Site icon Vistara News

Google Chrome | ಗೂಗಲ್‌ ಕ್ರೋಮ್ ಪಾಸ್ವರ್ಡ್ ಫ್ರೀ! ಬಳಕೆದಾರರಿಗೆ ಈಗ ಪಾಸ್‌ಕೀ ಲಭ್ಯ

Google Chrome @ Passkeys

ವಾಷಿಂಗ್ಟನ್: ಜಗತ್ತಿನ ದೈತ್ಯ ಟೆಕ್ ಕಂಪನಿ ಗೂಗಲ್ ಇದೀಗ ತನ್ನ ಕ್ರೋಮ್ (Google Chrome) ಬಳಕೆದಾರರಿಗೆ ಪಾಸ್‌ಕೀ(Passkeys)ಗಳನ್ನು ದೊರೆಯುವಂತೆ ಮಾಡಿದೆ. ಈ ಬಗ್ಗೆ ಕಳೆದ ಅಕ್ಟೋಬರ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಇದೀಗ ಕಂಪನಿಯು ಪಾಸ್‌ವರ್ಡ್‌ರಹಿತ ಸುರಕ್ಷಿತ ಲಾಗಿನ್ ಸ್ಟ್ಯಾಂಡರ್ಡ್ ಅನ್ನು ಈ ವಾರ ಕ್ರೋಮ್ ಸ್ಟೇಬಲ್ ಎಂ108ಗೆ ಸೇರಿಸಿದೆ. ಅಂದರೆ, ಬಳಕೆದಾರರು ಕ್ರೋಮ್‌ ಅನ್ನು ಪಾಸ್ವರ್ಡ್‌ ಇಲ್ಲದೇ ಪಾಸ್‌ಕೀಗಳನ್ನು ಬಳಸಿಕೊಂಡು ಲಾಗಿನ್ ಆಗಬಹುದು.

ಅಮೆರಿಕದ ವರ್ಜ್‌ ವೆಬ್‌ಸೈಟ್ ಪ್ರಕಾರ, ವಿಂಡೋಸ್ 11, macOS ಮತ್ತು ಆಂಡ್ರಾಯ್ಡ್ ಚಾಲನೆಯಲ್ಲಿರುವ ಡೆಸ್ಕ್‌ಟಾಪ್ ಮತ್ತು ಮೊಬೈಲ್ ಎರಡರಲ್ಲೂ ಕ್ರೋಮ್ ಅನ್ನು ಬಳಸಿಕೊಂಡು ಪಾಸ್‌ಕೀಗಳು ಕಾರ್ಯನಿರ್ವಹಿಸುತ್ತವೆ. ಇದಕ್ಕೆ ಹೆಚ್ಚುವರಿಯಾಗಿ ಗೂಗಲ್, ಕಂಪನಿಯ ಸ್ವಂತ ಪಾಸ್‌ವರ್ಡ್ ನಿರ್ವಾಹಕ ಅಥವಾ 1Password ಅಥವಾ Dashlane ಹೊಂದಾಣಿಕೆಯ ಥರ್ಡ್ ಪಾರ್ಟಿ ಪಾಸ್‌ವರ್ಡ್ ನಿರ್ವಾಹಕವನ್ನು ಬಳಸಿಕೊಂಡು ಆಂಡ್ರಾಯ್ಡ್‌ನಿಂದ ಇತರ ಸಾಧನಗಳಿಗೆ ತಮ್ಮ ಪಾಸ್‌ಕೀಗಳನ್ನು ಸಿಂಕ್ ಮಾಡಲು ಗೂಗಲ್ ಅನುವು ಮಾಡಿಕೊಡುತ್ತಿದೆ.

ಪಾಸ್‌ಕೀ ಎನ್ನುವುದು ನಿಮ್ಮ ಕಂಪ್ಯೂಟರ್, ಫೋನ್ ಅಥವಾ ಇತರ ಸಾಧನಗಳಲ್ಲಿ ಸಂಗ್ರಹವಾಗಿರುವ ಯುಎಸ್‌ಬಿ ಸೆಕ್ಯುರಿಟಿ ಕೀ ರೀತಿಯ ಅನನ್ಯ ಐಡೆಂಟಿಟಿಯಾಗಿದೆ ಎಂದು ಹೇಳಬಹುದು. ಪಾಸ್‌ಕೀ ಎಪಿಐಯನ್ನು ಕಾರ್ಯಗತಗೊಳಿಸಿದ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳು ನಿಮ್ಮ ಸಾಧನದ ಬಯೋಮೆಟ್ರಿಕ್ಸ್ ಅಥವಾ ಇತರ ಸುರಕ್ಷಿತ ದೃಢೀಕರಣದೊಂದಿಗೆ ಸಂಯೋಜಿಸಲ್ಪಟ್ಟ ಸರಳ ಮತ್ತು ತ್ವರಿತ ದೃಢೀಕರಣದ ಮೂಲಕ ಲಾಗ್ ಇನ್ ಮಾಡಲು ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ.

ಇದನ್ನೂ ಓದಿ | ಸಂಭವನೀಯ ಸೈಬರ್‌ ದಾಳಿ ಬಗ್ಗೆ ಗೂಗಲ್‌ ಕ್ರೋಮ್‌ ಬಳಕೆದಾರರಿಗೆ ಸರ್ಕಾರ ಎಚ್ಚರಿಕೆ

Exit mobile version