Site icon Vistara News

Jio True 5G: ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಈಗ ಜಿಯೋ ಟ್ರೂ 5ಜಿ ಸೇವೆ ಲಭ್ಯ!

Jio True 5G

ಬೆಂಗಳೂರು, ಕರ್ನಾಟಕ: ರಿಲಯನ್ಸ್ ಜಿಯೋ ಟ್ರೂ 5ಜಿ ಈಗ ಕರ್ನಾಟಕದಾದ್ಯಂತ (Karnataka) ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ (All District Centers), 250ಕ್ಕೂ ಹೆಚ್ಚು ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಲಭ್ಯವಿದೆ. ಅಲ್ಲದೆ, ಈ ನಗರಗಳು ಮತ್ತು ಪಟ್ಟಣಗಳಿಗೆ ಹೊಂದಿಕೊಂಡಿರುವ ನೂರಾರು ಹಳ್ಳಿಗಳು ಸಹ ಈಗ ಜಿಯೋ ಟ್ರೂ 5ಜಿ (Jio True 5G) ಪ್ರಯೋಜನಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಈ ಎಲ್ಲ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿನ ಜಿಯೋ ಬಳಕೆದಾರರನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಪಡೆಯಲು ಜಿಯೋ ವೆಲ್ ಕಮ್ ಆಫರ್ ಗಾಗಿ ಆಹ್ವಾನಿಸಲಾಗಿದೆ.

ಎಲ್ಲ ಪ್ರಮುಖ ಸ್ಥಳಗಳು, ಪ್ರವಾಸಿ ತಾಣಗಳು, ಶಿಕ್ಷಣ ಸಂಸ್ಥೆಗಳು, ಮಾಲ್‌ಗಳು ಮತ್ತು ಮಾರುಕಟ್ಟೆಗಳು, ವಸತಿ ಪ್ರದೇಶಗಳು, ಆಸ್ಪತ್ರೆಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು, ಸರ್ಕಾರಿ ಕಟ್ಟಡಗಳು ಹಾಗೂ ಈ ಎಲ್ಲ ಪ್ರದೇಶಗಳಲ್ಲಿನ ಇತರ ಪ್ರಮುಖ ವಾಣಿಜ್ಯ ಸಂಸ್ಥೆಗಳನ್ನು ಜಿಯೋದ ಟ್ರೂ-5ಜಿ ನೆಟ್‌ವರ್ಕ್ ಒಳಗೊಂಡಿದೆ. ಐಪಿಎಲ್ ಋತುವಿನಲ್ಲಿ ಲಕ್ಷಾಂತರ ಜಿಯೋ ಬಳಕೆದಾರರು ಟ್ರೂ 5ಜಿ ಪ್ರಯೋಜನಗಳನ್ನು ಪಡೆದಿದ್ದು, ತಮ್ಮ ಮನೆಯಲ್ಲಿನ ಸೌಕರ್ಯದಿಂದ ಪಂದ್ಯಗಳನ್ನು ಮನಸಾರೆ ವೀಕ್ಷಿಸುತ್ತಿದ್ದಾರೆ.

ಎಲ್ಲ ಜಿಲ್ಲಾ ಕೇಂದ್ರಗಳು ಮತ್ತು ಕರ್ನಾಟಕದಾದ್ಯಂತ 250ಕ್ಕೂ ಹೆಚ್ಚು ಪ್ರಮುಖ ನಗರಗಳು ಹಾಗೂ ಪಟ್ಟಣಗಳಲ್ಲಿ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಸೇವಾ ಪೂರೈಕೆದಾರ ಜಿಯೋ ಆಗಿದೆ. ಕರ್ನಾಟಕದಾದ್ಯಂತ ಟ್ರೂ 5ಜಿ ಸೇವೆಗಳನ್ನು ಶೀಘ್ರವಾಗಿ ಜಾರಿಗೆ ತರುವ ಮೂಲಕ ಕರ್ನಾಟಕದಲ್ಲಿ ತನ್ನ ಟ್ರೂ 5ಜಿ ವ್ಯಾಪ್ತಿಯನ್ನು ಬಲಪಡಿಸುವ ಮತ್ತು ಜಿಯೋ ಬಳಕೆದಾರರಿಗೆ ತಂತ್ರಜ್ಞಾನ ರೂಪಾಂತರದ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಜಿಯೋ ಹೊಂದಿದೆ.

ಈ ಬಗ್ಗೆ ಮಾತನಾಡಿದ ಜಿಯೋ ವಕ್ತಾರರು, ”ಎಲ್ಲ ಜಿಲ್ಲಾ ಕೇಂದ್ರಗಳು ಮತ್ತು ಕರ್ನಾಟಕದಾದ್ಯಂತ 250ಕ್ಕೂ ಹೆಚ್ಚು ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳ ಲಭ್ಯತೆಯನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ರಾಜ್ಯದ ಮೊಬೈಲ್ ಬಳಕೆದಾರರಿಗೆ ಜಿಯೋ ಆಯ್ಕೆಯ ಆಪರೇಟರ್ ಮತ್ತು ಅತ್ಯಂತ ಪ್ರೀತಿಯ ತಂತ್ರಜ್ಞಾನದ ಬ್ರ್ಯಾಂಡ್ ಆಗಿದೆ, ಮತ್ತು ಈ ಬಿಡುಗಡೆಯು ಕರ್ನಾಟಕದ ಜನರಿಗೆ, ವಿಶೇಷವಾಗಿ ಯುವಜನರಿಗೆ ಜಿಯೋದ ನಿರಂತರ ಬದ್ಧತೆಗೆ ಸಾಕ್ಷಿಯಾಗಿದೆ.

ಈ ಸುದ್ದಿಯನ್ನೂ ಓದಿ: Airtel and Jio Offer: ಏರ್‌ಟೆಲ್, ಜಿಯೋದಿಂದ ಸಖತ್ ಆಫರ್ಸ್, ಯಾವ ಪ್ಲ್ಯಾನ್‌‌ನಲ್ಲಿ ಏನೆಲ್ಲ ಲಾಭಗಳಿವೆ?

“ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ವಿಶ್ವ ದರ್ಜೆಯ ನೆಟ್‌ವರ್ಕ್ ಅನ್ನು ನೀಡಲು ನಾವು ಹೆಮ್ಮೆಪಡುತ್ತೇವೆ. ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಉತ್ಪಾದನೆ, ಎಸ್ ಎಂಇಗಳು, ಇ-ಆಡಳಿತ, ಕೃಷಿ, ಆಟೊಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್ ಮತ್ತು ಐಟಿ ಕ್ಷೇತ್ರಗಳಲ್ಲಿ ಅನಂತ ಬೆಳವಣಿಗೆಯ ಅವಕಾಶಗಳೊಂದಿಗೆ ಕರ್ನಾಟಕದ ಜನರನ್ನು ಜಿಯೋ ಟ್ರೂ 5ಜಿ ಸಜ್ಜುಗೊಳಿಸುತ್ತದೆ,” ಎಂದಿದ್ದಾರೆ. 2023ರ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ ಪ್ರತಿ ಪಟ್ಟಣ ಮತ್ತು ತಾಲೂಕುಗಳಲ್ಲಿ ತನ್ನ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಲು ಜಿಯೋ ಯೋಜಿಸಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version