Site icon Vistara News

Swift Car: ಹೊಸ ತಲೆಮಾರಿನ ಸ್ವಿಫ್ಟ್‌ನಲ್ಲಿ ಅಡಾಸ್ ಟೆಕ್ನಾಲಜಿ! ಜಪಾನ್ ಮೊಬಿಲಿಟಿ ಶೋದಲ್ಲಿ ಕಾರ್ ಪ್ರದರ್ಶಿಸಿದ ಸುಜುಕಿ

4th generation swift car to get ADAS Technology Says Suzuki

ನವದೆಹಲಿ: ಸ್ವಿಫ್ಟ್ (Swift Car) ಭಾರತದ (India) ಅತ್ಯಂತ ಜನಪ್ರಿಯ ಕಾರ್ ಆಗಿದ್ದು, ಈಗ ಹೊಸ ತಲೆಮಾರಿನ ಕಾರಿನ ಕುರಿತಾದ ಮಾಹಿತಿಯನ್ನು ಜಪಾನ್‌ನ ಕಾರು ತಯಾರಿಕಾ ಕಂಪನಿ ಸುಜುಕಿ ಮೋಟಾರ್ ಕಾರ್ಪೋರೇಷನ್ (Suzuki Motor Corporation) ಬಹಿರಂಗ ಮಾಡಿದೆ. ಟೋಕಿಯೊದಲ್ಲಿ ನಡೆಯುತ್ತಿರುವ ಜಪಾನ್ ಮೊಬಿಲಿಟಿ ಶೋದಲ್ಲಿ (Japan Mobility Show), ನಾಲ್ಕನೇ ತಲೆಮಾರಿನ ಸ್ವಿಫ್ಟ್ ಕಾರನ್ನು (Fourth Generation Swift Car) ಅನಾವರಣ ಮಾಡಲಾಗಿದೆ. ಈಗ ಚಾಲ್ತಿಯಲ್ಲಿರುವ ಮೂರನೇ ತಲೆಮಾರಿನ ಸ್ವಿಫ್ಟ್ ಕಾರನ್ನು 2017ರಲ್ಲಿ ಲಾಂಚ್ ಮಾಡಲಾಗಿತ್ತು. ಭಾರತದ ಮಟ್ಟಿಗೆ ಸ್ವಿಫ್ಟ್ ಅತ್ಯಂತ ಜನಪ್ರಿಯ ಕಾರ್ ಆಗಿದ್ದು, ಸುಜುಕಿ ಮೋಟಾರ್ ಕಂಪನಿಯನ್ನು ನಂಬರ್ 1 ಸ್ಥಾನಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಶೇಷ ಎಂದರೆ, ನಾಲ್ಕನೇ ತಲೆಮಾರಿನ ಕಾರು ಅಡಾಸ್ ತಂತ್ರಜ್ಞಾನ(ADAS Technology)ವನ್ನು ಹೊಂದಿರಲಿದೆ. ಇತ್ತೀಚಿನ ದಿನಗಳಲ್ಲಿ ಈ ತಂತ್ರಜ್ಞಾನ ಭಾರೀ ಜನಪ್ರಿಯವಾಗುತ್ತಿದೆ.

ನಾಲ್ಕನೇ ತಲೆಮಾರಿನ ಸ್ವಿಫ್ಟ್ ತನ್ನ ಒಟ್ಟಾರೆ ನಿಲುವು, ಆಕಾರಗಳು ಮತ್ತು ವಕ್ರಾಕೃತಿಗಳನ್ನು ಉಳಿಸಿಕೊಂಡಿದೆ. ಹಲವಾರು ಅಂಶಗಳು (ಹೆಡ್‌ಲೈಟ್‌ಗಳು, ಬಂಪರ್‌ಗಳು) ಮೊದಲಿನಂತೆಯೇ ಇದ್ದರೂ ಹ್ಯಾಚ್‌ಬ್ಯಾಕ್ ಅನ್ನು ಮೊದಲಿಗಿಂತ ಸ್ಪೋರ್ಟಿಯಾಗಿ ಕಾಣುವಂತೆ ಮಾಡಲಾಗಿದೆ.

ಜಪಾನ್ ಮೊಬಿಲಿಟಿ ಶೋದಲ್ಲಿ ಸುಜುಕಿ ಮೋಟಾರ್ ‌ಕಂಪನಿಯು ಕಪ್ಪು ಬಣ್ಣದ ರೂಫಿನೊಂದಿಗೆ ನೀಲಿ ಬಣ್ಣದ ಕಾರನ್ನು ಪ್ರದರ್ಶನ ಮಾಡಿತು. ಕಾರಿನ ಹಿಂಭಾಗದಲ್ಲಿ ಹಳೆಯ ರೀತಿಯ ಟೈಲ್‌ಲೈಟ್‌ಗಳನ್ನು ಪಡೆಯುವ ಸಾಧ್ಯತೆಯಿದೆ, ಆದರೂ ಬಂಪರ್ ಅನ್ನು ಕಾನ್ಸೆಪ್ಟ್ ಆವೃತ್ತಿಯಲ್ಲಿರುವಂತೆ ಮರುವಿನ್ಯಾಸಗೊಳಿಸಬಹುದಾಗಿದೆ.

ಈ ಸುದ್ದಿಯನ್ನೂ ಓದಿ: CNG CAR | ಸ್ವಿಫ್ಟ್‌ ಸಿಎನ್‌ಜಿ ಬಿಡುಗಡೆ, 10 ಲಕ್ಷ ರೂಪಾಯಿ ದರದ ಐದು ಕಾರುಗಳು ಪಟ್ಟಿ ಇಂತಿದೆ

ಹೊಸ ಸ್ವಿಫ್ಟ್‌ನಲ್ಲಿ ಭರ್ಜರಿ ಫೀಚರ್ಸ್

ಬಾಹ್ಯ ಬದಲಾವಣೆಗಳಿಗಿಂತಲೂ ಒಳಾಂಗಣದಲ್ಲಿ ಭಾರೀ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ಡುಯಲ್ ಟೋನ್ ಡ್ಯಾಶ್‌ಬೋರ್ಡ್, ಫ್ರಿ ಸ್ಟ್ಯಾಂಡಿಂಗ್ 9 ಇಂಚ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್, ಡಿಜಿಟಲ್ ಡ್ರೈವರ್‌ ಡಿಸ್‌ಪ್ಲೇ, ಎಲೆಕ್ಟ್ರಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, 360 ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್, ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸೇರಿದಂತೆ ಇನ್ನೂ ಅನೇಕ ಫೀಚರ್‌ಗಳನ್ನು ನಿರೀಕ್ಷಿಸಬಹುದಾಗಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಇತ್ತೀಚಿನ ದಿನಗಳಲ್ಲಿ ಭಾರೀ ಜನಪ್ರಿಯವಾಗಿರುವ ಅಡಾಸ್ ತಂತ್ರಜ್ಞಾನವನ್ನು ಹೊಸ ತಲೆಮಾರಿನ ಸ್ವಿಫ್ಟ್‌ನಲ್ಲಿ ದೊರೆಯಲಿದೆ. ಒಂದೊಮ್ಮೆ ದೇಶದಲ್ಲಿ ಸುಜುಕಿಯ ಅಂಗಸಂಸ್ಥೆಯಾದ ಮಾರುತಿ ಬಿಡುಗಡೆ ಮಾಡಿದರೆ, ಇದು ಈ ಸುಧಾರಿತ ವೈಶಿಷ್ಟ್ಯದೊಂದಿಗೆ ಭಾರತದಲ್ಲಿ ತಯಾರವಾದ ಮೊದಲ ವಾಹನವಾಗಲಿದೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version