ಗ್ಯಾಜೆಟ್ಸ್
ChatGPT ಬಳಸಬೇಕಿದ್ದರೆ ತಿಂಗಳಿಗೆ 3,400 ರೂ. ಕೊಡ್ಬೇಕಾ?
ಭಾರೀ ಸದ್ದು ಮಾಡುತ್ತಿರುವ ಮತ್ತು ನಾನಾ ಚರ್ಚೆಗೆ ಕಾರಣವಾಗಿರುವ ಓಪನ್‍ಎಐನ ಚಾಟ್‌ಜಿಪಿಟಿ(ChatGPT)ಯನ್ನು ಬಳಸಲು ಬಳಕೆದಾರರು ಶುಲ್ಕ ನೀಡಬೇಕಾಗಬಹುದು. ಆದರೆ, ಈ ಕಂಪನಿಯು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿರುವ ಚಾಟ್‌ಜಿಪಿಟಿ(ChatGPT) ಚಾಟ್‌ಬಾಟ್ ಈಗ ಪ್ರೊಫೆಷನಲ್ ಪ್ಲ್ಯಾನ್‌ಗಳನ್ನು ಜಾರಿಗೆ ತರಲು ಹೊರಟಿದೆ ಎನ್ನಲಾಗಿದೆ. ಚಾಟ್‌ಜಿಪಿಟಿ ಪ್ರತಿ ತಿಂಗಳಿಗೆ 42 ಡಾಲರ್ ಶುಲ್ಕ ವಿಧಿಸಲಿದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದು ಅಂದಾಜ 3,400 ರೂ. ಆಗಲಿದೆ. ಆದರೆ, ಈ ಬಗ್ಗೆ ಚಾಟ್‌ಜಿಪಿಟಿ ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿಲ್ಲ. ಚಾಟ್‌ಜಿಪಿಟಿಯನ್ನು ಮೈಕ್ರೋಸಾಫ್ಟ್ ಜತೆಗೂಡಿ ಓಪನ್ಐಎ ಅಭಿವೃದ್ಧಿಪಡಿಸಿದೆ.
ಈ ತಿಂಗಳ ಆರಂಭದಲ್ಲಿ ಓಪನ್ ಎಐ ವೃತ್ತಿಪರ ಶ್ರೇಣಿಯ ಸೇವೆಗೆ ಸಂಬಂಧಿಸಿದ ಪಟ್ಟಿಯನ್ನು ಹಂಚಿಕೊಂಡಿದೆ. ಆ ಪೋಸ್ಟ್ ಯಾವುದೇ ನಿರ್ದಿಷ್ಟ ಪಾವತಿ ನಿಯಮಗಳನ್ನು ಒಳಗೊಂಡಿಲ್ಲ. ಚಾಟ್ ಜನರೇಟಿವ್ ಪ್ರಿ-ಟ್ರೇನ್ಡ್ ಟ್ರಾನ್ಸ್‌ಫಾರ್ಮರ್ ಪ್ರತಿನಿಧಿಸುವ ಚಾಟ್‌ಜಿಪಿಟಿಯಿಂದ ಹಣಗಳಿಸುವುದನ್ನು ಎದುರು ನೋಡಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ : ChatGPT: ಏನಿದು ಚಾಟ್‌ಬಾಟ್? ಮನುಷ್ಯರ ಕೆಲಸ ಕಿತ್ತುಕೊಳ್ಳುತ್ತಾ?
ಕಳೆದ ವಾರ ಈ ಬಗ್ಗೆ ಬರೆದುಕೊಂಡಿದ್ದ ಓಪನ್ ಎಐ, ಚಾಟ್‌ಜಿಪಿಟಿಯಿಂದ ಹೇಗೆ ಹಣಗಳಿಸಬಹುದು ಎಂಬ ಬಗ್ಗೆ ನಾವು ಚಿಂತನೆ ಆರಂಭಿಸಿದ್ದೇವೆ. ಚಾಟ್‌ಜಿಪಿಟಿಯಲ್ಲಿ ನಿರಂತರ ಸುಧಾರಣೆ ಮತ್ತು ಅದನ್ನೇ ಮುಂದುವರಿಸುವ ಉದ್ದೇಶ ನಮ್ಮದು. ಹಾಗೆಯೇ ಈ ಮೂಲಕ ಹಣ ಗಳಿಸುವುದು ನಮ್ಮ ಚಿಂತನೆಯಾಗಿದೆ ಎಂದು ಹೇಳಿತ್ತು.
ಗ್ಯಾಜೆಟ್ಸ್
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
Aadhaar Update: ಆಧಾರ್ ಅಪ್‌ಡೇಟ್ ಮಾಡಕೊಳ್ಳಲು ಜೂನ್ 14ರವರೆಗೆ ಉತ್ತಮ ಅವಕಾಶವಿದೆ. ನೀವು ಉಚಿತವಾಗಿಯೇ ಆನ್‌ಲೈನ್ ಮೂಲಕ ಆಧಾರ್ ಅಪ್‌ಡೇಟ್ ಮಾಡಬಹುದು.
ಬೆಂಗಳೂರು, ಕರ್ನಾಟಕ: 12 ಅಂಕಿಗಳುಳ್ಳ ವಿಶಿಷ್ಟ ನಂಬರ್ ಆಧಾರ್ ಬಹಳ ಪ್ರಮುಖವಾದ ಒಂದು ದಾಖಲೆಯಾಗಿದೆ. ನಮ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವ ಈ ನಂಬರ್ ಅನ್ನು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು, ಯಾವುದೇ ರೀತಿಯ ದೃಢೀಕರಣಕ್ಕೆ ಬಳಸುತ್ತೇವೆ. ಆದರೆ, ಕೆಲವೊಮ್ಮೆ ನಾನಾ ಕಾರಣದಿಂದ ಮಾಹಿತಿಯ ತಪ್ಪಾಗಿದ್ದರೆ, ಅದನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ. ಆಧಾರ್ ಕೇಂದ್ರಗಳಿಗೆ ಹೋಗಿ ಅಪ್‌ಡೇಟ್ ಮಾಡುವುದಾದರೆ 50 ರೂ. ನೀಡಬೇಕಾಗುತ್ತದೆ. ಆದರೆ, ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ (Aadhaar Update) ಮಾಡಲು ಯಾವುದೇ ದುಡ್ಡಿಲ್ಲ. ಆಧರೆ, ಈ ಸೌಲಭ್ಯವು ಜೂನ್ 14ರವರೆಗೆ ಮಾತ್ರವೇ ಇದೆ ಎಂಬುದನ್ನು ನೆನಪಿಡಿ. ಹಾಗೆಯೇ, ಆಧಾರ್ ಅಪ್‌ಡೇಟ್ ಕಡ್ಡಾಯ ಕೂಡ ಅಲ್ಲ.
Aadhaar Update: ಏನೇನು ಅಪ್‌ಡೇಟ್ ಮಾಡಬಹುದು?
ಬಳಕೆದಾರರ ವಿವರಗಳನ್ನು ಮರುಮೌಲ್ಯಮಾಪನ ಮಾಡಲು ಗುರುತಿನ ಪುರಾವೆ (PoI) ಮತ್ತು ವಿಳಾಸದ ಪುರಾವೆ (PoA) ದಾಖಲೆಗಳನ್ನು ಆನ್ಲೈನ್‌ನಲ್ಲಿ ಉಚಿತವಾಗಿ ಅಪ್‌ಲೋಡ್ ಮಾಡಬಹುದು. ಆಧಾರ್ ಕಾರ್ಡ್ ಪಡೆದು ದಶಕಗಳಾಗಿದ್ದರೆ, ಅಪ್‌ಡೇಟ್ ಮಾಡಿದರೆ ಒಳ್ಳೆಯವುದು. ಆದರೆ, ನೆನಪಿನಲ್ಲಿಡಿ ಅಪ್‌ಡೇಟ್ ಮಾಡುವುದೇನೂ ಕಡ್ಡಾಯವಲ್ಲ. ನಿಮ್ಮ ಮಾಹಿತಿ ಸರಿಯಾಗಿರಬೇಕು ಎಂದಾದರೆ ಅಥವಾ ಅಗತ್ಯ ಇದೆ ಎನ್ನುವುದಾದರೆ ಅಪ್‌ಡೇಟ್ ಮಾಡಿಕೊಳ್ಳಬಹುದು.
ಆನ್‌ಲೈನ್‌ನಲ್ಲಿಆಧಾರ್ ಅಪ್‌ಡೇಟ್ ಮಾಡುವುದು ತುಂಬ ಕಷ್ಟವೇನೂ ಅಲ್ಲ. ಕೇವಲ ಕೆಲವೇ ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಮಾಡಬಹುದು. ಇದಕ್ಕಾಗಿ ಸಂಬಂಧಿಸಿದ ದಾಖಲೆಗಳನ್ನು ಮೊದಲೇ ಸ್ಕ್ಯಾನ್ ಮಾಡಿಟ್ಟುಕೊಂಡಿರಬೇಕು. ಅಂದರೆ, ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯನ್ನು ಪುರಸ್ಕರಿಸುವ ದಾಖಲೆ ಪತ್ರಗಳನ್ನು ಸ್ಕ್ಯಾನ್ ಮಾಡಿ, ಸೇವ್ ಮಾಡಿಟ್ಟುಕೊಂಡಿರಬೇಕು. ಆಗ, ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡುವುದು ಸುಲಭವಾಗುತ್ತದೆ.
ಇದನ್ನೂ ಓದಿ: Aadhaar Update | ಹೊಸ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವುದು ಹೇಗೆ?
ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಮಾಡಲು ಈ ಸ್ಟೆಪ್ಸ್ ಫಾಲೋ ಮಾಡಿ….
- ಮೊದಲಿಗೆ UIDAI ಜಾಲತಾಣದಲ್ಲಿ Aadhaar Self Service (ಆಧಾರ್ ಸೆಲ್ಪ್ ಸರ್ವಿಸ್) ಪೋರ್ಟಲ್‌ಗೆ ಭೇಟಿ ನೀಡಿ. ಆನ್‌ಲೈನ್ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.
- ಡಾಕ್ಯುಮೆಂಟ್ ಅಪ್‌ಡೇಟ್ (Document Update)ಮೇಲೆ ಕ್ಲಿಕ್ ಮಾಡಿ ಮತ್ತು ಈಗಿರುವ ದಾಖಲೆ, ಮಾಹಿತಿಯನ್ನು ಖಚಿತಪಡಿಸಿ.
- ಡ್ರಾಪ್-ಡೌನ್ ಪಟ್ಟಿಯನ್ನು ಬಳಸಿ, ಪರಿಶೀಲನೆಗಾಗಿ ಮೂಲ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಆಯ್ಕೆಮಾಡಿ ಮತ್ತು ಅಪ್‌ಲೋಡ್ ಮಾಡಿ.
- ಈ ವೇಳೆ ನೀಡಲಾಗುವ ಸರ್ವೀಸ್ ರಿಕ್ವೆಸ್ಟ್ ನಂಬರ್ ನೋಟ್ ಮಾಡಿಟ್ಟುಕೊಳ್ಳಿ. ಇದರಿಂದ ಅಪ್‌ಡೇಟ್ ಪ್ರೊಸೆಸಿಂಗ್ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.
- ಇಷ್ಟಾದರೆ, ನಿಮ್ಮ ಆನ್‌ಲೈನ್ ಆಧಾರ್ ಅಪ್‌ಡೇಟ್ ಪ್ರಕ್ರಿಯೆ ಪೂರ್ಣವಾಗುತ್ತದೆ.
ಗ್ಯಾಜೆಟ್ಸ್
Twitter: ಟ್ವಿಟರ್ ಜಾಹೀರಾತು ಆದಾಯದಲ್ಲಿ ಶೇ.89 ಕುಸಿತ! ಎಲಾನ್ ಮಸ್ಕ್‌ಗೆ ಆತಂಕ
Twitter: ಜಗತ್ತಿನ ಪ್ರಖ್ಯಾತ ಮೈಕ್ರೋಬ್ಲಾಗಿಂಗ್ ಟ್ವಿಟರ್ ವೇದಿಕೆಯನ್ನು ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಕಳೆದ ವರ್ಷ ಖರೀದಿಸಿದ್ದರು. ಆ ಬಳಿಕ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದರು. ಆದರೆ, ಆದಾಯದಲ್ಲಿ ನಿರೀಕ್ಷಿತ ಬೆಳವಣಿಗೆಯನ್ನು ಕಂಡಿಲ್ಲ.
ನವದೆಹಲಿ: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಕಳೆದ ವರ್ಷ 44 ಶತಕೋಟಿ ಡಾಲರ್ ತೆತ್ತು ಪ್ರಖ್ಯಾತ ಮೈಕ್ರೋಬ್ಲಾಗಿಂಗ್ ವೇದಿಕೆ ಟ್ವಿಟರ್ (Twitter) ಖರೀದಿಸಿ, ಸಂಪೂರ್ಣವಾಗಿ ಬದಲಾಯಿಸಿದ್ದರು. ಅರ್ಧಕರ್ಧ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದರು. ಚಂದಾದಾರಿಕೆ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ಮಾಡಿದ್ದರು. ಈ ಎಲ್ಲ ಕ್ರಮಗಳಿಂದ ಟ್ವಿಟರ್‌ಗೆ ಏನಾದರೂ ಲಾಭವಾಯಿತೇ? ಗೊತ್ತಿಲ್ಲ, ಆದರೆ, ಟ್ವಿಟರ್ ಆದಾಯದಲ್ಲಿ ಮಾತ್ರ ಕುಂಠಿತವಾಗಿದೆ. ವರದಿಗಳ ಪ್ರಕಾರ, ಟ್ವಿಟರ್‌ಗೆ ಜಾಹೀರಾತು ಆದಾಯದಲ್ಲಿ ಶೇ.89ರಷ್ಟು ಕುಸಿತವಾಗಿದೆ(Ad Revenue). ಇದು ಎಲಾನ್ ಮಸ್ಕ್ ಅವರ ಚಿಂತೆಗೆ ಕಾರಣವಾಗಿದೆ.
ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಸಿದ ಮೇಲೆ, ಅದರ ದೈನಿಂದನ ಬಳಕೆದಾರರಲ್ಲಿ ಹೆಚ್ಚಳವಾಗಿದೆ. ಆದರೆ, ಕಳೆದ ಅಕ್ಟೋಬರ್‌ನಿಂದ ಕಂಪನಿಯ ಆದಾಯದಲ್ಲಿ ಮಾತ್ರ ಭಾರೀ ಕುಸಿತವಾಗಿದೆ. ಈ ಬಗ್ಗೆ ಸ್ವತಃ ಎಲಾನ್ ಮಸ್ಕ್ ಅವರು ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಜಾಹೀರಾತು ಆದಾಯದ ಮೇಲೆ ಭಾರೀ ಹೊಡೆತ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.
ಎಚ್‌ಬಿಒ, ಅಮೆಜಾನ್, ಐಬಿಎಂ ಮತ್ತು ಕೊಕೊಕೋಲಾ ಟ್ವಿಟರ್‌ನ ಪ್ರಮುಖ ಜಾಹೀರಾತು ಗ್ರಾಹಕರಾಗಿದ್ದರು. ಕಳೆದ ಫೆಬ್ರವರಿಯವರೆಗೆ, ಮಾಂಡೆಲೆಜ್ ಇಂಟರ್‌ನ್ಯಾಷನಲ್ ಇಂಕ್, ಕೊಕೊಕೋಲಾ ಕಂಪನಿ, ಮೆರ್ಕ್ ಆ್ಯಂಡ್ ಕಂಪನಿ ಮತ್ತು ಹಿಲ್ಟನ್ ವರ್ಲ್ಡ್‌ವೈಡ್ ಹೋಲ್ಡಿಂಗ್ಸ್ ಇಂಕ್, ಎಟಿ ಆ್ಯಟಿ ಇಂಕ್ ಸೇರಿದಂತೆ ಅನೇಕ ಕಂಪನಿಗಳು ಇನ್ನೂ ಟ್ವಿಟರ್‌ನಲ್ಲಿ ಜಾಹೀರಾತಿಗಾಗಿ ವೆಚ್ಚ ಮಾಡಲು ಮುಂದಾಗಿಲ್ಲ ಎನ್ನಲಾಗಿದೆ.
ಇದರ ಮಧ್ಯೆಯೇ ಎಲಾನ್ ಮಸ್ಕ್ ಅವರು ಜಾಹೀರಾತುದಾರರಿಗೆ ಧೈರ್ಯ ತುಂಬಲು ಕ್ರಮಗಳನ್ನು ಕೈಗೊಂಡಿದ್ದಾರೆ. ಹಲವು ನಿಯಂತ್ರಣಗಳನ್ನು ಪರಿಚಯಿಸುವ ಮೂಲಕ ಟ್ವಿಟರ್ ಜಾಹೀರಾತು ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಇದು ನಿರ್ದಿಷ್ಟ ಕೀವರ್ಡ್‌ಗಳು ಅಥವಾ ಚಿತ್ರಗಳನ್ನು ಹೊಂದಿರುವ ಟ್ವೀಟ್‌ಗಳ ಜೊತೆಗೆ ತಮ್ಮ ಜಾಹೀರಾತುಗಳು ಕಾಣಿಸಿಕೊಳ್ಳುವುದನ್ನು ತಡೆಯಲು ಮಾರಾಟಗಾರರಿಗೆ ಅವಕಾಶ ನೀಡುತ್ತದೆ. ಕಳೆದ ವರ್ಷ, ಟ್ವಿಟರ್ ಜಾಹೀರಾತುದಾರರಿಗೆ ಗಮನಾರ್ಹ ರಿಯಾಯಿತಿಗಳನ್ನು ನೀಡಲು ಪ್ರಾರಂಭಿಸಿತು. ಇಷ್ಟಾಗಿಯೂ ನಿರೀಕ್ಷಿತ ಫಲಿತಾಂಶವನ್ನು ಪಡೆದುಕೊಳ್ಳಲು ಟ್ವಿಟರ್ ವಿಫಲವಾಗಿದೆ.
ಭಾರತದಲ್ಲಿ Twitter Blue ಸಬ್‌ಸ್ಕ್ರಿಪ್ಷನ್ ಶುರು, ತಿಂಗಳಿಗೆ 900 ರೂ.!
ಎಲಾನ್ ಮಸ್ಕ್ ಒಡೆತನದ ಟ್ವಿಟರ್ ತನ್ನ ಬ್ಲೂ ಸಬ್‌ಸ್ಕ್ರಿಪ್ಷನ್ (Twitter Blue) ಸೇವೆಯನ್ನು ಭಾರತದಲ್ಲೂ ಆರಂಭಿಸಿದೆ. ಈ ಸೇವೆ, ವೆಬ್ (Web) ಸೇರಿದಂತೆ ಐಒಎಸ್ (iOS) ಮತ್ತು ಆಂಡ್ರಾಯ್ಡ್ (Android) ಎರಡೂ ಸಾಧನಗಳಲ್ಲಿ ದೊರೆಯಲಿದೆ. ಟ್ವಿಟರ್ ಬ್ಲೂ ಚಂದಾದಾರರಿಗೆ ಅವರ ಪ್ರೊಫೈಲ್‌ನಲ್ಲಿ ಕೆಲವು ಇತರ ವೈಶಿಷ್ಟ್ಯಗಳೊಂದಿಗೆ ಪರಿಶೀಲಿಸಿದ ನೀಲಿ ಟಿಕ್ ಮಾರ್ಕ್ ನೀಡಲಾಗುತ್ತದೆ. ಈ ಟಿಕ್ ಮಾರ್ಕ್ ಪಡೆದ ಪ್ರೊಫೈಲ್‌ಗಳಿಗೆ ಅಧಿಕೃತೆ ಲಭ್ಯವಾಗುತ್ತದೆ.
ಒಂದು ವೇಳೆ ನೀವು, ಮೊಬೈಲ್‌ನಲ್ಲಿ ಮಾಸಿಕ ಟ್ವಿಟರ್ ಸಬ್‌ಸ್ಕ್ರಿಪ್ಷನ್ ಸೇವೆ ಆಯ್ಕೆ ಮಾಡಿಕೊಂಡರೆ, 900 ರೂ. ನೀಡಬೇಕಾಗುತ್ತದೆ. ಇದೇ ವೇಳೆ, ವೆಬ್‌ನಲ್ಲಿ ಪ್ರತಿ ತಿಂಗಳಿಗೆ 650 ರೂ. ಆಗಲಿದೆ. ಮಾಸಿಕ ಮಾತ್ರವಲ್ಲದೇ ವಾರ್ಷಿಕ ಚಂದಾದಾರಿಕೆಯನ್ನು ಭಾರತದಲ್ಲಿ ಟ್ವಿಟರ್ ನೀಡುತ್ತಿದೆ. ಅದರನ್ವಯ, ವಾರ್ಷಿಕ 6800 ರೂ. ಪಾವತಿಸಬೇಕಾಗುತ್ತದೆ. ಆಗ, ಮಾಸಿಕ ಅಂದಾಜು 566 ರೂ. ಆಗುತ್ತದೆ.
ಬ್ಲೂ ಟಿಕ್‌ನಿಂದ ಏನೇನು ಲಾಭ?
ಎಡಿಟ್ ಟ್ವೀಟ್ ಬಟನ್ ಸೌಲಭ್ಯ ದೊರೆಯಲಿದೆ
ಟ್ವೀಟ್ ಅನ್ ಡು ಮಾಡಬಹುದು
ದೀರ್ಘ ಮತ್ತು ಗುಣಾತ್ಮಕ ವಿಡಿಯೋ ಪೋಸ್ಟ್ ಮಾಡಬಹುದು
ಸಂಭಾಷಣೆಯಲ್ಲಿ ಆದ್ಯತೆ ದೊರೆಯುತ್ತದೆ
ಸಾಮಾನ್ಯ ಬಳಕೆದಾರರಿಗೆ ಹೋಲಿಸಿದರೆ, ಚಂದಾದಾರರಿಗೆ ಕಡಿಮೆ ಜಾಹೀರಾತು ಪ್ರದರ್ಶನ
ಆ್ಯಪ್ ಐಕಾನ್ ಕಸ್ಟಮೈಸ್ ಮಾಡಿಕೊಳ್ಳಬಹುದು
ಎನ್ಎಫ್‌ಟಿ ಪ್ರೊಫೈಲ್ ಪಿಕ್ಚರ್, ಥೀಮ್ಸ್
ನ್ಯಾವಿಗೇಷನ್ ಆಯ್ಕೆ ಕಸ್ಟಮೈಸ್ ಮಾಡಬಹುದು
ಸ್ಪೇಸ್ ಟ್ಯಾಬ್ ಅಕ್ಸೆಸ್, ಇದರಿಂದ ಟ್ವೀಟ್ ಅನ್ ಡು ಮಾಡಬಹುದು
ಅನ್‌ಲಿಮಿಟಿಡ್ ಬುಕ್ ಮಾರ್ಕ್ಸ್, ಫೋಲ್ಡರ್ ಕೂಡ ಬುಕ್ ಮಾರ್ಕ್ ಮಾಡಬಹುದು
ಗ್ಯಾಜೆಟ್ಸ್
Google: ಗೂಗಲ್‌ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
Google: ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ನ್ಯಾಯಸಮ್ಮತವಲ್ಲದ ಪದ್ಧತಿಗಳನ್ನು ಅನುಸರಿಸಿದ್ದ ಟೆಕ್ ದೈತ್ಯ ಗೂಗಲ್‌ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗವು 1,337 ಕೋಟಿ ರೂ. ದಂಡವನ್ನು ವಿಧಿಸಿತ್ತು.
ನವದೆಹಲಿ: ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(NCLAT)ಯು 30 ದಿನಗಳವರೆಗೆ 1,337.76 ಕೋಟಿ ರೂ. ದಂಡವನ್ನು ಪಾವತಿಸುವಂತೆ ಟೆಕ್ ದೈತ್ಯ ಕಂಪನಿಯ ಗೂಗಲ್‌ಗೆ (Google) ಆದೇಶಿಸಿದೆ. ಎನ್‌ಸಿಎಲ್ಎಟಿಯ ಇಬ್ಬರು ನ್ಯಾಯಾಧೀಶರ ಪೀಠವು ಈ ಆದೇಶವನ್ನು ಮಾಡಿದೆ. ಗೂಗಲ್ ವಿರುದ್ಧ ಇಷ್ಟು ಬೃಹತ್ ಪ್ರಮಾಣದ ದಂಡವನ್ನುಭಾರತೀಯ ಸ್ಪರ್ಧಾತ್ಮಕ ಆಯೋಗ(CCI) ವಿಧಿಸಿತ್ತು. ಸಿಸಿಐನ ಈ ಆದೇಶನ್ನು ಗೂಗಲ್, ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿತ್ತು.
ಭಾರತೀಯ ಸ್ಪರ್ಧಾತ್ಮಕ ಆಯೋಗವು ಕಳೆದ ವರ್ಷ, ಅಕ್ಟೋಬರ್ 20 ರಂದು, ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ವಿರೋಧಿ ಚಟುವಟಿಕೆಗಳಿಗಾಗಿ ಗೂಗಲ್‌ಗೆ 1,337.76 ಕೋಟಿ ದಂಡವನ್ನು ವಿಧಿಸಿತ್ತು. ಅಲ್ಲದೇ, ಅಳವಡಿಸಿಕೊಂಡಿರುವ ನ್ಯಾಯಸಮ್ಮತವಲ್ಲದ ಪದ್ಧತಿಗಳನ್ನು ನಿಲ್ಲಿಸುವಂತೆಯೂ ಗೂಗಲ್ ಸೂಚಿಸಿತ್ತು.
ಇದನ್ನೂ ಓದಿ: Google service down : ಗೂಗಲ್ ಸೇವೆಯಲ್ಲಿ ವ್ಯತ್ಯಯ, ಯೂಟ್ಯೂಬ್, ಡ್ರೈವ್, ಜಿಮೇಲ್‌ಗೆ ಅಡಚಣೆ, ಬಳಕೆದಾರರ ಪರದಾಟ
ದೈತ್ಯ ಸರ್ಚ್ ಎಂಜಿನ್ ಆಗಿರುವ ಗೂಗಲ್, ಸಿಸಿಐ ನೀಡಿರುವ ಆದೇಶವನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿತ್ತು. ಆದರೆ, ಗೂಗಲ್ ಮನವಿಯನ್ನು ತಿರಸ್ಕರಿಸಿರುವ ಎನ್‌ಸಿಎಲ್ಎಟಿ, ಸಿಸಿಐ ನಡೆಸಿರುವ ವಿಚಾರಣೆಯಲ್ಲಿ ಯಾವುದೇ ಸಹಜ ನ್ಯಾಯ ಪರಿಪಾಲನೆಯನ್ನು ಉಲ್ಲಂಘಿಸಿಲ್ಲ ಎಂದು ಹೇಳಿತು. ಅಲ್ಲದೇ, 30 ದಿನಗಳಲ್ಲಿ ದಂಡವನ್ನು ಪಾವತಿಸುವಂತೆ ಗೂಗಲ್‌ಗೆ ಸೂಚಿಸಿತು.
ಗ್ಯಾಜೆಟ್ಸ್
Facebook: ಫೇಸ್‌ಬುಕ್‌ನಲ್ಲಿ ಇಂಟರ್ನೆಟ್ ಸ್ಪೀಡ್ ಚೆಕ್ ಮಾಡಿ ! ಈ ಸ್ಟೆಪ್ಸ್ ಫಾಲೋ ಮಾಡಿ ನೋಡಿ…
Facebook: ಅತ್ಯಂತ ಜನಪ್ರಿಯ ಸೋಷಿಯಲ್ ಮೀಡಿಯಾ ಆಗಿರುವ ಫೇಸ್‌ಬುಕ್, ಬಳಕೆದಾರರಿಗೆ ನಾನಾ ಸೌಲಭ್ಯಗಳನ್ನು ಕಲ್ಪಿಸುತ್ತದೆ. ಕೇವಲ ಸಂಹನ ಮತ್ತು ಸಂಪರ್ಕ ಮಾತ್ರವಲ್ಲದೇ ಹಲವು ರೀತಿಯಲ್ಲಿ ಬಳಕೆದಾರರಿಗೆ ಉಪಯುಕ್ತವಾಗಿದೆ ಈ ಆ್ಯಪ್.
ಬೆಂಗಳೂರು, ಕರ್ನಾಟಕ: ಮೆಟಾ (Meta) ಒಡೆತನದ ಫೇಸ್‌ಬುಕ್ (Facebook) ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣವಾಗಿದೆ. ಫೇಸ್‌ಬುಕ್ ಬಳಸದೇ ಇರುವವರ ಸಂಖ್ಯೆ ಬಹಳ ಕಡಿಮೆ. ಜಗತ್ತಿನಾದ್ಯಂತ ಕೋಟ್ಯಂತರ ಸಕ್ರಿಯ ಬಳಕೆದಾರರನ್ನು ಈ ಫೇಸ್‌ಬುಕ್ ಹೊಂದಿದೆ. ಹಾಗಾಗಿ, ಫೇಸ್‌ಬುಕ್ ಕೂಡ, ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸುವುದಕ್ಕಾಗಿ ಅನೇಕ ಹೊಸ ಫೀಚರ್ಸ್‌ಗಳನ್ನು ಲಾಂಚ್ ಮಾಡುತ್ತಲೇ ಇರುತ್ತದೆ. ಆದರೆ, ಇವುಗಳ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ. ಫೇಸ್‌ಬುಕ್ ಆ್ಯಪ್‌ನಲ್ಲಿ ಇಂಟರ್ನೆಟ್ ಸ್ಪೀಡ್ (Internet Speed) ಕೂಡ ಚೆಕ್ ಮಾಡಬಹುದು.
ಪ್ರಖ್ಯಾತ ಸೋಷಿಯಲ್ ಮೀಡಿಯಾ ಆಗಿರುವ ಫೇಸ್‌ಬುಕ್, ಜನರನ್ನು ಒಂದುಗೂಡಿಸುವ ಮಹತ್ವದ ವೇದಿಕೆಯಾಗಿದೆ. ಸ್ನೇಹಿತರು, ಕುಟುಂಬದ ಸದಸ್ಯರು ಮತ್ತು ಪರಿಚಯಸ್ಥರಿಗೆ ಸಂಪರ್ಕವನ್ನು ಈ ಫೇಸ್‌ಬುಕ್ ಕಲ್ಪಿಸುತ್ತದೆ. ಜತೆಗೆ, ಹೊಸ ಹೊಸ ಸ್ನೇಹಿತರನ್ನೂ ಸಂಪಾದಿಸಲು ಇದು ಸೇತುವೆಯಾಗಿದೆ. ಸಾಕಷ್ಟು ಚರ್ಚೆ, ವಾದ- ವಿವಾದಗಳಿಗೂ ಇಲ್ಲಿ ಜಾಗವುಂಟು. ಬಹುಶಃ ಫೇಸ್‌ಬುಕ್ ಇಲ್ಲದೇ ಇರುವ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಅಷ್ಟರ ಮಟ್ಟಿಗೆ ಅದು ನಮ್ಮ ಬದುಕಿನ ಭಾಗವಾಗಿದೆ.
ಫೇಸ್‌ಬುಕ್‌ನಲ್ಲಿ ಬಳಕೆದಾರರು ವೈಯಕ್ತಿಕ ಪ್ರೊಫೈಲ್‌ಗಳನ್ನು ರಚಿಸಬಹುದು, ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಬಹುದು ಮತ್ತು ಅವರ ದೈನಂದಿನ ಜೀವನದ ಕುರಿತು ಅಪ್‌ಡೇಟ್ ಪೋಸ್ಟ್ ಮಾಡಬಹುದು. ಇದು ಗುಂಪುಗಳು ಮತ್ತು ಪುಟಗಳಿಗೆ ಮೀಸಲಾದ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಇದೇ ರೀತಿಯ ಆಸಕ್ತಿಗಳು ಅಥವಾ ಹವ್ಯಾಸಗಳನ್ನು ಹಂಚಿಕೊಳ್ಳುವ ಇತರರೊಂದಿಗೆ ಸಂಪರ್ಕ ಸಾಧಿಸಲು ಫೇಸ್‌ಬುಕ್ ಅವರಿಗೆ ನೆರವು ಒದಗಿಸುತ್ತದೆ.
ಮೆಟಾ ಒಡೆತನದ ಈ ವೇದಿಕೆಯು ವೈಶಿಷ್ಟ್ಯಗಳೊಂದಿಗೆ ತುಂಬಿರುತ್ತದೆ. ಆದರೆ ಅವುಗಳಲ್ಲಿ ಹೆಚ್ಚಿನವು ಉತ್ತಮ ಸಾಮಾಜಿಕ ನೆಟ್‌ವರ್ಕಿಂಗ್ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿವೆ. ಉದಾಹರಣೆಗೆ, ಅಪ್ಲಿಕೇಶನ್‌ನ ಮರುವಿನ್ಯಾಸಗೊಳಿಸಲಾದ ಬಳಕೆದಾರ ಇಂಟರ್ಫೇಸ್ ಅಪ್ಲಿಕೇಶನ್‌ನ ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು ಸರಳಗೊಳಿಸುವ ಉದ್ದೇಶವನ್ನು ಹೊಂದಿದೆ. ಇಷ್ಟು ಮಾತ್ರವಲ್ಲದೇ, ಸಾಮಾಜಿಕ ಮಾಧ್ಯಮ-ಕೇಂದ್ರಿತ ಕಾರ್ಯಗಳನ್ನು ಹೊರತುಪಡಿಸಿ, ಬಳಕೆದಾರರಿಗೆ ಹತ್ತಿರದಲ್ಲಿರುವ Wi Fi ನೆಟ್‌ವರ್ಕ್ ಚೆಕ್ ಮಾಡಬಹುದು. ಅಲ್ಲದೇ, ಇಂಟರ್ನೆಟ್ ವೇಗವನ್ನು ಪರೀಕ್ಷಿಸಬಹುದು.
ಫೇಸ್‌ಬುಕ್‌ನಲ್ಲಿ (Facebook) ಇಂಟರ್ನೆಟ್ ವೇಗ ಹೇಗೆ ಪರೀಕ್ಷಿಸುವುದು?
ಫೇಸ್‌ಬುಕ್ ಆ್ಯಪ್ ಬಳಸಿಕೊಂಡ ಇಂಟರ್ನೆಟ್ ವೇಗ ಪರೀಕ್ಷಿಸಬೇಕಿದ್ದರೆ, ಬಳಕೆದಾರರು ಇತ್ತೀಚನ ಅಪ್‌ಡೇಟೆಡ್ ಆ್ಯಪ್ ಹೊಂದಿರಬೇಕು. ನಿಮ್ಮ ಸಾಧನದಲ್ಲಿ ಫೇಸ್‌ಬುಕ್ ಆ್ಯಪ್ ಓಪನ್ ಮಾಡಿ. ಬಳಿಕ ಲಾಗ್ ಇನ್ ಆಗಿ. ಬಳಿಕ, ಫೇಸ್‌ಬುಕ್‌ನ ವಿವಿಧ ಫಂಕ್ಷನ್ಸ್, ಸೆಟ್ಟಿಂಗ್ಸ್, ಮತ್ತು ಇತರ ಆಯ್ಕೆಗಳಿಗೆ ಪ್ರವೇಶ ಕಲ್ಪಿಸುವ ಹೊಸ ಡ್ರಾಪ್-ಡೌನ್ ಮೆನುವನ್ನು ಪ್ರದರ್ಶಿಸುವ ಮೂರು ಅಡ್ಡ ಸಾಲುಗಳ ಮೇಲೆ ಕ್ಲಿಕ್ ಮಾಡಿ.
ಇದನ್ನೂ ಓದಿ: ಮಕ್ಕಳ ಅಶ್ಲೀಲ ವಿಡಿಯೊ ಫೇಸ್ ಬುಕ್‌ಗೆ ಅಪ್ಲೋಡ್: ಶಿವಮೊಗ್ಗ ಜಿಲ್ಲೆಯ ಇಬ್ಬರ ಮೇಲೆ ಕೇಸ್, ಅಮೆರಿಕದಿಂದ ಬಂದ ಮಾಹಿತಿ!
ಆ ನಂತರ, ಸ್ಕ್ರಾಲ್ ಡೌನ್ ಮಾಡಿ ಮತ್ತು ಡ್ರಾಪ್ ಡೌನ್ ಬಾಕ್ಸ್‌ನಿಂದ Settings & Privacy ಆಪ್ಷನ್ ಸೆಲೆಕ್ಟ್ ಮಾಡಿ. ಅಲ್ಲಿ ಕಾಣಸಿಗುವ Wi-Fi ಮತ್ತು cellular performance ಬಳಸಿ. ಆ ನಂತರ, ಕಂಟಿನ್ಯೂ ಬಟನ್ ಸರ್ಚ್ ಮಾಡಿ, ಬಳಿಕ ಸೆಲೆಕ್ಟ್ ಮಾಡಿ. ನಂತರದ ಪುಟದಲ್ಲಿ ರನ್ ಸ್ಪೀಡ್ ಟೆಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಆಗ ನೀವು ಇಂಟರ್ನೆಟ್ ಸ್ಪೀಡ್ ಎಷ್ಟಿದೆ ಎಂಬುದನ್ನು ಕಾಣಬಹುದು.
-
ದೇಶ18 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ19 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್8 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ19 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ19 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ9 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ10 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ12 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್