Site icon Vistara News

ಗಣರಾಜ್ಯೋತ್ಸವಕ್ಕೂ ಮುನ್ನ ಭಾರತದಲ್ಲಿ Infinix Note 12i ಸ್ಮಾರ್ಟ್‌ಫೋನ್ ಲಾಂಚ್

Infinix Note 12i will launch ahead of republic day of India

ಬೆಂಗಳೂರು: ಇನ್ಫಿನಿಕ್ಸ್ ನೋಟ್ 12ಐ (Infinix Note 12i) ಸ್ಮಾರ್ಟ್ ಫೋನ್ ಜನವರಿ 25ರಂದು ಭಾರತದಲ್ಲಿ ಲಾಂಚ್ ಆಗಲಿದೆ. ಆನ್‌ಲೈನ್ ಶಾಪಿಂಗ್ ಜಾಲತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಈ ಫೋನ್ ಲಾಂಚ್ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. ಜತೆಗೆ ಫೋನ್‌ನ ಕೆಲವು ವಿಶೇಷತೆಗಳ ಬಗ್ಗೆಯ ಮಾಹಿತಿ ನೀಡಿದ್ದು, ಗ್ರಾಹಕರಲ್ಲಿ ಕುತೂಹಲ ಹೆಚ್ಚಾಗಿದೆ.

ಇನ್ಫಿನಿಕ್ಸ್‌ ಕಂಪನಿಯ ಈ ಹೊಸ ಫೋನ್ ಲಾಂಚ್ ಬಗ್ಗೆ ಮೊದಲಿಗೆ ಮೈ ಸ್ಮಾರ್ಟ್ ಪ್ರೈಸ್‌ನಲ್ಲಿ ಮಾಹಿತಿ ನೀಡಿತ್ತು. ಬಳಿಕ ಫ್ಲಿಪ್‌ಕಾರ್ಟ್ ಮೂಲಕ ಲಾಂಚ್ ದಿನಾಂಕವನ್ನು ಖಚಿತಪಡಿಸಲಾಗಿದೆ. ಕೆಲವು ವಿಶೇಷತೆಗಳ ಬಗ್ಗೆ ತಿಳಿಸಲಾಗಿದೆಯಾದರೂ, ಭಾರತೀಯ ಮಾರುಕಟ್ಟೆಯಲ್ಲಿ ಇನ್ಪಿನಿಕ್ಸ್ ನೋಟ್ 12ಐ ಸ್ಮಾರ್ಟ್‌ಫೋನ್ ಬೆಲೆ ಎಷ್ಟಿರಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಈಗ ಗೊತ್ತಾಗಿರುವ ಮಾಹಿತಿಗಳ ಪ್ರಕಾರ, ಈ ಸ್ಮಾರ್ಟ್‌ಫೋನ್, ಇಂಟೆಗ್ರೀಟೆಡ್ Mali G52 GPU ಜತೆಗೆ ಸಂಯೋಜಿತಗೊಂಡಿರುವ MediaTek Helio G85 SoC ಒಳಗೊಂಡಿದೆ. ಆಂಡ್ರಾಯ್ಡ್ 12 ಆಧರಿತ XOS 12 ಒಎಸ್ ಮೂಲಕ ಈ ಸ್ಮಾರ್ಟ್‌ಫೋನ್ ರನ್ ಆಗುತ್ತದೆ. 4 ಜಿಬಿ RAM ಇದ್ದು, 6.7 ಇಂಚ್ ಫುಲ್ HD+ AMOLED ಡಿಸ್‌ಪ್ಲೇಯನ್ನು ಒಳಗೊಂಡಿದೆ. ರಿಫ್ರೇಶ್ ರೇಟ್ 60Hz ಇದೆ.

ಇದನ್ನೂ ಓದಿ Redmi Note 12 | ರೆಡ್‌ಮಿ ನೋಟ್ 12 ಮತ್ತು ಪ್ರೋ ಮಾಡೆಲ್ಸ್ ಸ್ಮಾರ್ಟ್‌ಫೋನ್ ಸೇಲ್ ಶುರು

ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ ಅಪ್ ಇದೆ. ಈ ಪೈಕಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದರೆ, 2 ಮೆಗಾ ಪಿಕ್ಸೆಲ್ ಡೆಪ್ಥ್ ಸೆನ್ಸರ್ ಹಾಗೂ QVGA AI ಕ್ಯಾಮೆರಾಗಳಿವೆ. ಜತೆಗೆ ಎಲ್ಇಡಿ ಫ್ಲ್ಯಾಶ್ ಲೈಟ್ ಕೂಡ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಫೋನ್ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಕಂಪನಿ ನೀಡಿದೆ. ಸದ್ಯಕ್ಕೆ ಇಷ್ಟೇ ಮಾಹಿತಿಯಗಳನ್ನು ಕಂಪನಿ ಬಿಟ್ಟುಕೊಟ್ಟಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಬೆಲೆ ಎಷ್ಟಿದೆ, ಎಷ್ಟು ವೆರಿಯಂಟ್‌ಗಳಲ್ಲಿ ದೊರೆಯಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಕಂಪನಿಯು ನೀಡಿಲ್ಲ.

Exit mobile version