Site icon Vistara News

ವಿದ್ಯಾರ್ಥಿಗಳಿಗೆ ಅನುಕೂಲವಾಗುವ HP Chromebook 15.6 ಲಾಂಚ್ ಮಾಡಿದ ಎಚ್‌ಪಿ

HP launched Chromebook 15.6 for students in India

ಬೆಂಗಳೂರು, ಕರ್ನಾಟಕ: ತನ್ನ ಕ್ರೋಮ್‌ಬುಕ್ ಸರಣಿಯ ಹೊಸ ನೋಟ್‌ಬುಕ್‌ ಅನ್ನು ಎಚ್‌ಪಿ(HP) ಭಾರತದಲ್ಲಿ ಲಾಂಚ್ ಮಾಡಿದೆ. ಈ ಹೊಸ HP Chromebook 15.6, ಇಂಟೆಲ್‌ನ Celeron N4500 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಶಾಲೆ-ಕಾಲೇಜು ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸುವಂತೆ ವಿನ್ಯಾಸಗೊಳಿಸಲಾದ ಈ ಸಾಧನವು ಸಂಯೋಜಿತ ವಾತಾವರಣದಲ್ಲಿ ಕೆಲಸ ಮತ್ತು ಆಟದ ನಡುವೆ ಸಹಯೋಗ, ಬಹುಕಾರ್ಯ ಕೈಗೊಳ್ಳಲು ಮತ್ತು ಪರಸ್ಪರ ಸಂಪರ್ಕ ಸಾಧಿಸಲು ಅವರಿಗೆ ನೆರವಾಗುತ್ತದೆ.

ಹೈಬ್ರಿಡ್ ಪರಿಸರದಲ್ಲಿರುವ ಯುವ ಗ್ರಾಹಕರು ಉತ್ಪಾದಕವಾಗಿ, ಸೃಜನಾತ್ಮಕವಾಗಿರಲು, ಮನರಂಜನೆ ಮತ್ತು ಕಲಿಕೆಗೆ ತೊಡಕಾಗದಂತೆ ಕ್ಷಣಮಾತ್ರದಲ್ಲಿ ಸ್ವಿಚ್ ಆಗುವಂತಹ ಸಾಧನಗಳನ್ನು ಹುಡುಕುತ್ತಾರೆ. ಸಾಮರ್ಥ್ಯ ಮತ್ತು ಹೊಸ ತಂತ್ರಜ್ಞಾನದಿಂದ ಚಾಲಿತವಾದ ಹೊಚ್ಚ-ಹೊಸ HP ಕ್ರೋಮ್‌ಬುಕ್ 15.6 ವಿಶಾಲವಾದ ಪರದೆಯನ್ನು, Wifi6 ನ ಪ್ರಬಲ ಸಂಪರ್ಕವನ್ನು ಮತ್ತು 11.5 ಗಂಟೆಗಳ 1 ವರೆಗಿನ ಅಸಾಧಾರಣ ಬ್ಯಾಟರಿ ಲೈಫ್ ಹೊಂದಿದ್ದು, ಹೈಬ್ರಿಡ್ ಪೀಳಿಗೆಯಲ್ಲಿ ಬೇಡಿಕೆಯ ಯೋಜನೆಗಳು ಮತ್ತು ಸುಲಭವಾದ ಮನರಂಜನೆಗೆ ಸೂಕ್ತವಾಗಿದೆ. ಹೊಸ ಕ್ರೋಮ್‌ಬುಕ್ 15.6 ಯುವ ವಿದ್ಯಾರ್ಥಿಗಳಿಗೆ ಸೂಕ್ತ ಆಯ್ಕೆಯಾಗಿದ್ದು, ಪ್ರಯಾಣದಲ್ಲೂ ಒಳ್ಳೆಯ ಸಂಗಾತಿಯಾಗಿದೆ. ಯುವಜನರ ಶೈಲಿ ಮತ್ತು ಜೀವನಶೈಲಿಗೆ ಪೂರ್ಣವಾಗಿ ಹೊಂದಿಕೆಯಾಗುವ ಎರಡು ವಿಶಿಷ್ಟ ಬಣ್ಣಗಳೊಂದಿಗೆ ಬರುತ್ತದೆ – ಫಾರೆಸ್ಟ್ ಟೀಲ್ ಮತ್ತು ಮಿನರಲ್ ಸಿಲ್ವರ್. ನಯವಾದ ವರ್ಣಚಿತ್ರದಂತಹ ಫಿನಿಶ್ ಪ್ರೀಮಿಯಂ ಅನುಭವ ಮತ್ತು ಅತ್ಯಾಧುನಿಕ ನೋಟವನ್ನು ನೀಡುತ್ತದೆ.

HP ಇಂಡಿಯಾ ಪರ್ಸನಲ್ ಸಿಸ್ಟಮ್ಸ್ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ಮಾತನಾಡಿ, “ಇಂದಿನ ಹೈಬ್ರಿಡ್ ಕಲಿಕೆಯ ವಿಧಾನದಲ್ಲಿ PC ಗಳು ಅತ್ಯಗತ್ಯ. ಸರಿಯಾದ ಪರಿಕರಗಳನ್ನು ಒದಗಿಸಿ, ವಿದ್ಯಾರ್ಥಿಗಳ ಕಲಿಕೆಯ ಅನುಭವವನ್ನು ಬೆಂಬಲಿಸಲು ನಾವು ಸದಾ ಬಯಸುತ್ತೇವೆ. ವಿದ್ಯಾರ್ಥಿಗಳು ಮನೆಯಲ್ಲಿ ಅಥವಾ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದರೂ ಸಂಪರ್ಕ ಮತ್ತು ಉತ್ಪಾದಕತೆಯನ್ನು ಸಕ್ರಿಯಗೊಳಿಸಲು ನಮ್ಮ ಹೊಸ ಕ್ರೋಮ್‌ಬುಕ್ 15.6 ಲ್ಯಾಪ್‌ಟಾಪ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಸಾಧನವು ಸೊಗಸಾಗಿದ್ದು, ಶಕ್ತಿಯುತವಾಗಿದ್ದು, ಯುವ ವಿದ್ಯಾರ್ಥಿಗಳ ಅಗತ್ಯಗಳಿಗೆ ಸೂಕ್ತವಾಗಿದೆ” ಎಂದು ವಿವರಿಸಿದರು.

ಬಹುಮುಖ ಮತ್ತು ಚಲನಶೀಲತೆಗೆ ಆದ್ಯ ಗಮನ ನೀಡಿ, ಉನ್ನತ ದರ್ಜೆಯ ಕಾರ್ಯಕ್ಷಮತೆಯನ್ನು ನೀಡುವಂತೆ ಹೊಸ HP ಕ್ರೋಮ್‌ಬುಕ್ x360 14a ಅನ್ನು ನಿರ್ಮಿಸಲಾಗಿದೆ. ಹೈಬ್ರಿಡ್ ಕಲಿಕೆಯ ಪರಿಸರದಲ್ಲಿ ಉತ್ತಮ ಉತ್ಪಾದಕತೆಗಾಗಿಮೀಸಲಾದ ನ್ಯುಮರಿಕ್ ಕೀಪ್ಯಾಡ್ ಮತ್ತು ದೊಡ್ಡ ಗಾತ್ರದ ಟಚ್‌ಪ್ಯಾಡ್‌ ಒಳಗೊಂಡಿದೆ. ಸ್ಪೀಚ್ ಟು ಟೆಕ್ಸ್ಟ್ ಸಕ್ರಿಯವಾಗಿರುವ ಈ ಸಾಧನವು ಬಹುಕಾರ್ಯಕದಲ್ಲಿ ಸಹಾಯ ಮಾಡುತ್ತದೆ. HP QuickDrop ಸೌಲಭ್ಯವು ಹಲವು ಸಾಧನಗಳ ನಡುವೆ ಕೆಲಸದ ಫೈಲ್‌ಗಳು ಮತ್ತು ವೈಯಕ್ತಿಕ ರಚನೆಗಳ ತ್ವರಿತ, ಅನುಕೂಲಕರ ವರ್ಗಾವಣೆಗೆ ಅನುಕೂಲಕರವಾಗಿದೆ. Office365 ಜೊತೆ ಹೊಂದಿಕೊಳ್ಳುವ ಈ ಸಾಧನವು ವೇಗವಾಗಿ ಮತ್ತು ಚುರುಕಾದ ಕಲಿಕೆಯನ್ನು ಉತ್ತೇಜಿಸಲು ಗೂಗಲ್ ಅಸಿಸ್ಟೆಂಟ್ (Google Assistant), ಗೂಗಲ್ ಕ್ಲಾಸ್‌ರೂಮ್‌ (Google Classroom) ನಂತಹ ಆಪ್‌ಗಳಿಗೆ ಹ್ಯಾಂಡ್ಸ್-ಫ್ರೀ ಪ್ರವೇಶವನ್ನು ಒದಗಿಸುತ್ತದೆ.

ವರ್ಚ್ಯುವಲ್ ಕರೆಗಳನ್ನು ಬೆಂಬಲಿಸಲು ಡ್ಯುಯಲ್ ಮೈಕ್‌ಗಳು ಮತ್ತು ವೈಡ್ ವಿಷನ್ HD ಕ್ಯಾಮೆರಾ ಹೊಸ ಕ್ರೋಮ್‌ಬುಕ್‌ನ ವೈಶಿಷ್ಟ್ಯಗಳಾಗಿವೆ. ಮೈಕ್ರೋ-ಎಡ್ಜ್ ಬೆಜೆಲ್‌ಗಳು, ಡ್ಯುಯಲ್ ಸ್ಪೀಕರ್‌ ಸಹಿತವಾದ 250 ನಿಟ್‌ಗಳಿರುವ ಡಿಸ್‌ಪ್ಲೇ, ಮಿನಿ ಸಿನೆಮಾ ಥಿಯೇಟರ್ ಅನ್ನು ಡೆಸ್ಕ್‌ಟಾಪ್‌ನಲ್ಲೇ ಸೃಷ್ಟಿಸುತ್ತದೆ. ಡಿವೈಸ್‌ನಲ್ಲಿರುವ ಸ್ಟೋರೇಜ್ ಜೊತೆಗೆ, ಬಳಕೆದಾರರು ಗೂಗಲ್ ಒನ್ (Google One) 100 ಜಿಬಿ ಕ್ಲೌಡ್ ಸ್ಟೋರೇಜ್‌ಗೆ 12 ತಿಂಗಳ ಸದಸ್ಯತ್ವ ಪಡೆಯುತ್ತಾರೆ. ಗೂಗಲ್ ಆಪ್‌ಗಳು ಮತ್ತು ಸೇವೆಗಳೂ ಲಭ್ಯವಾಗುತ್ತವೆ. ನೀವು ಎಲ್ಲಿದ್ದೀರಿ, ಕೆಲಸ ಮಾಡುತ್ತಿದ್ದೀರೋ ಅಥವಾ ಆಡುತ್ತಿದ್ದೀರೋ ಎಂಬ ವ್ಯತ್ಯಾಸವಿಲ್ಲದೆ, ಕ್ಲೌಡ್‌ನಲ್ಲಿ ನಿಮ್ಮೆಲ್ಲ ಕಂಟೆಂಟ್‌ಗಳಿಗೆ ನೀವು ಪ್ರವೇಶವನ್ನು ಹೊಂದಿರುತ್ತೀರಿ!

HP Chromebook ಡಿಸ್‌ಪ್ಲೇ

HP Chromebook ವಿನ್ಯಾಸ

ಲ್ಯಾಪ್‌ಟಾಪ್ ಕಾರ್ಯಕ್ಷಮತೆ

ಇದನ್ನೂ ಓದಿ: JioBook Launched | ರಿಲಯನ್ಸ್‌ನ ಮೊದಲ ಲ್ಯಾಪ್‌ಟಾಪ್ ‘ಜಿಯೋಬುಕ್’ ಬಿಡುಗಡೆ! ಬೆಲೆ ಎಷ್ಟು?

ಈ ಹೊಸ ಕ್ರೋಮ್‌ಬುಕ್ ಆರಂಭಿಕ ಬೆಲೆ 28,999 ರೂ.ನಿಂದ ಶುರುವಾಗುತ್ತದೆ. ಇಂಟೆಲ್ ಚಾಲಿತ HP ಕ್ರೋಮ್‌ಬುಕ್ x360 13.3 ಬೆಲೆ 44,999 ರೂ. ಇದ್ದರೆ, Mediatek ಚಾಲಿತ HP ಕ್ರೋಮ್‌ಬುಕ್ 11” ಬೆಲೆ 23,999 ರೂ. ಇದೆ. ಅದೇ ರೀತಿ, ಇಂಟೆಲ್ ಚಾಲಿತ HP ಕ್ರೋಮ್‌ಬುಕ್ 14” ಟಚ್ ಎನೇಬಲ್ಡ್ ಬೆಲೆ 26,999 ರೂ.ವರೆಗೂ ಇರಲಿದೆ.

Exit mobile version