ದೇಶದಲ್ಲಿ ಮೊದಲ ಬಾರಿಗೆ ಕ್ರಾಂತಿಕಾರಕ ೫ಜಿ ನೆಟ್‌ವರ್ಕ್ ಆರಂಭವಾಗುವ (ವಿಸ್ತಾರ ೫G Info) ಸಮಯ ಸಮೀಪಿಸಿದೆ. ಹೀಗಾಗಿ ಅನೇಕ ಮಂದಿಯಲ್ಲಿ ತಮ್ಮ ಮೊಬೈಲ್ ಅಥವಾ ಸ್ಮಾರ್ಟ್‌ಫೋನ್ ೫ಜಿ ನೆಟ್ ವರ್ಕ್ ಅನ್ನು ಸಪೋರ್ಟ್ ಮಾಡುವುದೇ ಅಥವಾ ಹೊಸ ಸ್ಮಾರ್ಟ್‌ಫೋನ್ ಖರೀದಿಸಬೇಕೆ ಎಂಬ ಪ್ರಶ್ನೆ ಉಂಟಾಗಬಹುದು. ಹಾಗಾದರೆ ನೀವು ಸುಲಭವಾಗಿ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಫೋನ್, ೫ಜಿ ನೆಟ್‌ವರ್ಕ್ ಅನ್ನು ಸಪೋರ್ಟ್ ಮಾಡುವುದೇ ಎಂಬುದನ್ನು ತಿಳಿಯಬಹುದು. ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ.
- ಮೊದಲಿಗೆ ಸ್ಮಾರ್ಟ್ಫೋನ್ನ ಸೆಟ್ಟಿಂಗ್ಸ್ ( Settings) ತೆರೆಯಿರಿ.
- ಬಳಿಕ ಸಿಮ್ ಕಾರ್ಡ್ಸ್ & ಮೊಬೈಲ್ ನೆಟ್ವರ್ಕ್ಸ್ (SIM cards & Mobile Networks) ಆಯ್ಕೆ ಮಾಡಿ.
- ಆಗ ನಿಮಗೆ ನಿಮ್ಮ ಮೊಬೈಲ್ ಯಾವ ನೆಟ್ ವರ್ಕ್ ಅನ್ನು ಸಪೋರ್ಟ್ ಮಾಡುತ್ತದೆ ಎಂಬ ಮಾಹಿತಿ ಸಿಗುತ್ತದೆ.
- ೪ಜಿ ಅಥವಾ ೫ಜಿ ಅನ್ನು ಬೆಂಬಲಿಸುತ್ತಿದೆಯೇ ಎಂಬುದನ್ನು ಹೀಗೆ ತಿಳಿದುಕೊಳ್ಳಬಹುದು. ಹೀಗಾಗಿ ಹೊಸ ಮೊಬೈಲ್ ಖರೀದಿಸುವಾಗ ೫ಜಿ ನೆಟ್ ವರ್ಕ್ ಅನ್ನು ಅದು ಸಪೋರ್ಟ್ ಮಾಡುತ್ತದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ.
ಯಾವಾಗ ೫ಜಿ ಆರಂಭ?
ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ ೨೯ರಂದು ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) ವೇಳೆ ೫ಜಿ ನೆಟ್‌ವರ್ಕ್ ಅನ್ನು ಉದ್ಘಾಟಿಸಲಿದ್ದಾರೆ ಎಂದು ವರದಿಯಾಗಿದೆ. ಆರಂಭದಲ್ಲಿ ೧೩ ನಗರಗಳಲ್ಲಿ ೫ಜಿ ಸೇವೆ ಆರಂಭವಾಗಲಿದೆ. ಆದರೆ ಅಧಿಕೃತವಾಗಿ ಸರ್ಕಾರ ದಿನಾಂಕವನ್ನು ಪ್ರಕಟಿಸಿಲ್ಲ.
ಭಾರತದಲ್ಲಿ ಅಕ್ಟೋಬರ್‌ನಲ್ಲಿ ೫G ನೆಟ್‌ವರ್ಕ್ ಸೇವೆ ( ೫G News) ಆರಂಭವಾಗಲಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ದೃಢಪಡಿಸಿದ್ದಾರೆ. ಆರಂಭದಲ್ಲಿ ೧೩ ನಗರಗಳಲ್ಲಿ ೫ಜಿ ಸೇವೆ ಆರಂಭವಾಗಲಿದೆ. ಆದರೆ ಅಧಿಕೃತವಾಗಿ ಉದ್ಘಾಟನೆಯ ದಿನಾಂಕವನ್ನು ಸರ್ಕಾರ ಪ್ರಕಟಿಸಿಲ್ಲ. ವರ್ಷಾಂತ್ಯದ ವೇಳೆಗೆ ಎಲ್ಲರಿಗೂ ೫ಜಿ ಸೇವೆ ಸಿಗಲಿದೆ ಎಂದು ಸಚಿವರು ಹೇಳಿದ್ದರು.
ಟೆಲಿಕಾಂ ಕಂಪನಿಗಳ ಭರದ ಸಿದ್ಧತೆ
ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ (Vi) ಈಗಾಗಲೇ ೫ಜಿ ಸೇವೆಗೆ ಅಗತ್ಯವಿರುವ ಹಾರ್ಡ್‌ವೇರ್ ವ್ಯವಸ್ಥೆಯನ್ನು ಅಳವಡಿಸುತ್ತಿವೆ. ಇತ್ತೀಚೆಗೆ ಸರ್ಕಾರ ೧.೫ ಲಕ್ಷ ಕೋಟಿ ರೂ.ಗಳ ೫ಜಿ ಸ್ಪೆಕ್ಟ್ರಮ್ ಅನ್ನು ಹರಾಜಿನಲ್ಲಿ ಮಾರಾಟ ಮಾಡಿತ್ತು. ರಿಲಯನ್ಸ್ ಜಿಯೊ, ಏರ್‌ಟೆಲ್, ವಿಐ, ಅದಾನಿ ಡೇಟಾ ನೆಟ್‌ವರ್ಕ್ ಹರಾಜಿನಲ್ಲಿ ಭಾಗವಹಿಸಿವೆ.
ಭಾರ್ತಿ ಏರ್‌ಟೆಲ್ ೫ಜಿ ನೆಟ್‌ವರ್ಕ್ ಸ್ಥಾಪನೆಗೆ ಸಂಬಂಧಿಸಿ ಟೆಕ್ ಕಂಪನಿಗಳಾದ ಸ್ಯಾಮ್‌ಸಂಗ್, ನೋಕಿಯಾ, ಎರಿಕ್ಸನ್ ಜತೆ ಒಪ್ಪಂದ ಮಾಡಿಕೊಂಡಿದೆ. ವರದಿಗಳ ಪ್ರಕಾರ ರಿಲಯನ್ಸ್, ಆಗಸ್ಟ್ ೧೫ರಂದು ೫ಜಿ ಸೇವೆಗೆ ಚಾಲನೆ ನೀಡುವ ಸಾಧ್ಯತೆ ಇದೆ.
೧೩ ನಗರಗಳಲ್ಲಿ ಮೊದಲಿಗೆ ೫ಜಿ ಸೇವೆ ಆರಂಭವಾಗಲಿದೆ. ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದಿಲ್ಲಿ, ಗಾಂಧಿನಗರ, ಗುರ್‌ಗಾಂವ್, ಹೈದರಾಬಾದ್, ಜಾಮ್‌ನಗರ್, ಕೋಲ್ಕತಾ, ಲಖನೌ, ಮುಂಬಯಿ ಮತ್ತು ಪುಣೆಯಲ್ಲಿ ಶುರುವಾಗಲಿದೆ. ಕ್ರಮೇಣ ಇತರ ನಗರಗಳಿಗೆ ವಿಸ್ತರಣೆಯಾಗಲಿದೆ.
ಭಾರ್ತಿ ಏರ್‌ಟೆಲ್ ಸ್ವೀಡನ್ ಮೂಲದ ಎರಿಕ್ಸನ್ ಮತ್ತು ಫಿನ್ಲೆಂಡ್ ಮೂಲದ ನೋಕಿಯಾ ಜತೆಗೆ ೫ಜಿ ನೆಟ್‌ವರ್ಕ್ ಅಳವಡಿಕೆಗೆ ಸಂಬಂಧಿಸಿ ೧೯,೭೫೦ ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದೆ. ಕರ್ನಾಟಕ, ದಿಲ್ಲಿ, ರಾಜಸ್ಥಾನ, ತಮಿಳುನಾಡಿನಲ್ಲಿ ಏರ್‌ಟೆಲ್ ಪರವಾಗಿ ಎರಿಕ್ಸನ್ ೫ಜಿ ನೆಟ್ ವರ್ಕ್ ಅನ್ನು ಅಳವಡಿಸಲಿದೆ. ಮುಂಬಯಿ ಸೇರಿ ೯ ಟೆಲಿಕಾಂ ವೃತ್ತಗಳಲ್ಲಿ ನೋಕಿಯಾ ಅಳವಡಿಸಲಿದೆ. ಪಂಜಾಬ್ ಮತ್ತು ಕೋಲ್ಕತಾದಲ್ಲಿ ಸ್ಯಾಮ್‌ಸಂಗ್ ಅಳವಡಿಸಲಿದೆ.