Monsoon Precaution: ಮಳೆಗಾಲಕ್ಕೆ ಶುರುವಾಯ್ತು ಕ್ಷಣಗಣನೆ; ಈ ಆ್ಯಪ್‌ಗಳು ಈಗ ನಿಮಗೆ ಅತ್ಯಗತ್ಯ - Vistara News

ಗ್ಯಾಜೆಟ್ಸ್

Monsoon Precaution: ಮಳೆಗಾಲಕ್ಕೆ ಶುರುವಾಯ್ತು ಕ್ಷಣಗಣನೆ; ಈ ಆ್ಯಪ್‌ಗಳು ಈಗ ನಿಮಗೆ ಅತ್ಯಗತ್ಯ

ಮಳೆಗಾಲ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಳೆಗಾಲದಲ್ಲಿ ಮುನ್ನೆಚ್ಚರಿಕೆ (Monsoon Precaution)‌ ವಹಿಸುವುದಕ್ಕೆ ಈ ಕೆಳಗಿನ ಕೆಲವು ಆ್ಯಪ್‌ಗಳು ನಿಮಗೆ ಸಹಕಾರಿ.

VISTARANEWS.COM


on

monsoon Precaution apps
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಳೆ ಬರಬಹುದು ಎಂದು ಛತ್ರಿ ಕೊಂಡೊಯ್ದ ದಿನ ಮಳೆಯೇ ಬರುವುದಿಲ್ಲ. ಬಿಸಿಲು ಸುಡುತ್ತಿರುವ ದಿನದಂದು ಮಳೆ ಬರುವುದೇ ಇಲ್ಲವೆಂದು ಹೋದಾಗ ಮಳೆ ಧೋ ಎಂದು ಸುರಿದುಬಿಡುತ್ತದೆ. ಇದು ಬಹುತೇಕರ ಅದರಲ್ಲೂ ಬೆಂಗಳೂರಿನಲ್ಲಿರುವವರ ದೊಡ್ಡ ಕಂಪ್ಲೇಂಟ್‌. ಮಳೆಗಾಲ ಯಾವಾಗ ಆರಂಭವಾಗುತ್ತದೆ ಎನ್ನುವುದನ್ನು ಭಾರತೀಯ ಹವಾಮಾನ ಇಲಾಖೆ ಹೇಳುತ್ತದೆಯಾದರೂ ಯಾವ ದಿನ ಯಾವ ಸಮಯದಲ್ಲಿ ಯಾವ ಪ್ರದೇಶದಲ್ಲಿ ಯಾವ ರೀತಿಯ ವಾತಾವರಣ ಇರುತ್ತದೆ (Monsoon Precaution) ಎಂದು ನಿಖರವಾಗಿ ಹೇಳುವುದು ಕಷ್ಟದ ಕೆಲಸವೇ. ಅದಕ್ಕೆಂದೇ ನಿಮ್ಮ ನೆರವಿಗೆ ನಾವಿಲ್ಲಿ ಬಂದಿದ್ದೇವೆ.

ಮಳೆಯ ಭವಿಷ್ಯವನ್ನು ನುಡಿಯುವಂತಹ ಸಾಕಷ್ಟು ಆ್ಯಪ್‌ಗಳು ಪ್ಲೇಸ್ಟೋರ್‌ನಲ್ಲಿ ಲಭ್ಯವಿವೆ. ಅವುಗಳಲ್ಲಿ ಕೆಲವು ಆ್ಯಪ್‌ಗಳು ನಿಖರತೆಗೆ ಹತ್ತಿರವಾದ ಉತ್ತರವನ್ನು ಕೊಡುತ್ತವೆ. ಅವುಗಳ ಸಣ್ಣ ಪರಿಚಯ ಇಲ್ಲಿದೆ ನೋಡಿ.

ಇದನ್ನೂ ಓದಿ: Viral Video: ಟೆರೇಸ್ಸೇ ಡ್ಯಾನ್ಸ್ ಫ್ಲೋರ್ ಆಯ್ತು, ಯುವತಿ ಸಖತ್ ಸ್ಟೆಪ್ಸ್! ವಿಡಿಯೋ ವೈರಲ್

MAUSAM

ಇದು ಭಾರತದ ಹವಾಮಾನ ಇಲಾಖೆ ಮತ್ತು ಭೂ ವಿಜ್ಞಾನ ಸಚಿವಾಲಯ ಜಂಟಿಯಾಗಿ ತಯಾರಿಸಿರುವ ಆ್ಯಪ್‌ ಇದು. ನಿಜ ಹೇಳಬೇಕೆಂದರೆ ಈ ಆ್ಯಪ್‌ ಐಎಂಡಿಯ ವೆಬ್‌ಸೈಟ್‌ ಮಾಹಿತಿಗಳಿಗಿಂತಲೂ ಹೆಚ್ಚು ನಿಖರವಾಗಿರುತ್ತವೆ. ನೀವು ಈ ಆ್ಯಪ್‌ ಬಳಸುತ್ತಿರುವ ಸ್ಮಾರ್ಟ್‌ಫೋನ್‌ ಇರುವ ಸ್ಥಳದ ರಾಡಾರ್‌ ಚಿತ್ರಗಳು, ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಈ ಆ್ಯಪ್‌ ಮುನ್ಸೂಚನೆಗಳನ್ನು ಕೊಡುತ್ತದೆ. ಮಳೆ, ಬಿರುಗಾಳಿ, ಚಂಡಮಾರುತಗಳ ಬಗ್ಗೆ ಎಚ್ಚರಿಕೆ ಕೊಡುತ್ತದೆ.

Skymet Weather(ಸ್ಕೈಮೆಟ್ ಹವಾಮಾನ)


ಭಾರತದಲ್ಲಿ ಹವಾಮಾನವನ್ನು ಊಹಿಸಲು ಇರುವ ಮತ್ತೊಂದು ಅತ್ಯಂತ ವಿಶ್ವಾಸಾರ್ಹ ಆ್ಯಪ್‌. ಭಾರತದಲ್ಲಿಯೇ ತಯಾರಾಗಿರುವ ಈ ಆ್ಯಪ್‌ ಮಳೆ ಸೇರಿದಂತೆ ಎಲ್ಲ ರೀತಿಯ ಹವಾಮಾನವನ್ನು ಊಹಿಸಬಲ್ಲದ್ದಾಗಿದೆ. ದೇಶಾದ್ಯಂತ ಇರುವ 7000ಕ್ಕೂ ಅಧಿಕ ಹವಾಮಾನ ಕೇಂದ್ರಗಳು ಮತ್ತು ಉಪ್ರಗಹಗಳ ಚಿತ್ರಣಗಳನ್ನು ಬಳಸಿಕೊಂಡು ಈ ಆ್ಯಪ್‌ ಹವಾಮಾನದ ಬಗ್ಗೆ ಮುನ್ಸೂಚನೆ ನೀಡುತ್ತದೆ. ಈಗಿನ ತಾಪಮಾನ ಹಾಗೆಯೇ ಮುಂದಿನ 14 ದಿನಗಳ ಹವಾಮಾನ ವರದಿಯನ್ನು ಇದು ನೀಡಬಲ್ಲದು.

AccuWeather


ಇದು ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ ಅತ್ಯಂತ ಜನಪ್ರಿಯ ಹವಾಮಾನ ಮುನ್ಸೂಚನೆ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ನಿಖರತೆ ವಿಚಾರದಲ್ಲಿ ಈ ಆ್ಯಪ್‌ ಬೇರೆಲ್ಲ ಆ್ಯಪ್‌ಗಳಿಗಿಂತ ಬೆಸ್ಟ್‌ ಎಂದೇ ಹೇಳಬಹುದು. ಇದು ಇತರ ಅಪ್ಲಿಕೇಶನ್‌ಗಳಿಗಿಂತ ಸ್ಥಳೀಯ ಹವಾಮಾನದ ಕುರಿತು ಹೆಚ್ಚು ವಿವರವಾದ ಮಾಹಿತಿಯನ್ನು ನೀಡುತ್ತದೆ. ಹಾಗೇ ನಿಮಿಷಕ್ಕೊಮ್ಮೆ ಅದನ್ನು ಅಪ್‌ಡೇಟ್‌ ಮಾಡುತ್ತಿರುತ್ತದೆ. ಹಾಗೆಯೇ ಮುಂದಿನ 45 ದಿನಗಳವರೆಗಿನ ವರದಿಯನ್ನು ಈ ಆ್ಯಪ್‌ ನೀಡಬಲ್ಲದು.

ದಿ ವೆದರ್‌ ಚಾನೆಲ್

ಇದು ಐಫೋನ್‌ ಬಳಕೆದಾರರಿಗೆ ಪರಿಚಯದ ಆ್ಯಪ್‌. ಐಬಿಎಂನ ಈ ಆ್ಯಪ್‌ ಐಫೋನ್‌ಗಳಿಗೆ ಅಧಿಕೃತ ಹವಾಮಾನ ವರದಿ ಪೂರೈಕೆದಾರ. ಹಾಗೆಯೇ ಬೇರೆಯವರೂ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿರುವ ಈ ಆ್ಯಪ್‌ ಹವಾಮಾನದ ಬಗ್ಗೆ ಸಂಪೂರ್ಣ ಎಚ್ಚರಿಕೆಗಳನ್ನು ನೀಡುತ್ತದೆ. ಮಿಂಚು, ಮಳೆಯ ಬಗ್ಗೆ ಎಚ್ಚರಿಸುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Elon Musk: ಜಿಮೇಲ್ ಸ್ಥಗಿತ ವದಂತಿ ಮಧ್ಯೆಯೇ ಶೀಘ್ರ ‘ಎಕ್ಸ್‌ಮೇಲ್’ ಲಾಂಚ್!

Elon Musk: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು ಶೀಘ್ರವೇ ಎಕ್ಸ್‌ಮೇಲ್ ಸೇವೆಯನ್ನು ಆರಂಭಿಸುವುದಾಗಿ ಹೇಳಿದ್ದಾರೆ. ಈ ಮಧ್ಯೆ, ಜಿಮೇಲ್‌ ಸ್ಥಗಿತದ ವದಂತಿ ಭಾರೀ ಆತಂಕಕ್ಕೆ ಕಾರಣವಾಯಿತು.

VISTARANEWS.COM


on

Amid rumor of Gmail shutdown, soon Xmail launch Says Elon Musk
Koo

ನವದೆಹಲಿ: ಚಾಟ್‌ಜಿಪಿಟಿಗೆ (ChatGPT) ಪ್ರತಿಯಾಗಿ ತನ್ನದೇ ಆದ ಎಐ ಆವೃತ್ತಿಯನ್ನು ಬಿಡುಗಡೆ ಮಾಡಿದ ನಂತರ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಎಕ್ಸ್‌ಮೇಲ್ (Xmail) ಸೇವೆ ಆರಂಭಿಸುವುದನ್ನು ಖಚಿತಪಡಿಸಿದ್ದಾರೆ. ಎಕ್ಸ್‌ಮೇಲ್, ಗೂಗಲ್‌ನ (Google) ಜನಪ್ರಿಯ ಜಿಮೇಲ್‌ಗೆ (Gmail) ಪೈಪೋಟಿ ನೀಡಲಿದೆ. ಈ ಮಧ್ಯೆ, ಗೂಗಲ್‌ ತನ್ನ ಜಿಮೇಲ್ ಸೇವೆಯನ್ನು ಸ್ಥಗಿತಗೊಳಿಸಲಿದೆ ಎಂಬ ವದಂತಿ ಕೆಲ ಕಾಲ ಆತಂಕಕ್ಕೆ ಕಾರಣವಾಯಿತು. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಗೂಗಲ್, ಜಿಮೇಲ್ ಸ್ಥಗಿತವಾಗುತ್ತಿಲ್ಲ. ಈ ಹಿಂದೆ ಎಚ್‌ಟಿಎಂಎಲ್ ಆಗಿದ್ದ ಡಿಫಾಲ್ಟ್ ಜಿಮೇಲ್ ಇಂಟರ್‌ಫೇಸ್‌ ಅನ್ನು ಮತ್ತಷ್ಟು ವರ್ಣರಂಜಿತಗೊಳಿಸಲಿದೆ. ಈ ಬದಲಾವಣೆ ಜನವರಿ 24ರಿಂದಲೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದೆ.

ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ ಸಂಭಾಷಣೆಯೊಂದರಲ್ಲಿ ಮಸ್ಕ್ ಅವರು ‘ಎಕ್ಸ್‌ಮೇಲ್’ ಎಂದು ಕರೆಯಲ್ಪಡುವ ಉತ್ಪನ್ನವು ‘ಬರುತ್ತಿದೆ’ ಎಂದು ಹೇಳಿದ್ದಾರೆ. ಗೂಗಲ್‌ ಜಿಮೇಲ್ ಸ್ಥಗಿತವಾಗಲಿದೆ ಎಂಬ ನಕಲಿ ದಾಖಲೆಯು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವಾಗಲೇ ಎಕ್ಸ್‌ಮೇಲ್ ಆರಂಭದ ಕುರಿತು ಮಸ್ಕ್ ಹೇಳಿಕೆಯು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಇಷ್ಟಾಗಿಯೂ ಎಕ್ಸ್‌ಮೇಲ್ ಆರಂಭದ ಕುರಿತು ಹೆಚ್ಚೇನೂ ಅವರು ಮಾಹಿತಿಯನ್ನು ನೀಡಿಲ್ಲ. ಈ ಸೇವೆ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಯಾವುದೇ ವಿವರವನ್ನು ನೀಡಿಲ್ಲ. ಎಕ್ಸ್‌ನ ಸೆಕ್ಯುರಿಟಿ ಇಂಜಿನಿಯರಿಂಗ್ ತಂಡದ ಹಿರಿಯ ಸದಸ್ಯರಾದ ನಾಥನ್ ಮೆಕ್‌ಗ್ರಾಡಿ ಅವರು ಎಕ್ಸ್‌ಮೇಲ್ ಲಾಂಚ್ ದಿನಾಂಕದ ಬಗ್ಗೆ ಪ್ರಶ್ನಿಸಿದ ನಂತರ ಈ ದೃಢೀಕರಣವು ಬಂದಿದೆ. ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮಸ್ಕ್, ಎಕ್ಸ್ ಮೇಲ್ ಶೀಘ್ರವೇ ಚಾಲ್ತಿಗೆ ಬರಲಿದೆ ಎಂದು ದೃಢಿಕರಿಸಿದರು.

ಜಿ ಮೇಲ್ ಸ್ಥಗಿತದ ವದಂತಿ ಹೆಚ್ಚಿಸಿದ ಆತಂಕ

ಜಿಮೇಲ್ ಅನ್ನು ಮುಚ್ಚಲಾಗುವುದು ಎಂಬ ಎಕ್ಸ್‌ ಪೋಸ್ಟ್ ಭಾರೀ ವೈರಲ್ ಆಗಿದ್ದು, ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಯಿತು. ಈ ವೈರಲ್ ಪೋಸ್ಟ್‌ನಲ್ಲಿ ‘ಗೂಗಲ್ ಈಸ್ ಸನ್‌ಸೆಟಿಂಗ್ ಜಿಮೇಲ್’ ಎಂಬ ವಿಷಯದೊಂದಿಗೆ ಗೂಗಲ್ ಇಮೇಲ್‌ನ ಸ್ಕ್ರೀನ್‌ಶಾಟ್ ಇದೆ.

ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಸಂಪರ್ಕಿಸುವ, ತಡೆರಹಿತ ಸಂವಹನವನ್ನು ಸಕ್ರಿಯಗೊಳಿಸುವ ಮತ್ತು ಲೆಕ್ಕವಿಲ್ಲದಷ್ಟು ಸಂಪರ್ಕಗಳನ್ನು ಉತ್ತೇಜಿಸುವ ವರ್ಷಗಳ ನಂತರ ಜಿಮೇಲ್ ಪ್ರಯಾಣವನ್ನು ಅಂತ್ಯಗೊಳಿಸುತ್ತಿದೆ. ಆಗಸ್ಟ್ 1, 2024 ರಿಂದ ಜಿಮೇಲ್ ಅಧಿಕೃತವಾಗಿ ಸ್ಥಗಿತವಾಗಲಿದೆ ಎಂದು ವೈರಲ್ ಆದ ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಆಗಸ್ಟ್ 1ರ ಬಳಿಕ ಇಮೇಲ್‌ಗಳನ್ನು ಕಳುಹಿಸಲು, ಸ್ವೀಕರಿಸಲು ಅಥವಾ ಸಂಗ್ರಹಿಸಲು ಬೆಂಬಲಿಸುವುದಿಲ್ಲ ಜಿಮೇಲ್ ಬೆಂಬಲಿಸುವುದಿಲ್ಲ. ಜಿಮೇಲ್ ಅನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ವಿಕಸನಗೊಳ್ಳುತ್ತಿರುವ ಡಿಜಿಟಲ್ ಲ್ಯಾಂಡ್‌ಸ್ಕೇಪ್ ಮತ್ತು ಉನ್ನತ-ಗುಣಮಟ್ಟದ, ನವೀನ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಎಚ್ಚರಿಕೆಯಿಂದ ಪರಿಗಣಿಸಿ ಮಾಡಲಾಗಿದೆ. ನಮ್ಮ ಬಳಕೆದಾರರ ಅಗತ್ಯಗಳನ್ನು ಪೂರೈಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಈ ವದಂತೆಯನ್ನು ತಳ್ಳಿ ಹಾಕಿರುವ ಗೂಗಲ್, ಜಿಮೇಲ್ ಇನ್ನಷ್ಟು ವರ್ಣ ರಂಜಿತವಾಗಿ ಬರಲಿದೆ ಎಂದು ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ Explainer: Elon Musk: ಮೆದುಳಿಗೆ ಚಿಪ್‌ ಅಳವಡಿಸಿದ ವ್ಯಕ್ತಿ ಯೋಚನೆಯ ಮೂಲಕವೇ ಮೌಸ್‌ ಅಲ್ಲಾಡಿಸಿದ! ಏನಿದು ಎಲಾನ್‌ ಮಸ್ಕ್‌ ಪ್ರಯೋಗ?

Continue Reading

ತಂತ್ರಜ್ಞಾನ

SBI Debit Card: ಎಸ್‌ಬಿಐ ಕಾರ್ಡ್‌ ಕಳೆದುಕೊಂಡಿದ್ದೀರಾ? ಕಾರ್ಡ್ ಬ್ಲಾಕ್ ಮಾಡಲು ಹೀಗೆ ಮಾಡಿ…

SBI Debit Card: ಎಸ್‌ಬಿಐ ಡೆಬಿಟ್ ಕಾರ್ಡ್ ಅತ್ಯಂತ ಉಪಯುಕ್ತ ಸಾಧನವಾಗಿದೆ. ಈ ಕಾರ್ಡ್‌ ಕಳೆದು ಹೋದರೆ, ನೀವು ಮಾಡಬೇಕಾದ ಮೊದಲ ಕೆಲಸ, ಅದನ್ನು ಬ್ಲಾಕ್ ಮಾಡುವುದು ಎಂಬುದು ತಿಳಿಯಿರಿ.

VISTARANEWS.COM


on

How to block SBI Debit card? Fallow these steps
Koo

ನವದೆಹಲಿ: ಡೆಬಿಟ್ ಕಾರ್ಡ್(Debit Card). ಇದು ಆಧುನಿಕ ಜಗತ್ತಿನ ಅಚ್ಚರಿ. ನಿಮ್ಮ ಖಾತೆಯೊಂದಿಗೆ ಕನೆಕ್ಟ್ ಆಗಿರುವ ಈ ಕಾರ್ಡ್ ಮೂಲಕ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ಡೆಬಿಟ್ ಕಾರ್ಡ್‌ಗಳು ಪಾವತಿ ಕಾರ್ಡ್‌ಗಳಾಗಿ (Payments) ಕಾರ್ಯನಿರ್ವಹಿಸುತ್ತವೆ, ವ್ಯಕ್ತಿಗಳು ತಮ್ಮ ಬ್ಯಾಂಕ್ ಖಾತೆಗಳಿಂದ ನೇರವಾಗಿ ಖರೀದಿಗಳನ್ನು ಮಾಡಲು ಮತ್ತು ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಆ ಕಾರ್ಡ್‌ಗಳ ದುರ್ಬಳಕೆಯನ್ನು ತಪ್ಪಿಸಲು ಪಿಐಎನ್ ಆಧಾರಿತ ದೃಢೀಕರಣ (PIN-based authentication) ವ್ಯವಸ್ಥೆ ಇರುತ್ತದೆ. ಆದರೆ, ಕೆಲವೊಮ್ಮೆ ನಾವು ಈ ಕಾರ್ಡ್ ಕಳೆದುಕೊಳ್ಳಬಹುದು. ಎಲ್ಲೋ ಇಟ್ಟು ಮರೆಯಬಹುದು. ಅಂಥ ಸಂದರ್ಭದಲ್ಲಿ ಕಾರ್ಡ್‌ ದುರ್ಬಳಕೆಯನ್ನು ತಪ್ಪಿಸಲು ಹಲವು ಮಾರ್ಗಗಳಿವೆ. ಕಾರ್ಡ್ ನಿಷ್ಕ್ರಿಯಗೊಳಿಸಲು ತಕ್ಷಣವೇ ಬ್ಯಾಂಕ್‌ಗೆ ಸೂಚಿಸಬೇಕಾಗುತ್ತದೆ. ಬ್ಯಾಂಕಿನ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ಈ ಕೆಲಸವನ್ನು ಮಾಡಬಹುದು. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಡ್ (SBI Debit Card) ಅನ್ನು ಕಳೆದುಕೊಂಡಿದ್ದರೆ, ನೆಟ್ ಬ್ಯಾಂಕಿಂಗ್ ಅಥವಾ ಎಸ್ಸೆಮ್ಮೆಸ್ ಸೇವೆಯನ್ನು ನಿಷ್ಕ್ರಿಯಗೊಳಿಸುವಿಕೆಯನ್ನು (SBI Card Deactivation) ಪ್ರಾರಂಭಿಸಲು ಮತ್ತು ಕಾರ್ಡ್ ಅನ್ನು ನಿರ್ಬಂಧಿಸಲು ಬಳಸಿಕೊಳ್ಳಬಹುದು.

ಎಸ್‌ಬಿಐ ಕಾರ್ಡ್ ನಿಷ್ಕ್ರಿಯಗೊಳಿಸಲು ಇರುವ ಅತ್ಯಂತ ಸುಲಭದ ಮಾರ್ಗ ಎಂದರೆ, ಎಸ್‌ಬಿಐನ 1800 11 2211 ಅಥವಾ 1800 425 3800 ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ ಕಾರ್ಡ್ ಬ್ಲಾಕ್ ಮಾಡಿಸಬಹುದು. ಇದಲ್ಲದೇ ಇನ್ನು ಕೆಲವು ಮಾರ್ಗಗಳ ಮೂಲಕ ಕಾರ್ಡ್ ಬ್ಲಾಕ್ ಮಾಡಿಸಬಹುದು. ತಿಳಿದುಕೊಳ್ಳೋಣ ಬನ್ನಿ.

ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ…..

ಎಸ್‌ಬಿಐ ಅಧಿಕೃತ onlinesbi.com ವೆಬ್‌ಸೈಟ್‌ಗೆ ಭೇಟಿ ನೀಡಿ. ಮುಖಪುಟದಲ್ಲಿರುವ ಇ-ಸರ್ವೀಸ್ ಸೆಕ್ಷನ್‌ಗೆ ಹೋಗಿ, ಎಟಿಎಂ ಕಾರ್ಡ್ ಸರ್ವಿಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಬಳಿಕ ಬ್ಲಾಕ್ ಎಟಿಎಂ ಕಾರ್ಡ್ ಆಪ್ಷನ್ ಆಯ್ಕೆ ಮಾಡಿಕೊಳ್ಳಿ. ನೀವು ನಿರ್ಬಂಧಿಸಲು ಬಯಸುವ ಎಟಿಎಂ ಕಮ್ ಡೆಬಿಟ್ ಕಾರ್ಡ್‌ಗೆ ಲಿಂಕ್ ಮಾಡಲಾದ ಖಾತೆಯನ್ನು ಆಯ್ಕೆಮಾಡಿ.

ಆಗ ನಿರ್ಬಂಧಿಸಲಾದ ಮತ್ತು ಸಕ್ರಿಯವಾಗಿರುವ ಎಲ್ಲಾ ಕಾರ್ಡ್‌ಗಳ ಪಟ್ಟಿಯನ್ನು ನೀವು ನೋಡಲು ಸಾಧ್ಯವಾಗುತ್ತದೆ. ಪಟ್ಟಿಯು ಡೆಬಿಟ್ ಕಾರ್ಡ್‌ನ ಮೊದಲ ಮತ್ತು ಕೊನೆಯ ನಾಲ್ಕು ಅಂಕಿಗಳನ್ನು ತೋರಿಸುತ್ತದೆ. ನೀವು ಬ್ಲಾಕ್ ಮಾಡಬೇಕೆನ್ನುವ ಕಾರ್ಡ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಅದಕ್ಕೆ ಕಾರಣವನ್ನು ನಮೂದಿಸಿ, ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಅಧಿಕೃತ ಒಪ್ಪಿಗೆಯನ್ನು ನೀಡುವ ಮೊದಲು ಅಗತ್ಯವಿರುವ ಎಲ್ಲ ಮಾಹಿತಿಯನ್ನು ದೃಢಿಕರಿಸಿಕೊಳ್ಳಬೇಕಾಗುತ್ತದೆ.

ಬಳಿಕ ರಿಕ್ವೆಸ್ಟ್ ಮೋಡ್ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಒಟಿಪಿ ನಂಬರ್‌ ಅಥವಾ ಪ್ರೊಫೈಲ್ ಪಾಸ್ವರ್ಡ್ ಬಳಸಿಕೊಳ್ಳಬೇಕು. ಈ ಎರಡರಲ್ಲಿ ಯಾವುದಾದರೂ ಒಂದನ್ನು ಬಳಸಿಕೊಂಡು, ಕನ್ಫರ್ಮ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ಎಸ್‌ಬಿಐ ಕಾರ್ಡ್ ಬ್ಲಾಕ್ ಆದರೆ ಖಾತೆದಾರರಿಗೆ ಟಿಕೆಟ್ ನಂಬರ್ ಅನ್ನು ಎಸ್ಸೆಮ್ಮೆಸ್ ಮೂಲಕ ದೊರೆಯುತ್ತದೆ.

ಎಸ್ಸೆಮ್ಮೆಸ್ ಮೂಲಕ ಎಸ್‌ಬಿಐ ಡೆಬಿಟ್ ಕಾರ್ಡ್ ಬ್ಲಾಕ್ ಮಾಡುವುದು……..

ಎಸ್ಸೆಮ್ಮೆಸ್‌ ರೈಟಿಂಗ್ ಸ್ಪೇಸ್ ತೆರೆಯಿರಿ. BLOCK XXXX(XXXX ಜಾಗದಲ್ಲಿ ನಿಮ್ಮ ಡೆಬಿಟ್ ಕಾರ್ಡ್‌ನ ಕೊನೆಯ ನಾಲ್ಕು ಡಿಜಿಟ್) ನಮೂದಿಸಬೇಕಾಗುತ್ತದೆ ಮತ್ತು ಆ ಸಂದೇಶವನ್ನು 567676 ನಂಬರ್‌ಗೆ ಕಳುಹಿಸಿ.

ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಬಳಸಿ ಮಾತ್ರ ಈ ಸೇವೆಯನ್ನು ಪಡೆಯಬಹುದು. ಬ್ಯಾಂಕ್ ಎಸ್ಸೆಮ್ಮೆಸ್ ಸ್ವೀಕರಿಸಿದ ನಂತರ, ನೀವು ದೃಢೀಕರಣವನ್ನು ಸ್ವೀಕರಿಸುತ್ತೀರಿ. ಎಸ್ಸೆಮ್ಮೆಸ್ ಅಧಿಸೂಚನೆಯು ನಿಮ್ಮ ಟಿಕೆಟ್ ಸಂಖ್ಯೆ, ನಿರ್ಬಂಧಿಸುವ ಸಮಯ ಮತ್ತು ನಿರ್ಬಂಧಿಸುವ ದಿನಾಂಕವನ್ನು ನಮೂದಿಸುತ್ತದೆ.

ಎಲ್ಲಕ್ಕಿಂತ ಹೆಚ್ಚು ಉಪಯುಕ್ತ ಸಲಹೆ ಎಂದರೆ, ನಿಮ್ಮ ಎಸ್‌ಬಿಐ ಡೆಬಿಟ್ ಕಾರ್ಡ್ ಅಥವಾ ಇನ್ನಾವುದೇ ಬ್ಯಾಂಕಿನ ಡೆಬಿಟ್ ಕಾರ್ಡ್ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು. ಅಲ್ಲದೇ, ಪಿನ್‌ ನಂಬರ್ ಯಾರೊಂದಿಗೂ ಹಂಚಿಕೊಳ್ಳಬಾರದು. ಇದರಿಂದ ನಿಮ್ಮ ಖಾತೆ ಸುರಕ್ಷಿತವಾಗಿರುತ್ತದೆ.

ಈ ಸುದ್ದಿಯನ್ನೂ ಓದಿ: Cyber Crime: 700 ಕೋಟಿ ರೂ. ಸೈಬರ್ ವಂಚನೆ ಜಾಲ ಭೇದಿಸಿದ ಹೈದ್ರಾಬಾದ್ ಪೊಲೀಸ್, ಉಗ್ರರಿಗೆ ದುಡ್ಡು ರವಾನೆ!

Continue Reading

ದೇಶ

PhonePay: ಫೋನ್‌ಪೇ ಸ್ವದೇಶಿ ಆ್ಯಪ್‌ಸ್ಟೋರ್ ‘ಇಂಡಸ್’ ಲಾಂಚ್; ಗೂಗಲ್‌ ಪ್ಲೇ ಸ್ಟೋರ್‌ಗೆ ಪಂಚ್!

PhonePay: ನಾಲ್ಕು ತಿಂಗಳ ಹಿಂದೆಯಷ್ಟೇ ಫೋನ್‌ಪೇ ಆ್ಯಪ್‌ ಡೆವಲಪರ್ಸ್‌ಗೆ ತಮ್ಮ ಆ್ಯಪ್‌ ಪಬ್ಲಿಷ್ ಮಾಡಲು ಫೋನ್‌ಪೇ ಆಹ್ವಾನ ನೀಡಿತ್ತು. ಇದೀಗ ಇಂಡಸ್ ಪ್ಲೇ ಸ್ಟೋರ್ ಲಾಂಚ್ ಮಾಡಿದೆ.

VISTARANEWS.COM


on

Indus App Store launched by Walmart-owned PhonePe
Koo

ನವದೆಹಲಿ: ವಾಲ್‌ಮಾರ್ಟ್ (Walmart) ಒಡೆತನದ ಫೋನ್‌ಪೇ (PhonePay) ಸ್ವದೇಶಿ ಆಂಡ್ರಾಯ್ಡ್ ಅಪ್ಲಿಕೇಷನ್ ಸ್ಟೋರ್, ಭಾರೀ ನಿರೀಕ್ಷೆಯ ‘ಇಂಡಸ್’ ಆ್ಯಪ್ ಸ್ಟೋರ್‌‌ಗೆ (Indus Appstore) ಬುಧವಾರ ಚಾಲನೆ ನೀಡಲಾಗಿದೆ. ಜಗತ್ತಿನಲ್ಲೇ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಉಪಭೋಗಿ ರಾಷ್ಟ್ರವಾಗಿರುವ ಭಾರತವು ತನ್ನದೇ ಆದ ಸ್ವದೇಶಿ ಆ್ಯಪ್‌ ಸ್ಟೋರ್ ಮೂಲಕ ಗೂಗಲ್‌ನ ಪ್ಲೇ ಸ್ಟೋರ್‌ಗೆ (Google Play Store) ಪೈಪೋಟಿ ನೀಡಲು ಸಜ್ಜಾಗಿದೆ.

ಡಿಜಿಟಲ್ ಪೇಮೆಂಟ್ಸ್ ಕಂಪನಿಯಾಗಿರುವ ಫೋನ್‌ಪೇ ನಾಲ್ಕು ತಿಂಗಳ ಹಿಂದೆ ಆಂಡ್ರಾಯ್ಡ್ ಡೆವಲಪರ್ಸ್‌‌ಗೆ ಬಾಗಿಲು ತೆರೆದಿತ್ತು. ತಮ್ಮ ವೇದಿಕೆಯಲ್ಲಿ ಆ್ಯಪ್‌ಗಳನ್ನು ಪಬ್ಲಿಷ್ ಮಾಡಲು ಆಹ್ವಾನಿಸಿತ್ತು. ಇದಾದ ನಾಲ್ಕು ತಿಂಗಳ ಬಳಿಕ ಇಂಡಸ್ ಆ್ಯಪ್ ಸ್ಟೋರ್‌ಗೆ ಚಾಲನೆ ನೀಡಿದೆ.

ಫೋನ್‌ಪೇ ತನ್ನ ಇಂಡಸ್ ಆ್ಯಪ್‌ ಸ್ಟೋರ್ ಮೂಲಕ ಭಾರತದಲ್ಲಿ ಭಾರೀ ವೇಗದಲ್ಲಿ ಬೆಳವಣಿಗೆ ಕಾಣುತ್ತಿರುವ ಆ್ಯಪ್ ಆರ್ಥಿಕತೆಯನ್ನು ತನ್ನ ಕಡೆಗೆ ವಾಲಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ಆ್ಯಪ್ ಇಂಟೆಲಿಜೆನ್ಸ್ ಸಂಸ್ಥೆಯ data.ai ಪ್ರಕಾರ, 2021ರಲ್ಲಿ 954 ಶತಕೋಟಿ ಗಂಟೆಗಳಿಂದ 2023 ರಲ್ಲಿ ಭಾರತೀಯರು ಸುಮಾರು 1.19 ಟ್ರಿಲಿಯನ್ ಗಂಟೆಗಳನ್ನು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಕಳೆದಿದ್ದಾರೆ. ಅಪ್ಲಿಕೇಶನ್ ಡೌನ್‌ಲೋಡ್‌ಗಳ ವಿಷಯದಲ್ಲಿ ದೇಶವು ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿದೆ.

ಮೊದಲಿನ ಪ್ಲೇ ಸ್ಟೋರ್‌ ನೀತಿಗಳು ಮತ್ತು ಶುಲ್ಕಗಳ ಕುರಿತು ಗೂಗಲ್ ಮತ್ತು ದೇಶದ ಕೆಲವು ಉನ್ನತ ಸ್ಟಾರ್ಟ್‌ಅಪ್‌ಗಳು ಮತ್ತು ಇಂಟರ್ನೆಟ್ ಸಂಸ್ಥೆಗಳ ನಡುವೆ ನಡೆಯುತ್ತಿರುವ ಬಿಕ್ಕಟ್ಟಿನ ನಡುವೆಯೇ ಈ ಸ್ವದೇಶಿ ಇಂಡಸ್‌ ಆ್ಯಪ್ ಸ್ಟೋರ್‌‌ಗೆ ಚಾಲನೆಯಾಗಿದೆ.

ಇಂಡಸ್ ಆ್ಯಪ್ ಸ್ಟೋರ್ ಸದ್ಯಕ್ಕೆ ಪ್ರಸ್ತುತ ಕಂಪನಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ, ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇಮೇಲ್ ಖಾತೆಗಳಿಲ್ಲದೆ ಗ್ರಾಹಕರನ್ನು ಆಕರ್ಷಿಸಲು ಇದು ಮೊಬೈಲ್ ಸಂಖ್ಯೆ ಆಧಾರಿತ ಲಾಗಿನ್ ವ್ಯವಸ್ಥೆಯನ್ನು ಸಹ ನೀಡುತ್ತದೆ.

ಫೋನ್‌ಪೇ ನವೆಂಬರ್ 2023ರ ಹೊತ್ತಿಗೆ ಅಪ್ಲಿಕೇಶನ್ ಸ್ಟೋರ್ ಅನ್ನು ತಮ್ಮ ಸಾಧನಗಳಲ್ಲಿ ಸಂಯೋಜಿಸಲು ನೋಕಿಯಾ ಮತ್ತು ಲಾವಾನಂಥ ಒಇಒಗಳೊಂದಿಗೆ (ಮೂಲ ಉಪಕರಣ ತಯಾರಕರು) ಪಾಲುದಾರಿಕೆಯನ್ನು ಹೊಂದಿದೆ. ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಲಿಕೇಶನ್‌ಗಳನ್ನು ಸೈಡ್‌ಲೋಡ್ ಮಾಡುವಲ್ಲಿ ತೊಡಗಿರುವ ಘರ್ಷಣೆಯಿಂದಾಗಿ ಗ್ರಾಹಕರಲ್ಲಿ ಅಳವಡಿಕೆಯನ್ನು ಹೆಚ್ಚಿಸಲು ಇಂಡಸ್ ಆಪ್ ಸ್ಟೋರ್‌ಗೆ ಹೆಚ್ಚಿನ ಒಇಎಂಗಳೊಂದಿಗಿನ ಸ್ಟ್ರೈಕಿಂಗ್ ಪಾಲುದಾರಿಕೆಗಳು ಪ್ರಮುಖವಾಗಿವೆ.

ಈ ಸುದ್ದಿಯನ್ನೂ ಓದಿ: Google Search: ಗೂಗಲ್‌ ಸರ್ಚ್:‌ 25 ವರ್ಷಗಳಲ್ಲಿ ಜನ ಹುಡುಕಿದ್ದೇನು?

Continue Reading

ದೇಶ

WhatsApp New Feature: ವಾಟ್ಸಾಪ್‌ ವೆಬ್‌ನಲ್ಲೂ ಚಾಟ್‌ ಲಾಕ್‌ಗೆ ಸೀಕ್ರೆಟ್ ಕೋಡ್!

WhatsApp New Feature: ಡೆಸ್ಕ್ ಟಾಪ್‍‌ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಾಟ್ಸಾಪ್‌ ಮತ್ತೊಂದು ಫೀಚರ್ ಜಾರಿ ಮಾಡುತ್ತಿದೆ.

VISTARANEWS.COM


on

Secret code for WhatsApp chat lock on desktops
Koo

ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್(WhatsApp), ತನ್ನ ಚಾಟ್ ಲಾಕ್‌ ಫೀಚರ್ ಅನ್ನು ಮತ್ತಷ್ಟು ಸುಧಾರಿಸುವ ಪ್ರಯತ್ನವನ್ನು ಮಾಡುತ್ತಿದೆ(WhatsApp New Feature). ಕೆಲವು ವರದಿಗಳ ಪ್ರಕಾರ, ಇದರ ವೆಬ್‌ ವರ್ಷನ್ ಅಭಿವೃದ್ಧಿಪಡಿಸುತ್ತಿದೆ. ಬಳಕೆದಾರರು ಈಗಾಗಲೇ, ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಲ್ಲಿ ನಿರ್ದಿಷ್ಟ ಚಾಟ್‌ಗಳನ್ನು ಸೀಕ್ರೆಟ್ ಕೋಡ್‌ಗಳ ಮೂಲಕ (Secret Code) ಲಾಕ್ ಮಾಡಬಹುದು(Chat Lock). ಅವುಗಳನ್ನು ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರ ಗೌಪ್ಯತೆಯನ್ನು ಸುಧಾರಿಸುವ ವೈಶಿಷ್ಟ್ಯವಾಗಿದೆ. ಫೀಚರ್ ಟ್ರ್ಯಾಕರ್ ಹಂಚಿಕೊಂಡ ವಿವರಗಳ ಪ್ರಕಾರ, ಸೇವೆಯು ಅದೇ ಕಾರ್ಯವನ್ನು ವಾಟ್ಸಾಪ್ ವೆಬ್ ಬಳಕೆದಾರರಿಗೆ ತರುವ ನಿರೀಕ್ಷೆಯಿದೆ.

WABetaInfo ಈ ಹೊಸ ಟ್ರಾಕರ್‌ ಅನ್ನು ಗುರುತಿಸಿದೆ. ಲಾಕ್ ಮಾಡಿದ ಚಾಟ್‌ಗಳ ಕಾರ್ಯಕ್ಕಾಗಿ ಇತ್ತೀಚೆಗೆ ಬಿಡುಗಡೆಯಾದ ರಹಸ್ಯ ಕೋಡ್‌ಗಳು ಶೀಘ್ರದಲ್ಲೇ ವೆಬ್ ಕ್ಲೈಂಟ್‌ಗೆ ದಾರಿ ಮಾಡಿಕೊಡುತ್ತವೆ. ಈ ವೈಶಿಷ್ಟ್ಯವು ವಾಟ್ಸಾಪ್ ಬಳಕೆದಾರರ ಗೌಪ್ಯತೆಯನ್ನು ಸುಧಾರಿಸುವ ನಿರೀಕ್ಷೆಯಿದೆ ಮತ್ತು ಪ್ರಸ್ತುತ ಅಭಿವೃದ್ಧಿಯಲ್ಲಿದೆ. ಅಂದರೆ ಬೀಟಾ ಪರೀಕ್ಷಕರು ಸಹ ಇತ್ತೀಚಿನ ಆವೃತ್ತಿಯಲ್ಲಿ ಇದನ್ನು ಪ್ರಯತ್ನಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಈ ವೈಶಿಷ್ಟ್ಯವು ಆಂಡ್ರಾಯ್ಡ್ ಮತ್ತು ಐಒಎಸ್‌ಗಾಗಿ ವಾಟ್ಸಾಪ್‌ನಲ್ಲಿ ಲಭ್ಯವಿರುವ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಬಳಕೆದಾರರು ರಹಸ್ಯ ಕೋಡ್‌ನ ಹಿಂದೆ ಚಾಟ್‌ಗಳ ಮುಖ್ಯ ಪಟ್ಟಿಯಿಂದ ಕೆಲವು ಚಾಟ್‌ಗಳನ್ನು ಲಾಕ್ ಮಾಡಲು ಮತ್ತು ಮರೆಮಾಡಲು ಅನುಮತಿಸುತ್ತದೆ. ಈ ಕೋಡ್ ಎಮೋಜಿ ಮತ್ತು ವಿಶೇಷ ಅಕ್ಷರಗಳನ್ನು ಒಳಗೊಂಡಂತೆ ಒಂದು ಪದ ಅಥವಾ ಪದಗುಚ್ಛವಾಗಿರಬಹುದು. ಲಾಕ್ ಮಾಡಿದ ಮತ್ತು ಮರೆಮಾಡಿದ ಚಾಟ್‌ಗಳ ಪಟ್ಟಿಯನ್ನು ತೋರಿಸಲು ಬಳಕೆದಾರರು ನಂತರ ಅದೇ ರಹಸ್ಯ ಕೋಡ್ ಅನ್ನು ನಮೂದಿಸಬೇಕಾಗುತ್ತದೆ.

ಈ ಫೀಚರ್‌ ಬಳಸಕೊಂಡು ವಾಟ್ಸಾಪ್ ಬಳಕೆದಾರರು, ಒಬ್ಬರಕ್ಕಿಂತ ಹೆಚ್ಚು ಬಳಕೆದಾರರು ಬಳಸುವ ಡೆಸ್ಕ್ ಟಾಪ್ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಲ್ಲಿ ತಮ್ಮ ಚಾಟ್‌ಗಳನ್ನು ಲಾಕ್ ಮಾಡಿಕೊಳ್ಳಬಹುದು. ಕಳೆದ ನವೆಂಬರ್ ತಿಂಗಳಲ್ಲಿ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಜಾರಿ ಮಾಡಲಾದ ರೀತಿಯಲ್ಲೇ ಸೀಕ್ರೆಟ್ ಕೋಡ್‌ಗಳನ್ನು ಸರಿಯಾದ ರೀತಿಯಲ್ಲಿ ನಮೂದಿಸಿದ ಬಳಿಕವಷ್ಟೇ ಗೋಚರಿಸುತ್ತವೆ.

ವಾಟ್ಸಾಪ್‌ನ ಮೊಬೈಲ್ ಆವೃತ್ತಿಗಳಲ್ಲಿ, ರಹಸ್ಯ ಕೋಡ್ ಬಹಿರಂಗಗೊಂಡ ನಂತರ ಬಳಕೆದಾರರು ಲಾಕ್ ಮಾಡಿದ ಚಾಟ್‌ಗಳನ್ನು ನೋಡುತ್ತಾರೆ. ಆ್ಯಪ್ ಅನ್ನು ಪುನಃ ತೆರೆಯುವುದರಿಂದ ಚಾಟ್‌ಗಳನ್ನು ಮತ್ತೊಮ್ಮೆ ಮರೆಮಾಡಲಾಗುತ್ತದೆ, ರಹಸ್ಯ ಕೋಡ್ ಅನ್ನು ಮತ್ತೊಮ್ಮೆ ನಮೂದಿಸಬೇಕಾಗುತ್ತದೆ. ಬಳಕೆದಾರರು ರಹಸ್ಯ ಕೋಡ್ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಬಹುದು ಮತ್ತು ಬಯೋಮೆಟ್ರಿಕ್ ದೃಢೀಕರಣದ ಅಗತ್ಯವಿರುವ ಹಳೆಯ ಚಾಟ್ ಲಾಕ್ ಕಾರ್ಯವನ್ನು ಹಿಂತಿರುಗಿಸಬಹುದು.

ಈ ಸುದ್ದಿಯನ್ನೂ ಓದಿ: WhatsApp: 71 ಲಕ್ಷ ಭಾರತೀಯ ಖಾತೆಗಳನ್ನು ಡಿಲಿಟ್ ಮಾಡಿದ ವಾಟ್ಸಾಪ್!

Continue Reading
Advertisement
Tata Ace vehicle overturned Two persons dead five seriously injured
ಕರ್ನಾಟಕ8 mins ago

Road Accident: ಟಾಟಾ ಏಸ್ ವಾಹನ ಪಲ್ಟಿ; ಇಬ್ಬರ ಸಾವು, ಐವರಿಗೆ ಗಂಭೀರ ಗಾಯ

Xiaomi Car in China
ಪ್ರಮುಖ ಸುದ್ದಿ47 mins ago

Xiaomi Car: ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಗೆ ಇಳಿಸಿದ ಮೊಬೈಲ್ ಕಂಪನಿ ರೆಡ್​ಮಿ

viral video
ವೈರಲ್ ನ್ಯೂಸ್57 mins ago

Viral Video: ಶಾಲೆಗೆ ಕುಡಿದು ಬಂದ ಶಿಕ್ಷಕನಿಗೆ ʼಪಾಠʼ ಕಲಿಸಿದ ವಿದ್ಯಾರ್ಥಿಗಳು; ಹೇಗೆಂದು ನೀವೇ ನೋಡಿ

BJP State Vice President Malavika Avinash latest statement
ಬೆಂಗಳೂರು1 hour ago

Bengaluru News: ಭಯೋತ್ಪಾದನೆ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಮಾಳವಿಕಾ ಅವಿನಾಶ್ ಟೀಕೆ

Lok Sabha Election 2024 Prajwal Revanna gets Rs 40 crore worth asset
Lok Sabha Election 20241 hour ago

Lok Sabha Election 2024: ಪ್ರಜ್ವಲ್‌ ರೇವಣ್ಣ 40 ಕೋಟಿ ರೂ. ಒಡೆಯ; ಇದೆ ಕೆಜಿಗಟ್ಟಲೆ ಚಿನ್ನ!

Uttara Kannada Lok Sabha constituency Congress candidate Dr Anjali Nimbalkar latest statement
ಉತ್ತರ ಕನ್ನಡ1 hour ago

Uttara Kannada News: ಚುನಾವಣೆಯನ್ನು ಸುಲಭವಾಗಿ ಪರಿಗಣಿಸದಿರಿ: ನಿಂಬಾಳ್ಕರ್

Rameswaram cafe bomb blast case
ಬೆಂಗಳೂರು2 hours ago

Rameswaram cafe: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್; ಮುಖ್ಯ ಸಂಚುಕೋರ NIA ಬಲೆಗೆ

Rajasthan Royals
ಪ್ರಮುಖ ಸುದ್ದಿ2 hours ago

IPL 2024 : ಬದಲಿ ಆಟಗಾರರನ್ನು ಘೋಷಿಸಿದ ರಾಜಸ್ಥಾನ್​ ರಾಯಲ್ಸ್​, ಕೆಕೆಆರ್​​

SBI Debit Cards
ವಾಣಿಜ್ಯ2 hours ago

SBI Debit Cards: ಎಸ್‌ಬಿಐ ಡೆಬಿಟ್‌ ಕಾರ್ಡ್‌ದಾರರಿಗೆ ಬ್ಯಾಡ್‌ ನ್ಯೂಸ್‌; ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

Rishabh Pant -IPL 2024
ಕ್ರೀಡೆ2 hours ago

Rishabh Pant : ಡೆಲ್ಲಿ ಪರ 100ನೇ ಪಂದ್ಯವಾಡಿದ ರಿಷಭ್ ಪಂತ್​!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20248 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 202410 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ17 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌