Site icon Vistara News

WhatsApp: ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಭಾರತದ ಅರ್ಧದಷ್ಟು ವಾಟ್ಸಾಪ್ ಬಳಕೆದಾರರಿಗೆ ಸ್ಪ್ಯಾಮ್ ಕಾಲ್!

half of the whatsapp users receving spam calls from international numbers

ನವದೆಹಲಿ: ಭಾರತದಲ್ಲಿರುವ ಒಟ್ಟು ವಾಟ್ಸಾಪ್ (WhatsApp) ಬಳಕೆದಾರರ ಪೈಕಿ ಅರ್ಧದಷ್ಟು ಬಳಕೆದಾರರು ಅಂತಾರಾಷ್ಟ್ರೀಯ ನಂಬರ್‌ಗಳಿಂದ ಸ್ಪ್ಯಾಮ್ ಕಾಲ್‌ಗಳನ್ನು ಸ್ವೀಕರಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಳಕೆದಾರರು ಸೋಷಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದರು. ಹೀಗೆ ಬಂದ್ ಕರೆಗಳು ವಿಶೇಷವಾಗಿ ಯುಟ್ಯೂಬ್‌ನಲ್ಲಿ ಲೈಕ್‌ಗಳನ್ನು ಒತ್ತುವ ಸರಳ ಉದ್ಯೋಗದ ಆಮಿಷ‍‌ಗಳಾಗಿವೆ. ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರು ವಾಟ್ಸಾಪ್‌ಗೆ ನೋಟಿಸ್ ನೀಡಿದ್ದರು.

ಈ ನೋಟಿಸ್‌ಗೆ ಉತ್ತರಿಸಿದ್ದ ವಾಟ್ಸಾಪ್‌, ಬಳಕೆದಾರರ ಸುರಕ್ಷಿತರನ್ನಾಗಿಸುವ ಭಾರತ ಸರ್ಕಾರದ ಉದ್ದೇಶದೊಂದಿಗೆ ನಾವು ಇದ್ದೇವೆ ಎಂದು ಹೇಳಿತ್ತು. ಎರಡು-ಹಂತದ ಪರಿಶೀಲನೆ, ಬ್ಲಾಕ್, ವರದಿ ಮತ್ತು ಗೌಪ್ಯತೆ ನಿಯಂತ್ರಣದಂತಹ ಅಂತರ್ನಿರ್ಮಿತ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಬಳಕೆದಾರರಿಗೆ ತಿಳಿಸಲು ಕಂಪನಿಯು, “ವಾಟ್ಸಾಪ್ ಜತೆಗೆ ಸುರಕ್ಷಿತವಾಗಿರಿ ಎಂದು ಅಭಿಯಾನವನ್ನು ಆರಂಭಿಸಿರುವುದಾಗಿ ಹೇಳಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಲೋಕಲ್ ಸರ್ಕಲ್ ಸಮೀಕ್ಷೆಯನ್ನು ನಡೆಸಿದೆ. ಅದರ ಪ್ರಕಾರ, ಭಾರತದಲ್ಲಿ ವಾಟ್ಸಾಪ್ ಬಳಕೆದಾರರ ಪೈಕಿ ಅರ್ಧದಷ್ಟು ಬಳಕೆದಾರರಿಗೆ ಸ್ಪ್ಯಾಮ್ ಕರೆಗಳು ಬರುತ್ತವೆ. ಈ ಪೈಕಿ ಶೇ.83ರಷ್ಟು ಜನರು ಕಳೆದ ತಿಂಗಳಲ್ಲಿ ಈ ರೀತಿಯ ಕರೆಗಳನ್ನು ಸ್ವೀಕರಿಸುವುದಾಗಿ ಹೇಳಿಕೊಂಡಿದ್ದಾರೆ. ಕಳೆದ 30 ದಿನಗಳಲ್ಲಿ ಶೇ.21 ಪ್ರತಿಕ್ರಿಯಿಸಿದವರು ಯಾವುದೇ ಬದಲಾವಣೆಯನ್ನು ಕಂಡಿಲ್ಲ ಎಂದು ಹೇಳಿದ್ದಾರೆ. ಸ್ಪ್ಯಾಮ್ ಆಡಿಯೋ ಅಥವಾ ವೀಡಿಯೊ ಕರೆಗಳು ಶೇ.20 ವರೆಗೆ ಹೆಚ್ಚಾಗಿದೆ ಎಂದು ಶೇ.17 ಜನರು ಹೇಳಿಕೊಂಡಿದ್ದಾರೆ.

ಯಾವ ರೀತಿಯ ಅಪರಿಚಿತ ಸಂಖ್ಯೆಗಳಿಂದ ಬಳಕೆದಾರರು ಕರೆಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗ ಶೇ.59 ಪ್ರತಿಕ್ರಿಯಿಸಿದವರು, ಈ ಕರೆಗಳು ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಬರುತ್ತಿವೆ ಎಂದು ಹೇಳಿದ್ದಾರೆ. ಪ್ರತಿಕ್ರಿಯಿಸಿದವರ ಪೈಕಿ ಶೇ.37 ಮಂದಿ, ಹೆಚ್ಚಾಗಿ ಅಂತಾಷ್ಟ್ರೀಯ ಸಂಖ್ಯೆಗಳಿಂದ ಮತ್ತು ಕೆಲವು ದೇಶೀಯ ಸಂಖ್ಯೆಗಳಿಂದ ಆಡಿಯೋ ಅಥವಾ ವೀಡಿಯೊ ಕರೆಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಶೇ.23 ಜನರು ಅಂತಹ ವಂಚನೆ ಕರೆಗಳನ್ನು ಹೆಚ್ಚಾಗಿ ದೇಶೀಯ ಸಂಖ್ಯೆಗಳು ಮತ್ತು ಕೆಲವು ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಸ್ವೀಕರಿಸಿದ್ದಾಗಿ ಹೇಳಿದ್ದಾರೆ. ಶೇ.22 ಜನರು ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಮತ್ತು ಶೇ.18 ದೇಶೀಯ ಸಂಖ್ಯೆಗಳಿಂದ ಮಾತ್ರ ಕರೆಗಳನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ: WhatsApp: ‘ಸಂಚಾರ್ ಸಾಥಿ’ಯಲ್ಲಿ ರಿಪೋರ್ಟ್‌ ಮಾಡಲಾದ ಮೊಬೈಲ್ ನಂಬರ್ ತೆಗೆದು ಹಾಕಲಿದೆ ವಾಟ್ಸಾಪ್!

ಈ ಸಮೀಕ್ಷೆಯಿಂದ ಒಟ್ಟಾರೆ ತಿಳಿಯುವುದು ಏನೆಂದರೆ, ಕಳೆದ ಕೆಲವು ವಾರಗಳಲ್ಲಿ ವಾಟ್ಸಾಪ್ ಬಳಕೆದಾರರು ಗಣನೀಯ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಸ್ಪ್ಯಾಮ್ ಕಾಲ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಲೋಕಲ್ ಸರ್ಕಲ್‌ ನಡೆಸಿದ ಸಮೀಕ್ಷೆಯಲ್ಲಿ 23 ಸಾವಿರ ಜನರು ಪಾಲ್ಗೊಂಡಿದ್ದಾರೆ. ವಾಟ್ಸಾಪ್ ಎಐ ಮತ್ತು ಎಂಎಲ್ ಅನ್ವಯಿಸುವುದು ಮಾತ್ರವಲ್ಲದೇ, ಸ್ಪ್ಯಾಮ್‌ ಕಾಲ್, ಮೆಸೇಜ್‌ಗಳನ್ನು ವರದಿ ಮಾಡಲು ಬಳಕೆದಾರರಿಗೆ ಸುಲಭ ಮಾರ್ಗಗಳು ಕೊಡಬೇಕು. ಕಡಿಮೆ ಸಮಯದಲ್ಲಿ ಸ್ಕ್ಯಾಮಿಂಗ್ ಸಂಖ್ಯೆಯನ್ನು ವರದಿ ಮಾಡಿದರೆ, ಕೂಡಲೇ ನಿರ್ಬಂಧಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ.

ತಂತ್ರಜ್ಞಾನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version