1. ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ; ‘ವಿಶ್ವಾಸ’ ನಡೆಗೆ ಮುಂದಾದ ಬಿಎಸ್‌ವೈ ಈಗ ಫುಲ್ ಆ್ಯಕ್ಟಿವ್!
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ (BJP State President) ಸ್ಥಾನಕ್ಕೆ ಪುತ್ರ, ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಆಯ್ಕೆಯಾಗುತ್ತಿದ್ದಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಸಖತ್ ಆ್ಯಕ್ಟಿವ್ ಆಗಿದ್ದಾರೆ. ಅವರೀಗ “ವಿಶ್ವಾಸ”ದ ನಡೆಯನ್ನು ಇಡುತ್ತಾರೆ. ಅಂದರೆ, ಎಲ್ಲ ಬಣದವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಸಂಬಂಧ ವಿರೋಧಿ ಬಣ ಎಂದು ಗುರುತಿಸಿಕೊಂಡ ಕೆಲವು ಹಿರಿಯ ಪ್ರಮುಖರಿಗೆ ಕರೆ ಮಾಡಿ ಸಹಕಾರ ನೀಡುವಂತೆ ಕೋರಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : BY Vijayendra : ನನ್ನ ಆಯ್ಕೆ ಕುಟುಂಬ ರಾಜಕಾರಣವಲ್ಲ; ಯುವ ಕೋಟಾದಲ್ಲಿ ಮನ್ನಣೆ ಸಿಕ್ಕಿದೆ ಎಂದ ಬಿ.ವೈ. ವಿಜಯೇಂದ್ರ
ಈ ಸುದ್ದಿಯನ್ನೂ ಓದಿ : Opposition leader : ಮುಂದಿನ ಪ್ರಶ್ನೆ ಪ್ರತಿಪಕ್ಷ ನಾಯಕ ಯಾರು? ನಾನಿದ್ದೇನೆ ಎಂದ ಅಶ್ವತ್ಥನಾರಾಯಣ್
2. ಪಟಾಕಿ ಸಿಡಿಸಲು ಎರಡೇ ಗಂಟೆ ಅವಕಾಶ; ದೀಪಾವಳಿಗೆ Strict Rules
ಬೆಂಗಳೂರು: ದೇಶಾದ್ಯಂತ ದೀಪಾವಳಿ ಹಬ್ಬವನ್ನು (Deepavali Festival) ಸಂಭ್ರಮದಿಂದ ಆಚರಿಸಲು ಜನರು ಸಿದ್ಧರಾಗಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಬ್ಬದ ಮೂಡ್ ಶುರುವಾಗಿದೆ. ಈ ನಡುವೆ ಬೆಂಗಳೂರಿನಲ್ಲಿ (Restrictions in Bangalore) ರಾತ್ರಿ ಎಂಟರಿಂದ 10ರವರೆಗೆ ಎರಡು ಗಂಟೆ ಮಾತ್ರ ಪಟಾಕಿ (Deepavali Crackers) ಸಿಡಿಸಲು ಅವಕಾಶ ನೀಡಲಾಗಿದೆ. ಅದರ ಜತೆಗೆ ಬೆಂಗಳೂರಿನ 60 ಜಾಗದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ (Crackers Market) ಅವಕಾಶ ಕಲ್ಪಿಸಲಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
3. ಅಯೋಧ್ಯೆ ರಾಮಮಂದಿರ ಮೇಲೆ ಹಮಾಸ್ ಮಾದರಿ ದಾಳಿಗೆ ಪಾಕ್ ಉಗ್ರರ ಸ್ಕೆಚ್, ಬಿಗಿ ಭದ್ರತೆ
ಅಯೋಧ್ಯೆ: ಅಯೋಧ್ಯೆಯಲ್ಲಿ ಕೋಟ್ಯಂತರ ಭಾರತೀಯರ ಕನಸು ನನಸಾಗುತ್ತಿದ್ದು, ಶ್ರೀರಾಮಮಂದಿರ (Ayodhya Ram Mandir) ಲೋಕಾರ್ಪಣೆಗೆ ಅಣಿಯಾಗುತ್ತಿದೆ. ಇದರ ನಡುವೆಯೇ ಮಂದಿರದ ಮೇಲೆ ದಾಳಿಗೆ ಪಾಕ್ ಮೂಲದ ಉಗ್ರರು ಸಜ್ಜಾಗಿದ್ದಾರೆ (terrorist attack) ಎಂಬ ಮಾಹಿತಿ ಗುಪ್ತಚರ ಪಡೆಗಳಿಗೆ (intelligence) ಲಭ್ಯವಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Ayodhya Deepotsav: ಅಯೋಧ್ಯೆಯಲ್ಲಿ ಬೆಳಗಿದ 22 ಲಕ್ಷ ದೀಪಗಳು; ಮತ್ತೆ ಗಿನ್ನಿಸ್ ದಾಖಲೆ
ಈ ಸುದ್ದಿಯನ್ನೂ ಓದಿ: ಐಸಿಸ್ ಉಗ್ರರ ಪರವಾಗಿ ಕೆಲಸ; ಅಲಿಗಢ ಮುಸ್ಲಿಂ ವಿವಿಯ 6 ವಿದ್ಯಾರ್ಥಿಗಳ ಬಂಧನ!
4. ಪಾಕಿಸ್ತಾನ ಔಟ್; ಭಾರತ- ಕಿವೀಸ್ ಸೆಮಿಫೈನಲ್ ಫಿಕ್ಸ್
ಕೋಲ್ಕತಾ: ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡ ಹಾಲಿ ಆವೃತ್ತಿಯ ವಿಶ್ವ ಕಪ್ನ (ICC World Cup 2023) ಲೀಗ್ ಹಂತದಿಂದಲೇ ಹೊರಕ್ಕೆ ನಡೆದಿದೆ. ಭಾರತೀಯ ಉಪ ಖಂಡದ ಲಾಭಗಳನ್ನು ಬಳಸಿಕೊಂಡು ಕಪ್ ಗೆದ್ದುಕೊಂಡು ಬರುತ್ತೇವೆ ಎಂಬ ಹುಮ್ಮಸ್ಸಿನಲ್ಲಿ ಭಾರತಕ್ಕೆ ಕಾಲಿಟ್ಟಿದ್ದ ಪಾಕ್ ತಂಡ ನಿರಾಶಾದಾಯಕ ಪ್ರದರ್ಶನ ನೀಡುವ ಮೂಲಕ ಮೊದಲ ಹಂತದಿಂದಲೇ ನಿರ್ಗಮಿಸಿದೆ. ಈ ಮೂಲಕ ಆಡಳಿತಾತ್ಮಕವಾಗಿ ಹಾಗೂ ಆಂತರಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಪಾಕ್ ತಂಡ ಭಾರತದಿಂದ ಬೇಸರದಿಂದ ನಿರ್ಗಮಿಸುವಂತಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: ICC World Cup 2023 : ಡಚ್ಚರನ್ನು ಸೋಲಿಸಿ ಅಜೇಯ ಸಾಧನೆ ಮಾಡುವುದೇ ರೋಹಿತ್ ಪಡೆ?
ವಿಶ್ವಕಪ್ ಕ್ರಿಕೆಟ್ ಕುರಿತ ಮತ್ತಷ್ಟು ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
5. ಕೆಇಎ ಪರೀಕ್ಷಾ ಅಕ್ರಮ ಪ್ರಕರಣ ಸಿಐಡಿಗೆ ಹಸ್ತಾಂತರ
ಬೆಂಗಳೂರು: ಕೆಇಎ ಪರೀಕ್ಷಾ ಅಕ್ರಮ ಪ್ರಕರಣದ (Exam Scam) ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಪರೀಕ್ಷಾ ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಬಂಧನವಾದ ಬೆನ್ನಲ್ಲೇ ಗೃಹ ಇಲಾಖೆ ಸೂಚನೆ ಮೇರೆಗೆ ಪ್ರಕರಣದ ತನಿಖೆ ಹೊಣೆಯನ್ನು ಸಿಐಡಿಗೆ ನೀಡಲಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
6. 450 ರೂ.ಗೆ ಸಿಲಿಂಡರ್, ರೈತರಿಗೆ 12 ಸಾವಿರ ರೂ.; ಬಿಜೆಪಿ ಪ್ರಣಾಳಿಕೆಯಲ್ಲಿ ಭರಪೂರ ‘ಉಚಿತ’ ಕೊಡುಗೆ!
ಭೋಪಾಲ್: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಕಾವು ದಿನೇದಿನೆ ರಂಗೇರುತ್ತಿದೆ. ಬಿಜೆಪಿ, ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಇದರ ಬೆನ್ನಲ್ಲೇ ಬಿಜೆಪಿಯು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಹತ್ತಾರು ಭರವಸೆಗಳನ್ನು ನೀಡಿದೆ. ಅದರಲ್ಲೂ ಜನರಿಗೆ ಸಬ್ಸಿಡಿ ದರದಲ್ಲಿ 450 ರೂಪಾಯಿಗೆ ಒಂದು ಅಡುಗೆ ಅನಿಲ ಸಿಲಿಂಡರ್, ವರ್ಷಕ್ಕೆ ರೈತರಿಗೆ 12 ಸಾವಿರ ರೂ. ಜಮೆ ಸೇರಿ ಹಲವು ಭರವಸೆಗಳನ್ನು ನೀಡಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
7. ಉತ್ತರಾಖಂಡದಲ್ಲಿ ದೇಶದ ಮೊದಲ Uniform Civil Code ಮುಂದಿನ ವಾರ ಜಾರಿಗೆ ಸಿದ್ಧತೆ
ಹೊಸದಿಲ್ಲಿ: ಉತ್ತರಾಖಂಡ (uttarakhand) ಮುಂದಿನ ವಾರ ಏಕರೂಪ ನಾಗರಿಕ ಸಂಹಿತೆಯನ್ನು (Uniform Civil Code) ಜಾರಿಗೊಳಿಸಲಿದೆ. ಆ ಮೂಲಕ, ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರ ಪ್ರಕಾರ ಲಿವ್- ಇನ್ ರಿಲೇಶನ್‌ಶಿಪ್ (Live in relationship) ನೋಂದಣಿ ಮಾಡುವುದು ಕಡ್ಡಾಯವಾಗಲಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
8. ಮುಂದಿನ ತಿಂಗಳು ಲಕ್ಷಾಂತರ ಜಿಮೇಲ್ ಖಾತೆ ಡಿಲೀಟ್; ಉಳಿಸಿಕೊಳ್ಳಲು ಹೀಗೆ ಮಾಡಿ
ನವದೆಹಲಿ: ಸುಮಾರು 2 ವರ್ಷ ಮತ್ತು ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಬಳಕೆಯಲ್ಲಿ ಇಲ್ಲದ ಜಿಮೇಲ್ ಖಾತೆಗಳನ್ನು (Gmail Accounts) ಡಿಲೀಟ್ ಮಾಡಲು ಗೂಗಲ್ (Google) ಮುಂದಾಗಿದೆ. ಮುಂದಿನ ತಿಂಗಳೇ ಈ ಕ್ರಮ ಜಾರಿಗೆ ಬರಲಿದೆ. ವೈಯಕ್ತಿಕ ಖಾತೆಗಳಿಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ ಎಂದು ಎಂದು ಮೂಲಗಳು ತಿಳಿಸಿವೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
9. ಮೋದಿ ‘ವೋಕಲ್ ಫಾರ್ ಲೋಕಲ್’ ಕರೆಗೆ ಗಣ್ಯರ ಬಲ; ಅಕ್ಷಯ್, ಪೆಡ್ನೇಕರ್ ಸಾಥ್
ನವದೆಹಲಿ: ದೇಶಾದ್ಯಂತ ದೀಪಾವಳಿ ಹಬ್ಬದ (Deepavali 2023) ಸಂಭ್ರಮ ಮನೆಮಾಡಿದೆ. ನಾಗರಿಕರು ಪಟಾಕಿ, ಹಣತೆ, ದೇವರ ಫೋಟೊ, ಮೂರ್ತಿ ಸೇರಿ ಹಲವು ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇದರ ಬೆನ್ನಲ್ಲೇ, “ದೇಶದ ಜನರು ದೇಶೀಯ ವಸ್ತುಗಳನ್ನೇ ಖರೀದಿಸಿ. ವೋಕಲ್ ಫಾರ್ ಲೋಕಲ್ (Vocal For Local) ಎಂಬ ಅಭಿಯಾನಕ್ಕೆ ಬೆಂಬಲ ನೀಡಿ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕರೆ ನೀಡಿದ್ದು, ದೇಶದ ನಾಗರಿಕರು, ಬಾಲಿವುಡ್ ನಟ-ನಟಿಯರು, ಉದ್ಯಮಿಗಳು ಸೇರಿ ಹತ್ತಾರು ಗಣ್ಯರು ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
10. ಕತ್ತೆಗೂ ಬಂತು ಕಾಲ; ಕತ್ತೆ ಹಾಲು ಲೀಟರ್‌ಗೆ 1,350 ರೂ.
ಗಾಂಧಿನಗರ: ತನ್ನ ಔಷಧೀಯ ಗುಣಗಳಿಂದಾಗಿ ಕತ್ತೆ ಹಾಲಿಗೆ (Donkey milk) ಬೇಡಿಕೆ ಹೆಚ್ಚಾಗುತ್ತಿದ್ದು, ಸದ್ಯ ಲೀಟರ್‌ಗೆ 1,350 ರೂ. ಇದೆ. ಈ ಬಗ್ಗೆ ಸ್ವತಃ ಕೇಂದ್ರ ಪಶುಸಂಗೋಪನಾ ಸಚಿವ ಪುರುಷೋತ್ತಮ್ ರೂಪಾಲಾ (Union Minister for Animal Husbandry Parshottam Rupala) ಮಾಹಿತಿ ನೀಡಿದ್ದು, ಮೇಕೆ ಮತ್ತು ಒಂಟೆ ಹಾಲಿನ ಔಷಧೀಯ ಮೌಲ್ಯಗಳನ್ನು ಪ್ರತಿಪಾದಿಸುವಾಗ ಕತ್ತೆ ಹಾಲು ದುಬಾರಿಯಾಗಿದೆ ಎಂದು ತಿಳಿಸಿದರು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ