Site icon Vistara News

Airbags | ಕಾರುಗಳಲ್ಲಿ 6 ಏರ್‌ಬ್ಯಾಗ್‌ ಕಡ್ಡಾಯಕ್ಕೆ ಗಡುವು 1 ವರ್ಷ ಮುಂದೂಡಿಕೆ

airbags

ನವ ದೆಹಲಿ: ಕಾರುಗಳಲ್ಲಿ 6 ಏರ್‌ ಬ್ಯಾಗ್‌ಗಳನ್ನು (Airbags ) ಕಡ್ಡಾಯವಾಗಿಸುವುದಕ್ಕೆ ಸಂಬಂಧಿಸಿದ ಗಡುವನ್ನು ಕೇಂದ್ರ ಸರ್ಕಾರ 1 ವರ್ಷ ಮುಂದೂಡಿದೆ.

ಹೊಸ ಗಡುವಿನ ಪ್ರಕಾರ 2023ರ ಅಕ್ಟೋಬರ್‌ 1 ರಿಂದ ಕಾರುಗಳಲ್ಲಿ 6 ಏರ್‌ ಬ್ಯಾಗ್‌ ಕಡ್ಡಾಯವಾಗಲಿದೆ. ಈ ಹಿಂದೆ 2022ರ ಅಕ್ಟೋಬರ್‌ 1ರ ಗಡುವನ್ನು ವಿಧಿಸಲಾಗಿತ್ತು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆಯ ಸಚಿವ ನಿತಿನ್‌ ಗಡ್ಕರಿ ಅವರು ಗುರುವಾರ ಈ ನಿರ್ಧಾರವನ್ನು ಘೋಷಿಸಿದ್ದಾರೆ.

ಆಟೊಮೊಬೈಲ್‌ ಇಂಡಸ್ಟ್ರಿಗೆ ಬಿಡಿಭಾಗಗಳ ಪೂರೈಕೆಯಲ್ಲಿ ಜಾಗತಿಕ ಮಟ್ಟದಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

” ಜಾಗತಿಕ ಮಟ್ಟದಲ್ಲಿ ಪೂರೈಕೆಯ ಸರಣಿಯಲ್ಲಿ ವ್ಯತ್ಯಯ ಉಂಟಾಗಿರುವುದನ್ನು ಪರಿಗಣಿಸಿ, ಕಾರುಗಳಲ್ಲಿ ಕನಿಷ್ಠ 6 ಏರ್‌ ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವುದಕ್ಕೆ ನಿಗದಿಯಾಗಿದ್ದ ಗಡುವನ್ನು ಒಂದು ವರ್ಷ ಮುಂದೂಡಲಾಗಿದೆʼʼ ಎಂದು ಸಚಿವ ನಿತಿನ್‌ ಗಡ್ಕರಿ ಟ್ವೀಟ್‌ ಮಾಡಿದ್ದಾರೆ.

Exit mobile version