Ayodhya Deepotsav: ಅಯೋಧ್ಯೆಯಲ್ಲಿ ಬೆಳಗಿದ 22 ಲಕ್ಷ ದೀಪಗಳು; ಮತ್ತೆ ಗಿನ್ನಿಸ್‌ ದಾಖಲೆ - Vistara News

ದೀಪಾವಳಿ

Ayodhya Deepotsav: ಅಯೋಧ್ಯೆಯಲ್ಲಿ ಬೆಳಗಿದ 22 ಲಕ್ಷ ದೀಪಗಳು; ಮತ್ತೆ ಗಿನ್ನಿಸ್‌ ದಾಖಲೆ

Ayodhya Deepotsav: ಅಯೋಧ್ಯೆಯಲ್ಲಿ ಈ ಬಾರಿ 22 ಲಕ್ಷ ದೀಪಗಳನ್ನು ಬೆಳಗಲಾಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ಗಿನ್ನಿಸ್‌ ವಿಶ್ವದಾಖಲೆ ಸೃಷ್ಟಿಯಾಗಿದೆ.

VISTARANEWS.COM


on

Ayodhya Deepotsav
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಈ ಬಾರಿಯೂ ದೀಪಾವಳಿ ಹಿನ್ನೆಲೆಯಲ್ಲಿ ಅಯೋಧ್ಯೆ ದೀಪೋತ್ಸವವು (Ayodhya Deepotsav) ಅದ್ಧೂರಿಯಾಗಿ ನಡೆದಿದೆ. ಸರಯೂ ನದಿಯ ತೀರ ಸೇರಿ ಅಯೋಧ್ಯೆಯ 51 ಘಾಟ್‌ಗಳಲ್ಲಿ ಸುಮಾರು 22.23 ಲಕ್ಷ ದೀಪಗಳನ್ನು ಬೆಳಗಿಸಲಾಗಿದ್ದು, ದೀಪೋತ್ಸವವು ಮತ್ತೆ ಗಿನ್ನಿಸ್‌ ವಿಶ್ವ ದಾಖಲೆ (Guinness World Record) ಬರೆದಿದೆ. ಜಗತ್ತಿನ ಯಾವ ಭಾಗದಲ್ಲಿಯೂ ಇಷ್ಟೊಂದು ದೀಪಗಳನ್ನು ಬೆಳಗದ ಕಾರಣ ಅಯೋಧ್ಯೆ ದೀಪೋತ್ಸವವು ಗಿನ್ನಿಸ್‌ ದಾಖಲೆ ಬರೆದಿದೆ.

2024ರ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಮಾಡುವುದರಿಂದ ಈ ಬಾರಿಯ ದೀಪೋತ್ಸವವು ಮತ್ತಷ್ಟು ಅದ್ಧೂರಿಯಾಗಿ ನೆರವೇರಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ದೀಪ ಬೆಳಗುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಇದಾದ ಬಳಿಕ ಏಕಕಾಲಕ್ಕೆ 22 ಲಕ್ಷಕ್ಕೂ ಅಧಿಕ ಹಣತೆಗಳಲ್ಲಿ ದೀಪಗಳನ್ನು ಬೆಳಗಲಾಯಿತು. ಹಾಗೆಯೇ, ಇಡೀ ನಗರದ ತುಂಬ ಮೂಡಿದ ಲೇಸರ್‌ ಕಿರಣಗಳ ಚಿತ್ತಾರವು ಅಯೋಧ್ಯೆಗೆ ಹೊಸ ರಂಗು ನೀಡಿತು.

ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಮಮಂದಿರವನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ ಕಾರಣ ದೀಪೋತ್ಸವದ ವೇಳೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಸಾವಿರಾರು ಪೊಲೀಸರ ನಿಯೋಜನೆ, ಪ್ರತಿಯೊಬ್ಬರ ತಪಾಸಣೆ ಸೇರಿ ಹಲವು ರೀತಿಯಲ್ಲಿ ಭದ್ರತೆ ಒದಗಿಸಲಾಗಿತ್ತು. ಸುಮಾರು 25 ಸಾವಿರ ಸ್ವಯಂಸೇವಕರು ದೀಪ ಬೆಳಗಿಸುವ ಕಾರ್ಯದಲ್ಲಿ ತೊಡಗಿದ್ದರು. ಇದೇ ವೇಳೆ ಉತ್ತರ ಪ್ರದೇಶ ಸರ್ಕಾರಕ್ಕೆ ಗಿನ್ನಿಸ್‌ ದಾಖಲೆಯ ಪ್ರಮಾಣಪತ್ರವನ್ನೂ ನೀಡಲಾಯಿತು.

ಗಿನ್ನಿಸ್‌ ದಾಖಲೆ ಪ್ರಮಾಣಪತ್ರ ಸ್ವೀಕಾರ.

ಕಳೆದ ವರ್ಷವೂ ಗಿನ್ನಿಸ್‌ ದಾಖಲೆ

2022ರ ದೀಪಾವಳಿ ವೇಳೆ ಅಯೋಧ್ಯೆಯ ಸರಯೂ ನದಿ ತೀರದಲ್ಲಿ 17 ಲಕ್ಷ ದೀಪಗಳನ್ನು ಬೆಳಗಿದ ಹಿನ್ನೆಲೆಯಲ್ಲಿ ಅಯೋಧ್ಯೆಯ ದೀಪೋತ್ಸವವು ಗಿನ್ನಿಸ್ ದಾಖಲೆಗೆ ಭಾಜನವಾಗಿತ್ತು. ದೀಪೋತ್ಸವದ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಗಿನ್ನಿಸ್ ದಾಖಲೆಯ ಪ್ರಮಾಣಪತ್ರ ನೀಡಿದ್ದರು.

ಇದನ್ನೂ ಓದಿ: Ayodhya Ram Mandir: ಜನವರಿಯಲ್ಲಿ ಅಯೋಧ್ಯೆಗೆ ಭೇಟಿ ನೀಡ್ತೀರಾ? ಐಷಾರಾಮಿ ʼಟೆಂಟ್‌ ಸಿಟಿʼ ನಿಮಗಾಗಿಯೇ ಇದೆ!

ಯೋಗಿ ಆದಿತ್ಯನಾಥ್‌ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ಬಳಿಕ ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಅದರಲ್ಲೂ ದೀಪೋತ್ಸವಕ್ಕೆ ಹೊಸ ಮೆರುಗು ಬಂದಿದೆ. 2017ರಲ್ಲಿ ಅಯೋಧ್ಯೆಯಲ್ಲಿ 1.71 ಲಕ್ಷ ದೀಪ ಬೆಳಗಿಸಲಾಗಿತ್ತು. ಹಾಗೆಯೇ, 2018ರಲ್ಲಿ 3.01 ಲಕ್ಷ, 2019ರಲ್ಲಿ 4.04 ಲಕ್ಷ, 2020ರಲ್ಲಿ 6.06 ಲಕ್ಷ ಹಾಗೂ 2021ರಲ್ಲಿ 9.41 ಲಕ್ಷ ದೀಪ ಬೆಳಗಿಸಲಾಗಿತ್ತು. 2022ರಲ್ಲಿ 15.76 ಲಕ್ಷ ದೀಪಗಳು ಬೆಳಗಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕೊಡಗು

Deepawalli 2024 : ಮಡಿಕೇರಿಯಲ್ಲಿ ಅದ್ಧೂರಿಯಾಗಿ ನಡೆದ ದೀಪಾವಳಿ ಉತ್ಸವ

Deepawalli 2024 : ಮಡಿಕೇರಿಯಲ್ಲಿ ದೀಪಾವಳಿ ಉತ್ಸವ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್‌ನ ವರದಿಗಾರ ಹಾಗೂ ಕ್ಯಾಮೆರಾಮನ್‌ಗೆ ಸನ್ಮಾನಿಸಲಾಯಿತು.

VISTARANEWS.COM


on

By

Deepavali festival held in Madikeri
Koo

ಕೊಡಗು: ದೀಪಾವಳಿ ಹಬ್ಬದ (Deepawalli 2024) ಪ್ರಯುಕ್ತ ಮಡಿಕೇರಿಯ ಕಾಲನಗರ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ 11ನೇ ವರ್ಷದ ದೀಪಾವಳಿ ಉತ್ಸವವು ಬಹಳ ಸಂಭ್ರಮ ಸಡಗರದಿಂದ ನಡೆಯಿತು. ಕಾರ್ಯಕ್ರಮವನ್ನು ಸಮಾಜ ಸೇವಕ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಈಶ್ವರ್ ಮಲ್ಪೆ, ಮಡಿಕೇರಿಯ ಕಲಾ ನಗರಕ್ಕೆ ಕರೆಸಿರೋದು ಬಹಳ‌ ಸಂತೋಷವಾಗಿದೆ‌. ನಾನೂ ರಾಜ್ಯದ ಬೇರೆ ಬೇರೆ ಭಾಗಗಳಿಗೆ ತೆರಳಿ ನೀರಿನಲ್ಲಿ ಮುಳುಗಿದ್ದ ಶವ ಹೊರ ತೆಗೆದಿದ್ದೇನೆ. ಕಳೆದ ವರ್ಷ ಕೂಡ ಇಲ್ಲಿಗೆ ಬಂದು ಒಂದು ಶವವನ್ನು ಹೊರ ತೆಗೆದಿದ್ದೇನೆ‌. ಈ ಒಂದು ಸಣ್ಣ ಸಮಾಜಮುಖಿ ಕಾರ್ಯವನ್ನು ಗುರುತಿಸಿ ನನ್ನ ಈ ಕಾರ್ಯಕ್ರಮಕ್ಕೆ ಕರೆಸಿರೋದು ಬಹಳ ಸಂತಸ ತಂದಿದೆ. ಕಲಾನಗರದಲ್ಲಿ ಕಲಾ ರಸಿಕರೆ ಇದ್ದು ತಮ್ಮಲ್ಲಿರುವ ಕಲೆಯನ್ನು ಪ್ರದರ್ಶನ ಮಾಡುವ ಮೂಲಕ ಮತ್ತಷ್ಟು ಸಾಧನೆ ಮಾಡಲೆಂದು ಹಾರೈಸಿದರು.

Deepavali festival held in Madikeri

ಇನ್ನೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಸಮಾಜ ಸೇವಕ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ವಯನಾಡು ದುರಂತದ ಕುರಿತು ಪ್ರತ್ಯಕ್ಷ ವರದಿಗಾರಿಕೆ‌ ಮಾಡಿದ್ದ ಕೊಡಗಿನ ಪತ್ರಕರ್ತರಾದ ವಿಸ್ತಾರ ನ್ಯೂಸ್‌ನ ಜಿಲ್ಲಾ ವರದಿಗಾರ ಲೋಹಿತ್ ಎಂ.ಆರ್, ಕ್ಯಾಮೆರಾಮನ್ ಮನೋಜ್, ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಪ್ರಜ್ವಲ್ ಎನ್‌.ಸಿ, ನಗರದ ಸ್ವಚ್ಚತಾ ಕಾರ್ಯದಲ್ಲಿ ಶ್ರಮಿಸುತ್ತಿರುವ ನಗರಸಭೆಯ ರಂಗಪ್ಪ , ಆರೋಗ್ಯ ಇಲಾಖೆಯ ಪ್ರತಿಮಾ ರೈ, ಅಣ್ಣಯ್ಯ, ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಳಿಕ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು‌‌. ಮಕ್ಕಳ ಮಂಟಪ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಡಿವೈಎಸ್ಪಿ ಮಹೇಶ್ ಕುಮಾರ್, ಆಕಾಶವಾಣಿಯ ಸುಬ್ರಾಯ ಸಂಪಾಜೆ ಅಧ್ಯಕ್ಷರಾದ ಮಹೇಶ್, ಆಶಾ ನಟರಾಜ್, ಸ್ಥಾಪದ ಸದಸ್ಯರು ಚಂದ್ರು, ಕೆ.ಎಸ್ ರಮೇಶ್,ಕೋಡಿ ಭರತ್, ತಿಲಖ್ ಸಿಂಗ್ ಕುಮಾರ್ ಉಪಸ್ಥಿತರಿದ್ದರು.

Continue Reading

ದೀಪಾವಳಿ

After Deepavali Skin Care: ದೀಪಾವಳಿ ನಂತರ ತ್ವಚೆಯ ಆರೈಕೆಗೆ 5 ಸಿಂಪಲ್‌ ಸಲಹೆ

ದೀಪಾವಳಿ ಹಬ್ಬದ ನಂತರ ನಿಮ್ಮ ತ್ವಚೆಯ ಆರೈಕೆ (After Deepavali Skin Care) ಮಾಡುವುದು ಅತ್ಯಗತ್ಯ. ಇದಕ್ಕಾಗಿ ನೀವು ಏನೆಲ್ಲಾ ಮಾಡಬಹುದು? ಎಂಬುದನ್ನು ಬ್ಯೂಟಿ ಎಕ್ಸ್‌ಪಟ್ರ್ಸ್ ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

After Deepavali Skin Care
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ದೀಪಾವಳಿ ಹಬ್ಬದ ನಂತರ ನಿಮ್ಮ ತ್ವಚೆಯ ಆರೈಕೆ (After Deepavali Skin Care) ಅತ್ಯವಶ್ಯ. ಅದ್ಯಾಕೆ? ಎಂದು ಯೋಚಿಸುತ್ತಿದ್ದೀರಾ! ಹಬ್ಬದ ಸಂಭ್ರಮಕ್ಕಾಗಿ ಪ್ರತಿದಿನ ಹಚ್ಚಿದ ಗ್ರ್ಯಾಂಡ್‌ ಓವರ್‌ ಮೇಕಪ್‌, ಒಂದರ ಮೇಲೊಂದು ಸವಿದ ಸಿಹಿ ತಿಂಡಿ ಹಾಗೂ ಜಂಕ್‌ ಪದಾರ್ಥ ಸೇವನೆ ಎಲ್ಲವೂ ತ್ವಚೆಯನ್ನು ಡಲ್‌ ಆಗಿಸಬಹುದು. ಕೆಲವರಿಗೆ ಇದರಿಂದ ಮೊಡವೆ ಹಾಗೂ ಜಿಡ್ಡಿನಿಂದ ಚರ್ಮದ ಸಮಸ್ಯೆ ಎದುರಾಗಬಹುದು. ಇವೆಲ್ಲವನ್ನು ನಿಭಾಯಿಸಲು ಫೆಸ್ಟಿವ್‌ ಸೀಸನ್‌ ಮುಗಿದ ನಂತರ ಮುಖದ ಆರೈಕೆಯತ್ತ ಗಮನ ನೀಡುವುದು ಉತ್ತಮ. ಇದರಿಂದ ನಾನಾ ಸ್ಕಿನ್‌ ಸಮಸ್ಯೆಗಳಿಂದ ದೂರಾಗಿ, ಎಂದಿನಂತೆ ನವೋಲ್ಲಾಸದಿಂದ ಕಾಣುವ ತ್ವಚೆಯನ್ನು ತಮ್ಮದಾಗಿಸಿಕೊಳ್ಳಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಮಂಗಲಾ. ಇದಕ್ಕೆ ಪೂರಕ ಎಂಬಂತೆ ಅವರು 5 ಸಿಂಪಲ್‌ ಸಲಹೆ ನೀಡಿದ್ದು, ಪಾಲಿಸಿ ನೋಡಿ ಎಂದಿದ್ದಾರೆ.

Give the makeup a break first

ಮೊದಲು ಮೇಕಪ್‌ಗೆ ಬ್ರೇಕ್‌ ನೀಡಿ

ಪ್ರತಿದಿನ ಮೇಕಪ್‌ ಹಚ್ಚಿದ ಮುಖಕ್ಕೆ ಕೊಂಚ ಬ್ರೇಕ್ ಹಾಕಿ. ಮಾಯಿಶ್ಚರೈಸ್‌ ಮಾಡಿ. ಮುಖದ ತ್ವಚೆಗೆ ಉಸಿರಾಡಲು ಅವಕಾಶ ನೀಡಿ. ಬೇಕಿದ್ದಲ್ಲಿ ರಿಜುನುವೇಟ್‌ ಆಗಲು ಸಹಾಯ ಮಾಡುವ ಹೈಡ್ರೋ ಫೇಶಿಯಲ್‌ ಮಾಡಿಸಿ.

ಕ್ಲೆನ್ಸಿಂಗ್‌- ಟೋನಿಂಗ್‌-ಮಾಯಿಶ್ಚರೈಸಿಂಗ್

ಪ್ರತಿದಿನ ಕ್ಲೆನ್ಸಿಂಗ್‌-ಟೋನಿಂಗ್‌ ಹಾಗೂ ಮಾಯಿಶ್ಚರೈಸಿಂಗ್‌ ಮಾಡಿ. ಇದು ತ್ವಚೆಯನ್ನು ರಿಲ್ಯಾಕ್ಸ್‌ ಮಾಡುವುದರೊಂದಿಗೆ ಸ್ಕಿನ್‌ ಆರೋಗ್ಯ ಸುಧಾರಿಸುತ್ತದೆ.

Get a good night's sleep

ಕಣ್ತುಂಬ ನಿದ್ರೆ ಮಾಡಿ

ಹಬ್ಬದ ಗಡಿಬಿಡಿಯಲ್ಲಿ ಸಾಕಷ್ಟು ಜನ ನಿದ್ರೆ ಕಡಿಮೆ ಮಾಡುತ್ತಾರೆ. ಇದು ಮುಖದ ಮೇಲೆ ಎದ್ದು ಕಾಣದಂತೆ ಮಾಡಲು ಮೇಕಪ್‌ ಹಚ್ಚುತ್ತಾರೆ. ಆದರೆ. ಇದು ತಾತ್ಕಲಿಕ ಪರಿಹಾರ. ನ್ಯಾಚುರಲ್‌ ಆಗಿ ತ್ವಚೆ ಚೆನ್ನಾಗಿ ಕಾಣಲು ಕನಿಷ್ಠ 7-8 ಗಂಟೆಯಾದರೂ ಕಣ್ತುಂಬ ನಿದ್ರೆ ಮಾಡುವುದು ಅಗತ್ಯ. ಮಲಗಿದಾಗ ತ್ವಚೆಯ ರಿಜುನುವೆಟ್‌ಗೆ ಅಗತ್ಯವಿರುವ ಕೊಲಾಜೆನ್‌ ಉತ್ಪತ್ತಿಯಾಗುತ್ತದೆ.

ಶೀಟ್‌ ಮಾಸ್ಕ್‌ ಉಪಯೋಗಿಸಿ

ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ತ್ವಚೆಯ ಫ್ರೆಂಡ್ಲಿ ಹಾಗೂ ಅಗತ್ಯ ಪೌಷ್ಟಿಕಾಂಶಗಳನ್ನು ಪೂರೈಸುವ, ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವ ಶೀಟ್‌ ಮಾಸ್ಕ್‌ ಆಯ್ಕೆ ಮಾಡಿ ಬಳಸಿ. ಇದು ಮುಖವನ್ನು ಕಾಂತಿಯುಕ್ತಗೊಳಿಸುತ್ತದೆ.

Use a scrub

ಸ್ಕ್ರಬ್‌ ಬಳಸಿ

ಸ್ಕ್ರಬ್‌ ಬಳಕೆಯಿಂದ ಚರ್ಮದ ಮೇಲಿನ ಡೆಡ್‌ ಸ್ಕಿನ್‌ ಹೋಗುತ್ತದೆ. ಜೊತೆಗೆ ರಕ್ತ ಸಂಚಾರ ಸುಗಮವಾಗುತ್ತದೆ. ಹೋಮ್‌ ಮೇಡ್‌ ಸ್ಕ್ರಬ್‌ ಉತ್ತಮ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Deepavali Mens Fashion: ದೀಪಾವಳಿ ಹಬ್ಬದ ಮೆನ್ಸ್ ಟ್ರೆಡಿಷನಲ್‌ ಸ್ಟೈಲಿಂಗ್‌ಗೆ ಸಾಥ್‌ ನೀಡುವ ಎಥ್ನಿಕ್‌ವೇರ್ಸ್

Continue Reading

ದೀಪಾವಳಿ

ದೀಪಾವಳಿ ಆಚರಣೆ ವೇಳೆ ಹಿಂದುಗಳ ಮೇಲೆ ಖಲಿಸ್ತಾನಿಗಳ ದಾಳಿ; ಕಲ್ಲು ತೂರಿದ ಉಗ್ರರು!

ಕೆನಡಾದಲ್ಲಿ ಖಲಿಸ್ತಾನಿ ಉಗ್ರರು, ಪ್ರತ್ಯೇಕವಾದಿಗಳು ಇದಕ್ಕೂ ಮೊದಲು ಕೂಡ ಹಿಂದುಗಳ ಮೇಲೆ ದಾಳಿ ನಡೆಸಿದ್ದಾರೆ. ಹಿಂದು ದೇವಾಲಯಗಳ ಮೇಲೆ ದಾಳಿ ನಡೆಸಲಾಗಿದೆ. ಈಗ ದೀಪಾವಳಿ ಆಚರಣೆ ವೇಳೆಯೂ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದಾರೆ.

VISTARANEWS.COM


on

Khalistani Attack
Koo

ಒಟ್ಟಾವ: ಕೆನಡಾದಲ್ಲಿ ಹಿಂದುಗಳ ಮೇಲೆ ಖಲಿಸ್ತಾನಿ ಉಗ್ರರು (Khalistani Terrorists), ಮೂಲಭೂತವಾದಿಗಳ ದಾಳಿ ಮುಂದುವರಿದಿದೆ. ಟೊರೊಂಟೊ ಹೊರವಲಯದ ಮಿಸ್ಸಿಸ್ಸೌಗ ಪಟ್ಟಣದಲ್ಲಿ ಹಿಂದುಗಳು ದೀಪಾವಳಿ (Deepavali 2023) ಆಚರಣೆ ಮಾಡುವ ವೇಳೆ ಖಲಿಸ್ತಾನಿ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳ ಮೇಲೆ ಕಲ್ಲು ತೂರಾಟ ಮಾಡುವ, ಖಲಿಸ್ತಾನಿ ಧ್ವಜ ಹಾರಿಸಿ ಉದ್ಧಟತನ ಮಾಡಿರುವ ವಿಡಿಯೊ (Viral Video) ಈಗ ಲಭ್ಯವಾಗಿದೆ.

ಕೆನಡಾದ ಟೊರೊಂಟೊ ಸೇರಿ ಹಲವೆಡೆ ಹಿಂದುಗಳು ಸಡಗರ-ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಆದರೆ, ಮಿಸ್ಸಿಸ್ಸೌಗ, ಬ್ರ್ಯಾಂಪ್ಟನ್‌ ಸೇರಿ ಕೆಲವೆಡೆ ಹಿಂದುಗಳು ಪಟಾಕಿ ಸಿಡಿಸಿ ದೀಪಾವಳಿ ಆಚರಣೆ ಮಾಡುವಾಗ ಖಲಿಸ್ತಾನಿ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳ ಆಚರಣೆಗೆ ಅಡ್ಡಿಪಡಿಸುವ ಜತೆಗೆ ಕಲ್ಲು ತೂರಾಟ ಮಾಡಿದ್ದಾರೆ. ಖಲಿಸ್ತಾನಿ ಧ್ವಜ ಹಾರಿಸಿದ ಅವರು ಭಾರತ ವಿರೋಧಿ ಘೋಷಣೆಗಳನ್ನೂ ಕೂಗಿದ್ದಾರೆ ಎಂದು ತಿಳಿದುಬಂದಿದೆ.

ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ. ಕೆನಡಾದಲ್ಲಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ ಬಳಿಕ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಹಲವು ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ. ಹಾಗೆಯೇ, ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂದೆಲ್ಲ ಆರೋಪಿಸಿದ್ದಾರೆ. ಇದಕ್ಕೆಲ್ಲ ಸೊಪ್ಪು ಹಾಕದ ಭಾರತ ಸರ್ಕಾರವು ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಕೆನಡಾದಲ್ಲಿ ಹಿಂದುಗಳ ಮೇಲೆ ದಾಳಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಸ್ಫೋಟಕ್ಕೆ ಸಂಚು; ಭಾರತ ಆಗ್ರಹಿಸಿದ ಬಳಿಕ ತನಿಖೆಗೆ ಕೆನಡಾ ಆದೇಶ

ಏರ್‌ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಪನ್ನುನ್‌ ಎಚ್ಚರಿಕೆ

ನವೆಂಬರ್‌ 19ರಂದು ಏರ್‌ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಎಚ್ಚರಿಕೆ ನೀಡಿದ್ದಾನೆ. ನವೆಂಬರ್‌ 4ರಂದು ಗುರುಪತ್ವಂತ್‌ ಸಿಂಗ್‌ ಪನ್ನುನ್‌ ವಿಡಿಯೊ ಪೋಸ್ಟ್‌ ಮಾಡಿದ್ದ. “ನವೆಂಬರ್‌ 19ರಂದು ಸಿಖ್ಖರು ಏರ್‌ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಬಾರದು.‌ ಅಂದು ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು” ಎಂದು ಹೇಳಿದ್ದ. ನವೆಂಬರ್‌ 19 ಇಂದಿರಾ ಗಾಂಧಿ ಜನ್ಮದಿನವಾದ ಕಾರಣ ಅಂದೇ ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು ಎಂದಿದ್ದಾನೆ. ಅಮೃತಸರದ ಸ್ವರ್ಣಮಂದಿರ ಹೊಕ್ಕಿದ್ದ ಉಗ್ರರ ವಿರುದ್ಧ ಇಂದಿರಾ ಗಾಂಧಿ ಅವರು ಆಪರೇಷನ್‌ ಬ್ಲ್ಯೂ ಸ್ಟಾರ್‌ಗೆ ಆದೇಶ ಮಾಡಿದ ಬಳಿಕ ಅವರು 1984ರಲ್ಲಿ ಹತ್ಯೆಗೀಡಾದರು. ಈಗ ಅವರ ಜನ್ಮದಿನದಂದೇ ಏರ್‌ ಇಂಡಿಯಾ ವಿಮಾನ ಸ್ಫೋಟಿಸಲು ಸಂಚು ರೂಪಿಸಲಾಗಿದೆ. ಭಾರತದ ಆಗ್ರಹದ ಬಳಿಕ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಕೆನಡಾ ತಿಳಿಸಿದೆ.

Continue Reading

ದೀಪಾವಳಿ

ಬ್ರಿಟನ್ ಪಿಎಂ ಕಚೇರಿಯಲ್ಲಿ ದೀಪಾವಳಿ! ಗಮನ ಸೆಳೆದ ಅಕ್ಷತಾ ಮೂರ್ತಿ ಉಡುಗೆ

Diwali 2023: ಬ್ರಿಟನ್ ಪಿಎಂ ಸರ್ಕಾರಿ ಅಧಿಕೃತ ನಿವಾಸದಲ್ಲಿ ಈ ಬಾರಿ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ಕರ್ನಾಟಕದ ಅಳಿಯನಾಗಿರುವ ಬ್ರಿಟನ್ ಪಿಎಂ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು.

VISTARANEWS.COM


on

Diwali in British PM's office! Akshata Murthy fashionable dress caught attention
Koo

ಲಂಡನ್: ಬ್ರಿಟನ್ ಪ್ರಧಾನಿ ಅಧಿಕೃತ ಕಚೇರಿ ನಿವಾಸದಲ್ಲಿ (10 Downing Street) ಈ ಬಾರಿ ದೀಪಾವಳಿಯ ( Diwali 2023) ಕಲರವ ಮೇಳೈಸಿತ್ತು. ಪ್ರಧಾನಿ ರಿಷಿ ಸುನಕ್ (UK PM Rishi Sunak) ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ (Akshata Murty) ಹಾಗೂ ಮಕ್ಕಳು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಅಕ್ಷತಾ ಅವರು ಯಾವಾಗಲೂ ಫ್ಯಾಶನೇಬಲ್ ಆಗಿರುತ್ತಾರೆ. ಈಗ ದೀಪಾವಳಿಯಂದು ಅವರ ಸಾಂಪ್ರದಾಯಿಕ ಉಡುಗೆ ಗಮನ ಸೆಳೆದಿದೆ. ಅಕ್ಷತಾ ಅವರು ಎಲೆಕ್ಟ್ರಿಕ್ ನೀಲಿ ಮೈಸೂರು ರೇಷ್ಮೆ ಸೀರೆಯಲ್ಲಿ ಸೊಗಸಾಗಿ ಕಾಣುತ್ತಿದ್ದರು. ಅವರು ಸೀರೆಯನ್ನು ಸೊಗಸಾಗಿ ಧರಿಸಿದ್ದರು. ಸೀರೆಯೊಂದಿಗೆ ಸಣ್ಣ ತೋಳಿನ ಕುಪ್ಪಸವನ್ನು ಧರಿಸಿದ್ದರು. ಸರಳವಾದ ಸೀರೆಯು ತೆಳುವಾದ ಚಿನ್ನದ ಅಂಚುಗಳನ್ನು ಪ್ರದರ್ಶಿಸಿತು ಮತ್ತು ಕುಪ್ಪಸವು ಹೂವಿನ ಮೋಟಿಫ್‌ಗಳನ್ನು ಒಳಗೊಂಡಿತ್ತು. ಅಕ್ಷತಾ ಒಂದು ಜೊತೆ ನೇತಾಡುವ ಕಿವಿಯೋಲೆಗಳು, ಗಂಡಬೇರುಂಡ ನೆಕ್ಲೇಸ್ ಮತ್ತು ಬಳೆಗಳನ್ನು ಧರಿಸಿದ್ದರು.

ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಯಾವಾಗಲೂ ಪ್ರೇಕ್ಷಕರ ಮೇಲೆ ಫ್ಯಾಶನ್ ಪ್ರಭಾವ ಬೀರಿದ್ದಾರೆ. ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ಅಥವಾ ಅಂತರಾಷ್ಟ್ರೀಯ ಶೃಂಗಸಭೆಗಳಿಗೆ ಆಕೆಯ ವಿಶಿಷ್ಟ ತೊಡುಗೆ, ಆಕೆಯ ಶೈಲಿ ಮತ್ತು ಸೊಬಗುಗೆ ಮಿತಿಯಿರಲಿಲ್ಲ.

ದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಅಕ್ಷತಾ ಮೂರ್ತಿ ಅವರ ವಾರ್ಡ್ರೋಬ್ ಆಯ್ಕೆಗಳು ಉನ್ನತ ದರ್ಜೆಯದ್ದಾಗಿದ್ದವು ಎಂಬುದು ಮನವರಿಕೆಯಾಗಿತ್ತು. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ನಡೆದ ರಾಗಿ ಪ್ರದರ್ಶನಕ್ಕಾಗಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಆಯೋಜಿಸಿದ್ದ ಜಿ20 ಸಂಗಾತಿಗಳ ಕಾರ್ಯಕ್ರಮಕ್ಕೆ ಮುದ್ರಿತ ನೀಲಕ ಮಿಡಿ ಉಡುಗೆಯನ್ನು ಆರಿಸಿಕೊಂಡಿದ್ದರು. ಉಡುಪಿನಲ್ಲಿ ಹೂವಿನ ಮುದ್ರಿತ ನಾಟಕೀಯ ಪಫ್ಡ್ ಸ್ಲೀವ್‌ಗಳು ಎ-ಲೈನ್ ಸಿಲೂಯೆಟ್ ಮತ್ತು ಭುಗಿಲೆದ್ದ ಕೆಳಭಾಗವನ್ನು ಒಳಗೊಂಡಿತ್ತು. ಇದು ಆಕರ್ಷಕವಾಗಿತ್ತು.

ಈಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಕ್ಷತಾ ಮೂರ್ತಿ ಅವರು ತೊಡುಗೆ ಶೈಲಿಯ ಮತ್ತೊಮ್ಮೆ ಜಗತ್ತಿನ ಮುಂದೆ ಅನಾವರಣಗೊಂಡಿದೆ. ಅಕ್ಷತಾ ಮೂರ್ತಿ ಅವರು ತಮ್ಮ ಫ್ಯಾಶನೇಬಲ್ ಸ್ಟೇಟ್‌ಮೆಂಟ್ ಮಾಡಿದ್ದಾರೆ. ಬ್ರಿಟನ್ ಪ್ರಧಾನಿಯ ಮನೆಯಲ್ಲಿ ನಡೆದ ದೀಪಾವಳಿ ಹಬ್ಬದ ಆಚರಣೆಯು ವಾವ್ ಎನ್ನುವಂತಿತ್ತು. ಇದಕ್ಕೆ ಅಕ್ಷತಾ ಮೂರ್ತಿ ಅವರು ಉಡುಗೆ-ತೊಡುಗೆ ಕಳಶವಿಟ್ಟಂತೆ ಇತ್ತು ಎಂದು ಫ್ಯಾಶನ್ ಜಗತ್ತಿನ ತಜ್ಞರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: 75 ವರ್ಷದಲ್ಲೇ ಮೊದಲ ಬಾರಿಗೆ ಕಾಶ್ಮೀರದ ಶಾರದಾ ದೇವಿ ದೇಗುಲದಲ್ಲಿ ದೀಪಾವಳಿ ಆಚರಣೆ!

Continue Reading
Advertisement
Kodava Family Hockey Tournament Website Launched
ಕೊಡಗು6 ದಿನಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು6 ದಿನಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ6 ದಿನಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ7 ದಿನಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ7 ದಿನಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ7 ದಿನಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು7 ದಿನಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ7 ದಿನಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ7 ದಿನಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ12 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ12 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ1 ತಿಂಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್3 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌