ಬೆಂಗಳೂರು: ಮಳೆ ಬರಬಹುದು ಎಂದು ಛತ್ರಿ ಕೊಂಡೊಯ್ದ ದಿನ ಮಳೆಯೇ ಬರುವುದಿಲ್ಲ. ಬಿಸಿಲು ಸುಡುತ್ತಿರುವ ದಿನದಂದು ಮಳೆ ಬರುವುದೇ ಇಲ್ಲವೆಂದು ಹೋದಾಗ ಮಳೆ ಧೋ ಎಂದು ಸುರಿದುಬಿಡುತ್ತದೆ. ಇದು ಬಹುತೇಕರ ಅದರಲ್ಲೂ ಬೆಂಗಳೂರಿನಲ್ಲಿರುವವರ ದೊಡ್ಡ ಕಂಪ್ಲೇಂಟ್. ಮಳೆಗಾಲ ಯಾವಾಗ ಆರಂಭವಾಗುತ್ತದೆ ಎನ್ನುವುದನ್ನು ಭಾರತೀಯ ಹವಾಮಾನ ಇಲಾಖೆ ಹೇಳುತ್ತದೆಯಾದರೂ ಯಾವ ದಿನ ಯಾವ ಸಮಯದಲ್ಲಿ ಯಾವ ಪ್ರದೇಶದಲ್ಲಿ ಯಾವ ರೀತಿಯ ವಾತಾವರಣ ಇರುತ್ತದೆ (Monsoon Precaution) ಎಂದು ನಿಖರವಾಗಿ ಹೇಳುವುದು ಕಷ್ಟದ ಕೆಲಸವೇ. ಅದಕ್ಕೆಂದೇ ನಿಮ್ಮ ನೆರವಿಗೆ ನಾವಿಲ್ಲಿ ಬಂದಿದ್ದೇವೆ.
ಮಳೆಯ ಭವಿಷ್ಯವನ್ನು ನುಡಿಯುವಂತಹ ಸಾಕಷ್ಟು ಆ್ಯಪ್‌ಗಳು ಪ್ಲೇಸ್ಟೋರ್‌ನಲ್ಲಿ ಲಭ್ಯವಿವೆ. ಅವುಗಳಲ್ಲಿ ಕೆಲವು ಆ್ಯಪ್‌ಗಳು ನಿಖರತೆಗೆ ಹತ್ತಿರವಾದ ಉತ್ತರವನ್ನು ಕೊಡುತ್ತವೆ. ಅವುಗಳ ಸಣ್ಣ ಪರಿಚಯ ಇಲ್ಲಿದೆ ನೋಡಿ.
ಇದನ್ನೂ ಓದಿ: Viral Video: ಟೆರೇಸ್ಸೇ ಡ್ಯಾನ್ಸ್ ಫ್ಲೋರ್ ಆಯ್ತು, ಯುವತಿ ಸಖತ್ ಸ್ಟೆಪ್ಸ್! ವಿಡಿಯೋ ವೈರಲ್
MAUSAM
ಇದು ಭಾರತದ ಹವಾಮಾನ ಇಲಾಖೆ ಮತ್ತು ಭೂ ವಿಜ್ಞಾನ ಸಚಿವಾಲಯ ಜಂಟಿಯಾಗಿ ತಯಾರಿಸಿರುವ ಆ್ಯಪ್ ಇದು. ನಿಜ ಹೇಳಬೇಕೆಂದರೆ ಈ ಆ್ಯಪ್ ಐಎಂಡಿಯ ವೆಬ್‌ಸೈಟ್ ಮಾಹಿತಿಗಳಿಗಿಂತಲೂ ಹೆಚ್ಚು ನಿಖರವಾಗಿರುತ್ತವೆ. ನೀವು ಈ ಆ್ಯಪ್ ಬಳಸುತ್ತಿರುವ ಸ್ಮಾರ್ಟ್‌ಫೋನ್ ಇರುವ ಸ್ಥಳದ ರಾಡಾರ್ ಚಿತ್ರಗಳು, ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಈ ಆ್ಯಪ್ ಮುನ್ಸೂಚನೆಗಳನ್ನು ಕೊಡುತ್ತದೆ. ಮಳೆ, ಬಿರುಗಾಳಿ, ಚಂಡಮಾರುತಗಳ ಬಗ್ಗೆ ಎಚ್ಚರಿಕೆ ಕೊಡುತ್ತದೆ.
Skymet Weather(ಸ್ಕೈಮೆಟ್ ಹವಾಮಾನ)
ಭಾರತದಲ್ಲಿ ಹವಾಮಾನವನ್ನು ಊಹಿಸಲು ಇರುವ ಮತ್ತೊಂದು ಅತ್ಯಂತ ವಿಶ್ವಾಸಾರ್ಹ ಆ್ಯಪ್. ಭಾರತದಲ್ಲಿಯೇ ತಯಾರಾಗಿರುವ ಈ ಆ್ಯಪ್ ಮಳೆ ಸೇರಿದಂತೆ ಎಲ್ಲ ರೀತಿಯ ಹವಾಮಾನವನ್ನು ಊಹಿಸಬಲ್ಲದ್ದಾಗಿದೆ. ದೇಶಾದ್ಯಂತ ಇರುವ 7000ಕ್ಕೂ ಅಧಿಕ ಹವಾಮಾನ ಕೇಂದ್ರಗಳು ಮತ್ತು ಉಪ್ರಗಹಗಳ ಚಿತ್ರಣಗಳನ್ನು ಬಳಸಿಕೊಂಡು ಈ ಆ್ಯಪ್ ಹವಾಮಾನದ ಬಗ್ಗೆ ಮುನ್ಸೂಚನೆ ನೀಡುತ್ತದೆ. ಈಗಿನ ತಾಪಮಾನ ಹಾಗೆಯೇ ಮುಂದಿನ 14 ದಿನಗಳ ಹವಾಮಾನ ವರದಿಯನ್ನು ಇದು ನೀಡಬಲ್ಲದು.
AccuWeather
ಇದು ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಅತ್ಯಂತ ಜನಪ್ರಿಯ ಹವಾಮಾನ ಮುನ್ಸೂಚನೆ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ನಿಖರತೆ ವಿಚಾರದಲ್ಲಿ ಈ ಆ್ಯಪ್ ಬೇರೆಲ್ಲ ಆ್ಯಪ್‌ಗಳಿಗಿಂತ ಬೆಸ್ಟ್ ಎಂದೇ ಹೇಳಬಹುದು. ಇದು ಇತರ ಅಪ್ಲಿಕೇಶನ್‌ಗಳಿಗಿಂತ ಸ್ಥಳೀಯ ಹವಾಮಾನದ ಕುರಿತು ಹೆಚ್ಚು ವಿವರವಾದ ಮಾಹಿತಿಯನ್ನು ನೀಡುತ್ತದೆ. ಹಾಗೇ ನಿಮಿಷಕ್ಕೊಮ್ಮೆ ಅದನ್ನು ಅಪ್‌ಡೇಟ್ ಮಾಡುತ್ತಿರುತ್ತದೆ. ಹಾಗೆಯೇ ಮುಂದಿನ 45 ದಿನಗಳವರೆಗಿನ ವರದಿಯನ್ನು ಈ ಆ್ಯಪ್ ನೀಡಬಲ್ಲದು.
ದಿ ವೆದರ್ ಚಾನೆಲ್
ಇದು ಐಫೋನ್ ಬಳಕೆದಾರರಿಗೆ ಪರಿಚಯದ ಆ್ಯಪ್. ಐಬಿಎಂನ ಈ ಆ್ಯಪ್ ಐಫೋನ್‌ಗಳಿಗೆ ಅಧಿಕೃತ ಹವಾಮಾನ ವರದಿ ಪೂರೈಕೆದಾರ. ಹಾಗೆಯೇ ಬೇರೆಯವರೂ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿರುವ ಈ ಆ್ಯಪ್ ಹವಾಮಾನದ ಬಗ್ಗೆ ಸಂಪೂರ್ಣ ಎಚ್ಚರಿಕೆಗಳನ್ನು ನೀಡುತ್ತದೆ. ಮಿಂಚು, ಮಳೆಯ ಬಗ್ಗೆ ಎಚ್ಚರಿಸುತ್ತದೆ.