Site icon Vistara News

Super Computer: ವಿಶ್ವದಲ್ಲೇ 75ನೇ ಸ್ಥಾನ ಪಡೆದುಕೊಂಡ ಭಾರತದ ಸೂಪರ್ ಕಂಪ್ಯೂಟರ್ ‘ಐರಾವತ್’!

Indian Super computer has been ranked at no. 75 in ISC 2023

ನವದೆಹಲಿ: ಜರ್ಮನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಸಮ್ಮೇಳನದಲ್ಲಿ (ISC 2023) ಭಾರತದ (India) ಕೃತಕ ಬುದ್ಧಿಮತ್ತೆ ಸೂಪರ್‌ ಕಂಪ್ಯೂಟರ್ ಐರಾವತ್ (AIRAWAT Super Computer) ಜಗತ್ತಿನಲ್ಲೇ 75ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದ ಪುಣೆಯ ಸಿ-ಡಾಕ್‌ನಲ್ಲಿ ಈ ಐರಾವತ್ ಸೂಪರ್ ಕಂಪ್ಯೂಟರ್ ಸ್ಥಾಪಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟಾಪ್ 500 ಗ್ಲೋಬಲ್ ಸೂಪರ್‌ ಕಂಪ್ಯೂಟಿಂಗ್ ಪಟ್ಟಿಯ 61ನೇ ಆವೃತ್ತಿಯಲ್ಲಿ ಭಾರತದ ಸೂಪರ್‌ಕಂಪ್ಯೂಟರ್ ಸ್ಥಾನವನ್ನು ಪಡೆದುಕೊಂಡಿದೆ. ಐರಾವತ್ ಪಿಎಸ್ಎಐ, 3,170 ಟೆರಾಫ್ಲಾಪ್‌ಗಳ (Rpeak) ಗಮನಾರ್ಹ ವೇಗದೊಂದಿಗೆ ಭಾರತದ ಅತಿದೊಡ್ಡ ಮತ್ತು ವೇಗವಾದ ಕೃತಕ ಬುದ್ಧಿಮತ್ತೆಯಾಧರಿತ ಸೂಪರ್‌ಕಂಪ್ಯೂಟಿಂಗ್ ವ್ಯವಸ್ಥೆಯಾಗಿದೆ.

ಐರಾವತ್ ಸೂಪರ್ ಕಂಪ್ಯೂಟರ್‌ವನ್ನು ನೆಟ್‌ವೆಬ್ ಟೆಕ್ನಾಲಜಿಸ್ (Netweb Technologies) ಸಿದ್ಧಪಡಿಸಿದೆ. ಇದು Ubuntu 20.04.2 LTS ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು, 81,344 ಕೋರ್ಸ್‌ನೊಂದಿಗೆ AMD EPYC 7742 64C 2.25GHz ಪ್ರೊಸೆಸರ್ ಚಾಲಿತವಾಗಿದೆ. ಪ್ರಸಕ್ತ ವರ್ಷವೇ ಈ ಐರಾವ್ ಸೂಪರ್ ಕಂಪ್ಯೂಟರ್ ಸ್ಥಾಪಿಸಲಾಗಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೇಶನ್ ಟೆಕ್ನಾಲಜಿ (MeitY) ಇಲಾಖೆಯ ಕಾರ್ಯದರ್ಶಿ ಅಲ್ಕೇಶ್ ಶರ್ಮಾ ಅವರು, ಈ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆಯು ಅತ್ಯಂತ ಭರವಸೆಯ ತಂತ್ರಜ್ಞಾನವಾಗಿದೆ. ಅಗಾಧ ಡೇಟಾ ಲಭ್ಯತೆ, ಬಲಶಾಲಿ ಡಿಜಿಟಲ್ ಆರ್ಥಿಕತೆ ಹಾಗೂ ಕೌಶಲಯುಕ್ತ ಕೆಲಸಪಡೆಯಿಂದಾಗಿ ಕೃತಕ ಬುದ್ಧಿಮತ್ತೆಗೆ ಭಾರತವು ಸ್ಟ್ರಾಂಗ್ ಇಕೋಸಿಸ್ಟಮ್ ಮತ್ತು ಸ್ಪರ್ಧಾತ್ಮಕ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಿದರು.

ಇದನ್ನೂ ಓದಿ: 86,500 ಸರ್ಕಾರಿ ನೌಕರರು ಕಂಪ್ಯೂಟರ್‌ ಪರೀಕ್ಷೆಯಲ್ಲಿ ಫೇಲ್‌ !

ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್, ಇಮೇಜ್ ಪ್ರೊಸೆಷನ್, ಪ್ಯಾಟರ್ನ್ ರೆಕಗ್ನಿಷನ್, ಅಗ್ರಿಕಲ್ಚರ್, ಮೆಡಿಕಲ್ ಇಮೇಜಿಂಗ್, ಎಜುಕೇಶನ್, ಹೆಲ್ತ್ ಕೇರ್, ಆಡಿಯೋ ಅಸಿಸ್ಟೆನ್ಸ್, ರೋಬೋಟಿಕ್ಸ್ ಮತ್ತು ಆಯಕಟ್ಟಿನ ವಲಯಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಭಾರತವು ಅನ್ವಯಿಕ ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಸಮಾಜ ಮತ್ತು ಆರ್ಥಿಕತೆಯ ಅತ್ಯಂತ ಒತ್ತುವ ಸಮಸ್ಯೆಗಳನ್ನು ಪರಿಹರಿಸಲು ನಾಗರಿಕರು ಮತ್ತು ಸಂಸ್ಥೆಗಳಿಗೆ ಅಧಿಕಾರ ನೀಡಲು ಭಾರತವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅನುಸರಿಸುತ್ತದೆ ಎಂದು ಅವರು ಹೇಳಿದರು.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version