ಬೆಂಗಳೂರು, ಕರ್ನಾಟಕ: ಭಾರತ (India Moon Mission) ಕೈಗೊಂಡ ಚಂದ್ರಯಾನ-3 (Chandrayaan 3) ಮಿಷನ್ಗೆ ಜಗತ್ತಿನ ಎಲ್ಲ ಕಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಭಾರತೀಯರಂತೂ ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಮಧ್ಯೆ, ಟೆಕ್ ದೈತ್ಯ ಗೂಗಲ್(Google), ತನ್ನ ಸರ್ಚ್ ಎಂಜಿನ್ನಲ್ಲಿ (Search Engine) ಚಂದ್ರಯಾನ-3 ಯಶಸ್ಸಿನ ಪ್ರತಿ ಬಿಂಬಿಸುವ ಆ್ಯನಿಮೇಷನ್ ಡೂಡಲ್ (Doodle) ಮಾಡುವ ಮೂಲಕ, ಇಸ್ರೋಗೆ (ISRO) ಗೌರವ ಸಲ್ಲಿಸಿದೆ. ಗೂಗಲ್ ಆಗಾಗ, ಭಾರತೀಯ ಗಣ್ಯರು, ಹಬ್ಬಗಳು ಮತ್ತು ವಿಶೇಷ ಸಂದರ್ಭಗಳನ್ನು ಇದೇ ರೀತಿ ಸೆಲೆಬ್ರೆಟ್ ಮಾಡುತ್ತದೆ.
ಗೂಗಲ್ ಡೂಡಲ್ ಹೇಗಿದೆ?
ಆ್ಯನಿಮೇಷನ್ ಆಗಿರುವ ಈ ಡೂಡಲ್ನ ಕಾರ್ಟೂನಿಕ್ ಶೈಲಿಯಲ್ಲಿದೆ. ಚಂದ್ರನ ಸುತ್ತ ಚಂದ್ರಯಾನ-3 ಲ್ಯಾಂಡರ್ ಮೂರ್ನಾಲ್ಕು ಸುತ್ತು ಹೊಡೆದು, ಚಂದ್ರನ ದಕ್ಷಿಣ ಭಾಗಕ್ಕೆ ಬಂದು ಕೂರುತ್ತದೆ. ಆಗ ಚಂದ್ರನ ನಗುತ್ತಾನೆ. ಬಳಿಕ ಭಾರತ ಮುಖವಾಗಿರುವ ಭೂಮಿಯ ಮೇಲಕ್ಕೆ ಎದ್ದು, ಭಾರತ ನಗುವುದನ್ನು ತೋರಿಸಲಾಗಿದೆ. ಈ ಡೂಡಲ್ಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಈ ಡೂಡಲ್ ಮೂಲಕ ಚಂದ್ರಯಾನ-3 ಯಶಸ್ಸಿಗೆ ಗೂಗಲ್ ಶ್ಲಾಘನೆ ವ್ಯಕ್ತಪಡಿಸಿದೆ. ಗೂಗಲ್ ಡೂಡಲ್ ನೋಡಲು ಇಲ್ಲಿ ಕ್ಲಿಕ್ ಮಾಡಿ.
ದೇಶChandrayaan 3: ನಾನು ಚಂದ್ರನೂರಿಗೆ ಸುರಕ್ಷಿತವಾಗಿ ತಲುಪಿದ್ದೇನೆ! ವೈರಲ್ ಆಯ್ತು ಇಸ್ರೋ ಟ್ವೀಟ್
ಚಂದ್ರನ ಅಂಗಳದಲ್ಲಿ ಚಂದ್ರಯಾನ-3 (Chandrayaan 3) ಲ್ಯಾಂಡರ್ (Vikram Lander) ಅನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಭಾರತವು ಹೊಸ ಇತಿಹಾಸವನ್ನು ಬರೆದಿದೆ. ಈ ಸಂಭ್ರಮವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಸೆಲೆಬ್ರೇಟ್ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಚಂದ್ರಯಾನ – 3 ಮಿಷನ್; ಭಾರತ, ನಾನು ನನ್ನ ಗಮ್ಯ ಸ್ಥಾನವನ್ನು ತಲುಪಿದ್ದೇನೆ ಮತ್ತು ನೀವು ಕೂಡ!; ಚಂದ್ರನ ಮೇಲೆ ಚಂದ್ರಯಾನ – 3 ಮಿಷನ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ (Soft Landing on Moon) ಮಾಡಿದೆ. ಶುಭಾಶಯಗಳು ಭಾರತ ಎಂದು ಬರೆದುಕೊಂಡಿದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ(Viral Post).
ಚಂದ್ರನ ದಕ್ಷಿಣ ಧ್ರುವಕ್ಕೆ ಲ್ಯಾಂಡ್ ಮಾಡುವ ಮೂಲಕ ಇಂಥ ಸಾಧನೆ ಮಾಡಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಭಾರತವು ಪಾತ್ರವಾಗಿದೆ. ಈ ಪ್ರದೇಶದ ಚಂದ್ರನಲ್ಲಿ ನೀರಿನ ಕುರುಹುಗಳ ಕಂಡ ಬಳಿಕ, ಜಗತ್ತಿನ ಬಹುತೇಕ ರಾಷ್ಟ್ರಗಳ ಆಸಕ್ತಿಗೆ ಕಾರಣವಾಗಿದೆ.
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಾರತ
ಚಂದ್ರಯಾನ-3 ಲ್ಯಾಂಡರ್ ಸೇಫ್ ಲ್ಯಾಂಡಿಂಗ್ ಪ್ರಕ್ರಿಯೆ ಲೈವ್ ಮಾಡಲಾಗಿತ್ತು. 5.20 ನಿಮಿಷಕ್ಕೆ ಸೇಫ್ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭಿಸಲಾಯಿತು. ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಇಳಿಯುವ ಮುಂಚೆ ಅದು ನಾಲ್ಕು ಕಠಿಣ ಹಂತಗಳನ್ನು ಪೂರೈಸಿತು.
ಈ ಸುದ್ದಿಯನ್ನೂ ಓದಿ: Chandrayaan 3: 14 ದಿನಗಳ ನಂತರ ಭೂಮಿಗೆ ಮರಳಲಿವೆಯೇ ವಿಕ್ರಮ್, ಪ್ರಗ್ಯಾನ್?
ಪ್ರತಿ ಹಂತದಲ್ಲೂ ವಿಕ್ರಮ್ ಲ್ಯಾಂಡರ್ ನಿಧಾನವಾಗಿ ಚಂದ್ರನತ್ತ ತೆರಳುತ್ತಾ, ಚಂದ್ರನ ಮೇಲ್ಮೈಗೆ ಲಂಭವಾಗಿ ಇಳಿಯುವ ಪ್ರಕ್ರಿಯೆ ಆರಂಭಿಸಿತು. ಪ್ರತಿ ಹಂತದ ಯಶಸ್ಸು ವಿಜ್ಞಾನಿಗಳಲ್ಲಿ ಹುಮ್ಮಸ್ಸು ತುಂಬಿತು. ಮಿಷನ್ ಕಂಟ್ರೋಲ್ ರೂಮ್ನಲ್ಲಿ ಸಂಭ್ರಮ ಮನೆ ಮಾಡಿತ್ತು. ಅಂತಿಮವಾಗಿ ಚಂದ್ರನ ಮೇಲೆ ಲ್ಯಾಂಡರ್ ಲ್ಯಾಂಡ್ ಬಳಿಕ, ವಿಜ್ಞಾನಿಗಳು ಸಂತೋಷದಿಂದ ಕುಣಿದಾಡಿದರು. ಇದೇ ವೇಳೆ, ದಕ್ಷಿಣಾ ಆಫ್ರಿಕಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಿಡಿಯೋ ಲೈವ್ ಮೂಲಕ ಮಾತನಾಡಿ, ಇಸ್ರೋ ತಂಡಕ್ಕೆ ಶುಭಾಶಯ ಕೋರಿದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.