ಕ್ರಿಕೆಟ್: ಐಪಿಎಲ್ 2022ನೇ ಆವೃತ್ತಿ ಮುಕ್ತಾಯವಾಗಿತ್ತಿದ್ದಂತಯೇ ಅಂತಾರಾಷ್ಟ್ರೀಯ ಪಂದ್ಯಗಳು ಆರಂಭಗೊಳ್ಳಲಿವೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ 5 ಮ್ಯಾಚ್‌ಗಳ ಟಿ20 ಸರಣಿ ಭಾರತದಲ್ಲಿ ನಡೆಯಲಿದೆ. ನಂತರ ಭಾರತ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪಂದ್ಯಗಳಲ್ಲಿ ಭಾರತ ತಂಡದಲ್ಲಿ ಯಾರಿಗೆ ಅವಕಾಶವಿದೆ ಎಂದು ಭಾರತ ಸ್ಕ್ವಾಡ್ ಅನೌನ್ಸ್ ಮಾಡಿದೆ.
ದಕ್ಷಿಣ ಆಫ್ರಿಕಾ ಸರಣಿ:
ದಕ್ಷಿಣ ಆಫ್ರಿಕಾ ವಿರುದ್ಧ 5 ಟಿ20 ಪಂದ್ಯಗಳು ನಡೆಯಲಿದೆ. ಈ ಬಾರಿ ಅನೇಕ ಹೊಸ ಆಟಗಾರರಿಗೂ ಅವಕಾಶ ನೀಡಲಾಗಿದೆ. ಜೂನ್ 9ರಿಂದ ಜೂನ್ 19ರವರೆಗೆ ಈ ಸರಣಿ ನಡೆಯಲಿದೆ. ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಈ ತಂಡ ಮುನ್ನೆಡಯಲಿದೆ. ಉಮ್ರಾನ್ ಮಲ್ಲಿಕ್ ಹಾಗೂ ಅರ್ಶದೀಪ್ ಸಿಂಗ್ ಅಂತಾರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡುತ್ತಿರುವುದು ಗಮನಾರ್ಹ.
ಇದನ್ನೂ ಓದಿ | ಯುವರಾಜ್ ಸಿಂಗ್‌ಗೆ ಟಿ20 ತಂಡದ ನಾಯಕತ್ವ ತಪ್ಪಿದ್ದು ಹೇಗೆ?
ಟಿ20 ತಂಡ: ಕೆ.ಎಲ್ ರಾಹುಲ್(ನಾಯಕ), ಋತುರಾಜ್ ಗಾಯಕ್‌ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಐಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಐಯ್ಯರ್, ಯುಝುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ರವಿ ಬಿಶ್ನೊಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೆಶ್ ಖಾನ್, ಅರ್ಶದೀಪ್ ಸಿಂಗ್, ಉಮ್ರಾನ್ ಮಲ್ಲಿಕ್.
ಇಂಗ್ಲೆಂಡ್ ಸರಣಿ
ಇಂಗ್ಲೆಂಡ್ ಪ್ರವಾಸಕ್ಕೆ ಭಾರತದ ಟೆಸ್ಟ್ ತಂಡವನ್ನು ಘೋಷಣೆ ಮಾಡಲಾಗಿದೆ. ಕಳೆದ ಬಾರಿ ಶ್ರೀಲಂಕಾ ಸರಣಿಯಲ್ಲಿ ಚೆತೇಶ್ವರ್ ಪೂಜಾರಾ ಅವರನ್ನು ಕೈಬಿಡಲಾಗಿತ್ತು. ಆದರೆ ಈಗ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಜಿಂಕ್ಯ ರಹಾನೆ ಗಾಯಗೊಂಡಿರುವ ಕಾರಣಕ್ಕೆ ಅವರು ತಂಡದಲ್ಲಿ ಸ್ಥಾನ ಪಡೆದಿಲ್ಲ. ಜೂನ್ 24ರಿಂದ ಆರಭವಾಗಲಿರುವ ಈ ಸರಣಿಯಲ್ಲಿ 1 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳು ನಡೆಯಲಿವೆ.
ಟೆಸ್ಟ್ ತಂಡ: ರೋಹಿತ್ ಶರ್ಮ(ನಾಯಕ), ಶುಬ್ಮನ ಗಿಲ್, ವಿರಾಟ್ ಕೋಹ್ಲಿ, ಶ್ರೇಯಸ್ ಐಯ್ಯರ್, ಚೆತೇಶ್ವರ್ ಪೂಜಾರಾ, ಹನುಮ ವಿಹಾರಿ, ರವೀಂದ್ರ ಜಡೆಜಾ, ರವಿಚಂದ್ರನ್ ಅಶ್ವಿನ್, ಕೆ.ಎಲ್ ರಾಹುಲ್(ವಿಕೆಟ್ ಕೀಪರ್), ರಿಷಭ್ ಪಂತ್(ವಿಕೆಟ್ ಕೀಪರ್), ಶ್ರೀಕರ್ ಭರತ್, ಶಾರ್ದುಲ್ ಠಾಕುರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ
ಏಕದಿನ ಪಂದ್ಯದ ತಂಡವನ್ನು ಇನ್ನೂ ಘೋಷಣೆ ಮಾಡಬೇಕಿದೆ.
ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಜೋ ರೂಟ್ ಗುಡ್ ಬೈ