ಬೆಂಗಳೂರು: ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಗೂಗಲ್ ವಾರ್ಷಿಕ ಡೆವಲಪರ್ ಸಮಾವೇಶವು (Google’s annual developer conference 2023) ಮಾರ್ಚ್ 10ರಿಂದ ನಡೆಯಲಿದೆ. ಈ ಸಮಾವೇಶವನ್ನು ಕಂಪನಿಯು ಯುಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಲೈವ್ ಸ್ಟ್ರೀಮ್ ಮಾಡಲಿದೆ. ಈ ಸಮಾವೇಶದಲ್ಲಿ ಗೂಗಲ್ ಕಂಪನಿಯು ತನ್ನ ಬಹುನಿರೀಕ್ಷೆಯ ಆಂಡ್ರಾಯ್ಡ್ 14 (Android 14) ಲಾಂಚ್ ಮಾಡಲಿದೆ. ಜತೆಗೆ, ಪಿಕ್ಸೆಲ್ 7ಎ (Pixel 7a) ಸ್ಮಾರ್ಟ್‌ಫೋನ್ ಕೂಡ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ(Google IO 2023).
ಆಂಡ್ರಾಯ್ಡ್ 14 ಜತೆಗೆ, ಕಂಪನಿಯು ಕೈಗೆಟುಕುವ ದರದಲ್ಲಿ ದೊರೆಯಲಿರುವ ಪಿಕ್ಸೆಲ್ 7ಎ ಸ್ಮಾರ್ಟ್‌ಫೋನ್ ಕೂಡ ಲಾಂಚ್ ಮಾಡಲಿದೆ. ಈ ಫೋನ್ ಟೆನ್ಸರ್ ಜಿ2 ಪ್ರೊಸೆಸರ್ ಇದ್ದು, ಹೈ ರೆಸೂಲುಷನ್ ಕ್ಯಾಮೆರಾ, ಹೈಯರ್ ರಿಫ್ರೆಸ್ ರೇಟ್ ಡಿಸ್‌ಪ್ಲೇ ಮತ್ತಿತರ ಫೀಚರ್‌ಗಳು ಇರಲಿವೆ ಎಂದು ಹೇಳಲಾಗುತ್ತಿದೆ.
ಗೂಗಲ್ ಸಿಇಒ ಸುಂದರ್ ಪಿಚ್ಚೈ ಟ್ವೀಟ್
ಇದೇ ಸಮಾವೇಶದಲ್ಲಿ ಗೂಗಲ್ ತನ್ನ ಪಿಕ್ಸೆಲ್ ಟ್ಯಾಬ್ಲೆಟ್ ಲಾಂಚ್ ಮಾಡುವುದರ ಜತೆಗೆ, ಮುಂಬರುವ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ ಹಾಗೂ ಗೂಗಲ್‌ನ ಮೊದಲ ಫೋಲ್ಡೇಬಲ್ ಸ್ಮಾರ್ಟ್‌ಫೋನ್ ಬಗ್ಗೆ ಟೀಸರ್ ಕೂಡ ಲಾಂಚ್ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: xooglers: ಗೂಗಲ್‌ನಿಂದ ಕೆಲಸ ಕಳೆದುಕೊಂಡ 7 ಮಂದಿ ಹೊಸ ಕಂಪನಿಯನ್ನೇ ಆರಂಭಿಸಿದರು!
ಹೇಗಿದೆ ಈ Pixel 7a ಸ್ಮಾರ್ಟ್‌ಫೋನ್?
ಪಿಕ್ಸೆಲ್ 6ಎ ಫೋನ್ ಮುಂದುವರಿದ ಆವೃತ್ತಿಯಾಗಿರುವ ಪಿಕ್ಸೆಲ್ 7ಎ, ಟೆನ್ಸರ್ ಜಿ2 ಪ್ರೊಸೆಸರ್ ಆಧರಿತವಾಗಿರಲಿದೆ. ಇದೇ ಪ್ರೊಸೆಸರ್ ಅನ್ನು ನೀವು ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೋ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದು. ಪಿಕ್ಸೆಲ್ 6ಎಗೆ ಕಂಪೇರ್ ಮಾಡಿದರೆ, ಪಿಕ್ಸೆಲ್ 7ಎ ಸುಧಾರಿತ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕದೊಂದಿಗೆ 90Hz ಪ್ಯಾನೆಲ್ ಹೊಂದಿರುವ ಸಾಧ್ಯತೆ ಇದೆ. ಪಿಕ್ಸೆಲ್ 7ಎ ಸ್ಮಾರ್ಟ್‌ಫೋನ್‌ನಲ್ಲಿ ನೀವು 50 ಮೆಕಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ನಿರೀಕ್ಷಿಸಬಹುದು.