ನವದೆಹಲಿ: ಜೆನೆಟಿಕ್ ಟೆಸ್ಟಿಂಗ್ (Genetic Testing Company) ಕಂಪನಿಯಾದ 23ಆ್ಯಂಡ್‌ಮಿ(23andMe) ಸೈಬರ್ ದಾಳಿಗೆ (Cyber Attack) ಒಳಗಾಗಿದ್ದು, ಲಕ್ಷಾಂತರ ಡಿಎನ್‌ಎ ಡೇಟಾ(DNA Data) ಕಳುವು ಮಾಡಲಾಗಿದೆ. 23ಆ್ಯಂಡ್‌ಮಿ ಕಂಪನಿಯಿಂದ ಹ್ಯಾಕರ್‌ಗಳು ಹತ್ತು ಲಕ್ಷ ಜನರ ಡೇಟಾವನ್ನು ಕದ್ದು, ಆನ್‌ಲೈನ್‌ನಲ್ಲಿ ಮಾರಾಟ (Sale on Online) ಮಾಡಿದ್ದಾರೆ ಎಂದು ವರ್ಜ್ ವರದಿ ಮಾಡಿದೆ. ಡಾರ್ಕ್ ವೆಬ್ ಫೋರಮ್‌ಗಳಲ್ಲಿ ಹ್ಯಾಕರ್‌ಗಳು “ಅಶ್ಕೆನಾಜಿ ಡಿಎನ್‌ಎ ಡೇಟಾ ಆಫ್ ಸೆಲೆಬ್ರಿಟೀಸ್” ಎಂಬ ಡೇಟಾಬೇಸ್ ಅನ್ನು ಪ್ರಕಟಿಸಿದ ನಂತರ ಕದ್ದಿರುವ ಮಾಹಿತಿ ಬಹಿರಂಗವಾಗಿದೆ. ಡೇಟಾಬೇಸ್ ಡಿಸ್‌ಪ್ಲೇ ಹೆಸರುಗಳು, ಲಿಂಗ, ಜನ್ಮ ವರ್ಷ ಮತ್ತು ಬಳಕೆದಾರರ ಆನುವಂಶಿಕ ವಂಶಾವಳಿಯ ಫಲಿತಾಂಶಗಳ ಸೇರಿ ಕೆಲವು ವಿವರಗಳಂತಹ ಮಾಹಿತಿಯನ್ನು ಒಳಗೊಂಡಿದೆ.
23ಆ್ಯಂಡ್‌ಮಿ ಎಂಬುದು ಅಮೆರಿಕದ ಜೈವಿಕ ತಂತ್ರಜ್ಞಾನ ಮತ್ತು ಜೀನೋಮಿಕ್ಸ್ ಸಂಸ್ಥೆಯಾಗಿದ್ದು, ತನ್ನ ಲ್ಯಾಬ್‌ಗಳಿಗೆ ಲಾಲಾರಸದ ಮಾದರಿಯನ್ನು ಕಳುಹಿಸುವ ಗ್ರಾಹಕರಿಗೆ ಅವರ ಪೂರ್ವಜರು ಮತ್ತು ಆನುವಂಶಿಕ ಮಾಹಿತಿಯ ವರದಿಯನ್ನು ನೀಡುವ ಜೆನೆಟಿಕ್ ಪರೀಕ್ಷಾ ಸೇವೆಗಳನ್ನು ನೀಡುತ್ತದೆ.
ಪ್ರಪಂಚದ ಅಗ್ರಮಾನ್ಯ ಉದ್ಯಮಿಗಳಿಂದ ಹಿಡಿದು ರಾಜವಂಶಗಳವರೆಗೆ ಲಕ್ಷಾಂತರ ಜನರ ಡಿಎನ್‌ಎ ಪ್ರೊಫೈಲ್‌ಗಳನ್ನು ಬಹಿರಂಗ ಮಾಡಲಾಗಿದೆ. ಪ್ರತಿಯೊಂದು ಡೇಟಾ ಸೆಟ್ ಅನುಗುಣವಾದ ಇಮೇಲ್ ವಿಳಾಸಗಳೊಂದಿಗೆ ನೀಡಲಾಗಿದೆ ಎಂದು ಡೇಟಾ ಮಾರಾಟ ವೇದಿಕೆಯಲ್ಲಿ ಪೋಸ್ಟ್‌ವೊಂದರಲ್ಲಿ ತಿಳಿಸಲಾಗಿದೆ. ಫೇಸ್‌ಬುಕ್ ಮಾಲೀಕ ಮಾರ್ಕ್ ಜುಕರ್‌ಬರ್ಗ್, ಎಕ್ಸ್ ವೇದಿಕೆ ಓನರ್ ಎಲಾನ್ ಮಸ್ಕ್ ಸೇರಿದಂತೆ ಹಲವರ ಗಣ್ಯ ಡಿಎನ್ಎ ಟೆಸ್ಟಿಂಗ್ ರಿಪೋರ್ಟ್ ತಮ್ಮ ಬಳಿ ಇದೆ ಎಂದು ಹ್ಯಾಕರ್ಸ್ ಹೇಳಿಕೊಂಡಿದ್ದಾರೆ. ಈ ಗಣ್ಯರ ಡಿಎನ್ಎ ಟೆಸ್ಟ್ 23ಆ್ಯಂಡ್‌ಮಿ ಸಂಸ್ಥೆ ಮಾಡಿಲ್ಲ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Emergency Alert: ನಿಮಗಿನ್ನೂ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಬಂದಿಲ್ಲವೇ? ಹೀಗೆ ಮಾಡಿ ನೋಡಿ
ಡಾರ್ಕ್ ವೆಬ್ ಫೋರಮ್‌ನಲ್ಲಿ ಪ್ರತಿ ಖಾತೆಗೆ 1 ರಿಂದ 10 ಡಾಲರ್ ಡೇಟಾ ಪ್ರೊಫೈಲ್‌ಗಳನ್ನು ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಲು ಹ್ಯಾಕರ್ ಮುಂದಾಗಿದ್ದಾರೆ.
ಈ ಸೈಬರ್ ಕಳುವಿನ ಬಹುಮುಖ್ಯ ಭಾಗವು ವೈಯಕ್ತಿಕ ಮಾಹಿತಿಯಾಗಿರುತ್ತದೆ. ಹೆಸರುಗಳು, ವಿಳಾಸಗಳು, ದೂರವಾಣಿ ಸಂಖ್ಯೆಗಳು, ಸಾಮಾನ್ಯ ವೈಯಕ್ತಿಕ ಮಾಹಿತಿಯನ್ನು ಹ್ಯಾಕರ್‌ಗಳು ಸ್ಕ್ಯಾಮರ್‌ಗಳಿಗೆ ಮಾರಾಟ ಮಾಡಲು ಮುಂದಾಗುತ್ತಾರೆ. ಬಳಿಕ ಸ್ಕ್ಯಾಮರ್ಸ್ ಈ ಮಾಹಿತಿಯನ್ನು ಇಟ್ಟುಕೊಂಡು ಇಮೇಲ್ ಕಳುಹಿಸಬಹುದು. ಹೀಗೆ ಸ್ಕ್ಯಾಮರ್ಸ್ ಡಿಯರ್ ಅಲೆನ್ ಬದಲಿಗೆ ಡಿಯರ್ ವ್ಯಾಲ್ಯೂಡ್ ಕಸ್ಟಮ್ ಎಂದು ಇ ಮೇಲ್ ಆರಂಭಿಸುತ್ತಾರೆ. ಹಾಗಾಗಿ, ನೀವು ಅವರಿಗೆ ನಾನಾರು ಎಂಬುದು ಗೊತ್ತಾಗಿದೆ ಎಂದು ನೀವು ಅರ್ಥೈಸಿಕೊಳ್ಳುತ್ತೀರಿ ಮತ್ತು ಇದು ಅಸಲಿ ಮೇಲ್ ಎಂದು ಭಾವಿಸುತ್ತೀರಿ. ಇದರಿಂದಾಗಿ ಮೋಸ ಹೋಗುವ ಸಾಧ್ಯತೆಗಳು ಹೆಚ್ಚು ಎಂದು ಸರ್ರೆ ವಿಶ್ವವಿದ್ಯಾಲಯದ ಸೈಬರ್ ಭದ್ರತಾ ತಜ್ಞ ಪ್ರೊಫೆಸರ್ ಅಲನ್ ವುಡ್ವರ್ಡ್ ಹೇಳಿದ್ದಾರೆ.