Site icon Vistara News

Google: ಭಾರತೀಯ ಬಳಕೆದಾರರಿಗೆ ಭೂಕಂಪ ಎಚ್ಚರಿಕೆ ಸಿಸ್ಟಮ್ ಫೀಚರ್ ಆರಂಭಿಸಿದ ಗೂಗಲ್

Google Earthquake

ನವದೆಹಲಿ: ಟೆಕ್ ದೈತ್ಯ ಗೂಗಲ್ (Google) ಭಾರತೀಯ ಆ್ಯಂಡ್ರಾಯ್ಡ್ ಬಳಕೆದಾರರಿಗೆ (Android Users) ಭೂಕಂಪದ ಬಗ್ಗೆ ಎಚ್ಚರಿಸುವ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಗೂಗಲ್ ಕಂಪನಿ ಈ ಅರ್ಥ್‌ಕ್ವೇಕ್ ಅಲರ್ಟ್ ಸಿಸ್ಟಮ್ (Earthquake Alert System) ಬಗ್ಗೆ 2020ರಲ್ಲಿ ಘೋಷಣೆ ಮಾಡಿತ್ತು. ಅದನ್ನೀಗ ಭಾರತಕ್ಕೂ ವಿಸ್ತರಿಸುತ್ತಿದೆ ಮತ್ತು ಈ ಕುರಿತು ಗೂಗಲ್ ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಕೇಂದ್ರ ಭೂ ವಿಜ್ಞಾನ ಸಚಿವಾಲಯ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(NDMA)ಮತ್ತು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ(NCS) ಗೂಗಲ್ ಆಂಡ್ರಾಯ್ಡ್ ಅರ್ಥ್‌ಕ್ವೇಕ್ ಅಲರ್ಟ್ ಸಿಸ್ಟಮ್ ಲಾಂಚ್ ಮಾಡಿದೆ. ಭೂಕಂಪ ಎಚ್ಚರಿಸುವ ಈ ವ್ಯವಸ್ಥೆಯು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಾಗಿರುತ್ತದೆ.

ಭೂಕಂಪಗಳು ಸಾಮಾನ್ಯ ನೈಸರ್ಗಿಕ ವಿಪತ್ತುಗಳಗಿವೆ. ಈ ಕುರಿತಾದ ಪೂರ್ವ ಎಚ್ಚರಿಕೆಗಳು ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಪ್ರಮುಖ ವ್ಯತ್ಯಾಸವನ್ನು ಮಾಡಬಹುದು. ಆ್ಯಂಡ್ರಾಯ್ಡ್ ಭೂಕಂಪ ಎಚ್ಚರಿಕೆ ವ್ಯವಸ್ಥೆಯು, ಅಕ್ಸೆಲೆರೊಮೀಟರ್ಸ್ ಎಂದು ಕರೆಯಲಾಗುವ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಅಂತರ್ನಿರ್ಮಿತ ಸಂವೇದಕಗಳನ್ನು ಬಳಸಿಕೊಳ್ಳುತ್ತದೆ. ಅಕ್ಸೆಲೆರೊಮೀಟರ್‌ಗಳು ಮಿನಿಯೇಚರ್ ಸೀಸ್ಮೋಮೀಟರ್‌ಗಳಾಗಿ ಕಾರ್ಯನಿರ್ವಹಿಸಬಹುದು ಎಂದು ಗೂಗಲ್ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.

ಪ್ಲಗ್-ಇನ್ ಮತ್ತು ಚಾರ್ಜಿಂಗ್ ಆಂಡ್ರಾಯ್ಡ್ ಫೋನ್ ಭೂಕಂಪದ ಆರಂಭಿಕ ಕಂಪನ ಪತ್ತೆಹಚ್ಚಿದಾಗ, ಅದು ಈ ಡೇಟಾವನ್ನು ಕೇಂದ್ರ ಸರ್ವರ್‌ಗೆ ಕಳುಹಿಸುತ್ತದೆ. ಒಂದೇ ಪ್ರದೇಶದಲ್ಲಿನ ಅನೇಕ ಫೋನ್‌ಗಳು ಒಂದೇ ರೀತಿಯ ಅಲುಗಾಡುವಿಕೆಯನ್ನು ಪತ್ತೆಹಚ್ಚಿದರೆ, ಸರ್ವರ್ ಭೂಕಂಪದ ಗುಣಲಕ್ಷಣಗಳನ್ನು ಅದರ ಕೇಂದ್ರಬಿಂದು ಮತ್ತು ಪರಿಮಾಣವನ್ನು ಒಳಗೊಂಡಂತೆ ಅಂದಾಜು ಮಾಡತ್ತದೆ. ತರುವಾಯ, ಇದು ವೇಗವಾಗಿ ಹತ್ತಿರದ ಆ್ಯಂಡ್ರಾಯ್ಡ್ ಸಾಧನಗಳಿಗೆ ಎಚ್ಚರಿಕೆಗಳನ್ನು ಕಳುಹಿಸುತ್ತದೆ. ಈ ಎಚ್ಚರಿಕೆಗಳು ಅಂತರ್ಜಾಲದಲ್ಲಿ ಬೆಳಕಿನ ವೇಗದಲ್ಲಿ ಚಲಿಸುತ್ತವೆ, ಹೆಚ್ಚು ತೀವ್ರವಾದ ಅಲುಗಾಡುವಿಕೆಗೆ ಹಲವಾರು ಸೆಕೆಂಡುಗಳ ಮೊದಲು ಬಳಕೆದಾರರನ್ನು ತಲುಪುತ್ತವೆ ಹೀಗೆ ಭೂಕಂಪದ ಅಲರ್ಟ್ ಸಿಸ್ಟಮ್ ಕೆಲಸ ಮಾಡುತ್ತದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ Explainer: Google Birthday: ಗೂಗಲ್‌ನ 25 ವರ್ಷದ ಇತಿಹಾಸ ಹೇಗಿತ್ತು? ಒಂದು ನೋಟ ಇಲ್ಲಿದೆ

ಭೂಕಂಪದ ಅಲರ್ಟ್ ಸಿಸ್ಟಮ್ ಅನ್ನು ಬಳಕೆದಾರ ಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಆಂಡ್ರಾಯ್ಡ್ ಬೆಂಬಲಿತ ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ವ್ಯಾಪಕ ಶ್ರೇಣಿಯ ಬಳಕೆದಾರರಿಗೆ ಪ್ರವೇಶವನ್ನು ಖಾತ್ರಿಪಡಿಸುತ್ತದೆ. ಆಂಡ್ರಾಯ್ಡ್ 5 ಮತ್ತು ಅದಕ್ಕಿಂತ ಹೊಸದಾದ ಎಲ್ಲ ಆವೃತ್ತಿಯ ಸಾಧನಗಳಿಗೆ ಈ ಅಲರ್ಟ್ ಸಿಸ್ಟಮ್ ಹೊಂದಾಣಿಕೆಯಾಗುತ್ತದೆ. ಬಳಕೆದಾರರು ಅರ್ಥ್‌ಕ್ವೇಕ್ ನಿಯರ್ ಮೀ ಎಂದು ಸರ್ಚ್ ಕೂಡ ಮಾಡಬಹುದು. ಆಗ, ಸೂಕ್ತ ಮಾಹಿತಿಯನ್ನು ಗೂಗಲ್ ಒದಗಿಸುತ್ತದೆ ಮತ್ತು ಬಳಕೆದಾರರು ಸುರಕ್ಷಿತವಾಗಿರು ನೆರವು ನೀಡುತ್ತದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version