ಮುಂಬೈ, ಮಹಾರಾಷ್ಟ್ರ: ಭಾರತದ ವಾಣಿಜ್ಯ ರಾಜಧಾನಿ ಮುಂಬೈ ನಗರಿಯಲ್ಲಿ ದೇಶದ ಮೊದಲ ಆ್ಯಪಲ್ ಬಿಕೆಸಿ ಸ್ಟೋರ್ (Apple BKC Store) ಸೋಮವಾರ ಆರಂಭವಾಗಿದೆ. ಆ್ಯಪಲ್ ಕಂಪನಿಯ ಸಿಇಒ ಟಿಮ್ ಕುಕ್ (Apple CEO Tim Cook) ಅವರು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಆಪಲ್‌ನ ಮೊದಲ ಭಾರತೀಯ ಅಂಗಡಿಗೆ (ಐಫೋನ್ ಮಳಿಗೆ) ಚಾಲನೆ ನೀಡಿದ್ದಾರೆ. ಇನ್ನೊಂದು ಐಫೋನ್ ಮಳಿಗೆ ದಿಲ್ಲಿಯಲ್ಲಿ ಆರಂಭವಾಗಲಿದೆ(Apple Store).
ಸಾಮಾನ್ಯವಾಗಿ ಆ್ಯಪಲ್ ಸ್ಟೋರ್ ಆರಂಭವಾಗುತ್ತಿದ್ದಂತೆ ಆ ಸ್ಟೋರ್‌ನಲ್ಲಿ ಗ್ರಾಹಕರ ಉದ್ದುದ್ದ ಸಾಲು ಕಂಡು ಬರುತ್ತದೆ. ಈಗ ಮುಂಬೈನಲ್ಲಿ ಆರಂಭವಾಗಿರುವ ಆ್ಯಪಲ್ ಮಳಿಗೆಗೆಯಲ್ಲಿ ಗ್ರಾಹಕರ ಸಾಲು ಕಂಡು ಬಂದಿದೆ. ಆ್ಯಪಲ್ ಸ್ಟೋರ್‌ನಲ್ಲಿ ತಮ್ಮ ಮೊದಲ ಐಫೋನ್ ಖರೀದಿಗೆ ಈ ಜನರು ಸಾಲಗಟ್ಟಿ ನಿಂತಿದ್ದಾರೆ. ಚಿತ್ರಗಳು ವೈರಲ್ ಆಗಿವೆ. ಇದಕ್ಕೂ ಮೊದಲು ಟಿಮ್ ಕುಕ್ ಅವರು ಟ್ವೀಟ್ ಮಾಡಿ, ಹೆಲ್ಲೋ ಮುಂಬೈ, ನಮ್ಮ ಹೊಸ ಆ್ಯಪಲ್ ಬಿಕೆಸಿಯಲ್ಲಿ ಗ್ರಾಹಕರನ್ನು ಸ್ವಾಗತಿಸಲು ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದ್ದರು.
ಆ್ಯಪಲ್ ಸಿಇಒ ಟಿಮ್ ಕುಕ್ ಟ್ವೀಟ್
ಹೇಗಿದೆ ಆ್ಯಪಲ್ Apple Store?
ಸಾಂಪ್ರದಾಯಿಕ ಆಪಲ್ ಶೈಲಿಯಲ್ಲಿ ಹೊಸ ಬಿಕೆಸಿ ಸ್ಟೋರ್ ಇದೆ. ದೊಡ್ಡ ಗಾಜಿನ ಪರದೆಗಳನ್ನು ಬಳಸಲಾಗಿದೆ. ವರ್ಣಚಿತ್ತಾರವನ್ನು ಕಾಣಬಹುದು. ಅಂಗಡಿಯು ಬೃಹತ್ ಬಾಗಿದ ಗಾಜಿನ ಮುಂಭಾಗವನ್ನು ಹೊಂದಿದೆ. ಅಂಗಡಿಯು ಎತ್ತರದ ಬಿಳಿ ಕಂಬಗಳನ್ನು ಹೊಂದಿದ್ದು, ಅಂಗಡಿಯೊಳಗೆ ಗ್ರಾಹಕರಿಗೆ ಹೆಚ್ಚು ಗಾಳಿನ ಅನುಭವವ ದೊರೆಯುವಂತೆ ವಿನ್ಯಾಸ ಮಾಡಲಾಗಿದೆ.
ಆ್ಯಪಲ್ ಬಿಕೆಸಿ ಸ್ಟೋರ್ ಅನ್ನು ಹೆಚ್ಚು ಇಂಧನ ದಕ್ಷತೆಯ ಆಧಾರವಾಗಿ ರೂಪಿಸಲಾಗಿದೆ. ಅಂಗಡಿಯ ಕಾರ್ಯಾಚರಣೆಗಾಗಿ ಪಳಿಯುಳಿಕೆ ಇಂಧನ ಮೇಲೆ ಶೂನ್ಯ ಅವಲಂಬನೆಯಾಗಿದ್ದು, ಹೆಚ್ಚಿನ ಇಂಧನವನ್ನು ಸೌರಶಕ್ತಿಯಿಂದ ಬಳಸಿಕೊಳ್ಳಲಾಗುತ್ತದೆ. ಸ್ಟೋರ್ ಕಾರ್ಯಾಚರಣೆಯು ಸಂಪೂರ್ಣವಾಗಿ ಕಾರ್ಬನ್ ನ್ಯೂಟ್ರಲ್ ಆಗಿದ್ದು, 100 ಪ್ರತಿಶತ ಇದು ನವೀಕರಿಸಹುದಾದ ಇಂಧನ ಮೂಲಕ ಕಾರ್ಯ ನಿರ್ವಹಿಸುತ್ತದೆ.
ಸೀಲಿಂಗ್‌ವನ್ನು ತ್ರಿಕೋನ ಕರಕುಶಲ ವಿನ್ಯಾಸದೊಂದಿಗೆ ಮರದಿಂದ ತಯಾರಿಸಲಾಗಿದೆ. ಇದು ಅಂಗಡಿಯ ವಿಶಿಷ್ಟ ಜ್ಯಾಮಿತಿಯನ್ನು ಪ್ರತಿಬಿಂಬಿಸುತ್ತದೆ. ಪ್ರತಿ ಟೈಲ್ ಅನ್ನು 408 ಮರದ ತುಂಡುಗಳಿಂದ ತಯಾರಿಸಲಾಗಿದೆ. ಪ್ರತಿ ಟೈಲ್‌ಗೆ 31 ಮಾಡ್ಯೂಲ್‌ಗಳನ್ನು ಒಟ್ಟು 1,000 ಅಂಚುಗಳನ್ನು ರೂಪಿಸಲಾಗಿದೆ. ಅಂಗಡಿಯ ಒಟ್ಟು ಸೀಲಿಂಗ್ ಮನಮೋಹಕವಾಗಿದೆ.
ವಡಾ ಪಾವ್ ಸವಿದ ದೀಕ್ಷಿತ್-ಕುಕ್
ವಡಾ ಪಾವ್ ಎಂದರೆ, ಅದರಲ್ಲೂ ಮುಂಬೈ ವಡಾ ಪಾವ್ ಎಂದರೆ ಬಾಯಲ್ಲಿ ನೀರೂರುತ್ತದೆ. ಮುಂಬೈನ ಸಾಮಾನ್ಯ ಜನರಿಂದ ಹಿಡಿದು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟ ಅಮಿತಾಭ್ ಬಚ್ಚನ್‌ವರೆಗೆ ಬಹುತೇಕ ಜನರಿಗೆ ವಡಾ ಪಾವ್ ಎಂದರೆ ಪಂಚ ಪ್ರಾಣ. ಮುಂಬೈನಲ್ಲಿ ವಡಾ ಪಾವ್ ಮಹಿಮೆ ಈಗಿರುವ ಬೆನ್ನಲ್ಲೇ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರು ಆ್ಯಪಲ್ ಸಿಇಒ ಟಿಮ್ ಕುಕ್ ಅವರಿಗೆ ಮುಂಬೈನಲ್ಲಿ ವಡಾ ಪಾವ್ ಟ್ರೀಟ್ ಕೊಡಿಸಿದ್ದಾರೆ.
ಇದನ್ನೂ ಓದಿ: iPhone 14 | ಅಮೆರಿಕದಲ್ಲಿ ಬಿಡುಗಡೆಯಾದ 3 ವಾರದೊಳಗೆ ಆ್ಯಪಲ್ ಐಫೋನ್ 14 ಚೆನ್ನೈನಲ್ಲಿ ಉತ್ಪಾದನೆ ಆರಂಭ!
ಮಾಧುರಿ ದೀಕ್ಷಿತ್ ಅವರು ಟಿಮ್ ಕುಕ್ ಜತೆ ವಡಾ ಪಾವ್ ತಿನ್ನುತ್ತಿರುವ ಫೋಟೊ ಟ್ವೀಟ್ ಮಾಡಿದ್ದಾರೆ. “ಮುಂಬೈಗೆ ಆಗಮಿಸುವವರಿಗೆ ವಡಾ ಪಾವ್ ತಿನ್ನಿಸುವುದಕ್ಕಿಂತ ಬೇರೆ ಯಾವ ರೀತಿಯೂ ಸ್ವಾಗತ ಕೋರಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ. ಇನ್ನು ಮಾಧುರಿ ದೀಕ್ಷಿತ್ ಫೋಟೊಗೆ ಪ್ರತಿಕ್ರಿಯಿಸಿದ ಟಿಮ್ ಕುಕ್, “ಇದೇ ಮೊದಲ ಬಾರಿಗೆ ನನಗೆ ವಡಾ ಪಾವ್‌ಅನ್ನು ಪರಿಚಯಿಸಿದ ಮಾಧುರಿ ದೀಕ್ಷಿತ್ ಅವರಿಗೆ ಧನ್ಯವಾದಗಳು. ವಡಾ ಪಾವ್ ರುಚಿಕಟ್ಟಾಗಿತ್ತು” ಎಂದು ಹೇಳಿದ್ದಾರೆ. ಫೋಟೊ ಈಗ ವೈರಲ್ ಆಗಿದ್ದು, ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ.