ನವದೆಹಲಿ: ಹೊಸ ಆ್ಯಂಡ್ರಾಯ್ಡ್ ರಿಲೀಸ್ (Android 14) ಮುಂದಿರುವಂತೆಯೇ ಗೂಗಲ್ (Google), ಆಂಡ್ರಾಯ್ಡ್ ಹೊಸ ಲೋಗೋವನ್ನು (Android New Logo) ಅನಾವರಣ ಮಾಡಿದೆ. ಕ್ಲಾಸಿಕ್ ಗ್ರೀನ್ ಆಂಡ್ರಾಯ್ಡ್‌ಗೆ ಹಲವು ಸುಧಾರಣೆಗಳೊಂದಿಗೆ ಆಂಡ್ರಾಯ್ಡ್ ಅನ್ನು ಮರುಬ್ರಾಂಡ್ ಮಾಡಲಾಗಿದೆ. ಹೊಸ ಆಂಡ್ರಾಯ್ಡ್ ಲೋಗೋ ಪೇರೆಂಟ್ ಬ್ರಾಂಡ್ ಮತ್ತು ಮೊಬೈಲ್ ಪ್ಲಾಟ್‌ಫಾರ್ಮ್ ನಡುವಿನ ಏಕೀಕರಣದ ಬಗ್ಗೆ ಸುಳಿವು ನೀಡುತ್ತದೆ. ಹೊಸ ಲೋಗೋದೊಂದಿಗೆ ಗೂಗಲ್ ಆಂಡ್ರಾಯ್ಡ್‌ಗೆ ಮತ್ತಷ್ಟು ಹೊಸ ಫೀಚರ್‌ಗಳನ್ನು ಕೂಡ ಪರಿಚಯಿಸುತ್ತಿದೆ.
ಉಳಿದ ಅಕ್ಷರಗಳ ನಡುವೆ ಹೆಚ್ಚು ಎದ್ದುಕಾಣುವಂತೆ ಇರುವ ‘A’ನೊಂದಿಗೆ ಲೋಗೋವನ್ನು ನವೀಕರಿಸಲಾಗಿದೆ ಎಂದು ಗೂಗಲ್ ಹೇಳಿದೆ. ಹೊಸ ಲೋಗೋ ‘ಹೆಚ್ಚು ಕರ್ವ್ಸ್’ ಮತ್ತು ‘ಪರ್ಸನಾಲಿಟಿ’ಯನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ಜನಪ್ರಿಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗೆ ಯುಥ್ ವೈಬ್(ಯುವ ಸ್ಪಂದನೆ) ನೀಡುತ್ತದೆ. ಏತನ್ಮಧ್ಯೆ, ಆಂಡ್ರಾಯ್ಡ್‌ನ ದೀರ್ಘಕಾಲದ ಮ್ಯಾಸ್ಕಾಟ್ – ಡ್ರಾಯಿಡ್ ಎಂದಿಗಿಂತಲೂ ಹೆಚ್ಚು ಮೂರು ಆಯಾಮಗಳನ್ನು ಹೊಂದಿದೆ, ಅದರ ತಲೆಯ ಬದಲಿಗೆ ಅದರ ಸಂಪೂರ್ಣ ದೇಹವನ್ನು ತೋರಿಸುತ್ತದೆ.
ಗೂಗಲ್ ಸ್ವಲ್ಪ ಸಮಯದವರೆಗೆ ಹೊಸ ಆ್ಯಂಡ್ರಾಯ್ಡ್ ಬ್ರ್ಯಾಂಡಿಂಗ್ ಕುರಿತು ಟೀಸರ್ ಬಿಡುಗಡೆ ಮಾಡುತ್ತಿತ್ತು. ಗೂಗಲ್ I/O ನಿಂದ ಪ್ರಾರಂಭಿಸಿ, ಆಲ್ಫಾಬೆಟ್ ಕಂಪನಿಯು ಮುಂಬರುವ Android 14 ಆಪರೇಟಿಂಗ್ ಸಿಸ್ಟಂನ ಕೆಲವು ಹೊಸ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡುವಾಗ ಹೊಸ ಲೋಗೋವನ್ನು ಸಂಕ್ಷಿಪ್ತವಾಗಿ ಪ್ರದರ್ಶಿಸಿತ್ತು.
ಕಳೆದ ನಾಲ್ಕು ವರ್ಷಗಳಿಂದ ಗೂಗಲ್ ಲೋಗೋ ಅಪ್‌ಡೇಟ್ ಮಾಡಿರಲಿಲ್ಲ. ಹಾಗಾಗಿ ಕಂಪನಿಯು ಗಮನಾರ್ಹವಾದ ದೃಶ್ಯ ಕೂಲಂಕುಷ ಪರೀಕ್ಷೆಯನ್ನು ಗುರಿಯಾಗಿಸಿಕೊಂಡಿದೆ. ಈ ವರ್ಷದ ನಂತರ ಸಾಧನಗಳು ಮತ್ತು ಇತರ ಸ್ಥಳಗಳಲ್ಲಿ ಹೊಸ ಲೋಗೋ ಕಾಣಿಸಿಕೊಳ್ಳುತ್ತದೆ ಎಂದು ಗೂಗಲ್ ಹೇಳಿದೆ.
ಈ ಸುದ್ದಿಯನ್ನೂ ಓದಿ: WhatsApp: ಆ್ಯಂಡ್ರಾಯ್ಡ್ ಸ್ಮಾರ್ಟ್‌ವಾಚ್‌ಗಳಿಗಾಗಿ ವಾಟ್ಸಾಪ್! ಹೇಗಿದೆ ಈ ಆ್ಯಪ್?
ಆ್ಯಂಡ್ರಾಯ್ಡ್ ಲೋಗೋ ನವೀಕರಣ ಮಾತ್ರವಲ್ಲದೇ, ಎಟ್ ಎ ಗ್ಲಾನ್ಸ್ ವಿಜೆಟ್ ಕೂಡ ಅಪ್‌ಡೇಟ್ ಮಾಡಿದೆ. ಈ ವಿಜೆಟ್ ಹವಾಮಾನ ಮಾಹಿತಿಯನ್ನು ಬಳಕೆದಾರರಿಗೆ ನೀಡುತ್ತದೆ. ಅಪ್‌ಡೇಟ್ ಆಗಿರುವ ವಿಜೆಟ್ ಮಾತ್ರೆ ಆಕಾರದಲ್ಲಿದೆ ಮತ್ತು ಟ್ರಾವೆಲ್ಸ್ ಅಪ್‌ಡೇಟ್ಸ್ ನೀಡುತ್ತದೆ. ಕಂಪನಿಯು ತನ್ನ ವಾಲೆಟ್ ಆ್ಯಪ್ ಕೂಡ ಅಪ್‌ಡೇಟ್ ಮಾಡಿದೆ. ಮತ್ತೊಂದೆಡೆ ಝೂಮ್ ಮತ್ತು ಆಂಡ್ರಾಯ್ಡ್ ಆಟೋ ಎರಡನ್ನೂ ಒಂದುಗೂಡಿಸುವ ಬಗ್ಗೆಯೂ ಘೋಷಣೆ ಮಾಡಿದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.