WhatsApp: ಡಿಜಿಲಾಕರ್‌ನಲ್ಲಿರುವ ಆಧಾರ್, ಪಾನ್, ಡಿಎಲ್ ವಾಟ್ಸಾಪ್ ಮೂಲಕ ಡೌನ್ಲೋಡ್ ಮಾಡುವುದು ಹೇಗೆ? Vistara News
Connect with us

ಗ್ಯಾಜೆಟ್ಸ್

WhatsApp: ಡಿಜಿಲಾಕರ್‌ನಲ್ಲಿರುವ ಆಧಾರ್, ಪಾನ್, ಡಿಎಲ್ ವಾಟ್ಸಾಪ್ ಮೂಲಕ ಡೌನ್ಲೋಡ್ ಮಾಡುವುದು ಹೇಗೆ?

WhatsApp: ಡಿಜಿಲಾಕರ್ ಆ್ಯಪ್ (DigiLocker) ಭಾರತ ಸರ್ಕಾರ ನಾಗರಿಕರಿಗೆ ಒದಗಿಸಿರುವ ಅಧಿಕೃತ ಡಿಜಿಟಲ್ ವೇದಿಕೆಯಾಗಿದೆ. ಈ ಆ್ಯಪ್‌ನಲ್ಲಿ ಸ್ಟೋರ್‌ ಮಾಡಲಾಗಿರುವ ಡಾಕ್ಯುಮೆಂಟ್ಸ್‌ ಬಳಕೆದಾರರು ವಾಟ್ಸಾಪ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಅದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

VISTARANEWS.COM


on

How to download Aadhaar PAN Driving license card through WhatsApp
Koo

ಬೆಂಗಳೂರು, ಕರ್ನಾಟಕ: ಡಿಜಿಲಾಕರ್ (DigiLocker) ಬಗ್ಗೆ ಎಲ್ಲರಿಗೂ ಗೊತ್ತೇ ಇರುತ್ತದೆ. ಸ್ಮಾರ್ಟ್‌ಫೋನ್ ಬಳಕೆದಾರರ ಈ ಡಿಜಿಲಾಕರ್ ಆ್ಯಪ್ ಬಳಸುತ್ತಿರುತ್ತಾರೆ. ಡ್ರೈವಿಂಗ್ ಲೆಸೆನ್ಸ್, ಪಾನ್ ಕಾರ್ಡ್, ಆಧಾರ್ ಸೇರಿದಂತೆ ಎಲ್ಲವನ್ನೂ ಡಿಜಿಟಲ್ ಆಗಿ ಸ್ಟೋರ್ ಮಾಡಲು ಇದು ಅವಕಾಶ ಕಲ್ಪಿಸುತ್ತದೆ. ಡಿಜಿಲಾಕರ್ ಕೇಂದ್ರ ಸರ್ಕಾರದ ಪ್ರಾಯೋಜಿತ ಸೇವೆಯಾದ್ದರಿಂದ ಅದಕ್ಕೆ ಅಧಿಕೃತ ಮಾನ್ಯತೆ ಇದೆ. ಈ ಸಂಗತಿಗಳು ಬಹುತೇಕರಿಗೆ ಗೊತ್ತೇ ಇರುತ್ತದೆ. ಆದರೆ ಗೊತ್ತಿಲ್ಲದಿರುವ ಸಂಗತಿಯನ್ನು ನಿಮಗೆ ಹೇಳುತ್ತೇವೆ ಬನ್ನಿ…(WhatsApp)

ಡಿಜಿಲಾಕರ್ ತನ್ನ ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಒದಗಿಸಿದ ಭಾರತೀಯ ಡಿಜಿಟೈಸೇಶನ್ ಆನ್‌ಲೈನ್ ಸೇವೆಯಾಗಿದೆ. ಹಾಗಾಗಿ, ಡಿಜಿಲಾಕರ್ ಆ್ಯಪ್ ಬಳಕೆ ಡಿಜಿಟಲ್ ಅಧಿಕೃತೆಯನ್ನು ಸಾರುತ್ತದೆ. ಡಿಜಿಲಾಕರ್‌ನಲ್ಲಿರುವ ನಿಮ್ಮ ಡಾಕ್ಯುಮೆಂಟ್‌ಗಳನ್ನು ವಾಟ್ಸಾಪ್ ಮೂಲಕ ಪಡೆದುಕೊಳ್ಳಬಹುದು!

ಯೆಸ್… ಡಿಜಿಲಾಕರ್ ಆ್ಯಪ್‌ ಅಕ್ಸೆಸ್ ಮಾಡದೇ, ವಾಟ್ಸಾಪ್ ಮೂಲಕವೇ ಡಾಕ್ಯುಮೆಂಟ್ ಪಡೆದುಕೊಂಡು ಟೈಮ್ ಉಳಿತಾಯ ಮಾಡಬಹುದು ಮತ್ತು ಇದು ತುಂಬ ಈಜೀ ಕೂಡ. ಹಾಗಿದ್ದರೆ, ವಾಟ್ಸಾಪ್ ಮೂಲಕ ಡಿಜಿಲಾಕರ್‌ನಿಂದ ಡಾಕ್ಯುಮೆಂಟ್‌ ಪಡೆದುಕೊಳ್ಳಬಹುದು ನೋಡೋಣ ಬನ್ನಿ. ಆದರೆ, ಅದಕ್ಕಿಂತ ಮೊದಲು ಡಿಜಿಲಾಕರ್ ಅಂದ್ರೆ ಏನು ತಿಳಿದುಕೊಳ್ಳೋಣ.

ಏನಿದು ಡಿಜಿಲಾಕರ್?

ಭಾರತ ಸರ್ಕಾರವು ಡಿಜಿಟಲ್ ಇಂಡಿಯಾ ಯೋಜನೆಯಡಿ ಒದಗಿಸಿದ ಒಂದು ಡಿಜಿಟಲ್ ಸೇವೆಯಾಗಿದೆ. ಈ ಸೇವೆಯನ್ನು ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೇಷನ್ ಆ್ಯಂಡ್ ಟೆಕ್ನಾಲಜಿ ಸಚಿವಾಲಯವು ನಿರ್ವಹಣೆ ಮಾಡುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ನಾಗರಿಕರ ಅಗತ್ಯ ದಾಖಲೆಗಳ ಡಿಜಿಟಲ್ ಸಂಗ್ರಹಕ್ಕೆ ಸರ್ಕಾರವೇ ಅಧಿಕೃತವಾಗಿ ಒದಗಿಸಿದ ಡಿಜಿಟಲ್ ವೇದಿಕೆಯೇ ಡಿಜಿಲಾಕರ್.

ವಾಟ್ಸಾಪ್ ಮೂಲಕ ಡಾಕ್ಯುಮೆಂಟ್ಸ್ ಪಡೆದುಕೊಳ್ಳುವುದು ಹೀಗೆ…

ಮೊದಲಿಗೆ 9013151515 ನಂಬರ್ ಅನ್ನು ನಿಮ್ಮ ಮೊಬೈಲ್ ಮೈಗೌ ಹೆಲ್ಪ್ ಡೆಸ್ಕ್(MyGov Helpdesk) ಎಂದು ಸೇವ್ ಮಾಡಿಕೊಳ್ಳಿ. ಕೆಲವೊಮ್ಮೆ ನಿಮಗೆ ಗೊತ್ತಿಲ್ಲದೇ ಈ ನಂಬರ್, ನಿಮ್ಮ ಫೋನಿನಲ್ಲಿ ವಾಟ್ಸಾಪ್ ಅಲರ್ಟ್ ಎಂಬ ಹೆಸರಿನಲ್ಲಿ ಸೇವ್ ಆಗಿರುವ ಸಾಧ್ಯತೆಯೂ ಇರುತ್ತದೆ. ಗಮನಿಸಿ.

ನಂಬರ್ ಸೇವ್ ಮಾಡಿದ ಬಳಿಕ, ವಾಟ್ಸಾಪ್ ತೆರೆಯರಿ ಮತ್ತು ಸರ್ಚ್‌ನಲ್ಲಿ ಮೈಗೌ ಹೆಲ್ಪ್ ಡೆಸ್ಕ್ ಎಂದು ಸರ್ಚ್ ಮಾಡಿ. ಆಗ ಚಾಟ್‌ನಲ್ಲಿ ಡಿಜಿಲಾಕರ್ ಎಂದು ಟೈಪ್ ಮಾಡಿ. ತಕ್ಷಣವೇ ನಿಮಗೆ ನಮಸ್ತೆ ಅಥವಾ ಹಾಯ್ ಎಂಬ ಮೆಸೇಜ್ ಬರುತ್ತದೆ. ಆಗ, ಲಭ್ಯವಿರುವ ಆಯ್ಕೆಗಳು ಕಾಣಿಸುತ್ತವೆ. ನೀವು ಡಿಜಿಲಾಕರ್ ಖಾತೆಯನ್ನು ಹೊಂದಿದ್ದಿರಾ ಅಂತಾ ಕೇಳುತ್ತದೆ. ಆ ಪ್ರಶ್ನೆಗೆ ಯೆಸ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಇದಕ್ಕೂ ಮೊದಲು ನೀವು ಮೈಗೌ(MyGov)ನಲ್ಲಿ ನೋಂದಣಿಯಾಗಿದ್ದಿರಾ ಎಂದು ಕೇಳುತ್ತದೆ. ಒಂದೊಮ್ಮೆ ಇಲ್ಲ ಎಂದಾದರೆ, ಚಾಟ್‌ನಲ್ಲಿ ಕೇಳುವ ಅಂದರೆ, ನಿಮ್ಮ ಹೆಸರು, ನಿಮ್ಮ ರಾಜ್ಯ ಇತ್ಯಾದಿ ಮಾಹಿತಿಯನ್ನು ಕೇಳುತ್ತದೆ. ಅದಕ್ಕೆ ಆನ್ಸರ್ ಮಾಡಿ. ಬಳಿಕ ಒಟಿಪಿ ಬರುತ್ತದೆ. ಅದನ್ನು ಚಾಟ್ ಬಾಕ್ಸ್‌ನಲ್ಲಿ ಮೆನ್ಷನ್ ಮಾಡಿದ್ರೆ ಅಲ್ಲಿಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಬಳಿಕ, ವಾಟ್ಸಾಪ್‌ ಚಾಟ್‌ನಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಲು ಕೇಳುತ್ತದೆ. ಆಗ ನಿಮ್ಮ 12 ಸಂಖ್ಯೆಯುಳ್ಳ ಆಧಾರ್ ನಂಬರ್ ನಮೂದಿಸಿ. ಬಳಿಕ ನೋಂದಾಯಿತ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಆಧಾರ್‌ನೊಂದಿಗೆ ಲಿಂಕ್ ಆಗಿರುವ ನಿಮ್ಮ ಎಲ್ಲ ಡಾಕ್ಯುಮೆಂಟ್ ಪಡೆಯಲು ಈ ಒಟಿಪಿಯನ್ನು ನಮೂದಿಸಬೇಕಾಗುತ್ತದೆ.

ಅಂತಿಮವಾಗಿ ನಿಮಗೆ ಬೇಕಾಗಿರುವ ಡಾಕ್ಯುಮೆಂಟ್ ಮೇಲೆ ಕ್ಲಿಕ್ ಮಾಡಿ ಮತ್ತು ಡೌನ್‌ಲೋಡ್ ಮಾಡಿಕೊಳ್ಳಿ. ವಾಟ್ಸಾಪ್ ಮೂಲಕ ಡಿಜಿಲಾಕರ್ ಡಾಕ್ಯುಮೆಂಟ್ ಪಡೆದುಕೊಳ್ಳುವುದರಿಂದ ನಿಮ್ಮ ಸಮಯ ಉಳಿತಾಯವಾಗುತ್ತದೆ. ಅಲ್ಲದೇ ಅತ್ಯಂತ ಸರಳವಾಗಿ ದಾಖಲೆಪತ್ರಗಳನ್ನು ಪಡೆದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಗ್ಯಾಜೆಟ್ಸ್

Google: ಗೂಗಲ್‌ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!

Google: ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ನ್ಯಾಯಸಮ್ಮತವಲ್ಲದ ಪದ್ಧತಿಗಳನ್ನು ಅನುಸರಿಸಿದ್ದ ಟೆಕ್ ದೈತ್ಯ ಗೂಗಲ್‌ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗವು 1,337 ಕೋಟಿ ರೂ. ದಂಡವನ್ನು ವಿಧಿಸಿತ್ತು.

VISTARANEWS.COM


on

Edited by

Google has to Rs 1337 crore within 30 days Say Tribunal
Koo

ನವದೆಹಲಿ: ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(NCLAT)ಯು 30 ದಿನಗಳವರೆಗೆ 1,337.76 ಕೋಟಿ ರೂ. ದಂಡವನ್ನು ಪಾವತಿಸುವಂತೆ ಟೆಕ್ ದೈತ್ಯ ಕಂಪನಿಯ ಗೂಗಲ್‌ಗೆ (Google) ಆದೇಶಿಸಿದೆ. ಎನ್‌ಸಿಎಲ್ಎಟಿಯ ಇಬ್ಬರು ನ್ಯಾಯಾಧೀಶರ ಪೀಠವು ಈ ಆದೇಶವನ್ನು ಮಾಡಿದೆ. ಗೂಗಲ್ ವಿರುದ್ಧ ಇಷ್ಟು ಬೃಹತ್ ಪ್ರಮಾಣದ ದಂಡವನ್ನುಭಾರತೀಯ ಸ್ಪರ್ಧಾತ್ಮಕ ಆಯೋಗ(CCI) ವಿಧಿಸಿತ್ತು. ಸಿಸಿಐನ ಈ ಆದೇಶನ್ನು ಗೂಗಲ್, ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿತ್ತು.

ಭಾರತೀಯ ಸ್ಪರ್ಧಾತ್ಮಕ ಆಯೋಗವು ಕಳೆದ ವರ್ಷ, ಅಕ್ಟೋಬರ್ 20 ರಂದು, ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ವಿರೋಧಿ ಚಟುವಟಿಕೆಗಳಿಗಾಗಿ ಗೂಗಲ್‌ಗೆ 1,337.76 ಕೋಟಿ ದಂಡವನ್ನು ವಿಧಿಸಿತ್ತು. ಅಲ್ಲದೇ, ಅಳವಡಿಸಿಕೊಂಡಿರುವ ನ್ಯಾಯಸಮ್ಮತವಲ್ಲದ ಪದ್ಧತಿಗಳನ್ನು ನಿಲ್ಲಿಸುವಂತೆಯೂ ಗೂಗಲ್ ಸೂಚಿಸಿತ್ತು.

ಇದನ್ನೂ ಓದಿ: Google service down : ಗೂಗಲ್‌ ಸೇವೆಯಲ್ಲಿ ವ್ಯತ್ಯಯ, ಯೂಟ್ಯೂಬ್‌, ಡ್ರೈವ್‌, ಜಿಮೇಲ್‌ಗೆ ಅಡಚಣೆ, ಬಳಕೆದಾರರ ಪರದಾಟ

ದೈತ್ಯ ಸರ್ಚ್ ಎಂಜಿನ್ ಆಗಿರುವ ಗೂಗಲ್, ಸಿಸಿಐ ನೀಡಿರುವ ಆದೇಶವನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿತ್ತು. ಆದರೆ, ಗೂಗಲ್ ಮನವಿಯನ್ನು ತಿರಸ್ಕರಿಸಿರುವ ಎನ್‌ಸಿಎಲ್ಎಟಿ, ಸಿಸಿಐ ನಡೆಸಿರುವ ವಿಚಾರಣೆಯಲ್ಲಿ ಯಾವುದೇ ಸಹಜ ನ್ಯಾಯ ಪರಿಪಾಲನೆಯನ್ನು ಉಲ್ಲಂಘಿಸಿಲ್ಲ ಎಂದು ಹೇಳಿತು. ಅಲ್ಲದೇ, 30 ದಿನಗಳಲ್ಲಿ ದಂಡವನ್ನು ಪಾವತಿಸುವಂತೆ ಗೂಗಲ್‌ಗೆ ಸೂಚಿಸಿತು.

Continue Reading

ಗ್ಯಾಜೆಟ್ಸ್

Facebook: ಫೇಸ್‌ಬುಕ್‌ನಲ್ಲಿ ಇಂಟರ್ನೆಟ್ ಸ್ಪೀಡ್ ಚೆಕ್ ಮಾಡಿ ! ಈ ಸ್ಟೆಪ್ಸ್ ಫಾಲೋ ಮಾಡಿ ನೋಡಿ…

Facebook: ಅತ್ಯಂತ ಜನಪ್ರಿಯ ಸೋಷಿಯಲ್ ಮೀಡಿಯಾ ಆಗಿರುವ ಫೇಸ್‌ಬುಕ್, ಬಳಕೆದಾರರಿಗೆ ನಾನಾ ಸೌಲಭ್ಯಗಳನ್ನು ಕಲ್ಪಿಸುತ್ತದೆ. ಕೇವಲ ಸಂಹನ ಮತ್ತು ಸಂಪರ್ಕ ಮಾತ್ರವಲ್ಲದೇ ಹಲವು ರೀತಿಯಲ್ಲಿ ಬಳಕೆದಾರರಿಗೆ ಉಪಯುಕ್ತವಾಗಿದೆ ಈ ಆ್ಯಪ್.

VISTARANEWS.COM


on

Edited by

You can check internet speed using Facebook app and check details
Koo

ಬೆಂಗಳೂರು, ಕರ್ನಾಟಕ: ಮೆಟಾ (Meta) ಒಡೆತನದ ಫೇಸ್‌ಬುಕ್ (Facebook) ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣವಾಗಿದೆ. ಫೇಸ್‌ಬುಕ್ ಬಳಸದೇ ಇರುವವರ ಸಂಖ್ಯೆ ಬಹಳ ಕಡಿಮೆ. ಜಗತ್ತಿನಾದ್ಯಂತ ಕೋಟ್ಯಂತರ ಸಕ್ರಿಯ ಬಳಕೆದಾರರನ್ನು ಈ ಫೇಸ್‌ಬುಕ್‌ ಹೊಂದಿದೆ. ಹಾಗಾಗಿ, ಫೇಸ್‌ಬುಕ್ ಕೂಡ, ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸುವುದಕ್ಕಾಗಿ ಅನೇಕ ಹೊಸ ಫೀಚರ್ಸ್‌ಗಳನ್ನು ಲಾಂಚ್ ಮಾಡುತ್ತಲೇ ಇರುತ್ತದೆ. ಆದರೆ, ಇವುಗಳ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ. ಫೇಸ್‌ಬುಕ್ ಆ್ಯಪ್‌ನಲ್ಲಿ ಇಂಟರ್ನೆಟ್ ಸ್ಪೀಡ್ (Internet Speed) ಕೂಡ ಚೆಕ್ ಮಾಡಬಹುದು.

ಪ್ರಖ್ಯಾತ ಸೋಷಿಯಲ್ ಮೀಡಿಯಾ ಆಗಿರುವ ಫೇಸ್‌ಬುಕ್, ಜನರನ್ನು ಒಂದುಗೂಡಿಸುವ ಮಹತ್ವದ ವೇದಿಕೆಯಾಗಿದೆ. ಸ್ನೇಹಿತರು, ಕುಟುಂಬದ ಸದಸ್ಯರು ಮತ್ತು ಪರಿಚಯಸ್ಥರಿಗೆ ಸಂಪರ್ಕವನ್ನು ಈ ಫೇಸ್‌ಬುಕ್ ಕಲ್ಪಿಸುತ್ತದೆ. ಜತೆಗೆ, ಹೊಸ ಹೊಸ ಸ್ನೇಹಿತರನ್ನೂ ಸಂಪಾದಿಸಲು ಇದು ಸೇತುವೆಯಾಗಿದೆ. ಸಾಕಷ್ಟು ಚರ್ಚೆ, ವಾದ- ವಿವಾದಗಳಿಗೂ ಇಲ್ಲಿ ಜಾಗವುಂಟು. ಬಹುಶಃ ಫೇಸ್‌ಬುಕ್ ಇಲ್ಲದೇ ಇರುವ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಅಷ್ಟರ ಮಟ್ಟಿಗೆ ಅದು ನಮ್ಮ ಬದುಕಿನ ಭಾಗವಾಗಿದೆ.

ಫೇಸ್‌ಬುಕ್‌ನಲ್ಲಿ ಬಳಕೆದಾರರು ವೈಯಕ್ತಿಕ ಪ್ರೊಫೈಲ್‌ಗಳನ್ನು ರಚಿಸಬಹುದು, ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಬಹುದು ಮತ್ತು ಅವರ ದೈನಂದಿನ ಜೀವನದ ಕುರಿತು ಅಪ್‌ಡೇಟ್ ಪೋಸ್ಟ್ ಮಾಡಬಹುದು. ಇದು ಗುಂಪುಗಳು ಮತ್ತು ಪುಟಗಳಿಗೆ ಮೀಸಲಾದ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಇದೇ ರೀತಿಯ ಆಸಕ್ತಿಗಳು ಅಥವಾ ಹವ್ಯಾಸಗಳನ್ನು ಹಂಚಿಕೊಳ್ಳುವ ಇತರರೊಂದಿಗೆ ಸಂಪರ್ಕ ಸಾಧಿಸಲು ಫೇಸ್‌ಬುಕ್ ಅವರಿಗೆ ನೆರವು ಒದಗಿಸುತ್ತದೆ.

ಮೆಟಾ ಒಡೆತನದ ಈ ವೇದಿಕೆಯು ವೈಶಿಷ್ಟ್ಯಗಳೊಂದಿಗೆ ತುಂಬಿರುತ್ತದೆ. ಆದರೆ ಅವುಗಳಲ್ಲಿ ಹೆಚ್ಚಿನವು ಉತ್ತಮ ಸಾಮಾಜಿಕ ನೆಟ್‌ವರ್ಕಿಂಗ್ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿವೆ. ಉದಾಹರಣೆಗೆ, ಅಪ್ಲಿಕೇಶನ್‌ನ ಮರುವಿನ್ಯಾಸಗೊಳಿಸಲಾದ ಬಳಕೆದಾರ ಇಂಟರ್ಫೇಸ್ ಅಪ್ಲಿಕೇಶನ್‌ನ ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು ಸರಳಗೊಳಿಸುವ ಉದ್ದೇಶವನ್ನು ಹೊಂದಿದೆ. ಇಷ್ಟು ಮಾತ್ರವಲ್ಲದೇ, ಸಾಮಾಜಿಕ ಮಾಧ್ಯಮ-ಕೇಂದ್ರಿತ ಕಾರ್ಯಗಳನ್ನು ಹೊರತುಪಡಿಸಿ, ಬಳಕೆದಾರರಿಗೆ ಹತ್ತಿರದಲ್ಲಿರುವ Wi Fi ನೆಟ್‌ವರ್ಕ್ ಚೆಕ್ ಮಾಡಬಹುದು. ಅಲ್ಲದೇ, ಇಂಟರ್ನೆಟ್ ವೇಗವನ್ನು ಪರೀಕ್ಷಿಸಬಹುದು.

ಫೇಸ್‌ಬುಕ್‌ನಲ್ಲಿ (Facebook) ಇಂಟರ್ನೆಟ್ ವೇಗ ಹೇಗೆ ಪರೀಕ್ಷಿಸುವುದು?

ಫೇಸ್‌ಬುಕ್ ಆ್ಯಪ್ ಬಳಸಿಕೊಂಡ ಇಂಟರ್ನೆಟ್ ವೇಗ ಪರೀಕ್ಷಿಸಬೇಕಿದ್ದರೆ, ಬಳಕೆದಾರರು ಇತ್ತೀಚನ ಅಪ್‌ಡೇಟೆಡ್ ಆ್ಯಪ್ ಹೊಂದಿರಬೇಕು. ನಿಮ್ಮ ಸಾಧನದಲ್ಲಿ ಫೇಸ್‌ಬುಕ್ ಆ್ಯಪ್ ಓಪನ್ ಮಾಡಿ. ಬಳಿಕ ಲಾಗ್ ಇನ್ ಆಗಿ. ಬಳಿಕ, ಫೇಸ್‌ಬುಕ್‌ನ ವಿವಿಧ ಫಂಕ್ಷನ್ಸ್, ಸೆಟ್ಟಿಂಗ್ಸ್, ಮತ್ತು ಇತರ ಆಯ್ಕೆಗಳಿಗೆ ಪ್ರವೇಶ ಕಲ್ಪಿಸುವ ಹೊಸ ಡ್ರಾಪ್-ಡೌನ್ ಮೆನುವನ್ನು ಪ್ರದರ್ಶಿಸುವ ಮೂರು ಅಡ್ಡ ಸಾಲುಗಳ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: ಮಕ್ಕಳ ಅಶ್ಲೀಲ ವಿಡಿಯೊ ಫೇಸ್‌ ಬುಕ್‌ಗೆ ಅಪ್ಲೋಡ್:‌ ಶಿವಮೊಗ್ಗ ಜಿಲ್ಲೆಯ ಇಬ್ಬರ ಮೇಲೆ ಕೇಸ್‌, ಅಮೆರಿಕದಿಂದ ಬಂದ ಮಾಹಿತಿ!

ಆ ನಂತರ, ಸ್ಕ್ರಾಲ್ ಡೌನ್ ಮಾಡಿ ಮತ್ತು ಡ್ರಾಪ್ ಡೌನ್ ಬಾಕ್ಸ್‌ನಿಂದ Settings & Privacy ಆಪ್ಷನ್ ಸೆಲೆಕ್ಟ್ ಮಾಡಿ. ಅಲ್ಲಿ ಕಾಣಸಿಗುವ Wi-Fi ಮತ್ತು cellular performance ಬಳಸಿ. ಆ ನಂತರ, ಕಂಟಿನ್ಯೂ ಬಟನ್‌ ಸರ್ಚ್ ಮಾಡಿ, ಬಳಿಕ ಸೆಲೆಕ್ಟ್ ಮಾಡಿ. ನಂತರದ ಪುಟದಲ್ಲಿ ರನ್ ಸ್ಪೀಡ್ ಟೆಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಆಗ ನೀವು ಇಂಟರ್ನೆಟ್ ಸ್ಪೀಡ್ ಎಷ್ಟಿದೆ ಎಂಬುದನ್ನು ಕಾಣಬಹುದು.

Continue Reading

ಗ್ಯಾಜೆಟ್ಸ್

Redmi Note 12 4G ಫೋನ್ ಲಾಂಚ್, ವಿಶೇಷತೆಗಳೇನು? ಭಾರತಕ್ಕೆ ಯಾವಾಗ ಎಂಟ್ರಿ?

ಜಾಗತಿಕ ಮಾರುಕಟ್ಟೆಗೆ ರೆಡ್‌ಮಿ ಕಂಪನಿಯು Redmi Note 12 4G ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ತನ್ನ ಫೀಚರ್ಸ್, ಕ್ಯಾಮೆರಾ ಕ್ವಾಲಿಟಿ, ಪ್ರೊಸೆಸರ್‌ಗಳಿಂದಾಗಿ ಈ ಫೋನ್ ಗಮನ ಸೆಳೆಯುತ್ತಿದೆ.

VISTARANEWS.COM


on

Edited by

Redmi Note 12 4G launched to global market and check details
Koo

ನವದೆಹಲಿ: ರೆಡ್‌ಮಿ(Redmi) ಕಂಪನಿಯು ಜಾಗತಿಕವಾಗಿ ರೆಡ್‌ಮಿ ನೋಟ್ 12 ಸಿರೀಸ್ ಸ್ಮಾರ್ಟ್‌ಫೋನ್‌ಗಳನ್ನು ರಿಲೀಸ್‌‌ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಮುಂಬರುವ ದಿನಗಳಲ್ಲಿ ಕಂಪನಿಯು ರೆಡ್‌ಮಿ ನೋಟ್ 12 5ಜಿ, ನೋಟ್ 12 ಪ್ರೋ 5ಜಿ, ನೋಟ್ 12 ಪ್ರೋ ಪ್ಲಸ್ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಈಗ ಕಂಪನಿಯು ರೆಡ್‌ಮಿ ನೋಟ್ 12 4ಜಿ(Redmi Note 12 4G) ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಜಾಗತಿಕ ಮಾರುಕಟ್ಟೆಗೆ ಲಾಂಚ್ ಆಗಿರುವ ಈ ಸ್ಮಾರ್ಟ್‌ಫೋನ್ ಮಾರ್ಚ್ 30ಕ್ಕೆ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಸದ್ಯ ಐರೋಪ್ಯ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 12 4ಜಿ ಸ್ಮಾರ್ಟ್‌ಫೋನ್ ಬೆಲೆ 229 ಯುರೋದಿಂದ ಆರಂಭವಾಗಲಿದೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಇದು ಅಂದಾಜು 20,400 ರೂ. ಆಗಲಿದೆ. ಹೈ ಎಂಡ್ ಫೋನ್ ಬೆಲೆ ಅಂದಾಜು 22 ಸಾವಿರ ರೂ.ವರೆಗೂ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಭಾರತೀಯ ಮಾರುಕಟ್ಟೆಗೆ ಲಾಂಚ್ ಆದಾಗ ಈ ಫೋನ್ ಬೆಲೆಯಲ್ಲಿ ವ್ಯತ್ಯಾಸವಾಗಬಹುದು.

ಈ ಸ್ಮಾರ್ಟ್‌ಫೋನ್ ಐಸ್ ಬ್ಲ್ಯೂ, ಮಿಂಟ್ ಬ್ಲ್ಯೂ ಮತ್ತು ಓನಿಕ್ಸ್ ಗ್ರೇ ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಎಲ್ಲ ಮಾರುಕಟ್ಟೆಗಳಲ್ಲಿ ಈ ಮೂರು ಬಣ್ಣದ ಆಯ್ಕೆಯಲ್ಲಿ ಈ ಸ್ಮಾರ್ಟ್‌ಫೋನ್ ದೊರೆಯಲಿದೆ. ರೆಡ್‌ಮಿ ನೋಟ್ 12 4ಜಿ ಸ್ಮಾರ್ಟ್‌ಫೋನ್ ಡುಯಲ್ ಸಿಮ್‍‌ಗೆ ಸಪೋರ್ಟ್ ಮಾಡುತ್ತದೆ. 6.67 ಇಂಚ್ ಫುಲ್ ಎಚ್‌ಡಿ ಅಮೋಎಲ್ಇಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ರಿಫ್ರೇಶ್ ರೇಟ್ 120Hz ಇದೆ. ಪ್ರದರ್ಶನವು 1200 ನಿಟ್‌ಗಳ ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ.

ಆಂಡ್ರಾಯ್ಡ್ 13 ಹಾಗೂ MIUI 14 ಜೊತೆಗೆ ಈ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸುತ್ತದೆ. ರೆಡ್‌ಮಿ ನೋಟ್ 12 4ಜಿ ಸ್ಮಾರ್ಟ್‌ಫೋನ್ Adreno 610 GPU ಜೊತೆಗೆ 6nm ಆಕ್ಟಾ-ಕೋರ್ Qualcomm Snapdragon 685 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಫೋನ್ 8 ಜಿಬಿಯವರೆಗೆ LPDDR4X RAM ಮತ್ತು 128GB UFS2.2 ಸಂಗ್ರಹಣೆಯನ್ನು ಹೊಂದಿದೆ. ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೂಲಕ 1 ಟಿಬಿವರೆಗೂ ವಿಸ್ತರಿಸಬಹುದಾಗಿದೆ.

ಇದನ್ನೂ ಓದಿ: Smartphone Export : ಭಾರತದಿಂದ 2 ತಿಂಗಳಲ್ಲಿ ದಾಖಲೆಯ 16,500 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ ರಫ್ತು

ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಇದೆ. ಈ ಪೈಕಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಈ ಕ್ಯಾಮೆರಾದಲ್ಲಿ ಜೆಎನ್1 ಪ್ರೈಮರಿ ಸೆನ್ಸರ್ ಒಳಗೊಂಡಿದೆ. 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಹಾಗೂ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಕ್ಯಾಮೆರಾಗಳಿವೆ. ಇನ್ನೂ ಫೋನ್ ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಚಾಟ್‌ಗಳಿಗಾಗಿ 13 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ರೆಡ್‌ಮಿ ನೋಡ್ 12 4ಜಿ ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯನ್ನು ಒಳಗೊಂಡಿದೆ. ಈ ಬ್ಯಾಟರಿಯು 33W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ.

Continue Reading

ಗ್ಯಾಜೆಟ್ಸ್

HP Pavilion Aero 13 ಲ್ಯಾಪ್‌ಟಾಪ್ ಲಾಂಚ್, ಏನೆಲ್ಲ ವಿಶೇಷತೆಗಳಿವೆ? ಬೆಲೆ ಎಷ್ಟು?

ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಲ್ಯಾಪ್‌ಟಾಪ್ ಲಾಂಚ್ ಆಗಿದೆ. ಸಾಕಷ್ಟು ಹೊಸ ಫೀಚರ್ಸ್‌ಗಳೊಂದಿಗೆ HP Pavilion Aero 13 ಲ್ಯಾಪ್‌ಟ್ಯಾಪ್ ಗಮನ ಸೆಳೆಯುತ್ತಿದೆ.

VISTARANEWS.COM


on

Edited by

HP Pavilion Aero 13 Laptop Launched and Check details
Koo

ಬೆಂಗಳೂರು: ಎಚ್‌ಪಿ ಕಂಪನಿಯು ಭಾರತದಲ್ಲಿ ತನ್ನ ಹೊಸ ಪೆವಿಲಿಯನ್ ಏರೋ 13 (HP Pavilion Aero 13) ಲ್ಯಾಪ್‌ಟ್ಯಾಪ್‌ಗಳನ್ನು ಮಂಗಳಾರ ಬಿಡುಗಡೆ ಮಾಡಿದೆ. ಶಕ್ತಿಯುತ ಕಾರ್ಯಕ್ಷಮತೆಗಾಗಿ AMD Ryzen™ 7 ಪ್ರೊಸೆಸರ್ ಮತ್ತು Radeon™ ಗ್ರಾಫಿಕ್ಸ್‌ ಒಳಗೊಂಡಿದೆ. GenZ ಮತ್ತು ಈ ಸಹಸ್ರಮಾನದ ಆಧುನಿಕ ಗ್ರಾಹಕರಿಗಾಗಿ ಈ ಸಾಧನವನ್ನು ನಿರ್ಮಿಸಲಾಗಿದೆ. ಯಾವುದೇ ಸಮಯ ಅಥವಾ ಸ್ಥಳದಲ್ಲಿ ಉತ್ಪಾದಕವಾಗಿ ಕೆಲಸ ಮಾಡಲು ಮತ್ತು ಕಲಿಯಲು ಅನುವು ಮಾಡಿಕೊಡುತ್ತದೆ.

ಆಧುನಿಕ ಜಗತ್ತಿನಲ್ಲಿ, ಬಹುಮುಖವಾದ ಹಲವು ಕಾರ್ಯಗಳನ್ನು ಮಾಡಬಲ್ಲ, ಕೆಲಸ ಮತ್ತು ಕಲಿಕೆ ಎರಡನ್ನೂ ನಿಭಾಯಿಸಬಲ್ಲ ಸಾಧನಗಳನ್ನು ಗ್ರಾಹಕರು ಅರಸುತ್ತಿರುತ್ತಾರೆ. ಹೈಬ್ರಿಡ್ ಕಾರ್ಯಶೈಲಿಗೆ ಸರಿಹೊಂದುವಂತೆ ಈ ಸಾಧನಗಳು ಹಗುರವಾಗಿರಬೇಕು ಮತ್ತು ಯುವ ಪೀಳಿಗೆಯ ಆದ್ಯತೆಗಳನ್ನು ಪೂರೈಸುವಂತೆ ಆಕರ್ಷಕವಾಗಿರಬೇಕು. ಹೊಚ್ಚ-ಹೊಸ HP ಪೆವಿಲಿಯನ್ ಏರೋ 13 ಲ್ಯಾಪ್‌ಟಾಪ್ Wi-Fi6 ಜತೆಗೆ ವೇಗದ ಮತ್ತು ವಿಶ್ವಾಸಾರ್ಹ ಸಂಪರ್ಕವನ್ನು ಹೊಂದಿದೆ. 10.5 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಇದ್ದು, ಯಾವುದೇ ಸ್ಥಳದಿಂದ ಕೆಲಸ, ಬ್ರೌಸಿಂಗ್ ಮತ್ತು ಸ್ಟ್ರೀಮಿಂಗ್ ಮಾಡಲು ಸೂಕ್ತವಾಗಿದೆ.

400 ನಿಟ್ಸ್ ಪ್ರಕಾಶಮಾನವಾದ ಮತ್ತು 16:10 ಆಕಾರ ಅನುಪಾತದಗ ಸ್ಕ್ರೀನ್ ಬಳಕೆದಾರರಿಗೆ ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ನೀಡುತ್ತದೆ. HP ಪೆವಿಲಿಯನ್ ಏರೋ 13 ಕೇವಲ 970 ಗ್ರಾಂ ಭಾರವಿದ್ದು, GenZ ಗಳು ಮತ್ತು ಈ ಸಹಸ್ರಮಾನದ ಯುವಜನರಿಗೆ ಪೋರ್ಟಬಿಲಿಟಿಯನ್ನು ಸಕ್ರಿಯಗೊಳಿಸುತ್ತದೆ. ಇದು ಅವರ ಶೈಲಿ ಮತ್ತು ಜೀವನಶೈಲಿಗೆ ಹೊಂದಿಕೊಳ್ಳಲು ಮೂರು ವಿಶಿಷ್ಟ ಬಣ್ಣಗಳಲ್ಲಿದೆ – ಪೇಲ್ ರೋಸ್ ಗೋಲ್ಡ್, ವಾರ್ಮ್ ಗೋಲ್ಡ್ ಮತ್ತು ನ್ಯಾಚುರಲ್ ಸಿಲ್ವರ್.

HP ಇಂಡಿಯಾ ಪರ್ಸನಲ್ ಸಿಸ್ಟಮ್ಸ್ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ಮಾತನಾಡಿ, “ಪಿಸಿಗಳು ಹೈಬ್ರಿಡ್ ಪರಿಸರದಲ್ಲಿ ಜನರ ಜೀವನದ ಪ್ರಮುಖ ಅಂಶಗಳಾಗುತ್ತಿವೆ. ಆಧುನಿಕ ಜಗತ್ತಿನಲ್ಲಿ ಬಹುಮುಖ ಮತ್ತು ಶಕ್ತಿಯುತ ಕಂಪ್ಯೂಟಿಂಗ್ ಪರಿಹಾರಗಳಿಗಾಗಿ ವೃದ್ಧಿಸುತ್ತಿರುವ ಬೇಡಿಕೆಯನ್ನು ಪೂರೈಸಲು HP ವಿನ್ಯಾಸಗೊಳಿಸಿದ ಹೊಸ ಪೆವಿಲಿಯನ್ ಏರೋ 13 ಲ್ಯಾಪ್‌ಟಾಪ್ ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ. ಇದು ಅಸಾಧಾರಣ ಕಾರ್ಯಕ್ಷಮತೆ ಮತ್ತು ಚಲನಶೀಲತೆಯನ್ನು ನೀಡುತ್ತದೆ, ಬಳಕೆದಾರರು ಪ್ರಯಾಣಿಸುತ್ತಿರುವಾಗಲೂ ಉತ್ಪಾದಕವಾಗಿರಲು ಮತ್ತು ಮನೋರಂಜನೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. HP ಪೆವಿಲಿಯನ್ ಏರೋ 13 ಆಕರ್ಷಕವಾದ ಪ್ರೀಮಿಯಂ ಲ್ಯಾಪ್‌ಟಾಪ್ ಆಗಿದೆ. ಕೆಲಸ ಮತ್ತು ಗೇಮಿಂಗ್ – ಎರಡೂ ವಿಷಯಗಳಲ್ಲಿ ಬಳಕೆದಾರರಿಗೆ ಅಸಾಧಾರಣವಾಗಿ ಆಪ್ತವಾಗುತ್ತದೆ.

ಹೈಬ್ರಿಡ್ ಪರಿಸರಕ್ಕೆ ಅನುಗುಣವಾಗಿ ಉನ್ನತ ದರ್ಜೆಯ ಕಾರ್ಯಕ್ಷಮತೆಯನ್ನು ನೀಡುವಂತೆ ಹಗುರವಾದ ಆದರೆ ಶಕ್ತಿಶಾಲಿಯಾದ HP ಪೆವಿಲಿಯನ್ ಏರೋ 13 ರೂಪಿಸಲಾಗದೆ. ಕೆಲಸ ಮಾಡಲು ಅಥವಾ ಸ್ನೇಹಿತರ ಜತೆಗೆ ಸ್ಪಷ್ಟವಾದ ವೀಡಿಯೋ ಕರೆಗಳನ್ನು ಮಾಡಲು ಮತ್ತು ಅನಗತ್ಯವಾದ ಹಿನ್ನೆಲೆಯ ಗದ್ದಲವನ್ನು ನಿವಾರಿಸುವ ಸೌಕರ್ಯವನ್ನು ಹೊಂದಿದೆ. 100% sRGB ಸಹಿತವಾದ ವಿಶಾಲವಾದ ಕಲರ್‌ ಪ್ಯಾಲೆಟ್ ವೆಬ್‌ನಲ್ಲಿ ಸರ್ಫ್ ಮಾಡುವಾಗ ಮತ್ತು ವೀಡಿಯೋಗಳನ್ನು ಸ್ಟ್ರೀಮ್ ಮಾಡುವಾಗ ಹೆಚ್ಚು ರೋಮಾಂಚಕ ಚಿತ್ರಗಳ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತದೆ. ಫ್ಲಿಕರ್-ರಹಿತವಾದ ಪರದೆಯು ದಿನವಿಡೀ ಕೆಲಸ ಮಾಡಲು ಮತ್ತು ರಾತ್ರಿಯಿಡೀ ಆಟವಾಡಲು ಸೌಕರ್ಯ ನೀಡುವುದು HP ಪೆವಿಲಿಯನ್ ಏರೋ ವಿಶೇಷತೆಯಾಗಿದೆ. ಹೆಚ್ಚುವರಿಯಾಗಿ, 2.5k ರೆಸಲ್ಯೂಶನ್ ಸ್ಕ್ರೀನ್ ಮೇಲೆ ತೀಕ್ಷ್ಣವಾದ ಚಿತ್ರಗಳು ಮತ್ತು ಪಠ್ಯಗಳನ್ನು ಮೂಡಿಸುತ್ತದೆ. ಇದನ್ನು 4-ಬದಿಗಳ ಕಿರಿದಾದ ಅಂಚಿನ ಸ್ಕ್ರೀನ್ ವೀಕ್ಷಣೆಗೆ ಇರುವ ಎಲ್ಲ ಅಡ್ಡಿಗಳನ್ನೂ ನಿವಾರಿಸುತ್ತದೆ.

ಸುಸ್ಥಿರತೆ ಮತ್ತು ಪರಿಸರ ರಕ್ಷಣೆಗೆ HP ಯ ಬದ್ಧತೆಗೆ ಅನುಗುಣವಾಗಿ HP ಪೆವಿಲಿಯನ್ ಏರೋ 13 ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ಬಳಸಿದ ಮರುಬಳಕೆಯ ಮತ್ತು ಸಾಗರದಿಂದ ಸಂಗ್ರಹಿಸಿದ ಪ್ಲಾಸ್ಟಿಕ್‌ನಿಂದ ನಿರ್ಮಿಸಲಾಗಿದೆ. VOC ಹೊರಸೂಸುವಿಕೆ ತಗ್ಗಿಸಲು ನೀರು-ಆಧಾರಿತ ಬಣ್ಣವನ್ನು ಬಳಸಲಾಗಿದೆ.

HP ಪೆವಿಲಿಯನ್ ಏರೋ 13 ವಿಶೇಷತೆಗಳೇನು?

ಡಿಸ್‌ಪ್ಲೇ ಹೇಗಿದೆ?

• 16:10 ಆಕಾರ ಅನುಪಾತದೊಂದಿಗೆ HP ಯ ಪ್ರಥಮ ಪೆವಿಲಿಯನ್ ಲ್ಯಾಪ್‌ಟಾಪ್
• ತಡೆರಹಿತ ಬ್ರೌಸಿಂಗ್ ಅನುಭವಕ್ಕಾಗಿ 400 ನಿಟ್‌ಗಳಷ್ಟು ಪ್ರಕಾಶಮಾನ ಡಿಸ್‌ಪ್ಲೇ
• ಫ್ಲಿಕರ್-ರಹಿತ ಪರದೆ
• ವೀಕ್ಷಣೆಯ ಅಡ್ಡಿಗಳನ್ನು ನಿವಾರಿಸಲು 4-ಬದಿ ಕಿರಿದಾದ ಅಂಚಿನ ಡಿಸ್‌ಪ್ಲೇ
• ತೀಕ್ಷ್ಣವಾದ ಚಿತ್ರಗಳು ಮತ್ತು ಪಠ್ಯಕ್ಕಾಗಿ 2.5k ರೆಸಲ್ಯೂಶನ್
• ಬಿಸಿಲಿನಲ್ಲೂ ಬ್ರೌಸಿಂಗ್ ಮಾಡುವುದಕ್ಕಾಗಿ 400 ನಿಟ್ಸ್ ಪ್ರಕಾಶ
• 100% sRGB ಯೊಂದಿಗೆ ವಿಶಾಲ ಕಲರ್ ಪ್ಯಾಲೆಟ್

ಕಾರ್ಯಕ್ಷಮತೆ

• ಸುಗಮ ಕಾರ್ಯಕ್ಷಮತೆಗಾಗಿ AMD Ryzen™ 7000 ಸರಣಿಯ ಪ್ರೊಸೆಸರ್, Radeon™ ಗ್ರಾಫಿಕ್ಸ್
• Wi-Fi 6 ಜೊತೆಗೆ ವಿಶ್ವಾಸಾರ್ಹ ಮತ್ತು ವೇಗದ ಸಂಪರ್ಕ
• ತಡೆರಹಿತ ಕಲಿಕೆ ಮತ್ತು ಕೆಲಸಕ್ಕಾಗಿ 10.5 ಗಂಟೆಗಳ ಬ್ಯಾಟರಿ ಬಾಳಿಕೆ
• ಉತ್ತಮ ವೀಡಿಯೊ ಕರೆಗಳಿಗಾಗಿ AI ನಾಯ್ಸ್ ರಿಮೂವಲ್ ಸೌಕರ್ಯ
• ಕಾರ್ಯಗಳ ಬೇಡಿಕೆಯನ್ನು ನಿರ್ವಹಿಸಲು DDR5 RAM

ವಿನ್ಯಾಸ

• ಕೇವಲ 970 ಗ್ರಾಂ ಭಾರವಿದ್ದು, ಪೋರ್ಟಬಿಲಿಟಿಯನ್ನು ಖಚಿತಪಡಿಸುತ್ತದೆ.
• ಮೂರು ಬಣ್ಣಗಳಲ್ಲಿ ಲಭ್ಯವಿದೆ – ರೋಸ್ ಪೇಲ್ ಗೋಲ್ಡ್, ವಾರ್ಮ್ ಗೋಲ್ಡ್ ಮತ್ತು ನ್ಯಾಚುರಲ್ ಸಿಲ್ವರ್

ಬೆಲೆ ಮತ್ತು ಲಭ್ಯತೆ

• HP Pavilion Aero 13 (Ryzen 5 ಸಹಿತ) 72,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ
• HP Pavilion Aero 13 (Ryzen 7 ಸಹಿತ) 1TB SSD 82,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

Continue Reading
Advertisement
Man commits suicide after wife commits suicide in Srirangapatna
ಕರ್ನಾಟಕ1 hour ago

Suicide Case: ಕೌಟುಂಬಿಕ ಕಲಹ; ಪತ್ನಿ ಆತ್ಮಹತ್ಯೆ ಕಂಡು ಪತಿಯೂ ನೇಣಿಗೆ ಶರಣು

Amid wedding rumours, AAP MP Raghav Chadha picks up Parineeti Chopra from Delhi airport
ದೇಶ1 hour ago

Raghav-Parineeti: ಮತ್ತೆ ಒಟ್ಟಿಗೆ ಕಾಣಿಸಿದ ರಾಘವ್‌, ಪರಿಣೀತಿ; ವಾರದಲ್ಲಿ 3ನೇ ಭೇಟಿ, ಸ್ನೇಹಾನಾ? ಪ್ರೀತಿನಾ?

Do you know how much marks Virat Kohli got in iron pea maths?
ಕ್ರಿಕೆಟ್1 hour ago

Virat Kohli : ಕಬ್ಬಿಣದ ಕಡಲೆ ಗಣಿತದಲ್ಲಿ ವಿರಾಟ್​ ಕೊಹ್ಲಿ ಪಡೆದ ಮಾರ್ಕ್​ ಎಷ್ಟು ಗೊತ್ತಾ?

Manmohan Lalwani says Solar powered system best tool to cross digital gap
ಕರ್ನಾಟಕ1 hour ago

SELCO India: ಡಿಜಿಟಲ್ ಕಂದಕ ದಾಟಲು ಸೌರಚಾಲಿತ ವ್ಯವಸ್ಥೆ ಅತ್ಯುತ್ತಮ ಸಾಧನ: ಮನಮೋಹನ್ ಲಾಲ್ವಾನಿ

Four farmers seriously injured in lathi charge by forest department personnel
ಕರ್ನಾಟಕ1 hour ago

Tumkur News: ಒತ್ತುವರಿ ತೆರವಿಗೆ ಆಕ್ಷೇಪಿಸಿದ್ದಕ್ಕೆ ಲಾಠಿ ಚಾರ್ಜ್ ಮಾಡಿದ ಅರಣ್ಯ ಸಿಬ್ಬಂದಿ; 4 ರೈತರಿಗೆ ಗಂಭೀರ ಗಾಯ

Bengaluru company to gift ChatGPT Plus subscription to employees after seeing rise in productivity
ಕರ್ನಾಟಕ2 hours ago

ChatGPT Subscription: ದಕ್ಷತೆ ಹೆಚ್ಚಳ; ನೌಕರರಿಗೆ ಚಾಟ್‌ಜಿಪಿಟಿ ಉಚಿತ ಸಬ್‌ಸ್ಕ್ರಿಪ್ಶನ್‌ ನೀಡಿದ ಬೆಂಗಳೂರು ಕಂಪನಿ

No prejudice about Hindi, such imposition is not worth it
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು

Google Layoffs: Some employees may get up to Rs 2.60 crore in severance pay
ದೇಶ2 hours ago

Google Layoffs: ಗೂಗಲ್‌ನಿಂದ ವಜಾಗೊಂಡ ನೌಕರರಿಗೆ ಸಿಗಲಿದೆ 2.6 ಕೋಟಿ ರೂ., ಇವರಿಗೆ ಬೇರೆ ನೌಕರಿಯೇ ಬೇಕಿಲ್ಲ

Former bowler of Rajasthan Royals who joined Chennai Super Kings
ಕ್ರಿಕೆಟ್3 hours ago

IPL 2023 : ಚೆನ್ನೈ ಸೂಪರ್​ ಕಿಂಗ್ಸ್​ ಬಳಗ ಸೇರಿದ ರಾಜಸ್ಥಾನ್​ ರಾಯಲ್ಸ್​ನ ಮಾಜಿ ಬೌಲರ್​

ಕರ್ನಾಟಕ3 hours ago

Prof. Madhav Kulkarni: ಖ್ಯಾತ ಲೇಖಕ, ವಿಮರ್ಶಕ ಪ್ರೊ. ಮಾಧವ ಕುಲಕರ್ಣಿ ಇನ್ನಿಲ್ಲ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ2 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Post Office Recruitment 2023
ಉದ್ಯೋಗ2 months ago

India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ

ಕರ್ನಾಟಕ7 hours ago

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

Siddalinga Swamiji of Siddaganga Mutt saw a cow and came running away Video goes viral
ಕರ್ನಾಟಕ13 hours ago

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

amit shah convoy
ಕರ್ನಾಟಕ3 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ3 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ1 week ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ1 week ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ2 weeks ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ2 weeks ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 weeks ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

ಟ್ರೆಂಡಿಂಗ್‌

error: Content is protected !!