Site icon Vistara News

ChatGPT ಬಳಸಬೇಕಿದ್ದರೆ ತಿಂಗಳಿಗೆ 3,400 ರೂ. ಕೊಡ್ಬೇಕಾ?

ChatGPT may charge for using it

ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿರುವ ಚಾಟ್‌ಜಿಪಿಟಿ(ChatGPT) ಚಾಟ್‌ಬಾಟ್ ಈಗ ಪ್ರೊಫೆಷನಲ್ ಪ್ಲ್ಯಾನ್‌ಗಳನ್ನು ಜಾರಿಗೆ ತರಲು ಹೊರಟಿದೆ ಎನ್ನಲಾಗಿದೆ. ಚಾಟ್‌ಜಿಪಿಟಿ ಪ್ರತಿ ತಿಂಗಳಿಗೆ 42 ಡಾಲರ್ ಶುಲ್ಕ ವಿಧಿಸಲಿದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದು ಅಂದಾಜ 3,400 ರೂ. ಆಗಲಿದೆ. ಆದರೆ, ಈ ಬಗ್ಗೆ ಚಾಟ್‌ಜಿಪಿಟಿ ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿಲ್ಲ. ಚಾಟ್‌ಜಿಪಿಟಿಯನ್ನು ಮೈಕ್ರೋಸಾಫ್ಟ್ ಜತೆಗೂಡಿ ಓಪನ್ಐಎ ಅಭಿವೃದ್ಧಿಪಡಿಸಿದೆ.

ಈ ತಿಂಗಳ ಆರಂಭದಲ್ಲಿ ಓಪನ್ ಎಐ ವೃತ್ತಿಪರ ಶ್ರೇಣಿಯ ಸೇವೆಗೆ ಸಂಬಂಧಿಸಿದ ಪಟ್ಟಿಯನ್ನು ಹಂಚಿಕೊಂಡಿದೆ. ಆ ಪೋಸ್ಟ್ ಯಾವುದೇ ನಿರ್ದಿಷ್ಟ ಪಾವತಿ ನಿಯಮಗಳನ್ನು ಒಳಗೊಂಡಿಲ್ಲ. ಚಾಟ್ ಜನರೇಟಿವ್ ಪ್ರಿ-ಟ್ರೇನ್ಡ್ ಟ್ರಾನ್ಸ್‌ಫಾರ್ಮರ್ ಪ್ರತಿನಿಧಿಸುವ ಚಾಟ್‌ಜಿಪಿಟಿಯಿಂದ ಹಣಗಳಿಸುವುದನ್ನು ಎದುರು ನೋಡಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ : ChatGPT: ಏನಿದು ಚಾಟ್‌ಬಾಟ್? ಮನುಷ್ಯರ ಕೆಲಸ ಕಿತ್ತುಕೊಳ್ಳುತ್ತಾ?

ಕಳೆದ ವಾರ ಈ ಬಗ್ಗೆ ಬರೆದುಕೊಂಡಿದ್ದ ಓಪನ್ ಎಐ, ಚಾಟ್‌ಜಿಪಿಟಿಯಿಂದ ಹೇಗೆ ಹಣಗಳಿಸಬಹುದು ಎಂಬ ಬಗ್ಗೆ ನಾವು ಚಿಂತನೆ ಆರಂಭಿಸಿದ್ದೇವೆ. ಚಾಟ್‌ಜಿಪಿಟಿಯಲ್ಲಿ ನಿರಂತರ ಸುಧಾರಣೆ ಮತ್ತು ಅದನ್ನೇ ಮುಂದುವರಿಸುವ ಉದ್ದೇಶ ನಮ್ಮದು. ಹಾಗೆಯೇ ಈ ಮೂಲಕ ಹಣ ಗಳಿಸುವುದು ನಮ್ಮ ಚಿಂತನೆಯಾಗಿದೆ ಎಂದು ಹೇಳಿತ್ತು.

Exit mobile version