ನವ ದೆಹಲಿ: ಭೂಮಿಯ ಮೇಲೆ ಅಂಟ್ಲಾಟಿಕ್, ಪೆಸಿಫಿಕ್, ಹಿಂದೂ ಮಹಾ ಸಾಗರ, ಅರ್ಕಾಟಿಕ್, ಸದರ್ನ್ ಓಷನ್… ಹೀಗೆ ಐದು ಮಹಾಸಾಗರ(Ocean)ಗಳಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಆದರೆ, ವಿಜ್ಞಾನಿಗಳು ಆರನೇಯ ಮಹಾ ಸಾಗರ ಇರುವಿಕೆಯ ಸಾಕ್ಷ್ಯಗಳನ್ನು ಕಂಡಿದ್ದಾರೆ. ಭೂಮಿಯ ಮೇಲಿನ ಮತ್ತು ಒಳಭಾಗದ ನಡುವಿನ ಭಾಗ(ಮ್ಯಾಂಟಲ್)ದಲ್ಲಿ ಗಣನೀಯ ಪ್ರಮಾಣದಲ್ಲಿ ನೀರಿನ ಸಾಕ್ಷ್ಯಗಳು ಲಭ್ಯವಾಗಿವೆ. ಹಾಗಾಗಿ, ಇದು ಆರನೇ ಮಹಾಸಾಗರಕ್ಕೆ ಸಾಕ್ಷ್ಯ ಆಗಿದೆ ಎಂದು ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಭೂಮಿಯ ಮೇಲ್ಭಾಗದಿಂದ 660 ಕಿ.ಮೀ. ಆಳದಲ್ಲಿ ರಚನೆಯಾಗಿರುವ ವಿರಳ ಡೈಮಂಡ್ ವಿಶ್ಲೇಷಣೆಯ ಅಧ್ಯಯನದ ವೇಳೆ, ಈ ಮಹಾಸಾಗರದ ಬಗೆಗಿನ ಸಾಕ್ಷ್ಯ ತಿಳಿದು ಬಂದಿದೆ. ಸಮುದ್ರದ ನೀರು ಸ್ಲ್ಯಾಬ್‌ಗಳನ್ನು ಒಳಗೊಂಡು ಮತ್ತು ಪರಿವರ್ತನೆಯ ವಲಯ(transition zone)ವನ್ನು ಪ್ರವೇಶಿಸುತ್ತದೆ ಎಂಬ ಸಿದ್ಧಾಂತವನ್ನು ದೃಢೀಕರಿಸುತ್ತದೆ. ಭೂಮಿಯ ಜಲಚಕ್ರವು ಭೂಮಿಯ ಒಳಭಾಗವನ್ನು ಒಳಗೊಂಡಿದೆ ಎಂದು ಹೊಸ ಸಂಶೋಧನೆಗಳು ಬಹಿರಂಗಪಡಿಸುತ್ತವೆ.
ಆರನೇ ಮಹಾಸಾಗರ ಕುರಿತು ಜರ್ಮನ್-ಇಟಾಲಿಯನ್- ಅಮೆರಿಕನ ಸಂಶೋಧನಾ ತಂಡದ ಅಧ್ಯಯನದ ವರದಿಯು ನೇಚರ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಭೂಮಿಯ ಒಳ ರಚನೆ ಮತ್ತು ಡೈನಾಮಿಕ್ಸ್‌ವು, ಮ್ಯಾಂಟಲ್ ಟ್ರಾನ್ಸಿಷನ್ ಝೋನ್ ಮತ್ತು ಲೋಯರ್ ಮ್ಯಾಂಟಲ್ 660 ಕಿ.ಮೀ ಗಡಿಯಿಂದಾಗಿ ರೂಪುಗೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಭೂಮಿಯ ಮ್ಯಾಂಟಲ್ ಮತ್ತು ಮತ್ತು ಕೆಳಗಿನ ಮ್ಯಾಂಟಲ್ ಅನ್ನು ಬೇರ್ಪಡಿಸುವ ಪರಿವರ್ತನಾ ವಲಯದಲ್ಲಿ(TZ) ನೀರಿನ ಬಗ್ಗೆ ಸಾಕ್ಷ್ಯವು ಸೂಚಿಸುತ್ತದೆ. ಈ ಗಡಿಯು 410 ರಿಂದ 660 ಕಿಲೋಮೀಟರ್‌ಗಳಷ್ಟು ಆಳದಲ್ಲಿದೆ. ಅಲ್ಲಿ 23,000 ಬಾರ್‌ಗಳವರೆಗಿನ ಅಪಾರ ಒತ್ತಡವು ಆಲಿವ್-ಹಸಿರು ಖನಿಜ ಆಲಿವೈನ್ ಅನ್ನು ಅದರ ಸ್ಫಟಿಕದ ರಚನೆಯನ್ನು ಬದಲಾಯಿಸಲು ಕಾರಣವಾಗುತ್ತದೆ ಎಂಬುದು ಅಧ್ಯಯನದ ವೇಳೆ ತಿಳಿದು ಬಂದಿದೆ.
ಇದನ್ನೂ ಓದಿ | Samudrayaan Mission | ಸಮುದ್ರದಲ್ಲಿ 6 ಕಿಲೋಮೀಟರ್ ಆಳಕ್ಕೆ ಹೋಗಲಿದೆ ಭಾರತದ ʼಮತ್ಸ್ಯʼ