Site icon Vistara News

Apple Event 2023: ಐಫೋನ್ 15, ಐಫೋನ್ 15 ಪ್ಲಸ್ ಲಾಂಚ್! ಸೆ.15ರಿಂದ ಬುಕ್ಕಿಂಗ್ ಶುರು, ಬೆಲೆ ಎಷ್ಟು?

iphone 15

ನವದೆಹಲಿ: ಮಂಗಳವಾರ ಮಧ್ಯ ರಾತ್ರಿ, ಬಹು ನಿರೀಕ್ಷೆಯ ಐಫೋನ್ 15(iPhone 15), ಐಫೋನ್ 15 ಪ್ಲಸ್ (iPhone 15 Plus) ಐಫೋನ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು(iPhone Launch). ಎರಡೂ ಹ್ಯಾಂಡ್‌ಸೆಟ್‌ಗಳು ಕಳೆದ ವರ್ಷದ ಐಫೋನ್ ಮಾದರಿಗಳಿಗಿಂತ ಕೆಲವು ಗಮನಾರ್ಹವಾದ ಹಾರ್ಡ್‌ವೇರ್ ಅಪ್‌ಗ್ರೇಡ್‌ಗಳನ್ನು ಹೊಂದಿವೆ. ಇವುಗಳಲ್ಲಿ ಕಂಪನಿಯ A16 ಬಯೋನಿಕ್ ಚಿಪ್‌ಸೆಟ್, ಡೈನಾಮಿಕ್ ಐಲ್ಯಾಂಡ್ ಮತ್ತು 48-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೇರಿದಂತೆ ಕಳೆದ ವರ್ಷದ ಪ್ರೊ ಮಾದರಿಗಳಲ್ಲಿ ಲಭ್ಯವಿರುವ ಹಲವು ವೈಶಿಷ್ಟ್ಯಗಳು ಸೇರಿವೆ. ಈ ಐಫೋನ್‌15 ಎಲ್ಲ ಮಾದರಿಯ ಫೋನ್‌ಗಳನ್ನು ಆ್ಯಪಲ್‌ ಇವೆಂಟ್‌ನಲ್ಲಿ (Apple Event 2023) ಲಾಂಚ್ ಮಾಡಲಾಗಿದೆ. ಪ್ರತಿ ವರ್ಷ ಆ್ಯಪಲ್ ಕಂಪನಿಯ (Apple) ಸೆಪ್ಟೆಂಬರ್‌ನಲ್ಲಿ ಹೊಸ ಮಾದರಿಯ ಐಫೋನ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಆ್ಯಪಲ್ ಇವೆಂಟ್ 2023 ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

ಈ ವರ್ಷ, ಆ್ಯಪಲ್‌ನ ಎಲ್ಲಾ ಐಫೋನ್ ಮಾಡೆಲ್‌ಗಳು USB Type-C ಪೋರ್ಟ್‌ನೊಂದಿಗೆ ಸಜ್ಜುಗೊಂಡಿವೆ. ಆ್ಯಪಲ್‌ ಸ್ವಾಮ್ಯದ ಲೈಟ್ನಿಂಗ್ ಚಾರ್ಜಿಂಗ್ ಪೋರ್ಟ್ ಇಲ್ಲದೆ ಬರುವ ಮೊದಲ ಹ್ಯಾಂಡ್‌ಸೆಟ್‌ ಇವಾಗಿವೆ ಎಂದು ಹೇಳಬಹುದು.

ಭಾರತದಲ್ಲಿ ಐಫೋನ್ 15ರ ಬೆಲೆ 79 ಸಾವಿರ ರೂ.ನಿಂದ ಆರಂಭವಾಗುತ್ತದೆ. ಆದರೆ ಐಫೋನ್ 15 ಪ್ಲಸ್, 128 ಜಿಬಿ ರೂಪಾಂತರ ಮೂಲ ಬೆಲೆ 89,900 ರೂಪಾಯಿ ಇರಲಿದೆ. ಕಂಪನಿಯ ಪ್ರಕಾರ ಎರಡೂ ಫೋನ್‌ಗಳು ಕಪ್ಪು, ನೀಲಿ, ಹಸಿರು, ಗುಲಾಬಿ ಮತ್ತು ಹಳದಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತವೆ. ಫೋನ್‌ಗಳ ಬುಕ್ಕಿಂಗ್ ಸೆಪ್ಟೆಂಬರ್ 15 ರಂದು ಪ್ರಾರಂಭವಾಗುತ್ತದೆ. ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಸೆಪ್ಟೆಂಬರ್ 22 ರಂದು ಮಾರಾಟಕ್ಕೆ ದೊರೆಯಲಿವೆ. ಹ್ಯಾಂಡ್‌ಸೆಟ್‌ಗಳು 512 ಜಿಬಿ ಸಂಗ್ರಹದೊಂದಿಗೆ ಲಭ್ಯವಿರುತ್ತವೆ.

ಈ ಸುದ್ದಿಯನ್ನೂ ಓದಿ: Apple India:‌ ಭಾರತದಲ್ಲಿ ಆ್ಯಪಲ್‌ ಕಂಪನಿಗೆ ಕೇವಲ 2 ಸ್ಟೋರ್‌ಗಳಲ್ಲಿ ತಿಂಗಳಿಗೆ ಸೇಲ್ಸ್‌ ಎಷ್ಟು ಕೋಟಿ?

ಐಫೋನ್ 15 ಡುಯಲ್ ಸಿಮ್ ಕಾರ್ಡ್ ಸ್ಲಾಟ್ ಹೊಂದಿದೆ. ಹೆಚ್ಚುವರಿ ರಕ್ಷಣೆಗಾಗಿ ಸೆರಾಮಿಕ್ ಶೀಲ್ಡ್ ವಸ್ತುಗಳೊಂದಿಗೆ 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇಯನ್ ನಾವು ಕಾಣಭಹುದು. ಕಳೆದ ವರ್ಷ ಐಫೋನ್ 14 ಪ್ರೊ ಮಾದರಿಗಳಲ್ಲಿ ಪರಿಚಯಿಸಲಾದ ಡೈನಾಮಿಕ್ ಐಲ್ಯಾಂಡ್‌ನೊಂದಿಗೆ ಆಪಲ್ ಐಫೋನ್ 15 ಅನ್ನು ಸಜ್ಜುಗೊಳಿಸಲಾಗಿದೆ. ಡಿಸ್‌ಪ್ಲೇ 2000 ನಿಟ್‌ಗಳ ಗರಿಷ್ಠ ಹೊಳಪನ್ನು ನೀಡುತ್ತದೆ ಮತ್ತು ಹ್ಯಾಂಡ್‌ಸೆಟ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದೆ. ಐಫೋನ್ 15 ಪ್ಲಸ್ ದೊಡ್ಡ 6.7-ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಹೊಂದಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version