ನವದೆಹಲಿ: ಇತ್ತೀಚೆಗಷ್ಟೇ ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಹಾನರ್ ಕಂಪನಿಯು ಮ್ಯಾಜಿಕ್ 5 ಸಿರೀಸ್‌ನಲ್ಲಿ ಮ್ಯಾಜಿಕ್ 5 ಮತ್ತು ಮ್ಯಾಜಿಕ್ 5 ಪ್ರೋ ಸ್ಮಾರ್ಟ್‌ಫೋನ್ ಲಾಂಚ್ ಮಾಡಿತ್ತು. ಇವುಗಳ ಜತೆಗೆ ಕಂಪನಿಯ ಮೊದಲ ಫೋಲ್ಡೇಬಲ್ ಸ್ಮಾರ್ಟ್‌ಫೋನ್ ಹಾನರ್ ಮ್ಯಾಜಿಕ್ ವಿಎಸ್ ಕೂಡ ಲಾಂಚ್ ಆಗಿತ್ತು. ಈಗ ಕಂಪನಿಯು ಜಾಗತಿಕ ಮಾರುಕಟ್ಟೆಗೆ ಹಾನರ್ 70 ಲೈಟ್ 5ಜಿ (Honor 70 Lite 5G) ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ.
ಈ ಹಾನರ್ 70 ಲೈಟ್ 5ಜಿ ಸ್ಮಾರ್ಟ್‌ಫೋನ್ ಒಂದೇ ವೆರಿಯಂಟ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. 4 ಜಿಬಿ RAM ಹಾಗೂ 128 ಜಿಬಿ ಸ್ಟೋರೇಜ್ ವೆರಿಯಂಟ್ ಫೋನ್ ಬೆಲೆ 199 ಪೌಂಡ್ ಎಂದು ಹೇಳಲಾಗುತ್ತಿದೆ. ಅಂದರೆ, ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅದು ಅಂದಾಜು 20 ಸಾವಿರ ರೂ. ಆಗಬಹುದು. ಭಾರತೀಯ ಮಾರುಕಟ್ಟೆಗೆ ಯಾವಾಗ ಈ ಫೋನ್ ಲಾಂಚ್ ಆಗಲಿದೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ.
ಟೈಟಾನಿಯಂ ಸಿಲ್ವರ್, ಓಷನ್ ಬ್ಲೂ, ಮಿಡ್ನೈಟ್ ಬ್ಲಾಕ್ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಈ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಸಿಗಲಿದೆ. ಆದರೆ, ಈ ಮೂರು ಬಣ್ಣಗಳ ಫೋನ್ ಎಲ್ಲ ಮಾರುಕಟ್ಟೆಗಳಲ್ಲಿ ಸಿಗುತ್ತದೆ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಈ ಬಗ್ಗೆ ವೆಬ್‌ಸೈಟ್‌ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
Honor 70 Lite 5G ವಿಶೇಷತೆಗಳೇನು?
Honor 70 Lite 5G ಸ್ಮಾರ್ಟ್‌ಫೋನ್ ಡುಯಲ್ ಸಿಮ್‌ಗೆ ಸಪೋರ್ಟ್ ಮಾಡುತ್ತದೆ. ಮ್ಯಾಜಿಕ್ ಯುಐ ಜತೆ ಆಂಡ್ರಾಯ್ಡ್ 12 ಸಂಯೋಜಿಸಲಾಗಿದೆ. 6.5 ಇಂಚ್ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇ ಇದ್ದು, Adreno 619 GPU ಜತೆ Snapdragon 480+ ಪ್ರೊಸೆಸರ್ ನೀಡಲಾಗಿದೆ. 4 ಜಿಬಿ RAM ಇದೆ.
ಕ್ಯಾಮೆರಾ ಹೇಗಿದೆ?
Honor 70 Lite 5G ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್ ಅಪ್ ಇದೆ. ಮೂರು ಕ್ಯಾಮೆರಾಗಳನ್ನು ಚೌಕಾಕಾರದ ಡಿಸೈನ್‌ನಲ್ಲಿ ಸೆಟ್ ಅಪ್ ಮಾಡಲಾಗಿದೆ. ಮೂರು ಕ್ಯಾಮೆರಾಗಳ ಪೈಕಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾವಾಗಿದೆ. ಉಳಿದೆರಡು ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಾಗಿವೆ. ಫೋನ್ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮಾರವನ್ನು ಸೆಲ್ಫಿಗಾಗಿ ನೀಡಲಾಗಿದೆ. ಚಾಟ್ ಮತ್ತು ವಿಡಿಯೋ ಕರೆಗಳಿಗಾಗಿ ಬಳಸಿಕೊಳ್ಳಬಹುದು.
ಇದನ್ನೂ ಓದಿ: ಸ್ಮಾರ್ಟ್‌ಫೋನ್ ಕಳೆದು ಹೋಗಿದೆಯೇ? IMEI Number ಮೂಲಕ ಟ್ರ್ಯಾಕ್ ಅಥವಾ ಬ್ಲಾಕ್ ಮಾಡಬಹುದು!
5000mAh ಬ್ಯಾಟರಿ ಇದ್ದು, 122.5 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಫೇಸ್ ಅನ್‌ಲಾಕ್ ಇದ್ದು, ಫೋನ್ ಬದಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ. 128 ಜಿಬಿ ಇಂಟರ್ನಲ್ ಸ್ಟೋರೇಜ್ ಇದೆ. ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ, 5G, Wi-Fi 802.11ac, ಬ್ಲೂಟೂತ್ 5.1, GPS, USB ಟೈಪ್-C ಪೋರ್ಟ್, NFC, OTG ಮತ್ತು 3.5mm ಆಡಿಯೋ ಜ್ಯಾಕ್ ಸೌಲಭ್ಯಗಳಿವೆ.