ನವದೆಹಲಿ: ಭಾರತ (India) ಸೇರಿದಂತೆ ಹಲವು ಕಡೆ ಇನ್‌ಸ್ಟಾಗ್ರಾಮ್ (Instagram Down) ಗುರುವಾರ ಡೌನ್ ಆಗಿದೆ. ವಾಟ್ಸಾಪ್ (WhatsApp) ಕೂಡ ಕೆಲವು ಕಾಲ ಸ್ಥಗಿತಗೊಂಡಿತ್ತು. ಮೆಟಾ (Meta) ಮಾಲೀಕತ್ವದ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ಗಳೆರಡೂ ಡೌನ್ ಆಗಿದ್ದು ಬಳಕೆದಾರರಿಗೆ ತೊಂದರೆಯಾಗಿದೆ. ಕೆಲವು ಸಮಯದ ಬಳಿಕ ವಾಟ್ಸಾಪ್ ತನ್ನ ಸೇವೆ ಯಥಾಸ್ಥಿತಿಗೆ ಮರಳಿದೆ ಎಂದು ಹೇಳಿಕೊಂಡಿದೆ.
ಈ ಇನ್‌ಸ್ಟಾಗ್ರಾಮ್ ಡೌನ್ ಸಮಸ್ಯೆ ಭಾರತದ ಎಲ್ಲ ಬಳಕೆದಾರರಿಗೂ ಕಂಡು ಬಂದಿಲ್ಲ. ಕೆಲವು ಬಳಕೆದಾರರು ಈ ಬಗ್ಗೆ ವರದಿ ಮಾಡಿದ್ದಾರೆ. ಕಳೆದ ರಾತ್ರಿಯಿಂದಲೇ ಸುಮಾರು 600 ಬಳಕೆದಾರರು ಇನ್‌ಸ್ಟಾ ಸಮಸ್ಯೆಯ ಕುರಿತು ವರದಿ ಮಾಡಿದ್ದಾರೆ. ಫೋಟೋ ಮತ್ತು ವಿಡಿಯೋ ಷೇರಿಂಗ್ ಆ್ಯಪ್ ಅಕ್ಸೆಸ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.
ಬಹಳಷ್ಟು ಜನರಿಗೆ ಇನ್‌ಸ್ಟಾ ಅಕ್ಸೆಸ್ ಮಾಡಲು ಸಾಧ್ಯವಾಗಿಲ್ಲ. ಇನ್ನು ಕೆಲವು ಬಳಕೆದಾರರು ತಮ್ಮ ಫೀಡ್‌ನಲ್ಲಿ ಸಮಸ್ಯೆ ಇರುವುದಾಗಿ ಹೇಳಿಕೊಂಡಿದ್ದಾರೆ. ಕೆಲವೊಬ್ಬರುವ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಆದರೆ, ಈ ಸಮಸ್ಯೆ ಕುರಿತು ಈವರೆಗೂ ಇನ್‌ಸ್ಟಾ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಅಥವಾ ಸರ್ವರ್ ಡೌನ್ ಆಗಿರುವುದನ್ನೂ ಒಪ್ಪಕೊಂಡಿಲ್ಲ.
ಈ ಸುದ್ದಿಯನ್ನೂ ಓದಿ: Instagram Down | ಇನ್‌ಸ್ಟಾಗ್ರಾಮ್ ಸರ್ವರ್ ಡೌನ್, ಪೋಸ್ಟ್, ರೀಲ್ಸ್ ಇಲ್ಲದೆ ಪೇಚಾಡಿದ ಕೋಟ್ಯಂತರ ಜನ
ಮತ್ತೊಂದೆಡೆ ವಾಟ್ಸಾಪ್ ಡೌನ್ ಆಗಿರುವುದನ್ನು ಒಪ್ಪಿಕೊಂಡಿದ್ದ ಸಂಸ್ಥೆಯು, ಸಮಸ್ಯೆ ಬಗೆ ಹರಿದ ಬಳಿಕ ವಾಟ್ಸಾಪ್ ರಿಸ್ಟೋರ್ ಮಾಡಲಾಗಿದೆ ಎಂದು ತಿಳಿಸಿತ್ತು. ಅಂಥ ಯಾವುದೇ ಹೇಳಿಕೆಯನ್ನು ಇನ್‌ಸ್ಟಾಗ್ರಾಮ್ ನೀಡಿಲ್ಲ. ಜನಪ್ರಿಯ ವಾಟ್ಸಾಪ್ ಮತ್ತು ಫೋಟೋ-ವಿಡಿಯೋ ಷೇರಿಂಗ್ ವೇದಿಕೆಯಾದ ಇನ್‌ಸ್ಟಾ ಎರಡೂ ಮೆಟಾ ಮಾಲೀಕತ್ವದಲ್ಲಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.