ನವದೆಹಲಿ: ತಂತ್ರಜ್ಞಾನ ವಲಯದಲ್ಲಿ ಕ್ರಾಂತಿ ಎಬ್ಬಿಸಿರುವ ಚಾಟ್ಜಿಪಿಟಿ (ChatGPT) ಈಗ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲೂ (Android Smartphones) ಲಭ್ಯವಾಗುತ್ತಿದೆ. ಐಒಎಸ್ (iOS users) ಬಳಕೆದಾರರಿಗೆ ಚಾಟ್ಜಿಪಿಟಿಯು ಎರಡು ತಿಂಗಳ ಬಳಿಕ ದೊರೆಯಲಿದೆ. ಆರಂಭಿಕ ಹಂತದಲ್ಲಿ ಆಂಡ್ರಾಯ್ಡ್ ಚಾಟ್ಜಿಪಿಟಿಯು ಅಮೆರಿಕ(US), ಭಾರತ(India), ಬಾಂಗ್ಲಾದೇಶ (Bangla Desh) ಮತ್ತು ಬ್ರೆಜಿಲ್ (Brazil) ಬಳಕೆದಾರರಿಗೆ ದೊರೆಯಲಿದೆ. ಮುಂದಿನ ವಾರದಲ್ಲಿ ಆಂಡ್ರಾಯ್ಡ್ ಚಾಟ್ಜಿಪಿಟಿ ಇನ್ನೂ ಹೆಚ್ಚಿನ ದೇಶಗಳ ಬಳಕೆದಾರರಿಗೆ ಲಭ್ಯವಾಗಲಿದೆ.
ಸದ್ಯಕ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಚಾಟ್ಜಿಪಿಟಿ ಉಚಿತವಾಗಿದೆ. ಆದರೆ, ಚಾಟ್ಜಿಪಿಟಿಯನ್ನು ಅಭಿವೃದ್ಧಿಪಡಿಸಿರುವ ಓಪನ್ ಎಐ ಈ ಕುರಿತು ಹೇಳಿಕೆ ನೀಡಿದ್ದು, ಅತ್ಯುತ್ತಮ ಲ್ಯಾಂಗ್ವೆಜ್ ಮಾಡೆಲ್(ಜಿಪಿಟಿ-4) ಮತ್ತು ಇನ್ನೂ ಹೆಚ್ಚಿನ ಫೀಚರ್ಗಳಿಗಾಗಿ ಚಂದಾದಾರಿಕೆ ಆಯ್ಕೆಯನ್ನು ಬಳಕೆದಾರರಿಗೆ ನೀಡಿದೆ.
ಭಾರತದ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಚಾಟ್ಜಿಪಿಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಆ್ಯಪ್ ಆಂಡ್ರಾಯ್ಡ್ 6.0 ಮತ್ತು ಅದರ ನಂತರದ ಆವೃತ್ತಿಗಳಿಗೆ ಹೊಂದಾಣಿಕೆಯಾಗುತ್ತದೆ. ಮುಂದಿನ ಕೆಲವು ವಾರದಲ್ಲಿ ಓಪನ್ಎಐ, ಚಾಟ್ಜಿಪಿಟಿಯನ್ನು ಇನ್ನಷ್ಟು ದೇಶಗಳ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಿದೆ ಎಂದು ತಿಳಿದು ಬಂದಿದೆ.
ಚಾಟ್ಜಿಪಿಟಿಯನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು?
ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಹೊಂದಿರುವ ಬಳಕೆದಾರರು ತಮ್ಮ ಫೋನುಗಳಲ್ಲಿರುವ ಗೂಗಲ್ ಪ್ಲೇ ಸ್ಟೋರ್ ತೆರೆಯಬೇಕು. ಅದರಲ್ಲಿ ಸರ್ಚ್ ಜಾಗದಲ್ಲಿ ಚಾಟ್ಜಿಪಿಟಿ ಅಂತ ಸರ್ಚ್ ಮಾಡಿದರೆ. ನಿಮಗೆ ಓಪನ್ ಎಐನ ಚಾಟ್ಜಿಪಿಟಿ ಗೋಚರವಾಗುತ್ತದೆ. ಆಗ ಇನ್ಸ್ಟಾಲ್ ಬಟನ್ ಮೇಲೆ ಟ್ಯಾಪ್ ಮಾಡಿ. ಆ್ಯಪ್ ಡೌನ್ಲೋಡ್ ಆಗಿ ಇನ್ಸ್ಟಾಲ್ ಆಗೋವರೆಗೂ ಕಾಯಿರಿ. ಒಂದೊಮ್ಮೆ ನೀವು ಈಗಾಗಲೇ ಚಾಟ್ಜಿಪಿಯಲ್ಲಿ ಸೈನ್ ಆಗಿದ್ದರೆ, ಆ್ಯಪ್ ಓಪನ್ ಮಾಡಿ ನಿಮ್ಮ ಗೂಗಲ್ ಐಡಿ ಮತ್ತು ಪಾಸ್ವರ್ಡ್ ನಮೂದಿಸಿ. ಆಗ ಚಾಟ್ಜಿಪಿಟಿ ನಿಮ್ಮ ಬಳಕೆಗೆ ದೊರೆಯುತ್ತದೆ.
ಈ ಸುದ್ದಿಯನ್ನೂ ಓದಿ: Apple GPT : ಆ್ಯಪಲ್ ಕಂಪನಿಯ ಎಐ ಚಾಟ್ಬೋಟ್ ಪರೀಕ್ಷೆ, ಚಾಟ್ಜಿಪಿಟಿಗೆ ಫೈಟ್
ಒಂದೊಮ್ಮೆ ಈಗಾಗಲೇ ಚಾಟ್ಜಿಪಿಟಿಗೆ ಸೈನ್ ಇನ್ ಆಗಿರದಿದ್ದರೆ, ಬಳಕೆದಾರರು ಅಸ್ತಿತ್ವತಲ್ಲಿರುವ ಕ್ರೆಡಿನ್ಷಿಯಲ್ಗಳನ್ನು ನೀಡಿ. ಪ್ರೊಸೆಸ್ ಪೂರ್ತಿಯಾದ ಬಳಿಕ ನೀವು ಚಾಟ್ಜಿಪಿಟಿಗೆ ಅಕ್ಸೆಸ್ ಪಡೆದುಕೊಳ್ಳಬಹುದು. ಸದ್ಯಕ್ಕೆ ಈ ಚಾಟ್ಜಿಪಿಟಿ ಉಚಿತವಾಗಿದ್ದು, ಹೆಚ್ಚಿನ ಫೀಚರ್ಸ್ ಹಾಗೂ ಮುಂದಿನ ಆವೃತ್ತಿಯ ಸೇವೆ ಬೇಕಿದ್ದರೆ ಚಂದಾದಾರಿಕೆಯನ್ನು ಪಡೆಯುವ ಆಪ್ಷನ್ ಕೂಡ ನೀಡಲಾಗಿದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.