ಬೆಂಗಳೂರು: ಕರ್ನಾಟಕದಲ್ಲಿ ಸಾಂಪ್ರದಾಯಿಕ ವಾಹನಗಳ ಜತೆಗೆ ಎಲೆಕ್ಟ್ರಿಕ್ ವಾಹನಗಳ ಮಾರಾಟ ಕೂಡ ಗಮನಾರ್ಹವಾಗಿ ಏರಿಕೆಯಾಗುತ್ತಿದೆ. ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ (EV sales) ದಿನಕ್ಕೆ ಸರಾಸರಿ ೩೦೦ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿರುವುದು ಮಾರಾಟದ ಪ್ರಗತಿಯನ್ನು ಬಿಂಬಿಸಿದೆ. ಉತ್ತರಪ್ರದೇಶ, ದಿಲ್ಲಿ ಬಿಟ್ಟರೆ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಕರ್ನಾಟಕದಲ್ಲಿ ಮಾರಾಟವಾಗಿದೆ. ಮಹಾರಾಷ್ಟ್ರ ೪ನೇ ಹಾಗೂ ಬಿಹಾರ ೫ನೇ ಸ್ಥಾನದಲ್ಲಿದೆ.
ಏಪ್ರಿಲ್-ಜೂನ್‌ನಲ್ಲಿ ದಿನಕ್ಕೆ ೩೦೦ ಇ.ವಿ ನೋಂದಣಿ: ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕವಾದ ಏಪ್ರಿಲ್-ಜೂನ್‌ನಲ್ಲಿ ರಾಜ್ಯದಲ್ಲಿ ದಿನಕ್ಕೆ ಸರಾಸರಿ ೪,೭೦೦ ವಾಹನಗಳು ನೋಂದಣಿಯಾಗಿವೆ. ಇದರಲ್ಲಿ ೩೦೦ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನವಾಗಿದೆ. ಈ ಅವಧಿಯಲ್ಲಿ ಒಟ್ಟು ೪.೭ ಲಕ್ಷ ವಾಹನಗಳು ನೋಂದಣಿಯಾಗಿದ್ದು, ಇದರಲ್ಲಿ ೩೦,೬೬೩ ಎಲೆಕ್ಟ್ರಿಕ್ ವಾಹನಗಳಾಗಿವೆ. ರಾಜ್ಯದಲ್ಲಿ ಈಗ
ಕರ್ನಾಟಕದಲ್ಲಿ ಒಟ್ಟು ೧.೨ ಲಕ್ಷ ಎಲೆಕ್ಟ್ರಿಕ್ ವಾಹನ: ೨೦೨೨ರ ಮಾರ್ಚ್ ಅಂತ್ಯದ ವೇಳೆಗೆ ಒಟ್ಟು ೨.೬ ಕೋಟಿ ವಾಹನಗಳು ಕರ್ನಾಟಕದ ಬಳಕೆದಾರರ ಬಳಿ ಇದ್ದು, ಇದರಲ್ಲಿ ೧.೨ ಲಕ್ಷ ಎಲೆಕ್ಟ್ರಿಕ್ ವಾಹನಗಳಾಗಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಕರ್ನಾಟಕದಲ್ಲಿರುವ ಒಟ್ಟು ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ೧.೨ ಲಕ್ಷ (ದೇಶದಲ್ಲಿ ೩ನೇ ಸ್ಥಾನ)
ರಾಜ್ಯ | ಎಲೆಕ್ಟ್ರಿಕ್ ವಾಹನಗಳು | ಇತರ ವಾಹನ |
ಕರ್ನಾಟಕ | 1.2 ಲಕ್ಷ | 2.6 ಕೋಟಿ |
ಉತ್ತರಪ್ರದೇಶ | 3.3 ಲಕ್ಷ | 4 ಕೋಟಿ |
ದಿಲ್ಲಿ | 1.5 ಲಕ್ಷ | 76.8 ಲಕ್ಷ |
ಮಹಾರಾಷ್ಟ್ರ | 1.1 ಲಕ್ಷ | 3.1 ಕೋಟಿ |
ಬಿಹಾರ | 83,335 | 1 ಕೋಟಿ |
ಭಾರತ | 13.3 ಲಕ್ಷ | 27.8 ಕೋಟಿ |
ಕರ್ನಾಟಕದಲ್ಲಿ ಗ್ರಾಹಕರಿಗೆ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ ವಿಚಾರದಲ್ಲಿ ಸರ್ಕಾರದ ನೆರವು ಕಡಿಮೆ. ಇಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಕರಿಗೆ, ಹೂಡಿಕೆದಾರರಿಗೆ ಸರ್ಕಾರದ ನೆರವು ಹೆಚ್ಚು. ಹೀಗಿದ್ದರೂ, ಖರೀದಿದಾರರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಬಂಡವಾಳ ಹೂಡಿಕೆ ಮಾಡಲು ಬಯಸುವವರಿಗೆ ೧೫% ಬಂಡವಾಳ ಸಬ್ಸಿಡಿ ನೆರವು ಸಿಗುತ್ತದೆ.
ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಇ.ವಿಗಳ ಮೇಲಿನ ಜಿಎಸ್‌ಟಿಯನ್ನು ೧೨%ರಿಂದ ೫%ಕ್ಕೆ ತಗ್ಗಿಸಿದೆ. ಚಾರ್ಜಿಂಗ್ ಸ್ಟೇಶನ್‌ಗಳ ಮೇಲಿನ ಜಿಎಸ್‌ಟಿಯನ್ನು ೧೮%ರಿಂದ ೫%ಕ್ಕೆ ಕಡಿತಗೊಳಿಸಲಾಗಿದೆ. ಪ್ರಸ್ತುತ ೧,೫೭೬ ಚಾರ್ಜಿಂಗ್ ಸ್ಟೇಶನ್‌ಗಳು ಲಭ್ಯವಿದೆ.
ಇವಿ ಬಿಸಿನೆಸ್ ತಾಣ ಬೆಂಗಳೂರು: ಭಾರತದ ಐಟಿ ತಂತ್ರಜ್ಞಾನ ನಗರಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ ಮಾರಾಟಕ್ಕೂ ಪ್ರಮುಖ ತಾಣವಾಗಿದೆ. ಮಹೀಂದ್ರಾ ಎಲೆಕ್ಟ್ರಿಕ್, ಅಥೆರ್ ಎನರ್ಜಿ, ಓಲಾ ಎಲೆಕ್ಟ್ರಿಕ್, ಬಾಷಿಲ್ಲಿ ಇವಿ ಮತ್ತು ಇವಿ ಬಿಡಿಭಾಗಗಳ ಉತ್ಪಾದನೆಯಲ್ಲಿ ನಿರತವಾಗಿವೆ.