Site icon Vistara News

Subsidy on E-Vehicle : ಎಲೆಕ್ಟ್ರಿಕ್‌ ವಾಹನಗಳಿಗೆ ಸಿಗಲಿದೆ 2.5 ಲಕ್ಷ ರೂ. ತನಕ ಸಬ್ಸಿಡಿ, ಇಲ್ಲಿದೆ ಡಿಟೇಲ್ಸ್

electric car charging

#image_title

ನವ ದೆಹಲಿ: ಕೇಂದ್ರ ಸರ್ಕಾರ ಎಲೆಕ್ಟ್ರಿಕ್‌ ವಾಹನಗಳಿಗೆ 2.5 ಲಕ್ಷ ರೂ. ತನಕ ಸಬ್ಸಿಡಿ ಘೋಷಿಸಲು ಸಿದ್ಧತೆ ನಡೆಸಿದೆ. ಈ ಸಬ್ಸಿಡಿಗಳು ಕಾರು, ಇ-ಬಸ್‌ ಮತ್ತು ಇ-ಬೈಕ್‌ಗಳಿಗೆ ಸಿಗಲಿದೆ. (Subsidy on E-Vehicle) ಹಸಿರು ಇಂಧನ ಉಪಕ್ರಮದ ಭಾಗವಾಗಿ ಈ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಪೆಟ್ರೋಲ್-ಡೀಸೆಲ್‌ ಮೇಲಿನ ಅವಲಂಬನೆ ಇದರಿಂದ ತಗ್ಗಲಿದೆ. ಜತೆಗೆ ಅತ್ಯಂತ ಪರಿಸರಸ್ನೇಹಿ ಉಪಕ್ರಮ ಇದಾಗಿದೆ. ಸರ್ಕಾರ ಇದಕ್ಕೆ ಭಾರಿ ಉತ್ತೇಜನ ನೀಡುತ್ತಿದೆ.

ಎಲೆಕ್ಟ್ರಿಕ್‌ ದ್ವಿಚಕ್ರವಾಹನ, ಎಲೆಕ್ಟ್ರಿಕ್‌ ತ್ರಿ ಚಕ್ರ ವಾಹನ, ಎಲೆಕ್ಟ್ರಿಕ್‌ ಬಸ್‌ಗಳಿಗೆ ಈ ಸಬ್ಸಿಡಿ ನೆರವು ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಪರಿಸರ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಇದು ಮಹತ್ವದ ನಡೆಯಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್‌ ವಾಹನಗಳನ್ನು ತ್ವರಿತವಾಗಿ ಬಳಸುವ ಯೋಜನೆಯ ಭಾಗವಾಗಿ (Fast adoption and manufacturing of (Hybrid and Electric Vehicles-FAME-2) ಈ ಪ್ರಸ್ತಾಪವನ್ನು ಒಳಗೊಳ್ಳಲಿದೆ. ಈ ಯೋಜನೆಯ ಅಡಿಯಲ್ಲಿ ಕೇಂದ್ರವು ನಾನಾ ರಾಜ್ಯಗಳಿಗೆ ಸಬ್ಸಿಡಿಯನ್ನು ವಿತರಿಸಲಿದೆ. ಕೆಲ ರಾಜ್ಯಗಳು ತಾವಾಗಿಯೇ ನೀಡಲಿವೆ.

ಉದಾಹರಣೆಗೆ ಮಹಾರಾಷ್ಟ್ರ ಸರ್ಕಾರ ಇ-ವಾಹನಗಳಿಗೆ ಪ್ರತಿ ಕಿಲೊವ್ಯಾಟ್‌ಗೆ 5,000 ರೂ. ಸಬ್ಸಿಡಿ ನೀಡಲಿದೆ. ರಾಜ್ಯ ಸರ್ಕಾರ ತನ್ನ ಇ-ವಾಹನ ನೀತಿಯ ಅಡಿಯಲ್ಲಿ (electric vehicle policy) ನಾಲ್ಕು ಚಕ್ರಗಳ ವಾಹನ ಖರೀದಿಸುವ ಮೊದಲ 10,000 ಖರೀದಿದಾರರಿಗೆ 1.5 ಲಕ್ಷ ರೂ. ತನಕ ಸಬ್ಸಿಡಿ ಸಿಗಲಿದೆ. ಇದರಿಂದ 2.5 ಲಕ್ಷ ರೂ. ತನಕ ಸಬ್ಸಿಡಿ ಸಿಗಲಿದೆ.

ದಿಲ್ಲಿ ಸರ್ಕಾರ ಇ-ವಾಹನಗಳಿಗೆ (e-vehicle) 1.5 ಲಕ್ಷ ರೂ. ಸಬ್ಸಿಡಿ ನೀಡುತ್ತದೆ. ಮೊದಲ 1,000 ಖರೀದಿದಾರರಿಗೆ ಇದು ದೊರೆಯಲಿದೆ. ಉತ್ತರಪ್ರದೇಶದಲ್ಲಿ ಅಲ್ಲಿನ ಸರ್ಕಾರ ಮೊದಲ 25,000 ಎಲೆಕ್ಟ್ರಿಕ್‌ ವಾಹನ ಖರೀದಿದಾರರಿಗೆ 1 ಲಕ್ಷ ರೂ. ತನಕ ಸಬ್ಸಿಡಿ ನೀಡಲಿದೆ. ಕೇಂದ್ರದ ಸಬ್ಸಿಡಿಯೂ ಸೇರಿದರೆ 2 ಲಕ್ಷ ರೂ. ತನಕ ಸಬ್ಸಿಡಿ ದೊರೆಯಲಿದೆ. ಗುಜರಾತ್‌ ಸರ್ಕಾರ ಎಲೆಕ್ಟ್ರಿಕ್‌ ಕಾರಿಗೆ 1.5 ಲಕ್ಷ ರೂ. ತನಕ ಸಬ್ಸಿಡಿ ನೀಡುತ್ತದೆ. ಮೊದಲ 10,000 ಎಲೆಕ್ಟ್ರಿಕ್‌ ವಾಹನಗಳಿಗೆ ಇದು ಸಿಗಲಿದೆ. ಉತ್ತರಾಖಂಡ್‌ ಸರ್ಕಾರ 1.5 ಲಕ್ಷ ರೂ. ತನಕ ಸಬ್ಸಿಡಿ ನೀಡಲಿದೆ. ಕೇಂದ್ರದ ನೆರವು ಸೇರಿದಾಗ 2.5 ಲಕ್ಷ ರೂ. ಡಿಸ್ಕೌಂಟ್‌ನಲ್ಲಿ ಸಿಗಲಿದೆ.

ಓಲಾದಿಂದ ಕಾರ್ಖಾನೆ ಸ್ಥಾಪನೆ: ತಮಿಳುನಾಡಿನಲ್ಲಿ ಬೃಹತ್ ಎಲೆಕ್ಟ್ರಿಕ್‌ ವಾಹನ ಕಾರ್ಖಾನೆ ಸ್ಥಾಪಿಸಲು ಓಲಾ ಎಲೆಕ್ಟ್ರಿಕ್ಸ್ (Ola Electric) 1,500 ಎಕರೆ ಭೂಮಿಯನ್ನು ಖರೀದಿಸಿದೆ ಎಂದು ವರದಿಯಾಗಿದೆ.‌ ಭೂಮಿ ಖರೀದಿಸಲು ತಮಿಳುನಾಡು ಸರ್ಕಾರ ಅನುಮೋದಿಸಿದೆ. ಈ ಕಾರ್ಖಾನೆ ಅಸ್ತಿತ್ವಕ್ಕೆ ಬಂದರೆ ಭಾರತೀಯ ಆಟೊಮೊಬೈಲ್‌ ಇಂಡಸ್ಟ್ರಿಯಲ್ಲಿಯೇ ದೊಡ್ಡ ಡೀಲ್‌ ಆಗುವ ಸಾಧ್ಯತೆ ಇದೆ. ಭವಿಷ್ಯದ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಲಭ್ಯತೆ ಮತ್ತು ಮಾರಾಟ ಎರಡೂ ಗಣನೀಯವಾಗಿ ಹೆಚ್ಚಲಿದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ:Electric Car : ಕೇರಳದಲ್ಲಿ 67 ವರ್ಷದ ವ್ಯಕ್ತಿ ದಿನ ನಿತ್ಯದ ಓಡಾಟಕ್ಕೆ ತಯಾರಿಸಿದ ಎಲೆಕ್ಟ್ರಿಕ್‌ ಕಾರು ಹೇಗಿದೆ?

Exit mobile version