Site icon Vistara News

WhatsApp: ಡಿಜಿಲಾಕರ್‌ನಲ್ಲಿರುವ ಆಧಾರ್, ಪಾನ್, ಡಿಎಲ್ ವಾಟ್ಸಾಪ್ ಮೂಲಕ ಡೌನ್ಲೋಡ್ ಮಾಡುವುದು ಹೇಗೆ?

How to download Aadhaar, PAN, Driving license card through WhatsApp

ಬೆಂಗಳೂರು, ಕರ್ನಾಟಕ: ಡಿಜಿಲಾಕರ್ (DigiLocker) ಬಗ್ಗೆ ಎಲ್ಲರಿಗೂ ಗೊತ್ತೇ ಇರುತ್ತದೆ. ಸ್ಮಾರ್ಟ್‌ಫೋನ್ ಬಳಕೆದಾರರ ಈ ಡಿಜಿಲಾಕರ್ ಆ್ಯಪ್ ಬಳಸುತ್ತಿರುತ್ತಾರೆ. ಡ್ರೈವಿಂಗ್ ಲೆಸೆನ್ಸ್, ಪಾನ್ ಕಾರ್ಡ್, ಆಧಾರ್ ಸೇರಿದಂತೆ ಎಲ್ಲವನ್ನೂ ಡಿಜಿಟಲ್ ಆಗಿ ಸ್ಟೋರ್ ಮಾಡಲು ಇದು ಅವಕಾಶ ಕಲ್ಪಿಸುತ್ತದೆ. ಡಿಜಿಲಾಕರ್ ಕೇಂದ್ರ ಸರ್ಕಾರದ ಪ್ರಾಯೋಜಿತ ಸೇವೆಯಾದ್ದರಿಂದ ಅದಕ್ಕೆ ಅಧಿಕೃತ ಮಾನ್ಯತೆ ಇದೆ. ಈ ಸಂಗತಿಗಳು ಬಹುತೇಕರಿಗೆ ಗೊತ್ತೇ ಇರುತ್ತದೆ. ಆದರೆ ಗೊತ್ತಿಲ್ಲದಿರುವ ಸಂಗತಿಯನ್ನು ನಿಮಗೆ ಹೇಳುತ್ತೇವೆ ಬನ್ನಿ…(WhatsApp)

ಡಿಜಿಲಾಕರ್ ತನ್ನ ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಒದಗಿಸಿದ ಭಾರತೀಯ ಡಿಜಿಟೈಸೇಶನ್ ಆನ್‌ಲೈನ್ ಸೇವೆಯಾಗಿದೆ. ಹಾಗಾಗಿ, ಡಿಜಿಲಾಕರ್ ಆ್ಯಪ್ ಬಳಕೆ ಡಿಜಿಟಲ್ ಅಧಿಕೃತೆಯನ್ನು ಸಾರುತ್ತದೆ. ಡಿಜಿಲಾಕರ್‌ನಲ್ಲಿರುವ ನಿಮ್ಮ ಡಾಕ್ಯುಮೆಂಟ್‌ಗಳನ್ನು ವಾಟ್ಸಾಪ್ ಮೂಲಕ ಪಡೆದುಕೊಳ್ಳಬಹುದು!

ಯೆಸ್… ಡಿಜಿಲಾಕರ್ ಆ್ಯಪ್‌ ಅಕ್ಸೆಸ್ ಮಾಡದೇ, ವಾಟ್ಸಾಪ್ ಮೂಲಕವೇ ಡಾಕ್ಯುಮೆಂಟ್ ಪಡೆದುಕೊಂಡು ಟೈಮ್ ಉಳಿತಾಯ ಮಾಡಬಹುದು ಮತ್ತು ಇದು ತುಂಬ ಈಜೀ ಕೂಡ. ಹಾಗಿದ್ದರೆ, ವಾಟ್ಸಾಪ್ ಮೂಲಕ ಡಿಜಿಲಾಕರ್‌ನಿಂದ ಡಾಕ್ಯುಮೆಂಟ್‌ ಪಡೆದುಕೊಳ್ಳಬಹುದು ನೋಡೋಣ ಬನ್ನಿ. ಆದರೆ, ಅದಕ್ಕಿಂತ ಮೊದಲು ಡಿಜಿಲಾಕರ್ ಅಂದ್ರೆ ಏನು ತಿಳಿದುಕೊಳ್ಳೋಣ.

ಏನಿದು ಡಿಜಿಲಾಕರ್?

ಭಾರತ ಸರ್ಕಾರವು ಡಿಜಿಟಲ್ ಇಂಡಿಯಾ ಯೋಜನೆಯಡಿ ಒದಗಿಸಿದ ಒಂದು ಡಿಜಿಟಲ್ ಸೇವೆಯಾಗಿದೆ. ಈ ಸೇವೆಯನ್ನು ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೇಷನ್ ಆ್ಯಂಡ್ ಟೆಕ್ನಾಲಜಿ ಸಚಿವಾಲಯವು ನಿರ್ವಹಣೆ ಮಾಡುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ನಾಗರಿಕರ ಅಗತ್ಯ ದಾಖಲೆಗಳ ಡಿಜಿಟಲ್ ಸಂಗ್ರಹಕ್ಕೆ ಸರ್ಕಾರವೇ ಅಧಿಕೃತವಾಗಿ ಒದಗಿಸಿದ ಡಿಜಿಟಲ್ ವೇದಿಕೆಯೇ ಡಿಜಿಲಾಕರ್.

ವಾಟ್ಸಾಪ್ ಮೂಲಕ ಡಾಕ್ಯುಮೆಂಟ್ಸ್ ಪಡೆದುಕೊಳ್ಳುವುದು ಹೀಗೆ…

ಮೊದಲಿಗೆ 9013151515 ನಂಬರ್ ಅನ್ನು ನಿಮ್ಮ ಮೊಬೈಲ್ ಮೈಗೌ ಹೆಲ್ಪ್ ಡೆಸ್ಕ್(MyGov Helpdesk) ಎಂದು ಸೇವ್ ಮಾಡಿಕೊಳ್ಳಿ. ಕೆಲವೊಮ್ಮೆ ನಿಮಗೆ ಗೊತ್ತಿಲ್ಲದೇ ಈ ನಂಬರ್, ನಿಮ್ಮ ಫೋನಿನಲ್ಲಿ ವಾಟ್ಸಾಪ್ ಅಲರ್ಟ್ ಎಂಬ ಹೆಸರಿನಲ್ಲಿ ಸೇವ್ ಆಗಿರುವ ಸಾಧ್ಯತೆಯೂ ಇರುತ್ತದೆ. ಗಮನಿಸಿ.

ನಂಬರ್ ಸೇವ್ ಮಾಡಿದ ಬಳಿಕ, ವಾಟ್ಸಾಪ್ ತೆರೆಯರಿ ಮತ್ತು ಸರ್ಚ್‌ನಲ್ಲಿ ಮೈಗೌ ಹೆಲ್ಪ್ ಡೆಸ್ಕ್ ಎಂದು ಸರ್ಚ್ ಮಾಡಿ. ಆಗ ಚಾಟ್‌ನಲ್ಲಿ ಡಿಜಿಲಾಕರ್ ಎಂದು ಟೈಪ್ ಮಾಡಿ. ತಕ್ಷಣವೇ ನಿಮಗೆ ನಮಸ್ತೆ ಅಥವಾ ಹಾಯ್ ಎಂಬ ಮೆಸೇಜ್ ಬರುತ್ತದೆ. ಆಗ, ಲಭ್ಯವಿರುವ ಆಯ್ಕೆಗಳು ಕಾಣಿಸುತ್ತವೆ. ನೀವು ಡಿಜಿಲಾಕರ್ ಖಾತೆಯನ್ನು ಹೊಂದಿದ್ದಿರಾ ಅಂತಾ ಕೇಳುತ್ತದೆ. ಆ ಪ್ರಶ್ನೆಗೆ ಯೆಸ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಇದಕ್ಕೂ ಮೊದಲು ನೀವು ಮೈಗೌ(MyGov)ನಲ್ಲಿ ನೋಂದಣಿಯಾಗಿದ್ದಿರಾ ಎಂದು ಕೇಳುತ್ತದೆ. ಒಂದೊಮ್ಮೆ ಇಲ್ಲ ಎಂದಾದರೆ, ಚಾಟ್‌ನಲ್ಲಿ ಕೇಳುವ ಅಂದರೆ, ನಿಮ್ಮ ಹೆಸರು, ನಿಮ್ಮ ರಾಜ್ಯ ಇತ್ಯಾದಿ ಮಾಹಿತಿಯನ್ನು ಕೇಳುತ್ತದೆ. ಅದಕ್ಕೆ ಆನ್ಸರ್ ಮಾಡಿ. ಬಳಿಕ ಒಟಿಪಿ ಬರುತ್ತದೆ. ಅದನ್ನು ಚಾಟ್ ಬಾಕ್ಸ್‌ನಲ್ಲಿ ಮೆನ್ಷನ್ ಮಾಡಿದ್ರೆ ಅಲ್ಲಿಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಬಳಿಕ, ವಾಟ್ಸಾಪ್‌ ಚಾಟ್‌ನಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಲು ಕೇಳುತ್ತದೆ. ಆಗ ನಿಮ್ಮ 12 ಸಂಖ್ಯೆಯುಳ್ಳ ಆಧಾರ್ ನಂಬರ್ ನಮೂದಿಸಿ. ಬಳಿಕ ನೋಂದಾಯಿತ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಆಧಾರ್‌ನೊಂದಿಗೆ ಲಿಂಕ್ ಆಗಿರುವ ನಿಮ್ಮ ಎಲ್ಲ ಡಾಕ್ಯುಮೆಂಟ್ ಪಡೆಯಲು ಈ ಒಟಿಪಿಯನ್ನು ನಮೂದಿಸಬೇಕಾಗುತ್ತದೆ.

ಅಂತಿಮವಾಗಿ ನಿಮಗೆ ಬೇಕಾಗಿರುವ ಡಾಕ್ಯುಮೆಂಟ್ ಮೇಲೆ ಕ್ಲಿಕ್ ಮಾಡಿ ಮತ್ತು ಡೌನ್‌ಲೋಡ್ ಮಾಡಿಕೊಳ್ಳಿ. ವಾಟ್ಸಾಪ್ ಮೂಲಕ ಡಿಜಿಲಾಕರ್ ಡಾಕ್ಯುಮೆಂಟ್ ಪಡೆದುಕೊಳ್ಳುವುದರಿಂದ ನಿಮ್ಮ ಸಮಯ ಉಳಿತಾಯವಾಗುತ್ತದೆ. ಅಲ್ಲದೇ ಅತ್ಯಂತ ಸರಳವಾಗಿ ದಾಖಲೆಪತ್ರಗಳನ್ನು ಪಡೆದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

Exit mobile version