಿ ಗುರುಗ್ರಹದ ಕಕ್ಷೆ ಸೇರಿರುವ ಜುನೋ ಅಂದಿನಿಂದಲ ಗುರುಗ್ರಹವನ್ನು ಅಧ್ಯಯನ ಮಾಡುತ್ತಿದೆ. ಗುರುಗ್ರಹ ನಮ್ಮ ಸೌರಮಂಡಲದ ಅತಿದೊಡ್ಡ ದೈತ್ಯ ಗ್ರಹವಾಗಿದೆ. ಭೂಮಿಯ ಆಚೆಗಿನ ಜೀವರಾಶಿಗಳು ಕುರುಹುಗಳನ್ನು ಶೋಧಿಸಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Chandrayaan 3 : ಸೂರ್ಯನೆಡೆಗೆ ಇಸ್ರೋ ನೋಟ! ಮಿಷನ್‌ ಆದಿತ್ಯ ಹೇಗೆ ಕೆಲಸ ಮಾಡಲಿದೆ?

ನಾಸಾ ಹಂಚಿಕೊಂಡಿರುವ ಗುರುಗ್ರಹದ ಫೋಟೋ ನೀಲಿ ಮತ್ತು ಬಿಳಿ ಛಾಯೆಗಳಲ್ಲಿ ಗುರುಗ್ರಹದ ಮೇಲೆ ಬಿರುಗಾಳಿಗಳನ್ನು ತೋರಿಸುತ್ತದೆ. ವೃತ್ತಗಳ ನಡುವೆ ಹೊರಹೊಮ್ಮುವ ಅಲೆ ಅಲೆಯಾದ ಮಾದರಿಗಳೊಂದಿಗೆ ದೊಡ್ಡ ಸುತ್ತುವ ಮಾದರಿಗಳಲ್ಲಿರುವುದನ್ನು ಕಾಣಬಹುದಾಗಿದೆ.

ಕೆಲವೇ ಗಂಟೆಗಳ ಹಿಂದೆ ಹಂಚಿಕೊಳ್ಳಲಾದ ಚಿತ್ರವು ಈಗಾಗಲೇ 6 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಇಂಟರ್ನೆಟ್ ಬಳಕೆದಾರರು ಲವ್‌ಸ್ಟ್ರಕ್ ಮತ್ತು ಫೈರ್ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ. ಕೆಲವು ಬಳಕೆದಾರರು ಚಿತ್ರವನ್ನು ಅದ್ಭುತ ಎಂದು ಕರೆದರೆ, ಇತರರು ಅದನ್ನು ಅತಿ ಸುಂದರ ಎಂದು ಕರೆದಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version