Site icon Vistara News

ವಿಸ್ತಾರ Explainer | iOS 16 ಲಾಂಚ್, ಹೊಸ ಫೀಚರ್‌ಗಳೇನು? ಹೇಗೆ ಡೌನ್‌ಲೋಡ್ ಮಾಡಿಕೊಳ್ಳುವುದು?

iOS 16

ಈ ಮೊದಲೇ ಘೋಷಿಸಿದಂತೆ ಆ್ಯಪಲ್ ಕಂಪನಿಯು ಸೆ.13ರಂದು ಹೊಸ ಆಪರೇಟಿಂಗ್ ಸಿಸ್ಟಮ್ ಐಒಎಸ್ 16(iOS 16) ಲಾಂಚ್ ಮಾಡಿದೆ. ಈ ಹೊಸ ಒಎಸ್ ಸಾಕಷ್ಟು ಹೊಸ ಫೀಚರ್ಸ್ ಒಳಗೊಂಡಿದೆ. ಈ ಪೈಕಿ ಹೊಸ ಲಾಕ್ ಸ್ಕ್ರೀನ್, ಅನ್‌ಸೆಂಡ್ ಮತ್ತ ಎಡಿಟ್ ಐಮೆಸೇಜ್, ಹೊಸ ರೀತಿಯ ಸ್ಪರ್ಶದ ಕೀ ಬೋರ್ಡ್ ಪ್ರಮುಖವಾಗಿವೆ. ಇವುಗಳ ಜತೆಗೆ ಬಹಳಷ್ಟು ಅತ್ಯಾಕರ್ಷಕ ಮತ್ತು ಊಹೆಗೂ ನಿಲುಕದ ಫೀಚರ್ಸ್ ಕಾಣಬಹುದಾಗಿದೆ. ಆ್ಯಪಲ್ ಕಂಪನಿಯು ಇತ್ತೀಚೆಗಷ್ಟೇ ಐಫೋನ್ 14 ಸಿರೀಸ್ ಫೋನ್‌ಗಳನ್ನು ಲಾಂಚ್ ಮಾಡಿದೆ.

ಐಫೋನ್ 8 ಮೇಲ್ಪಟ್ಟ ಎಲ್ಲ ಫೋನ್‌ಗಳಿಗೆ ಈ ಹೊಸ ಐಒಎಸ್ 16 ಅಪ್‌ಡೇಟ್ ಮಾಡಬಹುದಾಗಿದೆ. ಆದರೆ, ಈ ಅಪಡೇಟ್ ಐಪ್ಯಾಡ್ಸ್‌ಗೆ ಲಭ್ಯವಿಲ್ಲ. ಕಂಪನಿಯು ಈ ಐಪ್ಯಾಡ್‌ಗಳಿಗಾಗಿ ಹೊಸ ಐಪ್ಯಾಡ್‌ಒಎಸ್ 16.1 ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಲಾಕ್ ಸ್ಕ್ರೀನ್
ಐಒಎಸ್ 16 ಆಪರೇಟಿಂಗ್ ಸಾಫ್ಟ್‌ವೇರ್ ಮುಖ್ಯ ಆಕರ್ಷಣೆ- ಲಾಕ್ ಸ್ಕ್ರೀನ್. ಬಳಕೆದಾರರು ಈಗ ಲಾಕ್‌ಸ್ಕ್ರೀನ್‌ಗೆ ತಮಗೆ ಬೇಕಾದ ವಿಜೆಟ್‌ಗಳನ್ನು ಸೇರಿಸಬಹುದಾಗಿದೆ. ಡಿವೈಸ್ ಆಫ್ ಇದ್ದಾಗಲೂ ಈ ವಿಜೆಟ್‌ಗಳು ಐಫೋನ್ 14ನಲ್ಲಿ ಕಾಣಿಸಿಕೊಳ್ಳಲಿವೆ.

ಐಮೆಸೇಜಸ್
ಆ್ಯಪಲ್, ಐಫೋನ್ ಬಳಕೆದಾರರಿಗೆ ಮತ್ತೊಂದು ಫೀಚರ್ಸ್ ಒದಗಿಸುತ್ತಿದೆ. ಐಒಎಸ್ 16ನಲ್ಲಿ ಬಳಕೆದಾರರು ಕಳುಹಿಸಲಾದ ಸಂದೇಶಗಳನ್ನು ಎಡಿಟ್ ಮಾಡಬಹುದು. ನೀವು ಮೆಸೇಜ್ ‌ಕಳುಹಿಸಿದ ನಿಮಿಷದೊಳಗೇ ಮೊದಲಿನ ಸ್ಥಿತಿಗೆ (Undo) ತರಬಹುದು. ಹಾಗೆಯೇ ಮೆಸೇಜ್ ಕಳುಹಿಸಿದ 15 ಮಿನಿಟ್ಸ್ ವರೆಗೆ ಕಳುಹಿಸಿದ ಸಂದೇಶವನ್ನು ಎಡಿಟ್ ಕೂಡ ಮಾಡಬಹುದು. ಮಾರ್ಕ್ ಆ್ಯಸ್ ಅನ್‌ರೀಡ್ ಫೀಚರ್ ಕೂಡ ನೀಡಲಾಗಿದೆ. ಆಡಿಯೋ ಸಂದೇಶವನ್ನು ಕೇಳಿಸಿಕೊಳ್ಳುವಾಗಲೇ, ಆ ಸಂದೇಶವನ್ನು ಹಿಂದಕ್ಕೆ ಅಥವಾ ಮುಂದಕ್ಕೆ ಓಡಿಸಬಹುದು.

ಕೀಬೋರ್ಡ್ ಹ್ಯಾಪ್ಟಿಕ್ಸ್
ಕೀ ಬೋರ್ಡ್ ಹ್ಯಾಪ್ಟಿಕ್ಸ್‌ನಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ಹಾಗೆ ನೋಡಿದರೆ, ಐಒಎಸ್ 16 ಆಪರೇಟಿಂಗ್ ಸಿಸ್ಟಮ್‌ನ ಹೈಲೈಟ್ ಕೂಡ ಇದೆ ಆಗಿದೆ. ಟೈಪ್ ಮಾಡುವಾಗ ಕಂಪನಗಳನ್ನು ಅನುಭವಿಸಲು ಈ ವೈಶಿಷ್ಟ್ಯವು ಸಹಾಯ ಮಾಡುತ್ತದೆ. ಈ ಹಿಂದೆ, ಇದು ಅಪ್ಲಿಕೇಶನ್‌ಗಳಲ್ಲಿ ಲಭ್ಯವಿತ್ತು ಅಥವಾ ಲಾಕ್ ಸ್ಕ್ರೀನ್‌ನಿಂದ ಫ್ಲ್ಯಾಷ್‌ಲೈಟ್‌ನಂತಹ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸುತ್ತದೆ.

ಮತ್ತೇನು ವಿಶೇಷ?
ಸಫಾರಿಯಲ್ಲಿ ತಮ್ಮ ಸ್ನೇಹಿತರ ಜತೆಗೆ ಟ್ಯಾಬ್ ಗ್ರೂಪ್ಸ್ ಷೇರ್ ಮಾಡಲು ಐಒಎಸ್ 16 ಬಳಕೆದಾರರಿಗೆ ಅನುವು ಮಾಡಿಕೊಡಲಿದೆ. ಪ್ರತಿಯೊಬ್ಬರು ತಮ್ಮದೇ ಟ್ಯಾಬ್‌ಗಳನ್ನು ಆ್ಯಡ್ ಮಾಡಬಹುದಾಗಿದೆ. ಒಂದಾಗಿ ಕೆಲಸ ಮಾಡುತ್ತಿದ್ದಂತೆ ಟ್ಯಾಬ್ ಗ್ರೂಪ್‌ ಅಪ್‌ಡೇಟ್‌ನಲ್ಲಿ ನೋಡಬಹುದಾಗಿದೆ. ಹೋಮ್ ಆ್ಯಪ್ ಅನ್ನು ಮರುವಿನ್ಯಾಸ ಮಾಡಲಾಗಿದೆ. ವಿಡಿಯೋಗಳಿಂದ ಬಳಕೆದಾರರು ಟೆಕ್ಸ್ಟ್ ಕೂಡ ಕಾಪಿ ಮಾಡಿಕೊಳ್ಳಬಹುದಾಗಿದೆ. ಐಒಎಸ್ 16ಗೆ ಕಂಪನಿಯು ಲಾಕಿಂಗ್ ಮೋಡ್ ಕೂಡ ಪರಿಚಯಿಸುತ್ತಿದೆ.

ಯಾವ ಐಫೋನ್‌ಗೆ ಅಪ್‌ಡೇಟ್?
ಮೊನ್ನೆಯಷ್ಟೇ ಬಿಡುಗಡೆಯಾದ ಐಫೋನ್ 14 ಸಿರೀಸ್ ಫೋನ್‌ಗಳು ಈ ಹೊಸ ಐಒಎಸ್ 16 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರಲಿವೆ. ಇದು ಖಚಿತ. ಇದರಲ್ಲೇನೂ ಅನುಮಾನವಿಲ್ಲ. ಹಾಗೆಯೇ, ಈ ಹೊಸ ಒಎಸ್ ಅನ್ನು ಬಳಕೆದಾರರು ತಮ್ಮ ಹಳೆಯ ಐಫೋನುಗಳಿಗೆ ಅಪ್‌ಡೇಟ್ ಮಾಡಿಕೊಳ್ಳಬಹುದಾಗಿದೆ.

ಐಫೋನ್ 8 ಸಿರೀಸ್, ಐಫೋನ್ ಎಕ್ಸ್, ಐಫೋನ್ ಎಕ್ಸ್ಆರ್, ಐಫೋನ್ ಎಕ್ಸ್ಎಸ್, ಐಫೋನ್ ಎಕ್ಸ್ಎಸ್ ಮ್ಯಾಕ್ಸ್, ಐಫೋನ್ 11, ಐಫೋನ್ 11 ಪ್ರೋ, ಐಫೋನ್ 11 ಪ್ರೋ ಮ್ಯಾಕ್ಸ್, ಐಫೋನ್ 12, ಐಫೋನ್ 12 ಮಿನಿ, ಐಫೋನ್ 12 ಪ್ರೋ, ಐಫೋನ್ 12 ಪ್ರೋ ಮ್ಯಾಕ್ಸ್ , ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೋ, ಐಫೋನ್ 13 ಪ್ರೋ ಮ್ಯಾಕ್ಸ್, 2020ರ ಐಫೋನ್ ಎಸ್ಇ ಮತ್ತು 2022ರ ಐಫೋನ್ ಎಸ್‌ಇ ಸ್ಮಾರ್ಟ್‌ಗಳಿಗೆ ಈ ಹೊಸ ಐಒಎಸ್ 16 ಅಪ್‌ಡೇಟ್ ಮಾಡಬಹುದಾಗಿದೆ.

ಹೇಗೆ ಡೌನ್‌ಲೋಡ್ ಮಾಡಿಕೊಳ್ಳುವುದು?
ಆ್ಯಪಲ್ ಕಂಪನಿಯು ಬಿಡುಗಡೆ ಮಾಡಿರುವ ಈ ಐಒಎಸ್ 16 ಹೊಸ ಆಪರೇಟಿಂಗ್ ಸಿಸ್ಟಮ್ ಭಾರತೀಯ ಬಳಕೆದಾರರಿಗೂ ಲಭ್ಯವಿದೆ. ಈ ಅಪ್‌ಡೇಟ್ ಪರೀಕ್ಷಿಸಲು ನೀವು ನಿಮ್ಮ ಐಫೋನ್‌ನಲ್ಲಿರುವ ಸೆಟ್ಟಿಂಗ್ಸ್‌ಗೆ ಹೋಗಿ, ಜನರಲ್ ಮೇಲೆ ಟ್ಯಾಪ್ ಮಾಡಿ ಆಗ ಸಾಫ್ಟ್‌ವೇರ್ ಅಪ್‌ಡೇಟ್ ಕಾಣಿಸಿಕೊಳ್ಳುತ್ತದೆ. ಒಂದೊಮ್ಮೆ ನಿಮ್ಮ ಬಳಸುತ್ತಿರುವ ಐಫೋನ್ ಈ ಹೊಸ ಅಪ್‌ಡೇಟ್‌ಗೆ ಅರ್ಹವಾಗಿದ್ದರೆ, ಹೊಸ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಐಫೋನ್ 14 ಸಿರೀಸ್ ಲಾಂಚ್
ಬಹು ನಿರೀಕ್ಷೆಯ Apple iPhone 14 ಸರಣಿಯ ಮೊಬೈಲ್‌ಗಳನ್ನು ಸೆಪ್ಟೆಂಬರ್ 8ರಂದು ಲೋಕಾರ್ಪಣೆಗೊಳಿಸಲಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಆ್ಯಪಲ್‌ ಕಂಪನಿ ಸಿಇಒ ಟಿಮ್‌ ಕುಕ್‌ ಅವರು ಆ್ಯಪಲ್‌ 14 ಸರಣಿಯ ಮೊಬೈಲ್‌ಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಭಾರತದ ಗ್ರಾಹಕರಿಗೆ ಐಫೋನ್‌ 14 (ಪ್ರೊ) ಬೆಲೆ 79,900 ರೂ. ಆಗಲಿದೆ. ಹಾಗೆಯೇ, ಐಫೋನ್‌ 14 ಪ್ಲಸ್‌ಗೆ (ಪ್ರೊ ಮ್ಯಾಕ್ಸ್‌) 89,900 ರೂ. ಆಗಲಿದೆ. ಐಫೋನ್‌ 14 ಸೆಪ್ಟೆಂಬರ್‌ 16ರಿಂದ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದ್ದರೆ, ಐಫೋನ್‌ 14 ಪ್ಲಸ್‌ ಅಕ್ಟೋಬರ್‌ 7ರಿಂದ ಲಭ್ಯವಾಗಲಿದೆ.

ಕ್ಯಾಮೆರಾದಲ್ಲಿ ಆ್ಯಪಲ್‌ ಕಂಪನಿಯು ಈ ಬಾರಿ ಮಹತ್ವದ ಬದಲಾವಣೆ ಮಾಡಿದೆ. ಆ್ಯಪಲ್‌ 14 ಪ್ರೊ ಹಾಗೂ ಪ್ರೊ ಮ್ಯಾಕ್ಸ್‌ ಎರಡೂ 48 ಮೆಗಾ ಪಿಕ್ಸೆಲ್‌ ಪ್ರೈಮರಿ ಕ್ಯಾಮೆರಾ ಹೊಂದಿವೆ. ಹಾಗೆಯೇ, ಇವುಗಳ ಸೆನ್ಸರ್ ಆ್ಯಪಲ್‌ 13 ಪ್ರೊಗಿಂತ ಶೇ.65ರಷ್ಟು ದೊಡ್ಡದಾಗಿವೆ. ಸ್ಯಾಟಲೈಟ್‌ ಕನೆಕ್ಟಿವಿಟಿ (ಇಂಟರ್‌ನೆಟ್‌ ಇಲ್ಲದೆ ಮಾಹಿತಿ ರವಾನಿಸುವುದು ಹಾಗೂ ಸ್ವೀಕರಿಸುವುದು), ಐಫೋನ್‌ 14 ಪ್ರೊ 6.1 ಇಂಚು ಹಾಗೂ ಪ್ರೊ ಮ್ಯಾಕ್ಸ್‌ 6.7 ಇಂಚಿನ ಡಿಸ್‌ಪ್ಲೇ ಹೊಂದಿವೆ.

ಇದನ್ನೂ ಓದಿ | iPhone 13 | ಐಫೋನ್ 13 ಮತ್ತು 12 ಬೆಲೆ ಕಡಿತ, ಎಷ್ಟು ಅಗ್ಗವಾಗಿವೆ? ವಾರದಲ್ಲಿ ಮತ್ತಷ್ಟು ಆಫರ್!

Exit mobile version