Site icon Vistara News

Facial Reconstruction: ಅಬ್ಬಬ್ಬಾ… 1300 ವರ್ಷಗಳ ಹಿಂದೆ ಮೃತಳಾದ ಹುಡುಗಿಯ ಮುಖದ ಮರುಸೃಷ್ಟಿ!

Facial Reconstruction of Girl

ಕ್ಯಾಲಿಫೋರ್ನಿಯಾ: ವಿಜ್ಞಾನದ (Science) ಮುಂದೆ ಯಾವುದೂ ಅಸಾಧ್ಯವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಮಾರು 1300 ವರ್ಷಗಳ ಹಿಂದೆ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ಶೈರ್‌ನಲ್ಲಿ (UK’s Cambridgeshire) ಮೃತಪಟ್ಟ 16 ವರ್ಷದ ಆಂಗ್ಲೋ-ಸ್ಯಾಕ್ಸೊನ್ ಹುಡುಗಿಯ (Trumpington girl) ತಲೆಬುರುಡೆ ಅವಶೇಷಗಳು ದಶಕಗಳ ಹಿಂದೆ ದೊರೆತಿದ್ದವು. ಆ ತಲೆಬರುಡೆ ಅವಶೇಷಗಳನ್ನು ಆಧಾರವಾಗಿಟ್ಟುಕೊಂಡು, ಫೇಶಿಯಲ್ ರಿಕನ್ಸ್‌ಟ್ರಕ್ಷನ್ ತಂತ್ರಜ್ಞಾನವನ್ನು (Facial Reconstruction) ಬಳಸಿಕೊಂಡು ಹುಡುಗಿಯ ಮುಖವನ್ನು ಮರು ನಿರ್ಮಾಣ ಮಾಡಿದ್ದಾರೆ ವಿಜ್ಞಾನಿಗಳು. ಈ ಮೂಲಕ ವಿಜ್ಞಾನಿಗಳು ಮತ್ತೊಂದು ದಿಗ್ವಿಜಯವನ್ನು ಸಾಧಿಸಿದ್ದಾರೆ.

ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಲು, ಬದುಕಿದ್ದಾಗ ಹುಡುಗಿ ಇದ್ದ ರೀತಿಯಲ್ಲೇ ಮುಖವನ್ನು ಮರು ನಿರ್ಮಾಣ ಮಾಡಲು ವಿಜ್ಞಾನಿಗಳು ಹುಡುಗಿಯ ತಲೆಬುರುಡೆಯನ್ನು ಮೊದಲಿಗೆ ವಿಶ್ಲೇಷಿಸಿದರು. ಇದು ಆಕೆಯ ಅಕಾಲಿಕ ಮರಣದ ಮೊದಲು ಅವಳು ಹೇಗೆ ಕಾಣುತ್ತಿದ್ದಳು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಆದಾಗ್ಯೂ, ಡಿಎನ್‌ಎ ವಿಶ್ಲೇಷಣೆಯಿಲ್ಲದೆ, ಫೋರೆನ್ಸಿಕ್ ಕಲಾವಿದರು ನಿಖರವಾದ ಕಣ್ಣು ಮತ್ತು ಕೂದಲಿನ ಬಣ್ಣವನ್ನು ನಿರೂಪಿಸಲು ಸಾಧ್ಯವಾಗಲಿಲ್ಲ.

ಹೊಸ ಚಿತ್ರವು ಅವಳು ಮಸುಕಾದ ಚರ್ಮದೊಂದಿಗೆ ಹೊಳಪಿನ ಮುಖವನ್ನು ಹೊಂದಿದ್ದಳು ಎಂಬುದು ಖಾತ್ರಿಯಾಗುತ್ತದೆ. ಸಣ್ಣ ಮೂಗು, ಕೆನ್ನೆಯ ಮೂಳೆಗಳು ಗುರುತಿಸಬಹುದು. ಒಂದು ಕಣ್ಣು ಇನ್ನೊಂದು ಕಣ್ಣಿಗಿಂತಲೂ ಸ್ವಲ್ಪ ಕೆಳಗೆ ಇರುವುದನ್ನು ಚಿತ್ರದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.

ಅವಳ ಮುಖವನ್ನು ಅಭಿವೃದ್ದಿಪಡಿಸುವುದನ್ನು ನೋಡುವುದು ಆಸಕ್ತಿದಾಯಕವಾಗಿತ್ತು. ಅವಳ ಎಡಗಣ್ಣು ಅವಳ ಬಲಗಣ್ಣಿಗಿಂತ ಅರ್ಧ ಸೆಂಟಿಮೀಟರ್ ಸ್ವಲ್ಪ ಕೆಳಗಿತ್ತು; ಈ ಅಂಶವನ್ನು ಲೈಫ್ ಇಮೇಜ್‌ನಲ್ಲಿ ಗಮನಿಸಬಹುದಾಗಿದೆ ಎಂದು ಚಿತ್ರವನ್ನು ನಿರೂಪಿಸಿದ ಮುಖದ ಪುನರ್ನಿರ್ಮಾಣ (ಫೆಶಿಯಲ್ ರಿಕನ್ಸ್‌ಟ್ರಕ್ಷನ್) ಕಲಾವಿದ ಹ್ಯೂ ಮಾರಿಸನ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ನೀರಿನಂತೆಯೇ ಇರುವ ಮಂಜುಗಡ್ಡೆಯನ್ನು ತಯಾರಿಸಿದ ವಿಜ್ಞಾನಿಗಳು!

1300 ವರ್ಷಗಳ ಹಿಂದೆ ಮೃತಪಟ್ಟ ಈ ಹುಡುಗಿಯ ಅವಶೇಷಗಳು ದಶಕದ ಹಿಂದೆ ದೊರೆತಿದ್ದವು. ಸಮಾಧಿ ಮಾಡಲಾದ ಮರದ ಹಾಸುಗೆಯಲ್ಲಿ ಈ ಹುಡುಗಿಯ ಅಸ್ಥಿಪಂಜರವಿತ್ತು. ಆಕೆಯ ಎದೆಯ ಮೇಲೆ ಚಿನ್ನ ಮತ್ತು ಗಾರ್ನೆಟ್ ಶಿಲುಬೆಯನ್ನು ಹಾಕಲಾಗಿತ್ತು. 2012ರಲ್ಲಿ ಬ್ರಿಟಿಷ್ ಪುರಾತತ್ತ್ವ ಶಾಸ್ತ್ರಜ್ಞರು ಈ ಅವಶೇಷಗಳನ್ನು ಶೋಧಿಸಿದ್ದರೂ, ವಿಜ್ಞಾನಿಗಳಿಗೆ ‘ಟ್ರಂಪಿಂಗ್ಟನ್ ಹುಡುಗಿ’ ಮೂಲದ ಬಗ್ಗೆ ಖಚಿತವಾಗಿರಲಿಲ್ಲ. ಯೇಸುವಿನ ಬೋಧನೆಯನ್ನು ಹರಡುವ ಆರಂಭಿಕ ಕ್ರಿಶ್ಚಿಯನ್ ಗುಂಪಿನ ಭಾಗವಾಗಿದ್ದ ಯುವತಿಯಾಗಿ ಅವಳು ಜರ್ಮನಿಯಿಂದ ಇಂಗ್ಲೆಂಡ್‌ಗೆ ವಲಸೆ ಹೋಗಿರಬಹುದು ಎಂದು ಅವರು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ವಿಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version