ಬೆಂಗಳೂರು, ಕರ್ನಾಟಕ: ಕಳೆದ ವರ್ಷ ಜುಲೈ ತಿಂಗಳಲ್ಲಿ ಗೂಗಲ್ (Google) ಕಂಪನಿಯು ತನ್ನ ವಾಲೆಟ್ ಸೇವೆಯಾದ ಗೂಗಲ್ ವಾಲೆಟ್ (Google Wallet) ಲಾಂಚ್ ಮಾಡಿತ್ತು. ಈ ಉತ್ಪನ್ನಕ್ಕೆ ಈಗ ಕಂಪನಿಯು ಐದು ಹೊಸ ಫೀಚರ್‌ಗಳನ್ನು (New Feature) ಸೇರಿಸಿದ್ದು, ಬಳಕೆದಾರರಿಗೆ ಇನ್ನಷ್ಟು ನೆರವು ಒದಗಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಗೂಗಲ್ ವಾಲೆಟ್ ಈ ಮೊದಲಿಗಿಂತಲೂ ಈಗ ಹೆಚ್ಚು ಸುಭದ್ರ ಮತ್ತು ಪ್ರೈವೇಟ್ ಡಿಜಿಟಲ್ ವಾಲೆಟ್ ಆಗಿ ಬದಲಾಗಿದೆ. ಅನುಕೂಲತೆ, ಭದ್ರತೆ ಮತ್ತು ಗೌಪ್ಯತೆಗೆ ಆದ್ಯತೆ ನೀಡುವ ಹೊಸ ಡಿಜಿಟಲ್ ವ್ಯಾಲೆಟ್ ಅನ್ನು ರಚಿಸಲು ನಾವು ಹೊರಟಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ, ಯಾರಿಗಾದರೂ, ಎಲ್ಲಿಯಾದರೂ ಪ್ರವೇಶಿಸಬಹುದಾದ ಅನುಭವವನ್ನು ನಿರ್ಮಿಸಲು ನಾವು ಬಯಸುತ್ತೇವೆ. ಆ ದೃಷ್ಟಿಯನ್ನು ರಿಯಾಲಿಟಿ ಮಾಡಲು ನಾವು ಹೇಗೆ ಕೆಲಸ ಮಾಡುತ್ತಿದ್ದೇವೆ ಎಂಬುದು ಇಲ್ಲಿದೆ ಎಂದು ಗೂಗಲ್ ವಾಲೆಟ್‌ನ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಜೆನ್ನಿ ಚಾಂಗ್ ಅವರು ಗೂಗಲ್ ಬ್ಲಾಗ್‌ನಲ್ಲಿ ಹೊಸ ಫೀಚರ್‌ಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
Google Wallet: ಸುಲಭವಾಗಿ ಪಾಸ್ ಇಮೇಜ್ ಸೇವ್
ಶೀಘ್ರದಲ್ಲೇ ಬಳಕೆದಾರರು ವ್ಯಾಲೆಟ್‌ನಲ್ಲಿ ಕಾರ್ಡ್‌ನ ಸುರಕ್ಷಿತ, ಡಿಜಿಟಲ್ ಆವೃತ್ತಿಯನ್ನುಕ್ರಿಯೇಟ್ ಮಾಡಲು ಮತ್ತು ಸೇವ್ ಮಾಡಲು ಸಾಧ್ಯವಾಗಲಿದೆ. ಈ ಕ್ರಿಯೇಯನ್ನು ಕಾರ್ಡ್‌ನ ಫೋಟೋವನ್ನು ತೆಗೆದುಕೊಳ್ಳುವ ಮೂಲಕ ಮಾಡಬಹುದಾಗಿದೆ. ಈ ಫೀಚರ್, ಬಾರ್‌ಕೋಡ್ ಅಥವಾ ಕ್ಯೂಆರ್ ಕೋಡ್‌ನೊಂದಿಗೆ ಯಾವುದೇ ಪಾಸ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಪ್ರಾಥಮಿಕವಾಗಿ ಟ್ರಾನ್ಸಿಟ್ ಕ್ಯೂಆರ್ ಟಿಕೆಟ್‌ಗಳು, ಪಾರ್ಕಿಂಗ್ ಪಾಸ್‌ಗಳು ಅಥವಾ ಇ-ಕಾಮರ್ಸ್ ರಿಟರ್ನ್ ಕ್ಯೂಆರ್ ಕೋಡ್‌ಗಳಂತಹ ಪಾಸ್‌ಗಳಿಗೆ ಇದು ಅನ್ವಯವಾಗುತ್ತದೆ.
ಸೇವ್ ಹೆಲ್ತ್ ಇನ್ಶೂರೆನ್ಸ್ ಕಾರ್ಡ್ಸ್
ಆರೋಗ್ಯ ವಿಮೆಯ ಪತ್ರ ಕಾರ್ಡ್‌ನ ಡಿಜಿಟಿಲ್ ಆವೃತ್ತಿಯನ್ನು ಅಭಿವೃದ್ಧಿ ಮಾಡಲು ಗೂಗಲ್ ಹುಮನಾ (ಅಮೆರಿಕದ ಹೆಲ್ತ್ ಇನ್ಶೂರೆನ್ಸ್ ಕಂಪನಿ) ಜತೆ ಕೆಲಸ ಮಾಡುತ್ತಿದೆ. ಇದರಿಂದ ಬಳಕೆದಾರರು ವಾಲೆಟ್‌ನಲ್ಲಿ ಕಾರ್ಡ್ ಸೇವ್ ಮಾಡಿಕೊಳ್ಳಲು ಸಹಾಯವಾಗಲಿದೆ. ಇನ್ನು ಬ್ರಿಟನ್‌ನಲ್ಲಿ ಬಳಕೆದಾರರು ಎಚ್ಎಂಆರ್‌ಸಿ ಆ್ಯಪ್‌ನಿಂದ ರಾಷ್ಟ್ರೀಯ ವಿಮಾ ನಂಬರ್ ಸೇವ್ ಮಾಡಿಕೊಳ್ಳಲು ನೆರವು ನೀಡಲಿದೆ.
ನಿಮ್ಮ ಐಡಿ ಸೇವ್ ಮಾಡಿ
ಜೂನ್ 1ರಿಂದ ಮೇರಿಲ್ಯಾಂಡ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಈಗಾಗಲೇ ತಮ್ಮ ಐಡಿಯನ್ನು ಆಂಡ್ರಾಯ್ಡ್ 8.0 ಅಥವಾ ನಂತರದ ಯಾವುದೇ ಫೋನ್‌ನಲ್ಲಿ ವ್ಯಾಲೆಟ್‌ಗೆ ಸೇರಿಸಬಹುದು. ಮುಂಬರುವ ತಿಂಗಳುಗಳಲ್ಲಿ ಅಮೆರಿಕದ ಅರಿಝೋನಾ, ಕೊಲೊರಾಡೋ ಮತ್ತು ಜಾರ್ಜಿಯಾದಲ್ಲಿಯೂ ಈ ಸೌಲಭ್ಯ ಲಭ್ಯವಾಗಲಿದೆ. ಮೇರಿಲ್ಯಾಂಡ್‌ನಿಂದ ಕೊಡ ಮಾಡಲಾದ ಐಡಿಗಳನ್ನು ವಾಲೆಟ್‌ಗಳನ್ನು ಸೇವ್ ಮಾಡಿಕೊಂಡು, ಅವುಗಳ್ನು ಸಾರಿಗೆ ಭದ್ರತಾ ಆಡಳಿತಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಇನ್ನು ಹೆಚ್ಚಿನ ಲಾಭಗಳು ಈ ಫೀಚರ್ ಮೂಲಕ ಲಭ್ಯವಾಗಲಿವೆ.
ಇದನ್ನೂ ಓದಿ: ವಿಸ್ತಾರ Explainer | ನಿಮ್ಮ ಹಣ ಕದಿಯುವ SOVA Virus! ಮೊಬೈಲ್ ಬಳಸುವಾಗ ಹುಷಾರ್!
Google Wallet: ಮೆಸೇಜ್‌ಗಳಿಂದ ಪಾಸ್‌ಗಳನ್ನು ಸೇವ್ ಮಾಡಿ
ಸದ್ಯದಲ್ಲಿಯೇ, RCS (ರಿಚ್ ಕಮ್ಯುನಿಕೇಶನ್ ಸೇವೆಗಳು) ಸಕ್ರಿಯಗೊಳಿಸಲಾದ Google ನ ಸಂದೇಶಗಳ ಅಪ್ಲಿಕೇಶನ್ ಅನ್ನು ಬಳಸುವ ಜನರು ತಮ್ಮ ಬೋರ್ಡಿಂಗ್ ಪಾಸ್ ಅಥವಾ ರೈಲು ಟಿಕೆಟ್ ಅನ್ನು ನೇರವಾಗಿ ಸಂದೇಶಗಳಲ್ಲಿ ಸ್ವೀಕರಿಸುತ್ತಾರೆ; ಇಲ್ಲಿಂದ, ಅವರು ಇವುಗಳನ್ನು ವಾಲೆಟ್‌ಗೆ ಉಳಿಸಬಹುದು. ವಿಯೆಟ್ನಾಂ ಏರ್‌ಲೈನ್ಸ್ ಪ್ರಯಾಣಿಕರು ಮತ್ತು ಸ್ಪೇನ್‌ನ ಪ್ರಮುಖ ರೈಲು ನಿರ್ವಾಹಕರಾದ ರೆನ್‌ಫೆಯಲ್ಲಿರುವ ಅವರ ಸಹವರ್ತಿಗಳು ಈ ಸೌಲಭ್ಯವನ್ನು ಬೇರೆಯವರಿಗಿಂತ ಮೊದಲು ಪಡೆದುಕೊಳ್ಳುತ್ತಾರೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.