Site icon Vistara News

Google: ಎಐ ಜನರೇಟೆಡ್ ಫೋಟೋ ಪತ್ತೆ ಹಚ್ಚಲು ಗೂಗಲ್‌ನಿಂದ ಹೊಸ ಫೀಚರ್!

Google search engine to Launch New feature to flag AI Generated Images

ನವದೆಹಲಿ: ಕೃತಕ ಬುದ್ದಿಮತ್ತೆ(artificial intelligence) ಜಮಾನದಲ್ಲೀಗ ಅಸಲಿ ಮತ್ತು ಸುಳ್ಳು ಮಾಹಿತಿ, ಫೋಟೋ ಸೇರಿದಂತೆ ಇತ್ಯಾದಿ ಡೇಟಾವನ್ನು ಪತ್ತೆ ಹಚ್ಚುವುದು ಕಷ್ಟದಾಯಕವೇ ಸರಿ. ಇಂಟರ್ನೆಟ್‌ನಲ್ಲಿ ದಂಡಿಯಾಗಿ ಮಾಹಿತಿ ಸಿಗುತ್ತದೆ. ಇದರಲ್ಲಿ ಸುಳ್ಳು ಯಾವುದು, ಸತ್ಯ ಸುದ್ದಿ ಯಾವುದು ಎಂದು ಪತ್ತೆ ಹಚ್ಚುವುದೇ ಕಷ್ಟ. ಈ ಕಾರಣಕ್ಕಾಗಿಯೇ ದೈತ್ಯ ಇಂಟರ್ನೆಟ್ ಕಂಪನಿ ಗೂಗಲ್(Google), ತನ್ನ ಸರ್ಚ್ ‌ಎಂಜಿನ್‌ಗೆ ಹೊಸ ಫೀಚರ್ ‌ಅಳವಡಿಸುತ್ತದೆ. ಈ ಫೀಚರ್ ಮೂಲಕ ಬಳಕೆದಾರರು ಕೃತಕ ಬುದ್ದಿಮತ್ತೆ ಸೃಜಿತ ಫೋಟೋಗಳನ್ನು ಮತ್ತು ತಪ್ಪು ಮಾಹಿತಿಯನ್ನು ಪತ್ತೆ ಹಚ್ಚಬಹುದಾಗಿದೆ.

ಎಐ ಸೃಜಿತ ಫೋಟೋ ಇಮೇಜ್ ಪತ್ತೆ ಹಚ್ಚಲು ಗೂಗಲ್ ಕಂಪನಿಯು About this image ಫೀಚರ್ ಜಾರಿಗೆ ತರಲಿದೆ. ಈ ಫೀಚರ್‌ನಿಂದಾಗಿ ಸರ್ಚ್ ಮಾಡಲಾದ ಫೋಟೋ ಮೊದಲಿಗೆ ಎಲ್ಲಿ ಕಾಣಿಸಿಕೊಂಡಿತು ಮತ್ತು ಆನ್ಲೈನ್‌ನಲ್ಲಿ ಯಾವಗಾ ಕಾಣಿಸಿಕೊಂಡಿವೆ ಮಾಹಿತಿಯನ್ನು ಒದಗಿಸುತ್ತದೆ. ಸುದ್ದಿ ಸಂಸ್ಥೆಗಳು ಒದಗಿಸಿರುವ ಯಾವುದೇ ಡಿಬಂಕಿಂಗ್ ಪುರಾವೆಗಳೊಂದಿಗೆ ಚಿತ್ರವನ್ನು ಸಂದರ್ಭೋಚಿತವಾಗಿಸುವಾಗ ಮೂಲ ಮೂಲವನ್ನು ಗುರುತಿಸಲು ಬಳಕೆದಾರರಿಗೆ ಸಹಾಯ ಮಾಡುವುದು ಇದರ ಉದ್ದೇಶವಾಗಿದೆ.

ಸರ್ಚ್‌ ಎಂಜಿನ್‌ನಲ್ಲಿ ಕಾಣಿಸಿಕೊಳ್ಳುವ ಫೋಟೋ‌ಗಳು ಎಐ ಜನರೇಟೆಡ್ ಇಮೇಜ್ ಆಗಿದ್ದರೆ ಅಂಥ ಇಮೇಜ್‌ಗಳನ್ನು ಪ್ರತ್ಯೇಕವಾಗಿ ಗುರುತಿಸಲಿದೆ. ಈ ಕೆಲಸದಲ್ಲಿ ನೆರವಾಗಲು ಗೂಗಲ್‌ ಜತೆಗೆ ಮಿಡ್ ಜರ್ನಿ ಮತ್ತು ಶಟರ್ ಸ್ಟಾಕ್ ಕೈಗೂಡಿಸಿವೆ. ತಾನು ಸೃಷ್ಟಿಸಿರು ಟೂಲ್‌ ಮೂಲಕ ಗೂಗಲ್ ಎಐ ಇಮೇಜ್‌ಗಳನ್ನು ಮಾರ್ಕ್ ಮಾಡಲಿದೆ.

ಆನ್‌ಲೈನ್‌ನಲ್ಲಿ ಚಿತ್ರಗಳ ಮೂಲವು ಎಐ ಯುಗದಲ್ಲಿ ಸೃಷ್ಟಿಯಗುತ್ತಿರುವ ಹೊಸ ಸಮಸ್ಯೆಯಾಗಿದೆ. ಎಐ ಜನರೇಟೆಡ್ ಇಮೇಜ್‌ಗಳ ಪರಿಶೀಲನೆ ಮತ್ತು ದೃಢೀಕರಣ ಸಾಧನಗಳನ್ನು ತಯಾರಿಸಲು ಹಲವಾರು ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಉದಾಹರಣೆಗೆ, ಮೈಕ್ರೋಸಾಫ್ಟ್-ಬೆಂಬಲಿತ ಟ್ರೂಫಿ ಟೂಲ್, ಚಿತ್ರವು ಸೆರೆಹಿಡಿಯುವಿಕೆಯಿಂದ ವಿತರಣೆಯವರೆಗೆ ಕುಶಲತೆಯಿಂದ ಮಾಡಲ್ಪಟ್ಟಿಲ್ಲ ಎಂದು ಖಚಿತಪಡಿಸಿಕೊಳ್ಳುವ ವ್ಯವಸ್ಥೆಯನ್ನು ಬಳಕೆದಾರರಿಗೆ ಒದಗಿಸುತ್ತದೆ.

ಇದನ್ನೂ ಓದಿ: Sundar Pichai: ಗೂಗಲ್ ಸರ್ಚ್‌ ಎಂಜಿನ್‌ಗೆ ಶೀಘ್ರವೇ ಎಐ ಚಾಟ್ ಎಂದ ಸುಂದರ್ ಪಿಚ್ಚೈ

ಈಗ ಗೂಗಲ್ ಹೊರ ತರುತ್ತಿರುವ ಹೊಸ ಫೀಚರ್ ಈ ವರ್ಷವೇ ಬಳಕೆದಾರರಿಗೆ ಸಿಗಲಿದೆ. ಇದು ತೀರಾ ಗಂಭೀರವಾದ ತಂತ್ರಜ್ಞಾನವನ್ನು ಹೊಂದಿಲ್ಲವಾದರೂ ಕೈಗಾರಿಕಾ ಉದ್ಯಮ ಬೆಂಬಲದೊಂದಿಗೆ ಗರಿಷ್ಠ ಪ್ರಮಾಣದ ಎಫೆಕ್ಟ್ ಮಾಡಲಿದೆ ಎಂಬು ಮಾತುಗಳು ಕೇಳಿಬರುತ್ತವೆ. ಕೃತಕ ಬುದ್ದಿಮತ್ತೆಯಿಂದ ರಚಿಸಲ್ಪಟ್ಟ ಚಿತ್ರಗಳು, ಮೂಲಫೋಟೋಗಳನ್ನು ಮರೆ ಮಾಚುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ, ಅವುಗಳನ್ನು ಪ್ರತ್ಯೇಕಿಸಿ, ಮೂಲ ಫೋಟೋ ಯಾವುದು, ಎಐ ಜನರೇಟೆಡ್ ಫೋಟೋ ಯಾವುದೇ ಎಂಬುದನ್ನು ಬಳಕೆದಾರರಿಗೆ ತಿಳಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗೂಗಲ್ ಹೆಜ್ಜೆ ಇಟ್ಟಿದೆ ಎಂದು ಹೇಳಬಹುದು.

ತಂತ್ರಜ್ಞಾನದ ಕುತೂಹಲಕರ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version