Apple GPT : ಆ್ಯಪಲ್ ಕಂಪನಿಯ ಎಐ ಚಾಟ್‌ಬೋಟ್‌ ಪರೀಕ್ಷೆ, ಚಾಟ್‌ಜಿಪಿಟಿಗೆ ಫೈಟ್ Vistara News

ತಂತ್ರಜ್ಞಾನ

Apple GPT : ಆ್ಯಪಲ್ ಕಂಪನಿಯ ಎಐ ಚಾಟ್‌ಬೋಟ್‌ ಪರೀಕ್ಷೆ, ಚಾಟ್‌ಜಿಪಿಟಿಗೆ ಫೈಟ್

Apple GPT ಆ್ಯಪಲ್ ಕಂಪನಿಯ ಸ್ವಂತ ಚಾಟ್‌ಬೋಟ್‌ನ ಪರೀಕ್ಷೆ ನಡೆದಿದೆ. ಚಾಟ್‌ಜಿಪಿಟಿಗೆ ಇದು ಪೈಪೋಟಿ ನೀಡಲಿದೆ ಎಂದು ವರದಿಯಾಗಿದೆ. ಇಲ್ಲಿದೆ ವಿವರ.

VISTARANEWS.COM


on

iPhone
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಆ್ಯಪಲ್ ತನ್ನ ಸ್ವಂತ ಎಐ ಚಾಟ್‌ಬೋಟ್‌ ಆ್ಯಪಲ್ ಜಿಪಿಟಿ (Apple GPT) ಅನ್ನು ಪರೀಕ್ಷಿಸಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಆಧರಿಸಿದ ಚಾಟ್‌ ಬೋಟ್‌ ಇದಾಗಿದೆ. ಓಪನ್‌ ಎಐ ಕಂಪನಿಯ ಚಾಟ್‌ಜಿಪಿಟಿ, ಗೂಗಲ್‌ನ ಬಾರ್ಡ್‌ ಮಾದರಿಯಲ್ಲಿ ಆ್ಯಪಲ್ ಜಿಪಿಟಿಯನ್ನು ಆ್ಯಪಲ್ ಸಿದ್ಧಪಡಿಸುತ್ತಿದೆ.

ಆ್ಯಪಲ್ ತನ್ನದೇ ಆದ ಅಜಾಕ್ಸ್‌ (Ajax) ಎಂಬ ಫ್ರೇಮ್‌ವರ್ಕ್‌ ಅನ್ನು ಹೊಂದಿದ್ದು, ಲಾರ್ಜ್‌ ಲಾಂಗ್ವೇಜ್‌ ಮಾಡೆಲ್‌ಗಳನ್ನು (large language model) ಸೃಷ್ಟಿಸಲಿದೆ. ಇದರೊಂದಿಗೆ ಚಾಟ್‌ಜಿಪಿಟಿ ಮತ್ತು ಗೂಗಲ್‌ ಬಾರ್ಡ್‌ಗೆ (Google Bard) ಆ್ಯಪಲ್ ಪೈಪೋಟಿ ಕೊಡಲಿದೆ.

ಆ್ಯಪಲ್ ಈಗಾಗಲೇ ನಾನಾ ಸೇವೆಗಳಿಗೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮತ್ತು ಮೆಶೀನ್‌ ಲರ್ನಿಂಗ್‌ ತಂತ್ರಜ್ಞಾನವನ್ನು ಬಳಸುತ್ತದೆ. ಆದರೆ ಪ್ರತಿಸ್ಪರ್ಧಿಗಳ ಎದುರು ತನ್ನದೇ ಆದ ಚಾಟ್‌ ಬೋಟ್‌ ರಚನೆಗೆ ಕಾರ್ಯಪ್ರವೃತ್ತವಾಗಿದೆ. ಆ್ಯಪಲ್ ಇದನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆ್ಯಪಲ್ ಕಳೆದ ವರ್ಷ ಅಜಾಕ್ಸ್‌ ಫ್ರೇಮ್‌ ವರ್ಕ್‌ ಬಗ್ಗೆ ಕೆಲಸ ಶುರು ಮಾಡಿತ್ತು ಎಂದು ವರದಿಯಾಗಿದೆ.

ಬಹು ನಿರೀಕ್ಷಿತ ಐಫೋನ್‌ 15 ಇನ್ನೆರಡು ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಐಫೋನ್‌ 14 ಸೀರೀಸ್‌ನಂತೆಯೇ ಐಫೋನ್‌ 15 ಕೂಡ ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ, ಐಫೋನ್‌ 15 ಪ್ರೊ ಮ್ಯಾಕ್ಸ್‌ ಎಂಬುದಾಗಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ತಂತ್ರಜ್ಞಾನ

₹1 ಲಕ್ಷ ಕೋಟಿ ಹಣ ತೆರಿಗೆ ವಂಚಿಸಿ ಚೀನಾಗೆ ಸಾಗಿಸಿದ ವಿವೊ‌ ಕಂಪನಿ! ಹೇಗೆ ಸಾಧ್ಯವಾಯ್ತು?

2014 ಮತ್ತು 2021ರ ನಡುವೆ ಭಾರತದಿಂದ ಹೊರಗೆ ₹1 ಲಕ್ಷ ಕೋಟಿ ಹಣವನ್ನು ರವಾನೆ ಮಾಡಲು ಶೆಲ್ ಕಂಪನಿಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ED probe) ಚೀನಾದ ಫೋನ್ ತಯಾರಕ ವಿವೋ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.

VISTARANEWS.COM


on

vivo
Koo

ಹೊಸದಿಲ್ಲಿ: ₹1 ಲಕ್ಷ ಕೋಟಿ ಹಣವನ್ನು ಸುಳ್ಳು ಕಂಪನಿಗಳ ಹೆಸರಿನಲ್ಲಿ ತೆರಿಗೆ ವಂಚಿಸಿ ಭಾರತದಿಂದಾಚೆಗೆ ಸಾಗಿಸಿದ ಚೀನಾ ಮೂಲದ (china company) ವಿವೊ ಮೊಬೈಲ್‌ ಕಂಪನಿಯ (Vivo smartphone) ಮೇಲೆ ಜಾರಿ ನಿರ್ದೇಶನಾಲಯ (Enforcement directorate) ತನಿಖೆ ನಡೆಸಿ (ED probe) ಚಾರ್ಜ್‌ಶೀಟ್‌ ಸಲ್ಲಿಸಿದೆ.

2014 ಮತ್ತು 2021ರ ನಡುವೆ ಭಾರತದಿಂದ ಹೊರಗೆ ₹1 ಲಕ್ಷ ಕೋಟಿ ಹಣವನ್ನು ರವಾನೆ ಮಾಡಲು ಶೆಲ್ ಕಂಪನಿಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ED probe) ಚೀನಾದ ಸ್ಮಾರ್ಟ್‌ಫೋನ್ ತಯಾರಕ ವಿವೋ ವಿರುದ್ಧ ಅಕ್ರಮ ಹಣ ವ್ಯವಹಾರ ತನಿಖೆಯಲ್ಲಿ ಚಾರ್ಜ್ ಶೀಟ್ (Charge sheet) ಸಲ್ಲಿಸಿದೆ. ಬುಧವಾರ ದೆಹಲಿಯ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಚಾರ್ಜ್ ಶೀಟ್‌ನಲ್ಲಿ ವಿವೋ ಕಂಪನಿ ಹಾಗೂ ಕಂಪನಿಯ ಹಲವು ಮುಖ್ಯಸ್ಥರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ.

ವಿವೋಗೆ ಸಹಾಯ ಮಾಡಿದ ಆರೋಪ ಹೊತ್ತಿರುವ ಲಾವಾ ಇಂಟರ್‌ನ್ಯಾಶನಲ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಹರಿ ಓಂ ರೈ, ವಿವೋದ ಮನಿ ಲಾಂಡರಿಂಗ್ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಚೀನಾದ ಪ್ರಜೆ ಗುವಾಂಗ್ವೆನ್ ಕ್ಯಾಂಗ್ ಅಲಿಯಾಸ್ ಆಂಡ್ರ್ಯೂ ಕುವಾಂಗ್, ವಿವೊದಲ್ಲಿ ಕೆಲಸ ಮಾಡಿದ ಚಾರ್ಟರ್ಡ್ ಅಕೌಂಟೆಂಟ್ ನಿತಿನ್ ಗಾರ್ಗ್ ಮತ್ತು ಲಾವಾದ ಶಾಸನಬದ್ಧ ಲೆಕ್ಕಪರಿಶೋಧಕ ರಾಜನ್ ಮಲಿಕ್ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಚೀನೀ ಫೋನ್ ತಯಾರಕ ಕಂಪನಿ ವಿವೋ 2014ರಲ್ಲಿ ಭಾರತಕ್ಕೆ ಪ್ರವೇಶಿಸಿತು. ಇದು ವಿವಿಧ ನಗರಗಳಲ್ಲಿ 19 ನಕಲಿ ಕಂಪನಿಗಳನ್ನು ಹುಟ್ಟುಹಾಕಿದ್ದು, ಅದಕ್ಕೆ ಚೀನೀ ಪ್ರಜೆಗಳನ್ನು ನಿರ್ದೇಶಕರು ಮತ್ತು ಷೇರುದಾರರಾಗಿ ನಿಯೋಜಿಸಿತ್ತು. ಭಾರತೀಯರ ಯಾವುದೇ ನಿಯಂತ್ರಣ ಹೊಂದಿರಲಿಲ್ಲ. ಈ ಕಂಪನಿಗಳು ವಿವೋದ ಸಂಪೂರ್ಣ ವಹಿವಾಟನ್ನು ನಿಯಂತ್ರಿಸಿವೆ. ಕಂಪನಿಯ ವ್ಯವಹಾರದ ಬಗ್ಗೆ ಇಡಿ ಸಂಸ್ಥೆ 2022ರಲ್ಲಿ ತನಿಖೆ ಪ್ರಾರಂಭಿಸಿತ್ತು.

2014-15ರ ಎಫ್‌ಡಿಐ (ವಿದೇಶಿ ನೇರ ಹೂಡಿಕೆ) ನೀತಿಯ ಪ್ರಕಾರ ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರದಲ್ಲಿ 100% ವಿದೇಶಿ ಹೂಡಿಕೆಗೆ ಸರ್ಕಾರಿ ಅನುಮತಿ ಅಗತ್ಯವಾಗಿದೆ. ಆದರೆ ಸಗಟು ಕ್ಯಾಶ್‌ ಆಂಡ್‌ ಕ್ಯಾರಿ ವ್ಯವಹಾರಕ್ಕಾಗಿ ಸ್ವಯಂಚಾಲಿತವಾಗಿಯೇ 100% ಎಫ್‌ಡಿಐ ಅನ್ನು ಅನುಮತಿಸಲಾಗಿದೆ. ಇದಕ್ಕೆ ಸರ್ಕಾರದ ಅನುಮೋದನೆ ಅಗತ್ಯವಿಲ್ಲ. “ಸರ್ಕಾರದ ಅನುಮತಿ ಪಡೆಯುವಿಕೆ ತಪ್ಪಿಸಲು, ವಿವೋ ತನ್ನ ನೈಜ ಮಾಲೀಕತ್ವ, ನಿಯಂತ್ರಣ ಮತ್ತು ಚಟುವಟಿಕೆಗಳ ಸ್ವರೂಪವನ್ನು ಮರೆಮಾಚಿ ಸಗಟು ಕ್ಯಾಶ್‌ ಆಂಡ್‌ ಕ್ಯಾರಿ ವ್ಯವಹಾರದ ಅಡಿಯಲ್ಲಿ ಭಾರತವನ್ನು ಪ್ರವೇಶಿಸಿದೆ. ಇದು ಭಾರತೀಯ ಸರ್ಕಾರಿ ಅಧಿಕಾರಿಗಳಿಂದ ನೈಜತೆ ಮರೆಮಾಚುವ ಚೀನಾದ ಕಂಪನಿಯ ಕ್ರಿಮಿನಲ್‌ ವ್ಯವಹಾರವಾಗಿದೆ” ಎಂದು ಇಡಿ ಅಕ್ಟೋಬರ್‌ನಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.

ಇಡಿ ಸಂಸ್ಥೆಯು ಕಳೆದ ವರ್ಷ ಜುಲೈನಲ್ಲಿ ವಿವೋ ಕಚೇರಿಗಳು ಮತ್ತು ಸಹವರ್ತಿ ಕಂಪನಿಗಳ ಮೇಲೆ ದಾಳಿ ನಡೆಸಿತ್ತು. ವಿವೋ ತನ್ನ ಆರಂಭದಿಂದಲೂ (2014) ಭಾರತದಿಂದ ಹೊರಗೆ ₹1 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ರವಾನೆ ಮಾಡಿದೆ ಎಂದು ಮನಿ ಲಾಂಡರಿಂಗ್ ತನಿಖೆ ಬಹಿರಂಗಪಡಿಸಿದೆ. ಈ ಭಾರತೀಯ ಕಂಪನಿಗಳ ಮೇಲೆ ವಿವೋ ಚೀನಾದ ನಿಯಂತ್ರಣ ಅಧಿಕಾರಿಗಳ ಗಮನಕ್ಕೆ ಬರದಂತೆ ನೋಡಿಕೊಂಡಿದೆ.

“2014-15ರಿಂದ 2019-20ರವರೆಗೆ ದಾಖಲಾತಿಗಳಲ್ಲಿ ವಿವೋ ಕಂಪನಿ ಯಾವುದೇ ಲಾಭವನ್ನು ತೋರಿಸಿಲ್ಲ ಮತ್ತು ಭಾರತದಲ್ಲಿ ಯಾವುದೇ ಆದಾಯ ತೆರಿಗೆ ಪಾವತಿಸಿಲ್ಲ. ಬೃಹತ್ ಮೊತ್ತವನ್ನು ಭಾರತದಿಂದ ಹೊರ ಸಾಗಿಸಲಾಗಿದೆ” ಎಂದು EDಯು ನ್ಯಾಯಾಲಯಕ್ಕೆ ತಿಳಿಸಿದೆ. ವಿವೋದ ಭಾರತೀಯ ಘಟಕಗಳ ಮೇಲೆ ಚೀನಾದ ನಿಯಂತ್ರಣವಿದೆ; ಚೀನಾದ ಮಾಲೀಕತ್ವ ಮತ್ತು ನಿಯಂತ್ರಣವನ್ನು ಭಾರತೀಯ ಅಧಿಕಾರಿಗಳಿಂದ ಮರೆಮಾಚಲಾಗಿದೆ ಎಂದು ಇಡಿ ತನಿಖೆ ಬಹಿರಂಗಪಡಿಸಿದೆ.

Vivo ಇಂಡಿಯಾದ ಸ್ಥಾಪಕ ಅಥವಾ ಮೊದಲ ನಿರ್ದೇಶಕನಾದ ಬಿನ್ ಲುವೊ ಚೀನಾದ ಪ್ರಜೆಯಾಗಿದ್ದು, ಭಾರತೀಯ 18 ಘಟಕಗಳ ಮೇಲಿನ ನಿಯಂತ್ರಣವನ್ನು ಹೊಂದಿದ್ದಾನೆ ಎಂದು ಕಂಡುಬಂದಿದೆ. ಲೆಕ್ಕದಲ್ಲಿ ಅವ್ಯವಹಾರಕ್ಕಾಗಿ ಚಾರ್ಟರ್ಡ್ ಅಕೌಂಟೆಂಟ್ ನಿತಿನ್ ಗರ್ಗ್ ಈತನಿಗೆ ಸಹಾಯ ಮಾಡಿದ್ದಾನೆ.

ತನಿಖೆಯ ಬಗ್ಗೆ ಪ್ರತಿಕ್ರಿಯಿಸಿರುವ ವಿವೋ, “Vivo ತನ್ನ ನೈತಿಕ ತತ್ವಗಳಿಗೆ ದೃಢವಾಗಿ ಬದ್ಧವಾಗಿದೆ. ಇತ್ತೀಚಿನ ತನಿಖೆಯು ನಮ್ಮನ್ನು ಆಳವಾಗಿ ಕಳವಳಗೊಳಿಸಿದೆ. ಲಭ್ಯವಿರುವ ಎಲ್ಲಾ ಕಾನೂನು ಆಯ್ಕೆಗಳನ್ನು ನಾವು ಚಲಾಯಿಸುತ್ತೇವೆʼʼ ಎಂದು ಹೇಳಿದೆ.

ಇದನ್ನೂ ಓದಿ: ‘ಫೆಮಾ’ ಉಲ್ಲಂಘಿಸಿದ ಬೈಜುಸ್‌ಗೆ 9000 ಕೋಟಿ ರೂ. ಪಾವತಿಸಲು ಇಡಿ ನೋಟಿಸ್!

Continue Reading

ತಂತ್ರಜ್ಞಾನ

Byju’s Debt: ಸಿಬ್ಬಂದಿ ಸಂಬಳಕ್ಕಾಗಿ ಮನೆ ಅಡವಿಟ್ಟ ಬೈಜೂಸ್ ಕಂಪನಿ ಮಾಲಿಕ!

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಆನ್‌ಲೈನ್‌ ಕಲಿಕೆಯ ರಂಗದಲ್ಲಿ ಭಾರಿ ಯಶಸ್ಸು ಸಾಧಿಸಿದ್ದ ಕಂಪನಿ, ಕಳೆದ ಒಂದು ವರ್ಷದಲ್ಲಿ ಸಾಲದ ಹೊರೆಯಲ್ಲಿ (Byju’s Debt) ಮುಳುಗಿದೆ.

VISTARANEWS.COM


on

Layoffs: Another 1000 layoffs at Baijus
Koo

ಬೆಂಗಳೂರು: ತಂತ್ರಜ್ಞಾನ ಕಲಿಕೆ ವೇದಿಕೆ ಸ್ಟಾರ್ಟಪ್ (startup) ಬೈಜೂಸ್‌ನ (Byju’s) ಸಂಸ್ಥಾಪಕ ಬೈಜು ರವೀಂದ್ರನ್ (Byju Raveendran) ಅವರು ತಮ್ಮ ಉದ್ಯೋಗಿಗಳಿಗೆ ಸಂಬಳ ನೀಡಲು ಹಣವನ್ನು ಸಂಗ್ರಹಿಸಲು ತಮ್ಮ ಮನೆ ಮತ್ತು ಅವರ ಕುಟುಂಬ ಸದಸ್ಯರ ಮನೆಗಳನ್ನು ಅಡವಿಟ್ಟಿದ್ದಾರೆ ಎಂದು ತಿಳಿದುಬಂದಿದೆ.‌ ಸದ್ಯ ಬೈಜೂಸ್‌ ಸಾಲದ ಸುಳಿಯಲ್ಲಿ (Byju’s Debt) ತತ್ತರಿಸುತ್ತಿದೆ.

ಅಡವಿಟ್ಟ ಆಸ್ತಿಗಳಲ್ಲಿ ಅವರ ಕುಟುಂಬದ ಒಡೆತನದ ಎರಡು ಮನೆಗಳು ಮತ್ತು ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ವಿಲ್ಲಾ ಇವೆ. $12 ಮಿಲಿಯ (₹100.07 ಕೋಟಿ) ಸಾಲಕ್ಕೆ ಅಡವಾಗಿ ಇವುಗಳನ್ನು ನೀಡಲಾಗಿದೆ. ಈ ಹಣವು Byju’s ಮಾಲೀಕತ್ವ ಹೊಂದಿರುವ ಕಂಪನಿಯಾದ ಥಿಂಕ್ ಅಂಡ್ ಲರ್ನ್ (Think and Learn) ಪ್ರೈವೇಟ್‌ನಲ್ಲಿರುವ 15,000 ಉದ್ಯೋಗಿಗಳಿಗೆ ಸಂಬಳ ಪಾವತಿಸಲು ರವೀಂದ್ರನ್‌ಗೆ ಸಹಾಯ ಮಾಡಲಿದೆ.

ಕಳೆದ ತಿಂಗಳು ಕಂಪನಿಯು (tech firm) 2022ರ ತನ್ನ ಲೆಕ್ಕಪರಿಶೋಧನೆಯ ಫಲಿತಾಂಶಗಳನ್ನು ವರದಿ ಮಾಡಿತ್ತು. 2022ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ಅದರ ಪ್ರಮುಖ ಆನ್‌ಲೈನ್ ಶಿಕ್ಷಣ ವ್ಯವಹಾರದಲ್ಲಿ 6% ಅಂದರೆ 24 ಶತಕೋಟಿ ರೂಪಾಯಿ ನಷ್ಟವಾಗಿತ್ತು.

ಜಾರಿ ನಿರ್ದೇಶನಾಲಯ ಬಿಸಿ

ಕಳೆದ ತಿಂಗಳು, ಜಾರಿ ನಿರ್ದೇಶನಾಲಯವು (Enforcement Directorate) ಬೈಜು ರವೀಂದ್ರನ್ ಮತ್ತು ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್‌ಗೆ ₹9,362 ಕೋಟಿ ಮೊತ್ತದ ವಿದೇಶಿ ವಿನಿಮಯ ಉಲ್ಲಂಘನೆಯ ಆರೋಪದ ಮೇಲೆ, ಸರ್ಕಾರಕ್ಕೆ ಆದಾಯದ ನಷ್ಟವನ್ನು ಉಂಟುಮಾಡಿದ್ದಕ್ಕಾಗಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.

ರವೀಂದ್ರನ್ ಒಳಗೊಂಡಂತೆ ಥಿಂಕ್ ಅಂಡ್ ಲರ್ನ್ ಸಂಸ್ಥೆ “ಭಾರತದ ಹೊರಗೆ ಮಾಡಿದ ಮುಂಗಡ ಹಣ ವಿನಿಮಯದ ಬಗ್ಗೆ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿದೆ. ಭಾರತದ ಹೊರಗೆ ಮಾಡಿದ ರಫ್ತುಗಳ ಆದಾಯವನ್ನು ಅರಿತುಕೊಳ್ಳಲು ವಿಫಲವಾಗಿದ್ದು, ದಾಖಲೆಗಳನ್ನು ವಿಳಂಬಗೊಳಿಸುವ ಮೂಲಕ ಫೆಮಾದ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ” ಎಂದು ತನಿಖಾ ಸಂಸ್ಥೆ ಇಡಿ ಆರೋಪಿಸಿದೆ. ಕಂಪನಿಗೆ ಪಡೆದ ಹೂಡಿಕೆ (ಎಫ್‌ಡಿಐ), ಭಾರತದ ಹೊರಗೆ ಕಂಪನಿಯು ಮಾಡಿದ ಪಾವತಿಗಳ ಕುರಿತು ದಾಖಲೆಗಳನ್ನು ಸಲ್ಲಿಸಲು ಸಂಸ್ಥೆ ವಿಫಲವಾಗಿದೆ ಹಾಗೂ ಕಂಪನಿಗೆ ಸ್ವೀಕರಿಸಿದ ಎಫ್‌ಡಿಐಗೆ ಸಂಬಂಧಿಸಿದ ಷೇರುಗಳನ್ನು ಹಂಚಿಕೆ ಮಾಡಲು ವಿಫಲವಾಗಿದೆ.

ನೋಟೀಸ್‌ಗೆ ಪ್ರತಿಕ್ರಿಯಿಸಿರುವ ಬೈಜೂಸ್, “ನೋಟೀಸ್‌ನಲ್ಲಿ ಬಂದಿರುವ ಪ್ರಶ್ನೆಗಳು ಕೇವಲ ತಾಂತ್ರಿಕ ಸ್ವರೂಪದಲ್ಲಿವೆ. ಕಂಪನಿಯು ಎಲ್ಲಾ ಎಫ್‌ಡಿಐಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿದೆ. ಕಾನೂನಿನ ಅರ್ಹತಾ ಮಾನದಂಡಗಳಿಗೆ ಅನುಗುಣವಾಗಿ ಸ್ವೀಕರಿಸಲ್ಪಟ್ಟಿದೆ. ತೆರಿಗೆ ಪಾವತಿ ಮಾಡಿದೆ. ಎಫ್‌ಡಿಐ ಸಂಬಂಧಿತ ಷೇರುಗಳನ್ನು ನಿಗದಿತ ಸಮಯದೊಳಗೆ ವಿತರಿಸಿದೆ” ಎಂದು ಹೇಳಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಕಂಪನಿಯ ಆಡಿಟರ್‌ ಹಾಗೂ ಮೂವರು ಬೋರ್ಡ್‌ ಸದಸ್ಯರು ಸಂಸ್ಥೆ ತೊರೆದಿದ್ದರು. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಆನ್‌ಲೈನ್‌ ಕಲಿಕೆಯ ರಂಗದಲ್ಲಿ ಭಾರಿ ಯಶಸ್ಸು ಸಾಧಿಸಿದ್ದ ಕಂಪನಿ, ಕಳೆದ ಒಂದು ವರ್ಷದಲ್ಲಿ ಸಾಲದ ಹೊರೆಯಲ್ಲಿ ಮುಳುಗಿದೆ. ಒಂದೆರಡು ತಿಂಗಳ ಹಿಂದೆ ಸುಮಾರು 400 ಸಿಬ್ಬಂದಿಯನ್ನು ಸಂಸ್ಥೆ ಉದ್ಯೋಗದಿಂದ ತೆಗೆದಿತ್ತು.

ಇದನ್ನೂ ಓದಿ: BYJU’s Debt: ಹೆಚ್ಚಿದ ಸಾಲದ ಸುಳಿ; ಬೈಜೂಸ್‌ ಅಂಗಸಂಸ್ಥೆ ಈಗ ಸಾಲ ಕೊಟ್ಟವರ ಪಾಲು!

Continue Reading

ಗ್ಯಾಜೆಟ್ಸ್

WhatsApp: ವಾಟ್ಸಾಪ್‍ನಲ್ಲಿ ಬಳಕೆದಾರರನ್ನು ಅವರ ಯೂಸರ್‌ನೇಮ್ ಮೂಲಕವೇ ಹುಡುಕಬಹುದು!

WhatsApp: ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಸಾಕಷ್ಟು ಫೀಚರ್‌ಗಳನ್ನು ಒದಗಿಸುವ ವಾಟ್ಸಾಪ್ ಈಗ ಮತ್ತೊಂದು ಹೊಸ ಅಪ್‌ಡೇಟ್ ನೀಡಲು ಸಜ್ಜಾಗಿದೆ.

VISTARANEWS.COM


on

WhatsApp new feature lets you search users by their username Says Report
Koo

ನವದೆಹಲಿ: ಬಳಕೆದಾರರ ಅನುಭವವನ್ನು ಹೆಚ್ಚಳ, ಬಳಕೆದಾರರ ಖಾಸಗಿತನ ರಕ್ಷಣೆ ಹಾಗೂ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಾಟ್ಸಾಪ್ (WhatsApp) ಮತ್ತೊಂದು ಫೀಚರ್ ಪರಿಚಯಿಸುತ್ತಿದೆ(WhatsApp New Feature). ಬಳಕೆದಾರರನ್ನು ಅವರ ಹೆಸರಿನ (Username) ಮೂಲಕವೇ ಹುಡುಕಾಟ ಮಾಡಲು ಸಾಧ್ಯವಾಗಿಸುವುದಕ್ಕಿ ವಾಟ್ಸಾಪ್ ಹೊಸ ಸರ್ಚ್ ಬಾರ್ ಅಳವಡಿಸಲಿದೆ(New Search Bar). ಈ ಹೊಸ ಫೀಚರ್ ಕುರಿತು WABetaInfo ಷೇರ್ ಮಾಡಿರುವ ಸ್ಕ್ರೀನ್‌ಶಾಟ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ವೈಯಕ್ತಿಕ ನಂಬರ್ ಅನ್ನು ಹಂಚಿಕೊಳ್ಳುವ ಅಗತ್ಯವನ್ನು ತೆಗೆದು ಹಾಕಿ, ಫ್ರೆಂಡ್ಸ್ ಮತ್ತು ಕಾಂಟಾಕ್ಟ್ಸ್ ಜತೆ ಕನೆಕ್ಟಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸಲಿದೆ.

ಮುಂಬರುವ ವೈಶಿಷ್ಟ್ಯವು ಬಳಕೆದಾರರಿಗೆ ಬಳಕೆದಾರ ಹೆಸರನ್ನು ಕಾನ್ಫಿಗರ್ ಮಾಡುವ ಆಯ್ಕೆಯನ್ನು ಒದಗಿಸುತ್ತದೆ, ಅವರ ಫೋನ್ ಸಂಖ್ಯೆಗಳನ್ನು ಬಹಿರಂಗಪಡಿಸದಿರಲು ಆದ್ಯತೆ ನೀಡುವವರಿಗೆ ಅವಕಾಶ ಕಲ್ಪಿಸುತ್ತದೆ. ಗೌಪ್ಯತೆಗೆ ಆದ್ಯತೆ ನೀಡುವ ಮತ್ತು ತಮ್ಮ ವೈಯಕ್ತಿಕ ಮಾಹಿತಿಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಲು ಬಯಸುವ ವ್ಯಕ್ತಿಗಳಿಗೆ ಈ ಕ್ರಮವು ವಿಶೇಷವಾಗಿ ಅನುಕೂಲಕರವಾಗಲಿದೆ. ವಿಶೇಷವಾಗಿ, ಬಳಕೆದಾರ ಹೆಸರಿನ ಸಂರಚನೆಯು ಸಂಪೂರ್ಣವಾಗಿ ಐಚ್ಛಿಕವಾಗಿರುತ್ತದೆ, ಬಳಕೆದಾರರು ಈ ಹೊಸ ಕಾರ್ಯಚಟುವಟಿಕೆಯ ಲಾಭವನ್ನು ಪಡೆಯಲು ಬಯಸುತ್ತಾರೆಯೇ ಎಂದು ನಿರ್ಧರಿಸಲು ಆಯ್ಕೆಯನ್ನು ಒದಗಿಸುತ್ತದೆ.

ಈ ಫೀಚರ್‌ ಮೇಲೆ ಬಳಕೆದಾರರ ಸಂಪೂರ್ಣ ನಿಯಂತ್ರಣವಿರುತ್ತದೆ. ಅಂದರೆ, ಯಾವುದೇ ಸಮಯದಲ್ಲಿ ಬಳಕೆದಾರರ ಹೆಸರನ್ನು ಸೇರಿಸುವ, ತೆಗೆದು ಹಾಕುವ ಇಲ್ಲವೇ ಬದಲಿಸುವ ಅವಕಾಶವು ಬಳಕೆದಾರರಿಗೇ ಇರುತ್ತದೆ. ಸರ್ಚ್ ಬಾರ್‌ನ ಬಳಕೆದಾರರ ಹೆಸರು ಶೋಧ ಸಾಮರ್ಥ್ಯವು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಮುಂದಿನ ವಾಟ್ಸಾಪ್‌ ಅಪ್ಲಿಕೇಷನ್ ಹೊಸ ಅಪ್‌ಡೇಟ್ ಮೂಲಕ ಈ ಫೀಚರ್ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ, ಈ ಫೀಚರ್ ಆಂಡ್ರಾಯ್ಡ್ ಮತ್ತು ಐಒಎಸ್‌ ಎರಡೂ ಸಾಧನಗಳಿಗೆ ದೊರೆಯಲಿದೆಯೇ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.

ವಾಟ್ಸಾಪ್‌ ಖಾತೆಗೆ ನಿಮ್ಮ ಇ ಮೇಲ್ ಅಡ್ರೆಸ್ ಲಿಂಕ್ ಮಾಡಬಹುದು! ಆದರೆ…?

ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಮತ್ತೊಂದು ಫೀಚರ್ (New Feature) ಅಪ್‌ಡೇಟ್ ಮಾಡುತ್ತಿದೆ. ಐಒಎಸ್‌ ಸಾಧನಗಳಲ್ಲಿ (iOS Devices) ಬಳಕೆದಾರರು ತಮ್ಮ ಇ ಮೇಲ್ ವಿಳಾಸವನ್ನು (e-mail) ವಾಟ್ಸಾಪ್‌ ಖಾತೆಗೆ ಲಿಂಕ್ ಮಾಡಲು ಅನುಮತಿಸುವ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಮೆಸೇಜಿಂಗ್ ಅಪ್ಲಿಕೇಶನ್ ಪ್ರಸ್ತುತ ಬಳಕೆದಾರರು ತಮ್ಮ ನೋಂದಾಯಿತ ಫೋನ್ ಸಂಖ್ಯೆಯನ್ನು ಬಳಸಿಕೊಂಡು, ತಮ್ಮ ಖಾತೆಗೆ ಲಾಗ್ ಇನ್ ಮಾಡಲು ಅನುಮತಿಸುತ್ತದೆ. ಇಮೇಲ್ ವಿಳಾಸವನ್ನು ಸೇರಿಸುವುದರಿಂದ ವಾಟ್ಸಾಪ್‌ಗೆ ಪ್ರವೇಶದ ಹೆಚ್ಚುವರಿ ಮಾರ್ಗವನ್ನು ಸೃಷ್ಟಿಸಿದಂತಾಗಲಿದೆ. ವಿಶೇಷ ಎಂದರೆ, ಇಮೇಲ್ ವಿಳಾಸಗಳು ಕಾಂಟಾಕ್ಟ್ಸ್‌ನಲ್ಲಿ ಗೋಚರಿಸುವುದಿಲ್ಲ. ಲಾಗ್‌ಇನ್ ಮಾಡಲು ಎಸ್ಸೆಮ್ಮೆಸ್ ಪಡೆದುಕೊಳ್ಳು ಸಾಧ್ಯವಾಗದೇ ಇದ್ದಾಗ ಈ ಫೀಚರ್ ಬಳಕೆದಾರರಿಗೆ ಹೆಚ್ಚು ಉಪಯುಕ್ತ ಕೂಡ ಆಗಲಿದೆ. ಆದರೆ, ಈ ಫೀಚರ್ ಸದ್ಯಕ್ಕೆ ಐಒಎಸ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ (Android Users) ಯಾವಾಗ ದೊರೆಯಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

WABetaInfo ಪ್ರಕಾರ, ಐಒಎಸ್‌ 2.23.24.70 ಅಪ್‌ಡೇಟ್‌ನಲ್ಲಿ ಈ ಹೊಸ ಫೀಚರ್‌ ಕಂಡು ಬಂದಿದೆ. ಈ ಅಪ್‌ಡೇಟ್ ಬಳಕೆದಾರರಿಗೆ ವಾಟ್ಸಾಪ್‌ ಖಾತೆಗೆ ತಮ್ಮ ಇಮೇಲ್ ವಿಳಾಸವನ್ನು ಸೇರಿಸಲು ಬಗ್ಗೆ ಕೇಳುತ್ತಿದೆ. ಅಪ್ಲಿಕೇಶನ್‌ನಲ್ಲಿರುವ ಸಂದೇಶವು “ನಿಮ್ಮ ಖಾತೆಯನ್ನು ಪ್ರವೇಶಿಸಲು ಇಮೇಲ್ ಸಹಾಯ ಮಾಡುತ್ತದೆ. ಇದು ಇತರರಿಗೆ ಗೋಚರಿಸುವುದಿಲ್ಲ” ಎಂದು ಹೇಳುತ್ತದೆ. ಒಮ್ಮೆ ನೀವು ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿದರೆ, ದೃಢೀಕರಣಕ್ಕಾಗಿ ಕಳುಹಿಸಲಾದ ಪರಿಶೀಲನಾ ಕೋಡ್ ಅನ್ನು ನೀವು ನಮೂದಿಸಬೇಕಾಗುತ್ತದೆ.

ನಿಮ್ಮ ವಾಟ್ಸಾಪ್ ಖಾತೆಗೆ ಇ ಮೇಲ್ ವಿಳಾಸ ಸೇರಿಸಲು ನಿಮ್ಮ ವಾಟ್ಸಾಪ್‌ ಅಪ್‌ಡೇಟ್‌ ಆಗಿರಬೇಕು. ಒಂದೊಮ್ಮೆ ಆಗಿಲ್ಲ ಎಂದಾದರೆ, ನಿಮ್ಮ ಐಫೋನ್‌ನಲ್ಲಿರುವ ಆ್ಯಪ್‌ ಸ್ಟೋರ್‌ ಮೂಲಕ ವಾಟ್ಸಾಪ್ ಅಪ್‌ಡೇಟ್ ಮಾಡಿಕೊಳ್ಳಬೇಕು. ಇಷ್ಟಾದ ಮೇಲೆ, ವಾಟ್ಸಾಪ್‌ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿ ಅಕೌಂಟ್ ಮೇಲೆ ಟ್ಯಾಪ್ ಮಾಡಿ ಮತ್ತು ಇಮೇಲ್ ವಿಳಾಸದ ಜಾಗದಲ್ಲಿ ನಿಮ್ಮ ಇ ಮೇಲ್ ವಿಳಾಸವನ್ನು ನಮೂದಿಸಿ.

ನಿಮ್ಮ ಖಾತೆಗೆ ಇಮೇಲ್ ವಿಳಾಸವನ್ನು ಲಿಂಕ್ ಮಾಡಿದ ನಂತರ, ನೀವು ನೆಟ್‌ವರ್ಕ್ ಸಮಸ್ಯೆಗಳು ಅಥವಾ ಇತರ ತಾಂತ್ರಿಕ ತೊಂದರೆಗಳಿಂದ ಎಸ್ಸೆಮ್ಮೆಸ್‌ ಕೋಡ್‌ಗಳನ್ನು ಸ್ವೀಕರಿಸಲು ಸಾಧ್ಯವಾಗದಿದ್ದರೆ ನಿಮ್ಮ ಇಮೇಲ್ ವಿಳಾಸದ ಮೂಲಕ ಪರಿಶೀಲನೆ ಕೋಡ್‌ಗಳನ್ನು ಸ್ವೀಕರಿಸಲು ನಿಮಗೆ ಸಾಧ್ಯವಾಗುತ್ತದೆ. ಆದಾಗ್ಯೂ, ವಾಟ್ಸಾಪ್ ನಿಮ್ಮ ಫೋನ್ ಸಂಖ್ಯೆಯನ್ನು ಅಪ್ಲಿಕೇಶನ್‌ನಲ್ಲಿ ನಿಮ್ಮ ಪ್ರಾಥಮಿಕ ಗುರುತಿಸುವಿಕೆಯಾಗಿ ಬಳಸುವುದನ್ನು ಮುಂದುವರಿಸುತ್ತದೆ ಮತ್ತು ಇಮೇಲ್ ವಿಳಾಸವು ಸೇವೆಗೆ ದೃಢೀಕರಣ ಕೋಡ್‌ಗಳನ್ನು ಕಳುಹಿಸಲು ಖಾಸಗಿ ಮಾರ್ಗವಾಗಿ ಉಳಿಯುತ್ತದೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: WhatsApp: ವಾಟ್ಸಾಪ್‌ ಡೆಸ್ಕ್‌ಟಾಪ್ ಬಳಕೆದಾರರಿಗೆ ‘ಒಮ್ಮೆ ವೀಕ್ಷಣೆ’ ಫೀಚರ್ ವಾಪಸ್ ಬಂತು

ಸದ್ಯಕ್ಕೆ ಐಒಎಸ್‌ ಬಳಕೆದಾರರಿಗ ಮಾತ್ರವೇ ಲಭ್ಯವಾಗಲಿರುವ ಈ ಫೀಚರ್, ಸ್ಥಿರ ಚಾನೆಲ್‌ನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಯಾವಾಗ ದೊರೆಯಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಆಂಡ್ರಾಯ್ಡ್‌ ಬೀಟಾ ಪರೀಕ್ಷಕರಿಗೆ ಸದ್ಯಕ್ಕೆ ಇದು ದೊರೆಯುತ್ತಿದೆ ಎಂಬುದು ಖಚತಿವಾಗಿದೆ. ಜಾಹೀರಾತಿಗಾಗಿ ಇಮೇಲ್ ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್‌ನಲ್ಲಿನ ಬಳಕೆದಾರರಿಗೆ ಇಮೇಲ್ ವಿಳಾಸವನ್ನು ಲಿಂಕ್ ಮಾಡುವ ವೈಶಿಷ್ಟ್ಯವನ್ನು ಮೆಟಾ-ಮಾಲೀಕತ್ವದ ಸಂದೇಶ ಸೇವೆಯು ಹೊರತರಲಿದೆ ಎಂದು ಬಳಕೆದಾರರು ನಿರೀಕ್ಷಿಸಬಹುದು.

Continue Reading

ಆಟೋಮೊಬೈಲ್

Bhavani Revanna : ಭವಾನಿ ರೇವಣ್ಣರ 1.5 ಕೋಟಿಯ ಕಾರು ಯಾವುದು? ಅದರ ವಿಶೇಷತೆಯೇನು?

Bhavani Revanna: ಭವಾನಿ ರೇವಣ್ಣ ಅವರು ಸುಖಕರ ಪ್ರಯಾಣಕ್ಕೆ ಬಳಸಿದ್ದ ಕಾರಿನ ಕಿಮ್ಮತ್ತು ಏನು ಎಂಬುದ ಮಾಹಿತಿ ಇಲ್ಲಿದೆ.

VISTARANEWS.COM


on

Toyoto Vellfire
Koo

ಹಾಸನ: ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡರ ಸೊಸೆ, ಮಾಜಿ ಸಚಿವ ರೇವಣ್ಣ ಅವರ ಪತ್ನಿ, ಸಂಸದ ಪ್ರಜ್ವಲ್ ತಾಯಿ ಭವಾನಿ ರೇವಣ್ಣ (Bhavani Revanna) ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ತಮ್ಮ ಕಾರಿಗೆ ಗುದ್ದಿದ ಬೈಕ್​ ಸವಾರನೊಬ್ಬನಿಗೆ ಅವಾಚ್ಯ ಪದಗಳಿಂದ ಬೈಯುವ ಮೂಲಕ ಅವರು ಜನಸಾಮಾನ್ಯರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರಕರಣವನ್ನು ಸುಖಾಂತ್ಯ ಮಾಡಲು ದೊಡ್ಡಗೌಡರ ಫ್ಯಾಮಿಲಿ ಶ್ರಮ ವಹಿಸುತ್ತಿದೆ. ಏತನ್ಮಧ್ಯೆ, ಭವಾನಿ ರೇವಣ್ಣ ಅವರು ಬೈಗುಳದ ನಡುವೆ ನನ್ನ 1.5 ಕೋಟಿ ರೂಪಾಯಿಯ ಕಾರಿಗೆ ಡ್ಯಾಮೇಜ್​ ಆಗಿದೆ. ನ್ಯಾಯ ಮಾತನಾಡೋರು ರಿಪೇರಿ ಮಾಡೋದಕ್ಕೆ 50 ಲಕ್ಷ ರೂಪಾಯಿ ಕೊಡಿ ಎಂದು ಹೇಳಿದ್ದರು. ಹೀಗಾಗಿ ಇದ್ಯಾವ ಕಾರು ಎಂಬ ಕುತೂಹಲ ಮೂಡಿದೆ. ಹೀಗಾಗಿ ಭವಾನಿ ಅವರು ಪ್ರಯಾಣಿಸುತ್ತಿದ್ದ ಕಾರು ಯಾವುದು ಮತ್ತು ಅದರ ವಿಶೇಷತೆ ಏನು ಎಂಬುದನ್ನು ನೋಡೋಣ.

ಭವಾನಿ ಅವರು ಪ್ರಯಾಣಿಸುತ್ತಿದ್ದ ಕಾರಿನ ಬ್ರಾಂಡ್ ನೇಮ್​ ಟೊಯೋಟಾ ವೆಲ್​ಫೈರ್ (Toyoto Vellfire)​​. ಇದು ಜಪಾನ್ ಮೂಲಕ ಟೋಯೋಟಾ ಕಂಪನಿಯು ನಿರ್ಮಿಸುವ ಕಾರು. ಜಪಾನ್​ ತಾಂತ್ರಿಕತೆಯೊಂದಿಗೆ ಟೋಯೋಟಾ ಕಂಪನಿಯು ಭಾರತದಲ್ಲಿ ಮಾರುತ್ತಿರುವ ಅತ್ಯಂತ ದುಬಾರಿ ಬೆಲೆಯ ಕಾರು. ಅಂದ ಹಾಗೆ ಬೆಂಗಳೂರಿನ ಬಿಡದಿಯಲ್ಲಿರುವ ಟೊಯೋಟಾ ಕಂಪನಿಯ ನಿರ್ಮಾಣ ಘಟಕದಲ್ಲಿಯೇ ಈ ಕಾರನ್ನು ಉತ್ಪಾದಿಸಲಾಗುತ್ತದೆ. ಫೆಬ್ರವರಿ 26, 2020 ರಂದು ಸುಮಾರು 80 ಲಕ್ಷ ರೂ.ಗಳ ಎಕ್ಸ್ ಶೋರೂಂ ಬೆಲೆಯೊಂದಿಗೆ ಮೊಟ್ಟ ಮೊದಲ ಕಾರು ಭಾರತದಲ್ಲಿ ಬಿಡುಗಡೆಯಾಗಿತ್ತು. ಇದರ ಸುಧಾರಿತ ಆವೃತ್ತಿ (ಫೇಸ್​ಲಿಫ್ಟ್​) ಸೆಪ್ಟೆಂಬರ್ 2023ರಲ್ಲಿ ಬಿಡುಗಡೆ ಮಾಡಲಾಗಿದೆ.

ಸೆಲೆಬ್ರಿಟಿಗಳ ಕಾರು

ಇದು ಎಂಪಿವಿ (ಮಲ್ಟಿ ಪರ್ಪಸ್​ ವೆಹಿಕಲ್​) ಮಾಡೆಲ್​ನ ಕಾರು. ಟೊಯೊಟಾದ ಇನ್ನೋವಾ ಕೂಡ ಎಂಪಿವಿ ವರ್ಗಕ್ಕೆ ಸೇರಿದ ಕಾರು. ಆದರೆ, ಐಷಾರಾಮಿ ಫೀಚರ್​ಗಳು ಹಾಗೂ ವಿಶಾಲವಾದ ಜಾಗ ಹಾಗೂ ಸುಖಮಯ ಪ್ರಯಾಣದ ಕಾರಣಕ್ಕೆ ವೆಲ್​ಫೈರ್​ಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಜತೆಗೆ ಬೆಲೆಯೂ ಹೆಚ್ಚು. ಹೀಗಾಗಿ ಇದನ್ನು ಹೆಚ್ಚಾಗಿ ಸೆಲೆಬ್ರಿಟಿಗಳೇ ಖರೀದಿ ಮಾಡುತ್ತಿದ್ದಾರೆ. ಬಾಲಿವುಡ್​ ತಾರೆಯರು ಸೇರಿದಂತೆ ಭಾರತದ ಶ್ರೀಮಂತರು ಈ ಕಾರಿನ ಟಾರ್ಗೆಟ್ ಕಸ್ಟಮರ್ಸ್​​. ರಾಜಕಾರಣಿಗಳ ಕುಟುಂಬದ ಸೊಸೆಯಾಗಿರುವ ಭವಾನಿ ಅವರು ಅರ್ಹವಾಗಿ ಇದೇ ಕಾರಿನಲ್ಲಿ ಪ್ರಯಾಣಿಸಿದ್ದಾರೆ.

ಹೊಸ ಟೊಯೊಟಾ ವೆಲ್ಫೈರ್ ವಿನ್ಯಾಸ

ಇತ್ತೀಚೆಗೆ ಬಿಡುಗಡೆಯಾದ ವೆಲ್ ಫೈರ್ ಬಹುತೇಕ ಹಳೆಯ ನೋಟವನ್ನೇ ಉಳಿಸಿಕೊಂಡಿದೆ ಅಂದರೇ ಒಂದು ರೀತಿ ಸಣ್ಣ ವ್ಯಾನ್ ಮಾದರಿಯ ಐಷಾರಾಮಿ ನೋಟ. ಟೊಯೊಟಾ ಮುಂಭಾಗದಲ್ಲಿ ಆರು-ಸ್ಲಾಟ್ ಗ್ರಿಲ್ ಗಳಿದ್ದು. ಮಧ್ಯದಲ್ಲಿ ಟೊಯೋಟಾ ಲೋಗೋವನ್ನು ಅಳವಡಿಸಲಾಗಿದೆ. ಇದು ಸ್ಪ್ಲಿಟ್ ಹೆಡ್ ಲ್ಯಾಂಪ್ ಗಳಿಂದ ಹೊಂದಿದೆ. ಹೆಡ್ ಲ್ಯಾಂಪ್ ಗಳ ಕೆಳಭಾಗದಲ್ಲಿ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಗಳಿವೆ. ಯು-ಆಕಾರದ ಕ್ರೋಮ್ ಸ್ಟ್ರಿಪ್ ಎರಡು ಹೆಡ್ ಲ್ಯಾಂಪ್ ಗಳನ್ನು ಸಂಪರ್ಕಿಸುವ ಬಂಪರ್ ನಡುವೆ ಸಾಗಿದೆ.

ವೆಲ್​ಫೈರ್​​ನ ಗ್ಲಾಸ್ ಹೌಸ್ ಕ್ರೋಮ್ ಔಟ್ ಲೈನ್ ಹೊಂದಿದೆ. ಹಿಂಭಾಗದಲ್ಲಿ ವಿ-ಆಕಾರದ ಟೈಲ್ ಲ್ಯಾಂಪ್ ಆವರಣವನ್ನು ಹೊಂದಿದ್ದು, ವಿಸ್ತ್ರತ ಕ್ರೋಮ್ ಟ್ರಿಮ್ ಇದೆ. ವೆಲ್ಫೈರ್ ಬ್ಯಾಡ್ಜಿಂಗ್ ಮತ್ತು ಮಧ್ಯದಲ್ಲಿ ದೊಡ್ಡ ಟೊಯೊಟಾ ಲೋಗೊವನ್ನು ಹೊಂದಿದೆ.

ಇಂಟೀರಿಯರ್ ವಿಶೇಷತೆ

ಹೊಸ ವೆಲ್ ಫೈರ್​ನಲ್ಲಿ ಕಡಿಮೆ ಬಟನ್ ಇರುವ ಮತ್ತು ಅತ್ಯಂತ ಸರಳವಾಗಿ ಕಾಣುವ ಡ್ಯಾಶ್ ಬೋರ್ಡ್ ನೀಡಲಾಗಿದೆ. ಬಹುತೇಕ ಕೆಲಸವನ್ನು ದೊಡ್ಡ, 14-ಇಂಚಿನ ಟಚ್ ಸ್ಕ್ರೀನ್ ನಲ್ಲಿ ಅಳವಡಿಸಲಾಗಿದೆ. ಹೆಚ್ಚು ಆರಾಮದಾಯಕ ಸೀಟ್ ವಿನ್ಯಾಸವನ್ನು ಇದು ಹೊಂದಿದೆ. ದೊಡ್ಡ ಓವರ್ ಹೆಡ್ ಕನ್ಸೋಲ್, ಹಲವು ಎಸಿ ವೆಂಟ್ ಗಳು ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಪುಲ್-ಡೌನ್ ಸನ್ ಶೇಡ್​ ಈ ಕಾರಿನಲ್ಲಿದೆ.

ಟಾಪ್ ಎಂಡ್​ ವೆಲ್​ಫೈರ್​ ವಿಐಪಿ ಟ್ರಿಮ್​ನಲ್ಲಿ ಎಕ್ಸಿಕ್ಯೂಟಿವ್ ಲಾಂಜ್ ಪ್ಯಾಕೇಜ್​ ಜತೆ ನೀಡಲಾಗುತ್ತದೆ. ಈ ಕಾರಿನ ಎರಡನೇ ಸಾಲಿನಲ್ಲಿ ಎರಡು ಕ್ಯಾಪ್ಟನ್ ಸೀಟ್​ಗಳು ಮಾತ್ರ ಇರುತ್ತವೆ. ಪ್ರತ್ಯೇಕ ಕಂಟ್ರೋಲ್​ ಯೂನಿಟ್​ ಕೂಡ ಇದೆ. ಇದು ಹಿಂಬದಿ ಪ್ರಯಾಣಿಕರಿಗೆ ಮೀಡಿಯಾ ಮತ್ತು ಕ್ಲೈಮೇಟ್​ ಕಂಟ್ರೋಲ್​ ಸೆಟ್ಟಿಂಗ್​​ಗಳನ್ನು ಮತ್ತು ಸನ್​​ಶೇಡ್​ಗಳನ್ನು ನೀಡುತ್ತದೆ.

ಇದನ್ನೂ ಓದಿ : Bhavani Revanna : ಸಾಯೋಕೆ ನನ್ನ 1.5 ಕೋಟಿ ಕಾರೇ ಬೇಕಾ?; ಭವಾನಿ ರೇವಣ್ಣ ದರ್ಪಕ್ಕೆ ಎಲ್ಲೆಡೆ ಆಕ್ರೋಶ

ಹೆಡ್ಸ್-ಅಪ್ ಡಿಸ್​ಪ್ಲೇ ವೈರ್​ಲೆಸ್​ ಚಾರ್ಜರ್, ಎರಡನೇ ಸಾಲಿನ ಸೀಟುಗಳಿಗೆ ಒಟ್ಟೋಮನ್ (ಹೈ ಟ್ರಿಮ್) ಮತ್ತು ಎಂಟು ರೀತಿಯಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತಿತರ ವೈಶಿಷ್ಟ್ಯಗಳನ್ನು ನೀಡಲಾಗಿದೆ.. ಟೊಯೊಟಾ 60 ಕ್ಕೂ ಹೆಚ್ಚು ಕನೆಕ್ಟೆಡ್​ ವಿಶೇಷತೆಗಳನ್ನು ಹೊಂದಿದೆ.\

ಸಿಕ್ಕಾಪಟ್ಟೆ ಸೇಫ್​ ಕಾರು

ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ವೆಲ್​ಫೈರ್​ ಎಂಪಿವಿ ಟೊಯೊಟಾ ಸೇಫ್ಟಿ ಸೆನ್ಸ್ ಅಡಾಸ್​​ ಸಿಸ್ಟಮ್ ಅನ್ನು ಹೊಂದಿದೆ. ಇದು ಅಪಘಾತದ ಮೊದಲಿನ ಸುರಕ್ಷತಾ ವ್ಯವಸ್ಥೆ, ಲೇನ್ ಟ್ರೇಸ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್​ನೊಂದಿಗೆ ಬರುತ್ತದೆ. ಇದಲ್ಲದೆ, ಇದು ಆರು ಏರ್ ಬ್ಯಾಗ್​​ಗಳು, ಸ್ಟೆಬಿಲಿಟಿ ಕಂಟ್ರೋಲ್, ಪಾರ್ಕ್ ಅಸಿಸ್ಟ್, ಹಿಲ್ ಅಸಿಸ್ಟ್ ಕಂಟ್ರೋಲ್ ಕೂಡ ಪಡೆಯುತ್ತದೆ.

ಎಂಜಿನ್ ಪವರ್​ ಏನಿದೆ?

ವೆಲ್ ಫೈರ್ ಟೊಯೊಟಾದ ಮಾಡ್ಯುಲರ್ ಟಿಎನ್​​ಜಿಎ-ಕೆ ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಾಣಗೊಂಡಿದೆ. ಇದು 4,995 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,950 ಎಂಎಂ ಎತ್ತರ ಮತ್ತು 3,000 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಹೊಸ ವೆಲ್ ಫೈರ್ 193 ಬಿಹೆಚ್​​ಪಿ, 240 ಎನ್ಎಂ ಪವರ್​ ಸೃಷ್ಟಿಸುವ 2.5-ಲೀಟರ್​ನ ನಾಲ್ಕು ಸಿಲಿಂಡರ್ ಪೆಟ್ರೋಲ್-ಹೈಬ್ರಿಡ್ ಎಂಜಿನ್ ಹೊಂದಿದೆ. ಇದರಲ್ಲಿ ಇ ಸಿವಿಟಿ ಗೇರ್​ಬಾಕ್ಸ್​ ಇದೆ. ವೆಲ್​ಫೈರ್​ ಪ್ರತಿ ಲೀಟರ್​ ಪೆಟ್ರೋಲ್​ಗೆ 19.28 ಕಿ.ಮೀ ಮೈಲೇಜ್ ನೀಡುತ್ತದೆ.

ಒಂದೂವರೆ ಕೋಟಿ ಬೆಲೆ ಇರೋದು ಹೌದಾ?

ಖಂಡಿತಾ. ಭವಾನಿ ರೇವಣ್ಣ ಅವರು ಕೋಪದ ಭರದಲ್ಲಿ ಕೆಟ್ಟದಾಗಿ ಬೈದಿರಬಹುದು. ಆದರೆ, ರೇಟ್​ ಬಗ್ಗೆ ಸುಳ್ಳು ಹೇಳಿಲ್ಲ. ಈ ಕಾರಿನ ಬೆಲೆ 1. 5 ಕೋಟಿ ರೂಪಾಯಿಗಿಂತಲೂ ಹೆಚ್ಚಿದೆ. ಕಾರು ಕೇವಲ 2 ವೇರಿಯೆಂಟ್​ಗಳಲ್ಲಿ ಮಾತ್ರ ಲಭ್ಯವಿದೆ. ಬೇಸ್​ ಮಾಡೆಲ್​ ಹೈ (hi) ಎಂಬ ಹೆಸರಿನೊಂದಿಗೆ ಲಭ್ಯವಿದ್ದರೆ, ಇನ್ನೊಂದು ಮಾಡೆಲ್​ ವಿಐಪಿ ಎಕ್ಸೆಕ್ಯುಟಿವ್​ ಲಾಂಜ್​ (VIP Executive Lounge) ರೂಪದಲ್ಲಿ ಸಿಗುತ್ತದೆ. ಬೆಂಗಳೂರಿನಲ್ಲಿ ಬೇಸ್​ ಮಾಡೆಲ್​ ಕಾರಿನ ಆನ್​ ರೋಡ್ ಬೆಲೆ 1,48,58,511 ರೂಪಾಯಿ (1.48 ಕೋಟಿ). ಇನ್ನೊಂದು ವೇರಿಯೆಂಟ್​ಗೆ 1,60,94,733 ಕೋಟಿ ರೂಪಾಯಿ. ಅಂದರೆ ಭವಾನಿ ರೇವಣ್ಣ ಅವರು ಹೇಳಿದ್ದಕ್ಕಿಂತ ಇನ್ನೂ 10 ಲಕ್ಷ ರೂಪಾಯಿ ಅಧಿಕ. ಇಲ್ಲಿಗೆ ಮುಗಿದಿಲ್ಲ. 1.5 ಕೋಟಿ ಇದ್ದ ತಕ್ಷಣವೇ ಈ ಕಾರು ತಗೊಂಡು ಬರೋದಿಕ್ಕೆ ಆಗುವುದಿಲ್ಲ. ಇತ್ತೀಚಿನ ಮಾಹಿತಿ ಪ್ರಕಾರ ಈ ಕಾರಿನ ವೇಟಿಂಗ್ ಪಿರಿಯೆಡ್​ (ಕಾಯುವಿಕೆಯ ಅವಧಿ) 14 ತಿಂಗಳು. ಅಂದರೆ, ಕಾರು ಬುಕ್ ಮಾಡಿ 1 ವರ್ಷಕ್ಕೂ ಅಧಿಕ ದಿನಗಳು ಕಾಯಬೇಕು.

Continue Reading
Advertisement
Madhu Bangarappa in Belagavi Winter Session
ಕರ್ನಾಟಕ16 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Pressmeet for Demand for construction of bypass road in Yallapur
ಉತ್ತರ ಕನ್ನಡ21 mins ago

Uttara Kannada News: ಯಲ್ಲಾಪುರ ಪಟ್ಟಣದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒತ್ತಾಯ

Israel
ಪ್ರಮುಖ ಸುದ್ದಿ23 mins ago

Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

bengaluru bulls kiccha sudeep
ಕ್ರೀಡೆ23 mins ago

ಬೆಂಗಳೂರು ಬುಲ್ಸ್​ಗೆ ಫುಲ್ ಚಾರ್ಜ್​ ಮಾಡಲು ಬರಲಿದ್ದಾರೆ ಕಿಚ್ಚ ಸುದೀಪ್

self harming by wadi Acc cement Depute Director
ಕರ್ನಾಟಕ40 mins ago

Self Harming : ಅದಾನಿ ಗ್ರೂಪ್‌ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ಸೂಸೈಡ್‌!

A girl shoots her classmate and herself with shotgun
ವಿದೇಶ41 mins ago

viral video: ಸಹಪಾಠಿಗೆ ಗುಂಡು ಹೊಡೆದು ತಾನೂ ಸತ್ತ 14 ವರ್ಷದ ವಿದ್ಯಾರ್ಥಿನಿ!

Flax Seeds Benefits For Hair
ಆರೋಗ್ಯ50 mins ago

Flax Seeds Benefits For Hair: ಚಳಿಗಾಲದಲ್ಲಿ ಕೂದಲ ಆರೋಗ್ಯಕ್ಕೆ ಅಗಸೆಬೀಜ ಸೂಪರ್‌!

Wedding Fashion
ಫ್ಯಾಷನ್56 mins ago

Wedding Fashion: ಮದುಮಗನ ಆರತಕ್ಷತೆಯ ಗ್ರ್ಯಾಂಡ್‌ ಔಟ್‌ಫಿಟ್‌ ಆಯ್ಕೆಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

U-19 Asia Cup IND vs PAK
ಕ್ರಿಕೆಟ್1 hour ago

ನಾಳೆಯಿಂದ ಅಂಡರ್​-19 ಏಷ್ಯಾಕಪ್; ಭಾರತ-ಪಾಕ್​ ಮುಖಾಮುಖಿ ಯಾವಾಗ?

Veer Savarkar and Priyank Kharge
ಕರ್ನಾಟಕ1 hour ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ16 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ1 hour ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ7 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ14 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ22 hours ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ1 day ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ1 day ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ1 day ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 day ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 day ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌