Site icon Vistara News

Magic Compose: ಕೃತಕ ಬುದ್ಧಿಮತ್ತೆ ಆಧರಿತ ಮ್ಯಾಜಿಕ್ ಕಂಪೋಸ್ ಆರಂಭಿಸಿದ ಗೂಗಲ್, ಇದರ ಬಳಕೆ ಹೇಗೆ?

Google Magic Compose

ನವದೆಹಲಿ: ಈಗ ಕೃತಕ ಬುದ್ಧಿಮತ್ತೆ ಜಮಾನ ಶುರುವಾಗಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಕೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಈ ಕಾರಣದಿಂದ ಅನೇಕ ದೊಡ್ಡ ದೊಡ್ಡ ತಂತ್ರಜ್ಞಾನದ ಕಂಪನಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಸದ್ಯ ಚಾಟ್ ಜಿಪಿಟಿಯ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ, ಈ ಹಾದಿಯಲ್ಲಿ ಜನರೇಟಿವ್ ಎಐ ಮತ್ತೊಂದು ಮಹತ್ತರ ಸಾಧನೆಯಾಗಿದೆ. ಈ ಮೂಲಕ ಗೂಗಲ್ (Google) ಬಳಕೆದಾರರ ಕೆಲಸವನ್ನು ಇನ್ನಷ್ಟು ಹಗುರ ಮಾಡುವ ಪ್ರಯತ್ನವನ್ನು ಮಾಡುತ್ತಿದೆ. ಅದಕ್ಕಾಗಿ, ಜನರೇಟಿವ್ ಆಧರಿತ ಮ್ಯಾಜಿಕ್ ಕಂಪೋಸ್ (Magic Compose) ಎಂಬ ಹೊಸ ಫೀಚರ್ ‌ಲಾಂಚ್ ಮಾಡಿದೆ. ಯಾವುದೇ ಪಠ್ಯವನ್ನು ಬರೆಯುವಾಗ ಈ ಟೂಲ್ ನಿಮಗೆ ಸಂಭಾವ್ಯ ವಾಕ್ಯಗಳ ರಚನೆ ಜತೆಗೆ, ನಿಮ್ಮ ಸಂಭಾಷಣೆಯಲ್ಲಿ ಹೊಸ ಸ್ಪಾರ್ಕ್‌ ತರಲು ನೆರವು ನೀಡುತ್ತದೆ. ಸದ್ಯ ಈ ಫೀಚರ್, ಬೀಟಾ ವರ್ಷನ್‌ನಲ್ಲಿದ್ದು, ಶೀಘ್ರವೇ ಎಲ್ಲ ಬಳಕೆದಾರರಿಗೆ ಸಿಗಲಿದೆ.

ಏನಿದು ಮ್ಯಾಜಿಕ್ ಕಂಪೋಸ್?

ಮ್ಯಾಜಿಕ್ ಕಂಪೋಸ್ ಎಂಬುದು ಉತ್ಪಾದಕ ಕೃತಕ ಬುದ್ಧಿಮತ್ತೆಯನ್ನು ಬಳಸುವ ವಿಶೇಷ ಫೀಚರ್ ಆಗಿದೆ. ನಿಮ್ಮ ಸಂದೇಶಗಳ ಸಂದರ್ಭದ ಆಧಾರದ ಮೇಲೆ ಸೂಚಿಸಲಾದ ಪ್ರತಿಕ್ರಿಯೆಗಳನ್ನು ನೀಡುತ್ತದೆ. ನೀವು ಬರೆಯುವುದನ್ನು ವಿವಿಧ ಶೈಲಿಗಳಲ್ಲಿ ಮಾಂತ್ರಿಕವಾಗಿ ಮಾರ್ಪಡಿಸುತ್ತದೆ. ಈ ಮ್ಯಾಜಿಕಲ್ ಕಂಪೋಸ್ ಮಕ್ಕಳಿಗೆ ಬಳಕೆ ಮಾಡಲು ಅನುಮತಿ ನೀಡಿಲ್ಲ. ಬದಲಿಗೆ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಬಳಕೆದಾರರಿಗೆ ಮಾತ್ರವೇ ಸೀಮಿತವಾಗಿದೆ. ಇದು ಅಮೆರಿಕ ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಆಂಡ್ರಾಯ್ಡ್ ಫೋನ್‌ಗಳಲ್ಲಿಇಂಗ್ಲಿಷ್‌ನಲ್ಲಿ ಲಭ್ಯವಿದೆ. ಆಂಡ್ರಾಯ್ಡ್ ಗೋ ಫೋನುಗಳಲ್ಲಿ ಈ ಸೌಲಭ್ಯ ಸದ್ಯಕ್ಕೆ ಲಭ್ಯವಿಲ್ಲ.

ಗೂಗಲ್ ಮ್ಯಾಜಿಕ್ ಕಂಪೋಸ್ ಬಳಸುವುದು ಹೇಗೆ?

ಈ ಟೂಲ್ ಬಳಸುವುದು ತುಂಬ ಸಿಂಪಲ್. ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಮೆಸೇಜ್ ಆ್ಯಪ್ ಓಪನ್ ಮಾಡಿ. ಆರ್‌ಸಿಎಸ್ ಕನ್ವರ್ಷನ್ ಕನ್ವರ್ಸೇಷನ್‍ ಸ್ಟಾರ್ಟ್ ಮಾಡಿ. ಬಳಿಕ ಮೆಸೇಜಸ್ ಸಜೇಷನ್ಸ್ ಮೇಲೆ ಟ್ಯಾಪ್ ಮಾಡಿ, ಮ್ಯಾಜಿಕ್ ಕಂಪೋಸ್ ಆಯ್ಕೆ ಮಾಡಿಕೊಳ್ಳಿ. ವೈಶಿಷ್ಟ್ಯವನ್ನು ಪ್ರಯತ್ನಿಸಲು ನೀವು ಅದರ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ. ಮ್ಯಾಜಿಕ್ ಕಂಪೋಸ್ ಆಫ್ ಮಾಡಲು, ನೋ ಥ್ಯಾಂಕ್ಸ್ ಮೇಲ ಟ್ಯಾಪ್ ಮಾಡಿದರಾಯಿತು.

ಇದನ್ನೂ ಓದಿ: Viral News : ಗೂಗಲ್‌ ಸಿಇಒ ಸುಂದರ್‌ ಪಿಚ್ಚೈ ಹುಟ್ಟಿ, ಬೆಳೆದ ಮನೆ ಈಗ ತಮಿಳು ನಟನ ಸ್ವತ್ತು

Exit mobile version