ಗ್ಯಾಜೆಟ್ಸ್
Bill Gates: ಸರ್ಚ್ ಎಂಜಿನ್, ಶಾಪಿಂಗ್ ವೆಬ್‌ಸೈಟ್‌ಗಳನ್ನು ಕೃತಕ ಬುದ್ಧಿಮತ್ತೆ ಬದಲಿಸಲಿದೆ ಎಂದ ಬಿಲ್ ಗೇಟ್ಸ್
ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಅವರು ಮುಂಬರುವ ದಿನಗಳಲ್ಲಿ ಕೃತಕ ಬುದ್ದಿಮತ್ತೆ ಹೇಗೆಲ್ಲ ಜೀವನ ಎಲ್ಲ ಭಾಗಗಳನ್ನು ಆವರಿಸಲಿದೆ ಎಂಬುದನ್ನು ಹೇಳಿದ್ದಾರೆ.
ನವದೆಹಲಿ: ಕೃತಕ ಬುದ್ದಿಮತ್ತೆ (artificial intelligence) ಸ್ಪರ್ಧೆಯಲ್ಲಿ ಎಲ್ಲ ಕಂಪನಿಗಳು ಇಳಿದಿವೆ. ಈ ಕೃತಕ ಬುದ್ಧಿಮತ್ತೆಯ ಓಟವು ಸರ್ಚ್ ಎಂಜಿನ್, ಉತ್ಪಾದಕತೆ ಮತ್ತು ಆನ್‌ಲೈನ್ ಶಾಪಿಂಗ್ ಜಾಲತಾಣಗಳ ಮೂಲ ಕಾರ್ಯವೈಖರಿಯನ್ನು ಬದಲಿಸಲಿದೆ ಎಂದು ಮೈಕ್ರೋಸಾಫ್ಟ್ ಕಾರ್ಪ್‌ನ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಅವರು ಅಭಿಪ್ರಾಯಪಟ್ಟಿದ್ದಾರೆ.
ಕೃತಕ ಬುದ್ಧಿಮತ್ತೆ ಎಷ್ಟರಮಟ್ಟಿಗೆ ನಮ್ಮ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂದರೆ, ಭವಿಷ್ಯದಲ್ಲಿ ನೀವು ಸರ್ಚ್ ಎಂಜಿನ್ ಸೈಟ್‌ಗೆ ಹೋಗಲಾರರಿ ಮತ್ತು ಅಮೆಜಾನ್ ಜಾಲತಾಣಕ್ಕೆ ಭೇಟಿ ಕೊಡಲಾರರಿ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್ ಇಂಕ್ ಮತ್ತು ಎಸ್‌ವಿ ಏಂಜೆಲ್ ಆಯೋಜಿಸಿದ್ದ ಎಐ ಫಾರ್ವರ್ಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಗೇಟ್ಸ್, ಈ ರೇಸ್‌ನಲ್ಲಿ ಮೈಕ್ರೋಸಾಫ್ಟ್ ಚಾಲನೆಯಲ್ಲಿಲ್ಲದಿದ್ದರೆ ಅದು ಅವರನ್ನು ನಿರಾಶೆಗೊಳಿಸುತ್ತದೆ ಎಂದು ಹೇಳಿದರು. ಉದ್ಯಮಿ ರೀಡ್ ಹಾಫ್‌ಮನ್ ಸಹ ಸಂಸ್ಥಾಪನೆಯ ಇನ್‌ಫ್ಲೆಕ್ಷನ್ ಎಐ ತಮ್ಮನ್ನು ಸಮ್ಮೋಹನಗೊಳಿಸಿದೆ ಎಂದು ಅವರು ಹೇಳಿದರು.
ಇಟ್ಟು ಮರೆತು ಹೋದ ವಸ್ತುಗಳನ್ನು ಹುಡುಕಲು ‘ಕೃತಕ ಜ್ಞಾಪಕ ಶಕ್ತಿ’ ಅಭಿವೃದ್ಧಿ!
ಇಟ್ಟಿರುವ ಸಾಮಾನು ಟೈಮ್‌ಗೆ ಸರಿಯಾಗಿ ಕೈಗೆ ಸಿಗುವುದಿಲ್ಲ ಎಂದು ಮನೆಯಲ್ಲಿ ಆಗಾಗ ಹಿರಿಯರು ಮಾತನಾಡಿಕೊಳ್ಳವುದನ್ನು ಕೇಳಿದ್ದೇವೆ. ಇನ್ನು ಆ ಚಿಂತೆ ಇಲ್ಲ ಬಿಡಿ. ಯಾಕೆಂದರೆ, ಸಂಶೋಧಕರು ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ರೋಬಾಟ್‌ಗಳು, ವಿಶೇಷವಾಗಿ ಮರೆವಿನ ಕಾಯಿಲೆಯಿಂದ ಬಳಲುತ್ತಿರುವವರಿಗೆ, ಔಷಧಗಳು, ಕನ್ನಡಕ, ಫೋನ್‌ಗಳು ಮತ್ತಿತರ ವಸ್ತುಗಳನ್ನು ಹುಡುಕಿಕೊಡಲು ನೆರವು ನೀಡಲಿವೆ.
ಕೆನಡಾದ ಯುನಿರ್ವಸಿಟಿ ಆಫ್ ವಾಟರ್ಲೂ ಸಂಸೋಧನಾ ವಿದ್ಯಾರ್ಥಿ ಅಲಿ ಅಯೂಬ್ ಅವರು ಈ ಬಗ್ಗ ಮಾಹಿತಿ ನೀಡಿದ್ದು, ದೀರ್ಘಾವಧಿಯಲ್ಲಿ ಈ ತಂತ್ರಜ್ಞಾನ ಪರಿಣಾಮವು ಸಾಕಷ್ಟು ರೋಮಾಂಚನಕಾರಿಯಾಗಿರಲಿದೆ ಎಂದು ಹೇಳಿದ್ದಾರೆ. ಬಳಕೆದಾರರ ಕೇವಲ ರೋಬಾಟ್‌ವನ್ನು ಸಂಗಾತಿಯಂತೆ ಬಳಸುವುದು ಮಾತ್ರವಲ್ಲದೇ, ಅದನ್ನು ಇನ್ನಷ್ಟು ವೈಯಕ್ತಿಕರಿಸಿ, ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಬಹುದಾಗಿದೆ. ಇದರಿಂದ ಸಾಕಷ್ಟು ಹೊಸ ಸಾಧ್ಯತೆಗಳು ಲಭ್ಯವಾಗಲಿವೆ ಎದು ಅಯೂಬ್ ಅವರು ಹೇಳಿದರು.
ಇದನ್ನೂ ಓದಿ: Indian Military: ಭಾರತೀಯ ಸೇನೆಗೆ ಕೃತಕ ಬುದ್ಧಿಮತ್ತೆ ನೆರವು, ಎಲ್ಲೆಲ್ಲಿ ಬಳಕೆ?
ಮೆರೆವು ಕಾಯಿಲೆಯು, ಮೆದುಳಿನ ಕಾರ್ಯನಿರ್ವಹಣೆಯನ್ನು ನಿರ್ಬಂಧಿಸುತ್ತದೆ. ಇದರಿಂದಾಗಿ ಗೊಂದಲ, ನೆನಪು ನಷ್ಟ ಮತ್ತು ಅಂಗವೈಕಲ್ಯವನ್ನು ಉಂಟುಮಾಡುತ್ತದೆ. ಈ ಸ್ಥಿತಿಯನ್ನು ಹೊಂದಿರುವ ಅನೇಕ ಜನರು ದಿನನಿತ್ಯದ ವಸ್ತುಗಳ ಸ್ಥಳವನ್ನು ಪದೇ ಪದೇ ಮರೆತುಬಿಡುತ್ತಾರೆ. ಇದು ಅವರ ಜೀವನದ ಗುಣಮಟ್ಟವನ್ನು ಕುಗ್ಗಿಸುತ್ತದೆ. ಹಾಗಾಗಿ ಆರೈಕೆ ಮಾಡುವವರ ಮೇಲೆ ಹೆಚ್ಚುವರಿ ಹೊರೆಯಾಗುತ್ತದೆ. ಈ ಹೊರೆಯನ್ನು ಕಡಿಮೆ ಮಾಡಲು ಈ ತಂತ್ರಜ್ಞಾನವು ನೆರವು ಒದಗಿಸಲಿದೆ.
ತಂತ್ರಜ್ಞಾನದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
WWDC 2023: 15 ಇಂಚಿನ ಮ್ಯಾಕ್‌ಬುಕ್ ಏರ್ ಅನಾವರಣಗೊಳಿಸಿದ ಆಪಲ್, ಬೆಲೆ ಎಷ್ಟು?
ಹೊಸ ಮ್ಯಾಕ್‌ಬುಕ್ ಏರ್ ತೆಳುವಾದ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದೆ. 11.5 ಮಿಮೀ ದಪ್ಪವಿದೆ. 3 ಪೌಂಡ್ ತೂಕವಿದೆ. MagSafe, ಎರಡು TB ಪೋರ್ಟ್‌ಗಳನ್ನು ಹೊಂದಿದೆ. ಸ್ಟ್ಯಾಂಡರ್ಡ್ ಮ್ಯಾಕ್‌ಬುಕ್ ಏರ್‌ನಂತೆ ನಾಲ್ಕು ಬಣ್ಣಗಳಲ್ಲಿದ್ದು, ಮ್ಯಾಕ್‌ಬುಕ್ ಪ್ರೊ M2 ಅಲ್ಟ್ರಾ ಚಿಪ್‌ನಿಂದ ಚಾಲಿತವಾಗಿದೆ.
ನ್ಯೂಯಾರ್ಕ್: ಆಪಲ್ ಸಂಸ್ಥೆ (Apple) ಸೋಮವಾರ 15 ಇಂಚಿನ ಮ್ಯಾಕ್‌ಬುಕ್ ಏರ್ (MacBook Air) ಅನ್ನು ವರ್ಲ್ಡ್‌ವೈಡ್ ಡೆವಲಪರ್‌ಗಳ ಸಮ್ಮೇಳನದಲ್ಲಿ (WWDC 2023) ಅನಾವರಣಗೊಳಿಸಿದೆ. ಈ ಲ್ಯಾಪ್‌ಟಾಪ್‌ನ ಬೆಲೆ $1299 (₹ 1.07 ಲಕ್ಷ).
ಹೊಸ ಮ್ಯಾಕ್‌ಬುಕ್ ಏರ್ ತೆಳುವಾದ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದೆ. 11.5 ಮಿಮೀ ದಪ್ಪವಿದೆ. 3 ಪೌಂಡ್ ತೂಕವಿದೆ. MagSafe, ಎರಡು TB ಪೋರ್ಟ್‌ಗಳನ್ನು ಹೊಂದಿದೆ. ಸ್ಟ್ಯಾಂಡರ್ಡ್ ಮ್ಯಾಕ್‌ಬುಕ್ ಏರ್‌ನಂತೆ ನಾಲ್ಕು ಬಣ್ಣಗಳಲ್ಲಿದ್ದು, ಮ್ಯಾಕ್‌ಬುಕ್ ಪ್ರೊ M2 ಅಲ್ಟ್ರಾ ಚಿಪ್‌ನಿಂದ ಚಾಲಿತವಾಗಿದೆ.
ಆಪಲ್‌ನ ಮ್ಯಾಕ್ ತಂಡವು 2020ರಲ್ಲಿ ತನ್ನದೇ ಆದ ಚಿಪ್‌ಗಳನ್ನು ಬಳಸಲು ಪ್ರಾರಂಭಿಸಿತು. ಆಗಿನಿಂದ ಅದರ ಲ್ಯಾಪ್‌ಟಾಪ್ ಮಾರುಕಟ್ಟೆ ಸುಧಾರಿಸಿದೆ. ಹೊಸ ಉತ್ಪನ್ನದಲ್ಲಿ ಅದು ತನ್ನ ಮ್ಯಾಕ್ ಸ್ಟುಡಿಯೋ ಡೆಸ್ಕ್‌ಟಾಪ್ ಯಂತ್ರವನ್ನು ನವೀಕರಿಸಿದೆ. ಇದರ ಹೊಸ M2 ಅಲ್ಟ್ರಾ ಚಿಪ್, ಕೃತಕ ಬುದ್ಧಿಮತ್ತೆಯ ಕೆಲಸವನ್ನು ವೇಗಗೊಳಿಸಿದೆ. ಇದರ ಪ್ರತಿಸ್ಪರ್ಧಿ ಸಂಸ್ಥೆಗಳ ಚಿಪ್‌ಗಳು ಈ ಕೆಲಸ ನಿರ್ವಹಿಸಲು ಬೇಕಾದ ಮೆಮೊರಿ ಹೊಂದಿಲ್ಲ ಎನ್ನಲಾಗಿದೆ.
ಕ್ಯುಪರ್ಟಿನೊ ಮೂಲದ ತಂತ್ರಜ್ಞಾನ ದೈತ್ಯ ಸಂಸ್ಥೆ ಆಪಲ್, ಹೊಸ ಮ್ಯಾಕ್ ಪ್ರೊ ಅನ್ನು ಕೂಡ ಡೆವಲಪರ್‌ಗಳ ಸಮ್ಮೇಳನದಲ್ಲಿ ಅನಾವರಣಗೊಳಿಸಿದೆ. ಇದರ ಬೆಲೆ 6,999 ಡಾಲರ್. ಮ್ಯಾಕ್ ಪ್ರೊದಲ್ಲಿ ಆರು ತೆರೆದ ವಿಸ್ತರಣೆ ಸ್ಲಾಟ್‌ಗಳಿವೆ, ಆಡಿಯೋ, ನೆಟ್‌ವರ್ಕಿಂಗ್, ವೀಡಿಯೊ ಮತ್ತು ಸ್ಟೋರೇಜ್ ಕಾರ್ಡ್‌ಗಳೊಂದಿಗೆ ಸಂಪೂರ್ಣವಾಗಿ ಸಜ್ಜಾಗಿದೆ. ಇಂಟೆಲ್-ಚಾಲಿತ ಮ್ಯಾಕ್‌ಗಳಿಗಿಂತ ಮೂರು ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ.
ಆಪಲ್ ಮಿಶ್ರ-ರಿಯಾಲಿಟಿ ಹೆಡ್‌ಸೆಟ್ ಅನ್ನು ಅನಾವರಣಗೊಳಿಸಲಿದೆ. ಒಂಬತ್ತು ವರ್ಷಗಳ ಹಿಂದೆ ಆಪಲ್ ವಾಚ್ ಅನ್ನು ಪರಿಚಯಿಸಿದ ನಂತರ ಹೊಸ ಬಗೆಯ ಉತ್ಪನ್ನಗಳ ವರ್ಗಕ್ಕೆ ಇದು ಇನ್ನೊಂದು ಸೇರ್ಪಡೆ. ಇದರೊಂದಿಗೆ ಆಪಲ್ ಗ್ರಾಹಕರೊಂದಿಗೆ ಇನ್ನಷ್ಟು ಉತ್ಪನ್ನಗಳ ಸಂಬಂಧ ಸಾಧಿಸಿದೆ. ಫೇಸ್‌ಬುಕ್ ಮಾಲೀಕರಾದ ಮೆಟಾ ಪ್ಲಾಟ್‌ಫಾರ್ಮ್‌ನೊಂದಿಗೆ ಈಗ ಇದು ನೇರ ಸ್ಪರ್ಧೆಯಲ್ಲಿದೆ.
ಮೆಟಾದಿಂದ ಕಳೆದ ವರ್ಷ ಬಂದಿರುವ ಕ್ವೆಸ್ಟ್ ಪ್ರೊ ಮತ್ತು ಕಳೆದ ವಾರ ಬಂದ ಕ್ವೆಸ್ಟ್ 3 ಸಾಧನಗಳಂತೆ ಆಪಲ್‌ನ ಈ ಸಾಧನವೂ ಹೆಡ್‌ಸೆಟ್‌ನೊಳಗಿನ ಪರದೆಯ ಮೇಲೆ ಪ್ರದರ್ಶಿಸಲಾದ ವರ್ಚುವಲ್ ಪ್ರಪಂಚದೊಂದಿಗೆ ಹೊರಗಿನ ಪ್ರಪಂಚದ ವೀಡಿಯೊ ಫೀಡ್ ಅನ್ನು ಸಂಯೋಜಿಸುವ ಕೆಲಸ ಮಾಡುತ್ತದೆ.
ಇದನ್ನೂ ಓದಿ: ಗ್ಲೋಕಲ್ ಲೋಕ ಅಂಕಣ | ಮೆಟಾವರ್ಸ್ ಮುಂದಿರುವ ಸವಾಲುಗಳು
ಗ್ಯಾಜೆಟ್ಸ್
Nothing Phone: ಐಫೋನ್ ಬೆನ್ನಲ್ಲೇ ಭಾರತದಲ್ಲಿ ಮತ್ತೊಂದು ಕಂಪನಿಯಿಂದ ಸ್ಮಾರ್ಟ್‌ಫೋನ್ ತಯಾರಿಕಾ ಘಟಕ
Nothing Phone: ಇತ್ತೀಚೆಗಷ್ಟೇ ಆ್ಯಪಲ್ ಕಂಪನಿಯು ಐಫೋನ್ ತಯಾರಿಕೆಯಲ್ಲಿ ಭಾರತದಲ್ಲೇ ಆರಂಭಿಸಲಾಗುವುದು ಎಂದು ಘೋಷಿಸಿತ್ತು. ಈಗ ಇಂಗ್ಲೆಂಡ್ ಮೂಲದ ನಥಿಂಗ್ ಟೆಕ್ನಾಲಜಿ ಕೂಡ ಇದೇ ಹಾದಿಯನ್ನು ತುಳಿದಿದೆ.
ನವದೆಹಲಿ: ಚೀನಾ ಬಿಟ್ಟು ಭಾರತದಲ್ಲೇ ಐಫೋನ್‌ಗಳನ್ನು ಉತ್ಪಾದಿಸಲು ಆ್ಯಪಲ್ ಕಂಪನಿ (Apple Inc) ಮುಂದಾದ ಬೆನ್ನಲ್ಲೇ, ಮತ್ತೊಂದು ಸ್ಮಾರ್ಟ್‌ಫೋನ್ (Smartphone) ತಯಾರಿಕಾ ಕಂಪನಿಯು ಇದೇ ಹಾದಿಯನ್ನು ತುಳಿದಿದೆ. ನಥಿಂಗ್ ಫೋನ್ (2) Nothing Phone (2) ಸ್ಮಾರ್ಟ್‌ಫೋನ್‌ವನ್ನು ಭಾರತದಲ್ಲಿ (India) ತಯಾರಿಸಲಾಗುವುದು ಎಂದು ನಥಿಂಗ್ ಟೆಕ್ನಾಲಜಿ (Nothing Technology Company) ಕಂಪನಿ ಹೇಳಿದೆ. ಈ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು ತನ್ನ ಮುಂಬರುವ 5ಜಿ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ತಯಾರಿಸಲಾಗುವುದು ಎಂದು ನಥಿಂಗ್ ಫೋನ್ ಕಂಪನಿಯು ಮಾಧ್ಯಮಗಳಿಗೆ ಖಚಿತಪಡಿಸಿದೆ. ಹೊಸ ಫೋನ್ ಬಿಡುಗಡೆಗೆ ಮುಂಚೆಯೇ ಕೆಲವು ಫೀಚರ್‌ಗಳನ್ನು ಕಂಪನಿಯು ಬಹಿರಂಗಪಡಿಸಿದೆ. ಆದರೆ, ಯಾವ ದಿನದಂದು ಈ ಫೋನ್ ಲಾಂಚ್ ಆಗಲಿದೆ ಎಂಬ ಖಚಿತ ಮಾಹಿತಯನ್ನು ಕಂಪನಿ ಬಿಟ್ಟು ಕೊಟ್ಟಿಲ್ಲ. ಮುಂದಿನ ತಿಂಗಳು ಅಂದರೆ ಜುಲೈನಲ್ಲಿ ನಥಿಂಗ್ ಫೋನ್ (2) ಭಾರತ ಮತ್ತು ಇತರ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿಯು ಘೋಷಿಸಿದೆ.
ನಥಿಂಗ್ ಫೋನ್ (1) ಅನ್ನು ಭಾರತದಲ್ಲಿ ತಯಾರಿಸಲಾಗಿಲ್ಲ. ಈ ಸ್ಮಾರ್ಟ್‌ಫೋನ್ ಉತ್ತರಾಧಿಕಾರಿ ಅರ್ಥಾತ್ ಹೊಸ ಫೋನ್ ಭಾರತದಲ್ಲಿ ತಯಾರಾಗಲಿದೆ. ಭಾರತದಲ್ಲಿ ಉತ್ಪಾದನೆಯಾಗಲಿದೆ ಎಂದು ಫೋನ್ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಗ್ಗದ ಬೆಲೆಗೆ ಫೋನ್ ಸಿಗುತ್ತದೆ ಎಂದು ಭಾವಿಸಬೇಕಿಲ್ಲ. ಯಾಕೆಂದರೆ ಭಾರತದಲ್ಲಿ ಸಾಧನವನ್ನು ಜೋಡಿಸಲಾಗುತ್ತಿಲ್ಲ. ನಥಿಂಗ್ ಫೋನ್ (2) ಜುಲೈನಲ್ಲಿ ಬಿಡುಗಡೆಯಾದಾಗ ಭಾರತದಲ್ಲಿ 40,000 ರೂ.ಕ್ಕಿಂತ ಕಡಿಮೆ ಬೆಲೆಯನ್ನು ನಿರೀಕ್ಷಿಸಲಾಗಿದೆ.
ನಥಿಂಗ್ ಸ್ಮಾರ್ಟ್‌ಫೋನ್‌ಗಳು ತಮ್ಮ ಸಾಂಪ್ರದಾಯಿಕ ಪಾರದರ್ಶಕ ವಿನ್ಯಾಸಕ್ಕೆ ಹೆಸರುವಾಸಿಯಾಗಿವೆ. ಈ ವಿನ್ಯಾಸಗಳಿಗೆ ಹೈಟೆಕ್ ಉತ್ಪಾದನಾ ಪ್ರಕ್ರಿಯೆಗಳು ಮತ್ತು ನಿಖರವಾದ ಎಂಜಿನಿಯರಿಂಗ್ ಅಗತ್ಯವಿರುತ್ತದೆ. ಹಾಗಾಗಿ, ಭಾರತದಲ್ಲಿ ಸ್ಮಾರ್ಟ್‌ಫೋನ್ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಕಾರಣವಾಗಿದೆ. ಭಾರತದಲ್ಲಿ ಉತ್ಪಾದನೆಗೆ ನಮ್ಮ ಚಾಲನೆಯು ಸ್ಥಳೀಯ ಗ್ರಾಹಕರು ಮತ್ತು ಅವರ ಬೇಡಿಕೆಗಳ ಕಡೆಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಫೋನ್ (2) ಅನ್ನು ಭಾರತದಲ್ಲಿ ತಯಾರಿಸಲಾಗುವುದು ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ ಎಂದು ನಥಿಂಗ್ ಇಂಡಿಯಾದ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಮನು ಶರ್ಮಾ ಅವರು ಹೇಳಿದ್ದಾರೆ.
ಹೊಸ ಬ್ರ್ಯಾಂಡ್ ಆಗಿರುವ ನಥಿಂಗ್ ಫೋನ್ ಹೊಸ ಹೊಸ ಆವಿಷ್ಕಾರಗಳಲ್ಲಿ ನಂಬಿಕೆಯನ್ನು ಇಟ್ಟಿದೆ. ಫೋನ್ (2) ಅನ್ನು ಮಾರುಕಟ್ಟೆಯಲ್ಲಿ ಅತ್ಯಂತ ಸಮರ್ಥನೀಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಮನು ಶರ್ಮಾ ಅವರು ಹೇಳಿದರು.
ಇದನ್ನೂ ಓದಿ: Apple India: ಭಾರತದಲ್ಲಿ ಆ್ಯಪಲ್ ಕಂಪನಿಗೆ ಕೇವಲ 2 ಸ್ಟೋರ್‌ಗಳಲ್ಲಿ ತಿಂಗಳಿಗೆ ಸೇಲ್ಸ್ ಎಷ್ಟು ಕೋಟಿ?
2020ರಲ್ಲಿ ಆರಂಭವಾದ ನಥಿಂಗ್ ಕಂಪನಿಯು ಇಂಗ್ಲೆಂಡ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಮಾರುಕಟ್ಟೆಗೆ ಪ್ರವೇಶಿಸಿದ ಎರಡೇ ವರ್ಷಗಳಲ್ಲಿ ತನ್ನದೇ ಬ್ರ್ಯಾಂಡ್ ಬಿಲ್ಡ್ ಮಾಡಿಕೊಂಡಿದೆ. ಹೊಸ ವಿನ್ಯಾಸದ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತವು ಸೇರಿದಂತೆ ಜಗತ್ತಿನಾದ್ಯಂತ ತನ್ನದೇ ಪಾಲು ಪಡೆದುಕೊಂಡಿದೆ. ಆಪಲ್, ಸ್ಯಾಮ್ಸಂಗ್ ಕಂಪನಿಯ ಫೋನುಗಳಿಗೆ ತೀವ್ರ ಸ್ಪರ್ಧೆಯನ್ನು ಒಡ್ಡಿದೆ.
ತಂತ್ರಜ್ಞಾನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
Google Wallet: ಗೂಗಲ್ ವಾಲೆಟ್‌ಗೆ 5 ಹೊಸ ಫೀಚರ್ಸ್, ಇವುಗಳಿಂದ ಏನೆಲ್ಲ ಉಪಯೋಗ?
Google Wallet: ಟೆಕ್ ದೈತ್ಯ ಕಂಪನಿ ಗೂಗಲ್ ಕಳೆದ ವರ್ಷವಷ್ಟೇ ಗೂಗಲ್ ವಾಲೆಟ್ ಸೇವೆಯನ್ನು ಆರಂಭಿಸಿತ್ತು. ಇದೀಗ, ಐದು ಹೊಸ ಫೀಚರ್‌ಗಳನ್ನು ಜಾರಿ ಮಾಡಿದೆ.
ಬೆಂಗಳೂರು, ಕರ್ನಾಟಕ: ಕಳೆದ ವರ್ಷ ಜುಲೈ ತಿಂಗಳಲ್ಲಿ ಗೂಗಲ್ (Google) ಕಂಪನಿಯು ತನ್ನ ವಾಲೆಟ್ ಸೇವೆಯಾದ ಗೂಗಲ್ ವಾಲೆಟ್ (Google Wallet) ಲಾಂಚ್ ಮಾಡಿತ್ತು. ಈ ಉತ್ಪನ್ನಕ್ಕೆ ಈಗ ಕಂಪನಿಯು ಐದು ಹೊಸ ಫೀಚರ್‌ಗಳನ್ನು (New Feature) ಸೇರಿಸಿದ್ದು, ಬಳಕೆದಾರರಿಗೆ ಇನ್ನಷ್ಟು ನೆರವು ಒದಗಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಗೂಗಲ್ ವಾಲೆಟ್ ಈ ಮೊದಲಿಗಿಂತಲೂ ಈಗ ಹೆಚ್ಚು ಸುಭದ್ರ ಮತ್ತು ಪ್ರೈವೇಟ್ ಡಿಜಿಟಲ್ ವಾಲೆಟ್ ಆಗಿ ಬದಲಾಗಿದೆ. ಅನುಕೂಲತೆ, ಭದ್ರತೆ ಮತ್ತು ಗೌಪ್ಯತೆಗೆ ಆದ್ಯತೆ ನೀಡುವ ಹೊಸ ಡಿಜಿಟಲ್ ವ್ಯಾಲೆಟ್ ಅನ್ನು ರಚಿಸಲು ನಾವು ಹೊರಟಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ, ಯಾರಿಗಾದರೂ, ಎಲ್ಲಿಯಾದರೂ ಪ್ರವೇಶಿಸಬಹುದಾದ ಅನುಭವವನ್ನು ನಿರ್ಮಿಸಲು ನಾವು ಬಯಸುತ್ತೇವೆ. ಆ ದೃಷ್ಟಿಯನ್ನು ರಿಯಾಲಿಟಿ ಮಾಡಲು ನಾವು ಹೇಗೆ ಕೆಲಸ ಮಾಡುತ್ತಿದ್ದೇವೆ ಎಂಬುದು ಇಲ್ಲಿದೆ ಎಂದು ಗೂಗಲ್ ವಾಲೆಟ್‌ನ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಜೆನ್ನಿ ಚಾಂಗ್ ಅವರು ಗೂಗಲ್ ಬ್ಲಾಗ್‌ನಲ್ಲಿ ಹೊಸ ಫೀಚರ್‌ಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
Google Wallet: ಸುಲಭವಾಗಿ ಪಾಸ್ ಇಮೇಜ್ ಸೇವ್
ಶೀಘ್ರದಲ್ಲೇ ಬಳಕೆದಾರರು ವ್ಯಾಲೆಟ್‌ನಲ್ಲಿ ಕಾರ್ಡ್‌ನ ಸುರಕ್ಷಿತ, ಡಿಜಿಟಲ್ ಆವೃತ್ತಿಯನ್ನುಕ್ರಿಯೇಟ್ ಮಾಡಲು ಮತ್ತು ಸೇವ್ ಮಾಡಲು ಸಾಧ್ಯವಾಗಲಿದೆ. ಈ ಕ್ರಿಯೇಯನ್ನು ಕಾರ್ಡ್‌ನ ಫೋಟೋವನ್ನು ತೆಗೆದುಕೊಳ್ಳುವ ಮೂಲಕ ಮಾಡಬಹುದಾಗಿದೆ. ಈ ಫೀಚರ್, ಬಾರ್‌ಕೋಡ್ ಅಥವಾ ಕ್ಯೂಆರ್ ಕೋಡ್‌ನೊಂದಿಗೆ ಯಾವುದೇ ಪಾಸ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಪ್ರಾಥಮಿಕವಾಗಿ ಟ್ರಾನ್ಸಿಟ್ ಕ್ಯೂಆರ್ ಟಿಕೆಟ್‌ಗಳು, ಪಾರ್ಕಿಂಗ್ ಪಾಸ್‌ಗಳು ಅಥವಾ ಇ-ಕಾಮರ್ಸ್ ರಿಟರ್ನ್ ಕ್ಯೂಆರ್ ಕೋಡ್‌ಗಳಂತಹ ಪಾಸ್‌ಗಳಿಗೆ ಇದು ಅನ್ವಯವಾಗುತ್ತದೆ.
ಸೇವ್ ಹೆಲ್ತ್ ಇನ್ಶೂರೆನ್ಸ್ ಕಾರ್ಡ್ಸ್
ಆರೋಗ್ಯ ವಿಮೆಯ ಪತ್ರ ಕಾರ್ಡ್‌ನ ಡಿಜಿಟಿಲ್ ಆವೃತ್ತಿಯನ್ನು ಅಭಿವೃದ್ಧಿ ಮಾಡಲು ಗೂಗಲ್ ಹುಮನಾ (ಅಮೆರಿಕದ ಹೆಲ್ತ್ ಇನ್ಶೂರೆನ್ಸ್ ಕಂಪನಿ) ಜತೆ ಕೆಲಸ ಮಾಡುತ್ತಿದೆ. ಇದರಿಂದ ಬಳಕೆದಾರರು ವಾಲೆಟ್‌ನಲ್ಲಿ ಕಾರ್ಡ್ ಸೇವ್ ಮಾಡಿಕೊಳ್ಳಲು ಸಹಾಯವಾಗಲಿದೆ. ಇನ್ನು ಬ್ರಿಟನ್‌ನಲ್ಲಿ ಬಳಕೆದಾರರು ಎಚ್ಎಂಆರ್‌ಸಿ ಆ್ಯಪ್‌ನಿಂದ ರಾಷ್ಟ್ರೀಯ ವಿಮಾ ನಂಬರ್ ಸೇವ್ ಮಾಡಿಕೊಳ್ಳಲು ನೆರವು ನೀಡಲಿದೆ.
ನಿಮ್ಮ ಐಡಿ ಸೇವ್ ಮಾಡಿ
ಜೂನ್ 1ರಿಂದ ಮೇರಿಲ್ಯಾಂಡ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಈಗಾಗಲೇ ತಮ್ಮ ಐಡಿಯನ್ನು ಆಂಡ್ರಾಯ್ಡ್ 8.0 ಅಥವಾ ನಂತರದ ಯಾವುದೇ ಫೋನ್‌ನಲ್ಲಿ ವ್ಯಾಲೆಟ್‌ಗೆ ಸೇರಿಸಬಹುದು. ಮುಂಬರುವ ತಿಂಗಳುಗಳಲ್ಲಿ ಅಮೆರಿಕದ ಅರಿಝೋನಾ, ಕೊಲೊರಾಡೋ ಮತ್ತು ಜಾರ್ಜಿಯಾದಲ್ಲಿಯೂ ಈ ಸೌಲಭ್ಯ ಲಭ್ಯವಾಗಲಿದೆ. ಮೇರಿಲ್ಯಾಂಡ್‌ನಿಂದ ಕೊಡ ಮಾಡಲಾದ ಐಡಿಗಳನ್ನು ವಾಲೆಟ್‌ಗಳನ್ನು ಸೇವ್ ಮಾಡಿಕೊಂಡು, ಅವುಗಳ್ನು ಸಾರಿಗೆ ಭದ್ರತಾ ಆಡಳಿತಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಇನ್ನು ಹೆಚ್ಚಿನ ಲಾಭಗಳು ಈ ಫೀಚರ್ ಮೂಲಕ ಲಭ್ಯವಾಗಲಿವೆ.
ಇದನ್ನೂ ಓದಿ: ವಿಸ್ತಾರ Explainer | ನಿಮ್ಮ ಹಣ ಕದಿಯುವ SOVA Virus! ಮೊಬೈಲ್ ಬಳಸುವಾಗ ಹುಷಾರ್!
Google Wallet: ಮೆಸೇಜ್‌ಗಳಿಂದ ಪಾಸ್‌ಗಳನ್ನು ಸೇವ್ ಮಾಡಿ
ಸದ್ಯದಲ್ಲಿಯೇ, RCS (ರಿಚ್ ಕಮ್ಯುನಿಕೇಶನ್ ಸೇವೆಗಳು) ಸಕ್ರಿಯಗೊಳಿಸಲಾದ Google ನ ಸಂದೇಶಗಳ ಅಪ್ಲಿಕೇಶನ್ ಅನ್ನು ಬಳಸುವ ಜನರು ತಮ್ಮ ಬೋರ್ಡಿಂಗ್ ಪಾಸ್ ಅಥವಾ ರೈಲು ಟಿಕೆಟ್ ಅನ್ನು ನೇರವಾಗಿ ಸಂದೇಶಗಳಲ್ಲಿ ಸ್ವೀಕರಿಸುತ್ತಾರೆ; ಇಲ್ಲಿಂದ, ಅವರು ಇವುಗಳನ್ನು ವಾಲೆಟ್‌ಗೆ ಉಳಿಸಬಹುದು. ವಿಯೆಟ್ನಾಂ ಏರ್‌ಲೈನ್ಸ್ ಪ್ರಯಾಣಿಕರು ಮತ್ತು ಸ್ಪೇನ್‌ನ ಪ್ರಮುಖ ರೈಲು ನಿರ್ವಾಹಕರಾದ ರೆನ್‌ಫೆಯಲ್ಲಿರುವ ಅವರ ಸಹವರ್ತಿಗಳು ಈ ಸೌಲಭ್ಯವನ್ನು ಬೇರೆಯವರಿಗಿಂತ ಮೊದಲು ಪಡೆದುಕೊಳ್ಳುತ್ತಾರೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
WhatsApp: ವಾಟ್ಸಾಪ್ ಏಕೆ ಭಾರತೀಯ ಬಳಕೆದಾರರ ಖಾತೆಗಳನ್ನು ಬ್ಯಾನ್ ಮಾಡುತ್ತಿದೆ?
ಮೆಟಾ (Meta) ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp), ಪ್ರಸಕ್ತ ಸಾಲಿನ ಏಪ್ರಿಲ್ ತಿಂಗಳಲ್ಲಿ 74 ಲಕ್ಷಕ್ಕೂ ಅಧಿಕ ಭಾರತೀಯ ಬಳಕೆದಾರರ ಖಾತೆಗಳ ಮೇಲೆ ನಿಷೇಧ ಹೇರಿದೆ.
ನವದೆಹಲಿ: ಕಳೆದ ಏಪ್ರಿಲ್ ತಿಂಗಳಲ್ಲಿ 74.52 ಲಕ್ಷ ಭಾರತೀಯ ಬಳಕೆದಾರರ (Indian accounts) ಖಾತೆಗಳನ್ನು ಡಿಲಿಟ್ ನಿಷೇಧ ಮಾಡಿರುವುದಾಗಿ ಮೆಟಾ (Meta) ಒಡೆತನದ ವಾಟ್ಸಾಪ್ (WhatsApp) ಹೇಳಿದೆ. 2021ರ ಮಾಹಿತಿ ತಂತ್ರಜ್ಞಾನ ನಿಯಮಗಳು ಅನುಸಾರವಾಗಿ ಪ್ರತಿ ತಿಂಗಳ ಮೊದಲ ದಿನ ಸೋಷಿಯಲ್ ಮೀಡಿಯಾಗಳು ವರದಿಯನ್ನು ಪ್ರಕಟಿಸಬೇಕಾಗುತ್ತದೆ. ಅದರನ್ವಯ ಈಗ ವರದಿಯ ಪ್ರಕಟವಾಗಿದ್ದು, ಬಳಕೆದಾರರ ಮನವಿ ಹಾಗೂ ದೂರುಗಳ ಆಧಾರದ ಮೇಲೆ ವಾಟ್ಸಾಪ್, ಲಕ್ಷಾಂತರ ಖಾತೆಗಳನ್ನು ಡಿಲಿಟ್ ಮಾಡಿದೆ.
ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್, ಅಪಾಯಕಾರಿ ನಡವಳಿಕೆಯನ್ನು ತಡೆಯಲು ಟೂಲ್ಸ್ ಮತ್ತು ಸಂಪನ್ಮೂಲಗಳನ್ನು ನಿಯೋಜಿಸುತ್ತದೆ. ಹಾನಿ ಸಂಭವಿಸಿದ ನಂತರ ಅದನ್ನು ಪತ್ತೆಹಚ್ಚುವುದಕ್ಕಿಂತಲೂ ಅಪಾಯಕಾರಿ ಚಟುವಟಿಕೆಗಳನ್ನು ನಿಯಂತ್ರಿಸವುದೇ ಉತ್ತಮ ಎಂದು ಕಂಪನಿಯು ಹೇಳಿಕೊಂಡಿದೆ.
ಈ ಬಳಕೆದಾರ-ಸುರಕ್ಷತಾ ವರದಿಯು ಸ್ವೀಕರಿಸಿದ ಬಳಕೆದಾರರ ದೂರುಗಳ ವಿವರಗಳನ್ನು ಮತ್ತು ವಾಟ್ಸಾಪ್ ಕೈಗೊಂಡ ಅನುಗುಣವಾದ ಕ್ರಮಗಳನ್ನು ಒಳಗೊಂಡಿದೆ. ಹಾಗೆಯೇ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನಿಂದನೆಯನ್ನು ನಿಯಂತ್ರಸಲು ವಾಟ್ಸಾಪ್ ತನ್ನದೇ ಆದ ತಡೆಗಟ್ಟುವ ಕ್ರಮಗಳನ್ನು ಹೊಂದಿದೆ . ಇದರ ಭಾಗವಾಗಿಯೇ ವಾಟ್ಸಾಪ್ ಏಪ್ರಿಲ್ ತಿಂಗಳಲ್ಲಿ 7.4 ಮಿಲಿಯನ್ ಖಾತೆಗಳನ್ನು ನಿಷೇಧಿಸಿದೆ ಮತ್ತು ಬಳಕೆದಾರರಿಂದ ಯಾವುದೇ ವರದಿಗಳ ಮೊದಲು ಈ ಖಾತೆಗಳಲ್ಲಿ 2.4 ಮಿಲಿಯನ್‌ಗಿಂತಲೂ ಹೆಚ್ಚು ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ವಕ್ತಾರರು ತಿಳಿಸಿದ್ದಾರೆ.
ನಿಂದನೆ ಪತ್ತೆ ಕಾರ್ಯಾಚರಣೆಯು ಮರು ಹಂತದಲ್ಲಿ ನಡೆಯುತ್ತದೆ. ನೋಂದಣಿ ಸಮಯದಲ್ಲಿ, ಸಂದೇಶ ಕಳುಹಿಸುವಾಗ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗೆ ಪ್ರತಿಕ್ರಿಯೆ ನೀಡುವಾಗ ಪತ್ತೆ ಹಚ್ಚಲಾಗುತ್ತದೆ. ನಾವು ಬಳಕೆದಾರರ ವರದಿಗಳು ಮತ್ತು ಬ್ಲಾಕ್‌ಗಳ ರೂಪದಲ್ಲಿ ಸ್ವೀಕರಿಸುತ್ತೇವೆ. ಈ ಕೇಸ್‌ಗಳನ್ನು ಮೌಲ್ಯಮಾಪನ ಮಾಡಲು ಮತ್ತು ಕಾಲಾನಂತರದಲ್ಲಿ ನಮ್ಮ ಪರಿಣಾಮಕಾರಿತ್ವವನ್ನು ಸುಧಾರಿಸಲು ಸಹಾಯ ಮಾಡಲು ವಿಶ್ಲೇಷಕರ ತಂಡವು ಈ ವ್ಯವಸ್ಥೆಗಳನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: WhatsApp New Feature: ಫೋನ್ ನಂಬರ್ ಬದಲಿಗೆ ಯೂಸರ್ ನೇಮ್! ವಾಟ್ಸಾಪ್‌ನಿಂದ ಹೊಸ ಫೀಚರ್
ಜೂನ್ 1ರಂದು ವಾಟ್ಸಾಪ್, ತನ್ನ ಹೊಸ ಗ್ಲೋಬಲ್ ಸೆಕ್ಯುರಿಟಿ ಸೆಂಟರ್ ಅನಾವರಣ ಮಾಡಿದೆ. ಅನ್ ವಾಂಟೆಂಡ್ ಕಾಂಟಾಕ್ಟ್ಸ್ ಮತ್ತು ಸ್ಪ್ಯಾಮರ್‌ಗಳಿಂದ ಬಳಕೆದಾರರು ಹೇಗೆ ತಪ್ಪಿಸಿಕೊಳ್ಳುವುದನ್ನು ಈ ಸೆಂಟರ್‌ನಲ್ಲಿ ತಿಳಿದುಕೊಳ್ಳಬಹುದಾಗಿದೆ. ಈ ಹೊಸ ಪುಟವು ಇಂಗ್ಲಿಷ್ ಮಾತ್ರವಲ್ಲದೇ, ಕನ್ನಡವೂ ಸೇರಿದಂತೆ 10 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ ಎಂದು ಹೇಳಲಾಗುತ್ತಿದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ11 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ13 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಅಂಕಣ24 hours ago
ವಿಧಾನಸೌಧ ರೌಂಡ್ಸ್: ರೌಂಡ್ ಟೇಬಲ್ ಸ್ನೇಹಿತರು ಮತ್ತು ವಿಧಾನಸೌಧದಲ್ಲಿ ಬದಲಾಗದ 40 % ಬ್ರಾಂಡ್!
-
ಉತ್ತರ ಕನ್ನಡ21 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ16 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ22 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಪ್ರಮುಖ ಸುದ್ದಿ22 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?