ನವದೆಹಲಿ: ಗೂಗಲ್ ಮತ್ತು ಮೈಕ್ರೋಸಾಫ್ಟ್ ಬಳಿಕ ಈಗ ಅಡೋಬ್ ಕೂಡ ತನ್ನ ಫೋಟೋಶಾಪ್ (Adobe Photoshop) ಪ್ರಾಡಕ್ಟ್‌ಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲು ಮುಂದಾಗಿದೆ. ತನ್ನ ಈ ತಂತ್ರಜ್ಞಾನಕ್ಕೆ ಅಡೋಬ್ ಜನರೇಟಿವ್ ಫಿಲ್ (Generative Fill) ಎಂದು ಹೆಸರಿಟ್ಟಿದೆ. ಇದು ಓಪನ್ ಎಐನ DALL-E 2ನಂಥ ಟೆಕ್ಸ್ಟ್ ಪ್ರಾಂಪ್ಟ್‌ಗಳನ್ನು ಬಳಸಿಕೊಂಡು ಚಿತ್ರಗಳನ್ನು ರಚಿಸಲು ಅಥವಾ ಮಾರ್ಪಡಿಸಲು ಬಳಕೆದಾರರಿಗೆ ನೆರವು ಒದಗಿಸುತ್ತದೆ. ಈ ಫೀಚರ್ ಅನ್ನು ನೇರವಾಗಿ ಅಡೋಬ್ ಫೋಟೋಶಾಪ್‌ಗೆ ಸಂಯೋಜಿಸಲಾಗಿರುತ್ತದೆ.
ಅಡೋಬ್‌ನ ಜನರೇಟಿವ್ ಫಿಲ್ ತಂತ್ರಜ್ಞಾನವು ಅಡೋಬ್ ಫೈರ್‌ಫ್ಲೈನಿಂದ ಚಾಲಿತವಾಗಿದೆ. ಇದು ಅಡೋಬ್‌ನ ಆಂತರಿಕ ಉತ್ಪಾದಕ ಕೃತಕ ಬುದ್ಧಿಮತ್ತೆಯ ಮಾದರಿಯಾಗಿದೆ. ಈ ತಂತ್ರಜ್ಞಾನವನ್ನು ನೀವು ಚಾಟ್‌ಜಿಪಿಟಿ, ಗೂಗಲ್‌ನ ಬಾರ್ಡ್ ಅಥವಾ ಪಾಮ್ 2ಗೆ ಹೋಲಿಸಬಹುದು. ಫೈರ್‌ಫ್ಲೈ ಎಐ ಅಡೋಬ್ ಸ್ಟಾಕ್ ಇಮೇಜಸ್‌ನಲ್ಲಿ ತರಬೇತಿ ಪಡೆದಿದೆ. ಹಕ್ಕುಸ್ವಾಮ್ಯಗಳು, ಬ್ರ್ಯಾಂಡ್‌ಗಳು ಮತ್ತು ಬೌದ್ಧಿಕ ಆಸ್ತಿ ಹಕ್ಕನ್ನು ಮೀರದೇ, ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ವಿಷಯವನ್ನು ರಚಿಸಬಹುದು ಎಂದು ಅಡೋಬ್ ಹೇಳುತ್ತದೆ.
ಜನರೇಟಿವ್ ಫಿಲ್‌ನಿಂದಾಗಿ ಫೋಟೋಶಾಪ್ ಮತ್ತು ಜನರೇಟಿವ್ ಎಐ ಎಂಬ ಎರಡು ಇಮೇಜಿಂಗ್ ಪವರ್‌ಹೌಸ್‌ಗಳು ಒಟ್ಟಿಗೆ ಬಳಕೆದಾರರಿಗೆ ಸರಳ ಪಠ್ಯ ಪ್ರಾಂಪ್ಟ್‌ನೊಂದಿಗೆ ಫೋಟೋಶಾಪ್‌ನಲ್ಲಿಯೇ ಕಂಟೆಂಟ್ ಕ್ರಿಯೇಟ್ ಮಾಡಲು ಮತ್ತು ನಂತರ ಫೋಟೋಶಾಪ್ ಹೊಂದಿರುವ ಹೆಚ್ಚಿನ ಸಾಧನಗಳನ್ನು ಬಳಸಿಕೊಂಡು ಅದನ್ನು ಸಂಪಾದಿಸಲು ಅನುವು ಮಾಡಿಕೊಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ: Bill Gates: ಸರ್ಚ್ ಎಂಜಿನ್, ಶಾಪಿಂಗ್ ವೆಬ್‌ಸೈಟ್‌ಗಳನ್ನು ಕೃತಕ ಬುದ್ಧಿಮತ್ತೆ ಬದಲಿಸಲಿದೆ ಎಂದ ಬಿಲ್ ಗೇಟ್ಸ್
ಹೆಚ್ಚುವರಿಯಾಗಿ, ಬಳೆಕದಾರರು ಜನರೇಟಿವ್ ಫಿಲ್ ಬಳಸಿಕೊಂಡು ಚಿತ್ರಗಳನ್ನು ಮತ್ತು ಬ್ಯಾಕ್‍ಗ್ರೌಂಡ್ ರಚಿಸಬಹುದು. ಆಬ್ಜೆಕ್ಟ್‌ಗಳನ್ನು ರಿಮೂವ್ ಮಾಡಬಹುದು. ಅಷ್ಟೇ ಯಾಕೆ ಇಮೇಜ್ ಕೂಡ ವಿಸ್ತರಿಸಬಹುದು ಎಂದು ಕಂಪನಿಯು ಹೇಳಿಕೊಂಡಿದೆ. ಕಂಪನಿಯು ಫೋಟೋಶಾಪ್‌ನಲ್ಲಿ Contextual Task Bar ಸೇರಿಸಿದೆ. ಈ ಮೂಲಕ ಬಳಕೆದಾರರು ಯಾವುದೇ ತ್ರಾಸ್ ಇಲ್ಲದೇ ಕಂಟೆಂಟ್ ಸೃಷ್ಟಿಸಬಹುದಾಗಿದೆ.
ತಂತ್ರಜ್ಞಾನದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.